ಬೆಂಗಳೂರು: ಮಯೂರ ಸಿನಿಮಾ ಖ್ಯಾತಿಯ ಹಿರಿಯ ಮೇಕಪ್ ಮ್ಯಾನ್ ಕೇಶವಣ್ಣ ಇಂದು ನಿಧನರಾಗಿದ್ದಾರೆ. ಇವರು ಸುಮಾರು 53 ವರ್ಷಗಳ ಕಾಲ ಚಿತ್ರರಂಗದಲ್ಲಿ ಮೇಕಪ್ ಮ್ಯಾನ್ ಆಗಿ ಸೇವೆ ಸಲ್ಲಿಸಿದ್ದರು. ಇವರ ತಂದೆ ಮೇಕಪ್ ಸುಬ್ಬಣ್ಣ , ದಿವಂಗತ ನಟಸಾರ್ವಭೌಮ ಡಾ ರಾಜ್‍ಕುಮಾರ್ ರವರ ಮೇಕಪ್ ಮ್ಯಾನ್ ಆಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಇವರ ಸಹೋದರ ಎಂ ಎಸ್ ರಾಜಶೇಖರ್ ಅವರು 'ನಂಜುಂಡಿ ಕಲ್ಯಾಣ' ಚಿತ್ರದ ನಿರ್ದೇಶಕರಾಗಿದ್ದರು. ಕೇಶವಣ್ಣ 25 ರಿಂದ 30 ವರ್ಷಗಳ ಕಾಲ ರಾಜ್ ಕುಮಾರ್ ರವರ ಕಂಪನಿಯಲ್ಲಿ ಮೇಕಪ್ ಕಲಾವಿದರಾಗಿದ್ದರು.
ಈಶ್ವರಿ ಪ್ರೊಡಕ್ಷನ್‌ನಲ್ಲಿಯೂ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಇವರು ಹಾಸ್ಯ ಕಲಾವಿದ ನರಸಿಂಹ ರಾಜು ಅವರಿಗೆ ಮೊದಲು ಮೇಕಪ್ ಮಾಡಿದ್ದರು. ಪೃಥ್ವಿ ರಾಜ್ ಕಪೂರ್, ಬಾಲಣ್ಣ, ಉದಯ ಕುಮಾರ್, ವಜ್ರ ಮುನಿ ಹೀಗೆ ಚಿತ್ರರಂಗದ ಅನೇಕ ಮಹಾನ್ ಕಲಾವಿದರಿಗೆ ಮೇಕಪ್ ಮ್ಯಾನ್ ಆಗಿ ಕೇಶವಣ್ಣ ಕಾರ್ಯ ನಿರ್ವಹಿಸಿದ್ದರು.
ದರ್ಶನ್ ನೆಚ್ಚಿನ ಮೇಕಪ್ ಮ್ಯಾನ್ ಶ್ರೀನಿವಾಸ್ ಇನ್ನಿಲ್ಲ, ಕಂಬನಿ ಮಿಡಿದ ದಾಸ
'ನಾನಿನ್ನ ಬಿಡಲಾರೆ' ಚಿತ್ರಕ್ಕೆ ಅನಂತ್ ನಾಗ್ ರವರಿಗೆ ಇವರು ದೆವ್ವದ ಮೇಕಪ್ ಮಾಡಿದ್ದು ಹಾಗೂ ಇದೇ ಚಿತ್ರ ಹಿಂದಿಗೆ ರೀಮೇಕ್ ಆದಾಗ ಆ ಚಿತ್ರಕ್ಕೂ ಇವರನ್ನೇ ಮೇಕಪ್ ಮ್ಯಾನ್ ಆಗಿ ಕರೆಸಲಾಗಿತ್ತು. ಸಾಕ್ಷಾತ್ಕಾರ, ಹಲಿಯ ಹಾಲಿನ ಮೇವು, ಮಯೂರ, ಮುರುವರೆ ವಜ್ರ, ಪ್ರೇಮ ಲೋಕ, ಶಾಂತಿ ಕ್ರಾಂತಿ, ಸಂಗೊಳ್ಳಿ ರಾಯಣ್ಣ ಸಿನಿಮಾಗೂ ಇವರು ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ಕುರುಕ್ಷೇತ್ರ ಸಿನಿಮಾಗೆ ಕೊನೆಯ ಬಾರಿಗೆ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದರು.
ಗೆಳತಿಯ ಬಾತ್‌ರೂಮ್‌ನಲ್ಲೇ ಹಿಡನ್ ಕ್ಯಾಮರಾ ಇಟ್ಟ ಮೇಕಪ್ ಮ್ಯಾನ್..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.