
ಅನೇಕ ಸಾಧಕರು, ಸ್ಟಾರ್ ಕಲಾವಿದರು ಕಷ್ಟದಿಂದನೇ ಮೆಲೇ ಬಂದಿದ್ದಾರೆ. ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದ ಅನೇಕ ಮಂದಿ ಇಂದು ಸಾಧಕರ ಲಿಸ್ಟ್‌ನಲ್ಲಿದ್ದಾರೆ. ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ನೇಮ್, ಫೇಮ್ ಸಂಪಾದಿಸಿ ಉನ್ನತ ಜೀವನ ನಡೆಸುತ್ತಿದ್ದಾರೆ. ಕಷ್ಟದಿಂದ ಬಂದು ಸ್ಟಾರ್ ಆದವರಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡ ಒಬ್ಬರು. ಬಾಲಿವುಡ್ ಲೆಜೆಂಡ್ ಅಮಿತಾಭ್ ಬಚ್ಚನ್ ವೃತ್ತಿ ಜೀವನ ಪ್ರಾರಂಭಿಸಿ 5 ದಶಕಗಳಾಗಿದೆ. ಅವರ ಜನಪ್ರಿಯತೆ, ಖ್ಯಾತಿ ಭಾರತ ಮಾತ್ರವಲ್ಲದೇ ಗಡಿಗೂ ಮೀರಿದೆ. ಅಮಿತಾಭ್ ಬಚ್ಚನ್ ಅಂದರೆ ಯಾರಿಗೆ ತಾನೆ ಗೊತ್ತಿಲ್ಲ. ಪುಟ್ಟ ಮಕ್ಕಳಿಂದ ದೊಡ್ಡವರೆಗೂ, ದೇಶ-ವಿದೇಶಗಳಲ್ಲಿಯೂ ಅಮಿತಾಭ್ ಫೇಮಸ್. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಬಿಗ್ ಬಿ ತನ್ನ ಪ್ರಾರಂಭದ ದಿನಗಳ ಬಗ್ಗೆ ಬಹಿರಂಗ ಪಡಿಸಿದ್ದಾರೆ. ತನ್ನ ಬ್ಲಾಗ್ ನಲ್ಲಿ ಕಷ್ಟದ ದಿನಗಳನ್ನು ರಿವೀಲ್ ಮಾಡಿದ್ದಾರೆ.
1968 ರಲ್ಲಿ ತಿಂಗಳಿಗೆ 1640 ರೂ. ಸಂಬಳ ಪಡೆಯುತ್ತಿದ್ದ ಬಗ್ಗೆ ಅಮಿತಾಭ್ ಬಚ್ಚನ್ ಬಹಿರಂಗ ಪಡಿಸಿದ್ದಾರೆ. ಅಮಿತಾಭ್ ಕೋಲ್ಕತ್ತಾದಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡರು. ಇತರ 7 ಜನರೊಂದಿಗೆ ಸಣ್ಣ ಕೋಣೆಯನ್ನು ಹಂಚಿಕೊಳ್ಳುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ. ಕೋಲ್ಕತ್ತಾದ ಬ್ಲ್ಯಾಕ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಮಿತಾಬ್ ನವೆಂಬರ್ 30ರಂದು ಪಡೆದ ಕೊನೆಯ ಸಂಬಳದ ಸ್ಕ್ರೀನ್ ಶಾಟ್ ಗಳನ್ನು ಶೇರ್ ಮಾಡಿದ್ದಾರೆ. ಅಮಿತಾಭ್ ಪಡೆದ ಕೊನೆಯ ಸಂಬಳ 1968 ರೂಪಾಯಿ ಆಗಿತ್ತು. ಇದರ ದಾಖಲೆ ಇನ್ನೂ ಇದೆ ಎಂದು ಹೇಳಿದ್ದಾರೆ. ಕೋಲ್ಕತ್ತಾದಲ್ಲಿನ ಆ ದಿನಗಳು ತಮ್ಮ ಜೀವನದ ಅತ್ಯಂತ ಸ್ವತಂತ್ರ, ಮುಕ್ತ ಸಮಯಗಳಾಗಿದ್ದವು ಎಂದು ಹೇಳಿದ್ದಾರೆ.
ಅನುಮತಿ ಇಲ್ಲದೆ ಇನ್ಮುಂದೆ ಅಮಿತಾಭ್ ಬಚ್ಚನ್ ಫೋಟೋ, ಧ್ವನಿ ಬಳಸುವಂತಿಲ್ಲ; ದೆಹಲಿ ಹೈಕೋರ್ಟ್
ಕೆಲವು ಸ್ಥಳಗಳಿಗೆ ಹೋಗಲು, ತಿನ್ನಲು ಹಣವಿಲ್ಲದಿದ್ದರೂ ಆಫೀಸ್ ಕೆಲಸ ಮುಗಿಸಿ ಕೋಲ್ಕತ್ತಾದ ಜನಪ್ರಿಯ ತಿನಿಸುಗಳನ್ನು ನೋಡಿ ತಿನ್ನುತ್ತಿದ್ದೆವು ಎಂದು ಹೇಳಿದ್ದಾರೆ. ನಾವು 8 ಮಂದಿ '10 ಬೈ 10′ ಕೊಠಡಿಯಲ್ಲಿ ವಾಸವಿದ್ದೆವು. ಆ ದಿನಗಳು ನನ್ನ ಸ್ನೇಹಿತ, ಆಫೀಸ್ ಸಮಯ, ನಂತರ ಸಂಜೆ ಹುಡುಗರೊಂದಿಗೆ ಮಸ್ತಿ ಮಾಡುತ್ತಿದ್ದೆವು. ಗೇಟ್ ಕೀಪರ್‌ಗಳಿಗೆ ಬೆಣ್ಣೆ ಹಚ್ಚುವುದು, ಆ ಸಮಯ ಅದ್ಭುತವಾಗಿತ್ತು. ಹ್ಹಾ ಮತ್ತೆ ಇದು ಎಂದಿಗೂ ಸಂಭವಿಸಲಿಲ್ಲ' ಎಂದು ಬಿಗ್ ಬಿ ಹೇಳಿದ್ದಾರೆ.
ಅಂದಿನಿಂದ ಇಂದಿನವರೆಗೂ ಜೀವನ ಹೇಗೆ ಬದಲಾಗಿದೆ ಎನ್ನುವುದನ್ನು ಅಮಿತಾಭ್ ಬಚ್ಚನ್ ಹೇಳಿದ್ದಾರೆ. ಅದೇ ಸ್ಥಳಗಳಿಗೆ ಭೇಟಿ ನೀಡುವುದು, ಆ ಕಾಲದ ಜನರನ್ನು ಭೇಟಿ ಮಾಡುವುದು ಅದೇ ಬೀದಿಗಳಿಗೆ ಮತ್ತೊಮ್ಮೆ ಹೋಗುವ ಬಗ್ಗೆ ಮಾತನಾಡಿದರು. 'ಹೊಸ ವೃತ್ತಿಯಲ್ಲಿರುವಾಗ ಮತ್ತು ನಗರದಲ್ಲಿ ಚಿತ್ರೀಕರಣ. ಅದೇ ಸ್ಥಳಗಳಿಗೆ ಭೇಟಿ ನೀಡುವುದು, ಆ ಕಾಲ ಮತ್ತು ಜನರನ್ನು ಭೇಟಿ ಮಾಡಿ ಮತ್ತು ಅವರಿಗೆ ಹಿಂದಿನ ಭರವಸೆಯನ್ನು ನೀಡುವುದು. ಮಧ್ಯರಾತ್ರಿಯಲ್ಲಿ ಎಲ್ಲಾ ಬೀದಿಗಳಿಗೆ ಭೇಟಿ ನೀಡುವುದು. ಮತ್ತು ಪ್ರತಿಯೊಂದು ಸ್ಥಳ ಮತ್ತು ಅಲ್ಲಿ ನಡೆದದ್ದನ್ನು ನೆನಪಿಸಿಕೊಳ್ಳುವುದು. ಕೆಲವು ಸ್ನೇಹಿತರು ಕಳೆದುಹೋದರು ಎಲ್ಲವೂ ನೆನಪು. ನಮ್ಮೊಂದಿಗೆ ಕೊನೆಯವರೆಗೂ ಉಳಿದಿರುವ ಅವರ ಪ್ರೀತಿ ಹೊಸ ಫ್ರೆಶ್ ಸ್ನೇಹಿತರು. ಪ್ರೀತಿ ತುಂಬಿದ ಭಾವನೆ ಮತ್ತು ಹೆಚ್ಚಿನ ಗೌರವ ಮತ್ತು ಕಾಳಜಿ' ಎಂದು ಹೇಳಿದ್ದಾರೆ.
ಉದ್ದ ಕೂದಲಿದೆ ಎನ್ನುವ ಕಾರಣಕ್ಕೆ ಜಯಾ ಬಚ್ಚನ್ ಮದುವೆಯಾದೆ; ಅಮಿತಾಭ್ ಬಚ್ಚನ್
80 ವರ್ಷದ ಅಮಿತಾಭ್ ಬಚ್ಚನ್ ಇಳಿವಯಸ್ಸಿನ್ಲಲೂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಅಮಿತಾಭ್ ಊಂಚೈ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಗೂಮರ್, ಗಣಪತ್, ಪ್ರಭಾಸ್ ಜೊತೆ ಪ್ರಾಜೆಕ್ಟ್ ಕೆ ಸೇರಿದಂತೆ ಇನ್ನೂ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.