ಈ ಭಾನುವಾರದಿಂದಲೂ ಗಾಸಿಪ್ ಪೇಜ್ ಫುಲ್ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮದ್ವೆದೇ ಸುದ್ದಿ. ಈ ಮಟ್ಟಿನ ಸುದ್ದಿ ಹಬ್ಬಬೇಕಂದರೆ ಅದಕ್ಕೊಂದು ಹಿನ್ನೆಲೆ ಇಲ್ಲದಿರುತ್ತಾ, ಇಂಥಾ ಅನುಮಾನಕ್ಕೆ ಇವತ್ತು ಬೆಳ್ ಬೆಳಗ್ಗೇ ವಿಜಯ್ ದೇವರಕೊಂಡ ಸ್ಪಷನೆ ನೀಡಿದ್ದಾರೆ.
ರಶ್ಮಿಕಾ ಮಂದಣ್ಣ (Rashmika Mandanna) ನಮ್ಮ ಕೊಡಗಿನ ಹುಡುಗಿ. ತೆಲುಗು (Telugu) ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಟ ವಿಜಯ ದೇವರಕೊಂಡ (Vijay Devarakonda). ಇಬ್ಬರಿಗೂ ಸೋಷಿಯಲ್ ಮೀಡಿಯಾದಲ್ಲಿ (Social media) ಲಕ್ಷಾಂತರ ಫ್ಯಾನ್ ಫಾಲೋವಿಂಗ್ ಇದೆ. ವಿಜಯ್ ದೇವರಕೊಂಡ ಇದೀಗ ಲೈಗರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೊಂದು ಬಿಗ್ ಬಜೆಟ್ (Big Budget) ಚಿತ್ರ. ಸದ್ಯ ಈ ಚಿತ್ರದ ಭರಾಟೆ ಜೋರಾಗಿದೆ. ಈ ಸಿನಿಮಾ ಮೂಲಕ ದೇವರಕೊಂಡ ಭರ್ಜರಿ ಬಾಲಿವುಡ್ ಎಂಟ್ರಿ ಪಡೆದಿದ್ದಾರೆ. ಈ ಸಿನಿಮಾದ ಟೀಸರ್ ಕಳೆದ ಕೆಲವು ದಿನಗಳ ಹಿಂದೆ ಸಾಕಷ್ಟು ಸುದ್ದಿಯಲ್ಲಿತ್ತು.
ಅದಾದ ಮೇಲೆ ಸುದ್ದಿಯಾದದ್ದೇ ಇವರ ಹಾಗು ರಶ್ಮಿಕಾ ಮದುವೆ. ಅಷ್ಟಕ್ಕೂ 25ರ ಹರೆಯ ಜೋಶ್‌ಫುಲ್ ಹುಡುಗಿ ನಮ್ ರಶ್ಮಿಕಾ ಏನೂ ಸುಮ್ಮನೆ ಕೂತಿಲ್ಲ. ಅವರ ಕೈತುಂಬಾ ಚಿತ್ರಗಳಿವೆ. ಹೈದ್ರಾಬಾದ್‌ನಲ್ಲೊಂದು (Hyderabad) ಮನೆ, ಬಾಂಬೆ (Mumabi)ಯಲ್ಲೊಂದು ಮನೆ ಅಂತ ಅವರು ಮಹಾನಗರಗಳಲ್ಲಿ ಮನೆ ಕೊಳ್ಳುತ್ತಾ, ಸಿನಿಮಾ (cinema) ಮಾಡುತ್ತಾ ಸಖತ್ ಬ್ಯುಸಿ ಆಗಿದ್ದಾರೆ.
Istha Muruga periods quiz ಪತಿಗೆ ಮುಟ್ಟಿನ ಬಗ್ಗೆ ಎಷ್ಟು ಗೊತ್ತೆಂದು ಟೆಸ್ಟ್ ಮಾಡಿದ ನಟಿ!
ಈಗ ಈ ಇಬ್ಬರು ಬ್ಯುಸಿ ಆಕ್ಟರ್ಸ್ (Busy Actors) ಮದುವೆ ಆಗ್ತಿದ್ದಾರೆ ಅನ್ನೋ ಸುದ್ದಿ ಎಲ್ಲೆಲ್ಲೂ ಹಬ್ಬಿದೆ. ಅವರಿಬ್ಬರ ಸುದ್ದಿ ಆ ಪಾಟಿ ಹಬ್ಬಲು ಕಾರಣ ಈ ಇಬ್ಬರ ನಡುವಿನ ಸ್ನೇಹ (Friendship). ಈ ಜೋಡಿ ಗೀತ ಗೋವಿಂದಂ (Geetha Govindam) ಚಿತ್ರದ ಬಳಿಕ ಎಲ್ಲರ ಮನ ಗೆದ್ದಿತ್ತು. ಜೊತೆಗೆ ಇಬ್ಬರ ಬಾಡಿ ಲ್ಯಾಂಗ್ವೇಜ್ (Body Langauge) ನೋಡಿದ್ರೆ ಇವರ ನಡುವೆ ಸ್ನೇಹವನ್ನು ಮೀರಿದ ಮತ್ತೇನೋ ಇದೆ ಅಂತ ಆಮೇಲಾಮೇಲೆ ಜನ ಮಾತಾಡ್ಕೊಂಡ್ರು. ಆ ಹೊತ್ತಿಗೆ 'ಡಿಯರ್ ಕಾಮ್ರೇಡ್' (Dear comrade) ಚಿತ್ರ ಬಂತು. ಅಲ್ಲೂ ಈ ಪೇರ್ ಸಖತ್ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿತು. ಹೀಗೆ ಎರಡೂ ಸಿನಿಮಾದಲ್ಲಿ ಜೊತೆಯಾದ ಮೇಲೆ ಈ ಜೋಡಿಗಳು ಒಟ್ಟಾಗಿ ವಿಹರಿಸೋದೂ ಹೆಚ್ಚಾಗತೊಡಗಿತು.
ಇದಾಗಿ ಈ ಜೋಡಿ ಮೊನ್ನೆ ಮೊನ್ನೆ ಹೊಸ ವರ್ಷವನ್ನು ಜೊತೆಯಾಗಿ ಗೋವಾ(Goa)ದಲ್ಲಿ ಸಂಭ್ರಮಿಸಿದರು. ಸಂಕ್ರಾಂತಿ ಹಬ್ಬದ ನೆವದಲ್ಲೂ ರಶ್ಮಿಕಾ ವಿಜಯ್ ಫ್ಯಾಮಿಲಿ ಮೀಟ್ ಮಾಡಿ ಖುಷಿಯಿಂದ ಸಮಯ ಕಳೆದರು. ಮುಂಬೈನಲ್ಲಿ ಜಿಮ್‌ನಲ್ಲೊಮ್ಮೆ, ಡಿನ್ನರ್‌ನಲ್ಲೊಮ್ಮೆ ಇಬ್ಬರೂ ಕೈ ಕೈ ಹಿಡಿದು ಓಡಾಡೋದು ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾಯ್ತು. ರಶ್ಮಿಕಾ ಮುಂಬೈ ಮನೆಗೂ ವಿಜಯ್ ವಿಸಿಟ್ ಮಾಡ್ತಿರ್ತಾರೆ ಅನ್ನೋ ಸುದ್ದಿಯೂ ಹಬ್ಬಿತು.
ಸದ್ಯಕ್ಕೀಗ ಈ ಜೋಡಿ ಡೇಟಿಂಗ್ ಮಾಡ್ತಿದೆ ಅನ್ನೋದು ಸುದ್ದಿ. ಅದೂ ಹಳೇದಾಯ್ತು ಅನ್ನೋರಿಗೆ ಇವರಿಬ್ಬರ ನಡುವೆ ಅಫೇರ್ ಇದೆ, ಈ ಇಬ್ಬರೂ ಈ ವರ್ಷವೇ ಮದುವೆ ಆಗ್ತಿದ್ದಾರೆ ಅನ್ನೋ ಗಾಸಿಪ್ ಇದೆ. ಆದರೆ ಹೇಳಿಕೇಳಿ ಇದು ಗಾಸಿಪ್. ಸೋಷಿಯಲ್ ಮೀಡಿಯಾಗಳಲ್ಲಿ, ಸಿನಿಮಾ ಮ್ಯಾಗಜೀನ್, ಚಾನೆಲ್‌ಗಳ ಗಾಸಿಪ್ ಪೇಜ್‌ನಲ್ಲಿ ಹರಿದಾಡಿದ ಸುದ್ದಿ. ನಿನ್ನೆ ಈ ಸುದ್ದಿ ಯಾವ ಲೆವೆಲ್‌ಗೆ ಹರಿದಾಡಿತ್ತು ಅಂದರೆ ಜನ ಖಂಡಿತಾ ಈ ಜೋಡಿ ಈ ವರ್ಷ ಮದುವೆ ಆಗಿಯೇ ಆಗ್ತಾರೆ ಅಂತ ನಂಬಿದ್ರು. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಡೇಟಿಂಗ್‌ನಲ್ಲಿದ್ದಾರೆ. ಈ ವರ್ಷವೇ ಅವರಿಬ್ಬರು ಮದುವೆ ಆಗ್ತಾರೆ ಅಂತ ನ್ಯಾಶನಲ್ ಲೆವಲ್ ಸುದ್ದಿಯಾದರೆ, ವಿಜಯ್ ಕರ್ನಾಟಕದ ಅಳಿಯ ಆಗ್ತಾರೆ ಅನ್ನೋದು ಸ್ಥಳೀಯ ಮಾಧ್ಯಮಗಳ ಗಾಸಿಪ್ ಪೇಜ್ ನ್ಯೂಸ್.
ಸಿಂಗಮ್‌ನ ಕಾಜಲ್ Baby Shower ಫೋಟೋ ವೈರಲ್!
ಈ ಗಾಳಿ ಸುದ್ದಿ ಯಾವ ಲೆವೆಲ್‌ಗೆ ಹೋಗಿದೆ ಅಂದರೆ ಬೆಳ್ಳಂಬೆಳಗ್ಗೆದ್ದು ಪೇಪರ್ ಪುಟ ತಿರುಗಿಸಿದ ವಿಜಯ್ ದೇವರಕೊಂಡ ಇದನ್ನೋದಿ ಮೂರ್ಛೆ ಹೋಗೋದೊಂದು ಬಾಕಿ. ಇದೇ ಮನಸ್ಥಿತಿಯಲ್ಲಿ ಜನಪ್ರಿಯ ಮಾಧ್ಯಮಗಳ ಸಿನಿಮಾ, ಗಾಸಿಪ್ ಪೇಜ್ ತಿರುವಿ ಹಾಕಿದ್ರೆ ಎಲ್ಲಾ ಕಡೆ ಅದೇ ಸುದ್ದಿ. ವಿಜಯ್‌ಗೆ ಮೈ ಪರಚಿಕೊಳ್ಳೋ ಸ್ಥಿತಿ. ಬೇರೆ ದಾರಿ ಕಾಣದೇ ಅವರು ಸೋಷಿಯಲ್ ಮೀಡಿಯಾದಲ್ಲಿ ಇದಕ್ಕೆ ರಿಪ್ಲೈ ಮಾಡಿದ್ರು.
ಅವರ ರಿಪ್ಲೈನಲ್ಲಿ ಹೊಸತೇನೂ ಇಲ್ಲದಿದ್ದರೂ ಸದ್ಯದ ಮಟ್ಟಿಗೆ ಹೀಗೆ ರೆಕ್ಕೆ ಪುಕ್ಕ ಕಟ್ಕೊಂಡು ಹರಿದಾಡ್ತಿರೋ ಗಾಳಿಸುದ್ದಿಗೆ ತಾತ್ಕಾಲಿಕ ಬ್ರೇಕ್ ಹಾಕೋದಂತೂ ಸಾಧ್ಯವಾಯ್ತು. ನಿನ್ನೆ ಮೊನ್ನೆ ನಮ್ಮ ಪ್ರೀತಿ, ಮದುವೆ ಬಗ್ಗೆ ಹರಿದಾಡಿರೋದೆಲ್ಲ ಎಂದಿನಂತೆ ಗಾಳಿಸುದ್ದಿ ಅಂತ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಹೀಗಾಗಿ ಸದ್ಯಕ್ಕೆ ಇವರ ಮದುವೆ ಸುದ್ದಿಗೆ ಬ್ರೇಕ್ ಬಿದ್ದಿದೆ. ಇನ್ನೊಮ್ಮೆ ಜೊತೆಯಾಗಿ ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾದರೆ ಮತ್ತೆ ಇಂಥಾ ಸುದ್ದಿಗೆ ಜೀವ ಬರುತ್ತೆ. ಇದೆಲ್ಲದರಿಂದಾಗಿ ಅಬ್ಬಾ, ಈ ಸೆಲೆಬ್ರಿಟಿಗಳದ್ದೂ ಒಂದು ಲೈಫಾ ಅಂತ ಸಾಮಾನ್ಯ ಜನ ಬಿಡಿ, ಸ್ವತಃ ಸೆಲೆಬ್ರಿಟಿಗಳೂ ತಲೆ ತಲೆ ಜಜ್ಜಿಕೊಳ್ಳೋ ಹಾಗಾಗಿದೆ.