32 ಲಕ್ಷ ಚಂದಾದಾರರ ಈ ಆ್ಯಪ್​ ಪೂನಂ ಪಾಂಡೆಯನ್ನು ಕೋಟ್ಯಧಿಪತಿ ಮಾಡಿತ್ತು! ನಟಿಯ ಸಂಪಾದನೆ ಮಾರ್ಗ ಹೀಗಿತ್ತು

By Suvarna News  |  First Published Feb 2, 2024, 1:41 PM IST

32ನೇ ವಯಸ್ಸಿಗೇ ಇಂದು ಸಾವನ್ನಪ್ಪಿದ ಬಾಲಿವುಡ್​ ನಟಿ ಪೂನಂ ಪಾಂಡೆಯ ಆದಾಯದ ಮೂಲವೇನು? ಈ ಒಂದು ಆ್ಯಪ್​ನಿಂದ ಈಕೆ ಶ್ರೀಮಂತೆಯಾಗಿದ್ದು ಹೇಗೆ? 
 


ಇಂದು (ಫೆಬ್ರುವರಿ 2) ಬೆಳಗ್ಗೆ ಬಾಲಿವುಡ್​ ಇಂಡಸ್ಟ್ರಿಗೆ ಬರಸಿಡಿಲು ಬಡಿಯಿತು. ಇದಕ್ಕೆ ಕಾರಣ, ಹಾಟೆಸ್ಟ್​ ನಟಿ ಎಂದೇ ಖ್ಯಾತಿ ಪಡೆದ, ಸದಾ ತಮ್ಮ ಬಟ್ಟೆಗಳಿಂದಲೇ ವಿವಾದದಲ್ಲಿಯೂ ಇದ್ದ 32 ವರ್ಷದ ನಟಿ ಪೂನಂ ಪಾಂಡೆ ಎಲ್ಲರನ್ನೂ ಬಿಟ್ಟು ಹೋದರು. ಉತ್ತರ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ. ಗರ್ಭಕಂಠದ ಕ್ಯಾನ್ಸರ್​ ಅವರನ್ನು ಬಲಿ ತೆಗೆದುಕೊಂಡಿತು. ಪೂನಂ ಪಾಂಡೆ ಅವರು 2013ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ‘ನಶಾ’ ಅವರ ನಟನೆಯ ಮೊದಲ ಸಿನಿಮಾ. ‘ಲವ್ ಈಸ್ ಪಾಯಿಸನ್’ ಹೆಸರಿನ ಕನ್ನಡ ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು. ತೆಲುಗು, ಬೋಜ್​ಪುರಿ ಸಿನಿಮಾಗಳಲ್ಲಿ ಪೂನಂ ನಟಿಸಿದ್ದಾರೆ. 2018ರಲ್ಲಿ ರಿಲೀಸ್ ಆದ ‘ದಿ ಜರ್ನಿ ಆಫ್ ಕರ್ಮ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಆ ಬಳಿಕ ಸಿನಿಮಾಗಳಲ್ಲಿ ಅವರು ನಟಿಸಿರಲಿಲ್ಲ. ಆದರೆ ದಿಢೀರನೆ ಈಗ ಸಾವಿನ ಸುದ್ದಿ ಬಂದಿದೆ.

ಅಂದಹಾಗೆ ನಟಿ, ವಿವಾದಾತ್ಮಕ ರೂಪದರ್ಶಿ ಎಂದೇ ಹೆಸರು ಪಡೆದವರು. ಇದಕ್ಕೆ ಕಾರಣ, ಅವರ ಬಟ್ಟೆ. , ಲವ್ ಕಿ ಪ್ಯಾಶನ್, ಮಾಲಿನಿ ಅಂಡ್ ಕಂಪನಿ, ಆ ಗಯಾ ಹೀರೋ ಮತ್ತು ದಿ ಜರ್ನಿ ಆಫ್ ಕರ್ಮದಂಥ ಕೆಲವೇ ಚಿತ್ರಗಳಲ್ಲಿ ನಟಿಸಿರುವ ನಟಿಯ ಒಟ್ಟೂ ಆಸ್ತಿ 50ಕೋಟಿಗೂ ಮಿಗಿಲು ಎನ್ನಲಾಗುತ್ತಿದೆ. ಹಾಗಿದ್ದರೆ ಚಿತ್ರಗಳಲ್ಲಿ ನಟಿಸದೇ ನಟಿ ಸಂಪಾದನೆ ಮಾಡುತ್ತಿದ್ದುದು ಹೇಗೆ? ಈಕೆಯ ಆಸ್ತಿಯ ಮೂಲ ಯಾವುದು ಎಂಬ ಬಗ್ಗೆ ಇದೀಗ ರಿವೀಲ್​ಗೊಂಡಿದೆ. ಐಷಾರಾಮಿ ಕಾರುಗಳು, ಐಷಾರಾಮಿ ಬದುಕು, 50 ಕೋಟಿಗೂ ಮಿಗಿಲಾದ ಆಸ್ತಿ,  ಮುಂಬೈನ ಬಾಂದ್ರಾದಲ್ಲಿ 4 ಅಂತಸ್ತಿನ ಕಟ್ಟಡ, ತಮ್ಮ  ವ್ಯವಹಾರ ನಿರ್ವಹಣೆಗೆ  27 ಸಿಬ್ಬಂದಿ, ಮನೆಯಲ್ಲಿ  ಮೂವರು ಬಾಣಸಿಗರು... ಹೀಗೆಲ್ಲಾ ಗಳಿಸಲು ಹೇಗೆ ಸಾಧ್ಯವಾಯಿತು ಎನ್ನುವುದು ಕುತೂಹಲದ ವಿಷಯವೇ.  

Tap to resize

Latest Videos

39 ವರ್ಷ ಹಿರಿಯ ಶಕ್ತಿ ಕಪೂರ್​ ಜತೆ ಪೂನಂ ಪಾಂಡೆಯ ಮಳೆಯಲ್ಲಿನ ಫಸ್ಟ್​ ನೈಟ್​ ಸೀನ್: ಬೆಚ್ಚಿಬಿದ್ದ ಪ್ರೇಕ್ಷಕರು!

ಅಷ್ಟಕ್ಕೂ ನಟಿ ಬಿಗ್​ಬಾಸ್​ ಹಿಂದಿಯಲ್ಲಿ ಭಾಗವಹಿಸಿ ಪ್ರಸಿದ್ಧಿಗೆ ಬಂದಿದ್ದರು. ತಮ್ಮ ಕಾಂಟ್ರವರ್ಸಿಗಳಿಂದಾಗಿಯೇ ಇವರು ಬಿಗ್​ಬಾಸ್​ನಲ್ಲಿ ಜಾಗ ಗಳಿಸಿದ್ದರು. ಇದರ ಜೊತೆಗೆ ಇವರು,  ಆಲ್ಟ್ ಬಾಲಾಜಿಯ ಷೋ ಲಾಕಪ್‌ ನಲ್ಲಿಯೂ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇವರ ಹಾಟ್​ನೆಸ್​ಗೆ ಈ ಷೋ ಸಕತ್​ ಹಿಟ್​ ಆಗಿತ್ತು. ಅಲ್ಲಿ ಇವರು,  ಪ್ರತಿ ವಾರ ಸುಮಾರು 3 ಲಕ್ಷ ರೂ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ.   ಇಂಥ ಹಾಟ್​ ನಟಿಯರಿಗೆ ಕೆಲವೊಂದು ಮ್ಯಾಗಜೀನ್​ ಕವರ್​ ಪೇಜ್​ನಲ್ಲಿ ಭಾರಿ ಡಿಮ್ಯಾಂಡ್​ ಇರುತ್ತದೆ. ಅದೇ ರೀತಿ ಅರೆನಗ್ನ ಫೋಟೋಶೂಟ್​ ಮಾಡಿಸಿಕೊಂಡು ಮ್ಯಾಗಜೀನ್​ಗಳಿಂದ ಸಾಕಷ್ಟು ಹಣ ಸಂಪಾದನೆ ಮಾಡುತ್ತಿದ್ದರು ಪೂನಂ ಪಾಂಡೆ.  

ಇವೆಲ್ಲಕ್ಕಿಂತಲೂ ಮಿಗಿಲಾಗಿ ನಟಿಗೆ ಹೆಚ್ಚು ಹಣವನ್ನು ತಂದುಕೊಟ್ಟದ್ದು ಕಾಮಪ್ರಚೋದಕ ಆ್ಯಪ್​. ಹೌದು. ನಟಿ ಖುದ್ದು ಒಂದು  ಕಾಮಪ್ರಚೋದಕ ಅಪ್ಲಿಕೇಶನ್ ಹೊಂದಿದ್ದರು. ಇದರಿಂದ ಅವರು ಕೋಟಿ ಕೋಟಿ ಹಣ ಗಳಿಸಿದ್ದರು ಎನ್ನಲಾಗಿದೆ. ಈ ಆ್ಯಪ್​ಗೆ  32 ಲಕ್ಷಕ್ಕೂ ಅಧಿಕ  ಚಂದಾದಾರರು ಇದ್ದರು. ಈ ಆ್ಯಪ್​ನಲ್ಲಿ 32 ಲಕ್ಷ ಚಂದಾರಾರರಿಗೆ ಮನತಣಿಸುವ ವಿಡಿಯೋಗಳನ್ನು ಪೂನಂ ಹರಿಬಿಡುತ್ತಿದ್ದರು. ಈ ಮೂಲಕ ಸಾಕಷ್ಟು ಹಣ ಸಂಪಾದನೆ ಮಾಡಿದ್ದಾರೆ. ಆದರೆ ಯಮನ ಕರೆ ಬಂದಾಗ ಶ್ರೀಮಂತ-ಬಡವ ಎಲ್ಲರೂ ಹೋಗಲೇಬೇಕಲ್ಲವೆ? 32ನೇ ವಯಸ್ಸಿಗೇ ಇಷ್ಟೆಲ್ಲಾ ಖ್ಯಾತಿ ಗಳಿಸಿ, ಕಾಂಟವರ್ಸಿಗಳಿಂದಲೇ ಕುಖ್ಯಾತಿಯನ್ನೂ ಗಳಿಸಿದ ಪೂನಂ ಪಾಂಡೆ ಎಲ್ಲರನ್ನೂ ಬಿಟ್ಟು ಅಗಲಿದ್ದಾರೆ. 

ನಟಿ ಸೌಂದರ್ಯರ ಬಯೋಪಿಕ್​ನಲ್ಲಿ ನಟಿಸುವ ಆಸೆ ರಶ್ಮಿಕಾಗೆ! ಅಷ್ಟಕ್ಕೂ ಇವರಿಬ್ಬರ ಸಂಬಂಧವೇನು?

click me!