ಪುಷ್ಪಾ ಚಿತ್ರದ ಮೂಲಕ ನಟ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿರುವುದು ಗೊತ್ತಿದೆ. ಆ ಚಿತ್ರದಲ್ಲಿ ಅಲ್ಲು ಅರ್ಜುನ್ ಜೋಡಿಯಾಗಿ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ಈಗ ಪುಷ್ಪಾ 2 ಚಿತ್ರದಲ್ಲಿ ಕೂಡ ನಾಯಕಿಯಾಗಿ ರಶ್ಮಿಕಾ ನಟಿಸುತ್ತಿದ್ದಾರೆ.
ಅಲ್ಲು ಅರ್ಜುನ್ ನಾಯಕತ್ವದ 'ಪುಷ್ಪಾ 2' ಚಿತ್ರದಲ್ಲಿ ನಟಿಸಿದ್ದ ನಟ ಜಗದೀಶ್ ಪ್ರತಾಪ್ ಭಂಡಾರಿ ಅರೆಸ್ಟ್ ಆಗಿದ್ದರು. ಇದೀಗ ಬೇಲ್ ಮೂಲಕ ಬಿಡುಗಡೆಯಾಗಿರುವ ಅವರು, ಮತ್ತೆ ಶೂಟಿಂಗ್ ಸೆಟ್‌ಗೆ ಹಾಜರಾಗಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಹಿಳೆಯೊಬ್ಬರ ಖಾಸಗಿ ಫೋಟೋಗಳನ್ನು ಲೀಕ್ ಮಾಡಿದ್ದಲ್ಲದೇ ಅವರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರಣೆ ನೀಡಿದ್ದರು ಎನ್ನಲಾಗಿದೆ. ಈ ಕಾರಣಕ್ಕೆ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಈಗ ಬೇಲ್ ಮೂಲಕ ಬಿಡುಗಡೆಯಾಗಿದ್ದು ಮತ್ತೆ ಶೂಟಿಂಗ್‌ಗೆ ಹಾಜರಾಗಿದ್ದಾರೆ ಎನ್ನಲಾಗಿದೆ.
ಅಲ್ಲು ಅರ್ಜುನ್ ನಟನೆಯ ಪುಷ್ಪಾ ಸಿನಿಮಾದಲ್ಲಿ ನಟನೆ ಮಾಡಿದ್ದರು ತೆಲುಗು ಮೂಲದ ನಟ ಜಗದೀಶ್ ಪ್ರತಾಪ್ ಭಂಡಾರಿ. ಈಗ ಅಲ್ಲು ಅರ್ಜುನ್ ನಟನೆಯ 'ಪುಷ್ಪಾ 2' ಸಿನಿಮಾದಲ್ಲಿ ಕೂಡ ಈ ನಟ ಅಭಿನಯಿಸುತ್ತಿದ್ದಾರೆ. ಆದರೆ ಶೂಟಿಂಗ್ ಮಧ್ಯೆ ಈ ಕೇಸ್ ಕಾರಣಕ್ಕೆ ಅವರು ಶೂಟಿಂಗ್‌ನಿಂದ ಹೊರನಡೆಯಬೇಕಾಯ್ತು. ಆದರೆ, ಈಗ ಮತ್ತೆ ಪುಷ್ಪಾ 2 ಶೂಟಿಂಗ್ ಟೀಮ್ ಸೇರಿಕೊಂಡಿದ್ದು ಸಿನಿಮಾ ನಿರ್ಮಾಪಕರಿಗೆ ಖುಷಿ ತಂದಿದೆ.
ಅರೆಸ್ಟ್ ಆಗಿದ್ದ 'ಪುಷ್ಪ 2' ನಟ ಮತ್ತೆ ಶೂಟಿಂಗ್‌ಗೆ ಗೆ ಹಾಜರಿ; ಕಂಬಿ ಹಿಂದೆ ಹೋಗಿದ್ದೊಂದು ಭಾರೀ ರೋಚಕ ಕಥೆ!
ಪುಷ್ಪಾ ಚಿತ್ರದ ಮೂಲಕ ನಟ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿರುವುದು ಗೊತ್ತಿದೆ. ಆ ಚಿತ್ರದಲ್ಲಿ ಅಲ್ಲು ಅರ್ಜುನ್ ಜೋಡಿಯಾಗಿ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ಈಗ ಪುಷ್ಪಾ 2 ಚಿತ್ರದಲ್ಲಿ ಕೂಡ ನಾಯಕಿಯಾಗಿ ರಶ್ಮಿಕಾ ನಟಿಸುತ್ತಿದ್ದಾರೆ. ಆದರೆ, ಪುಷ್ಪಾ ಚಿತ್ರದಲ್ಲಿ ಸ್ಪೆಷಲ್ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದ ನಟಿ ಸಮಂತಾ ಅವರು ಪುಷ್ಪಾ 2 ಚಿತ್ರದಲ್ಲಿ ಡಾನ್ಸ್ ಮಾಡುತ್ತಿಲ್ಲ ಎನ್ನಲಾಗಿದೆ. ಪುಷ್ಪಾ 2 ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಪಾಲ್ಗೊಳ್ಳುತ್ತಿದ್ದಾರೆ.
ಇಂಗ್ಲಿಷ್ ಬಾರದ ಪುಷ್ಪಾಗೆ ಮಲ್ಲಿಯ ತಪ್ಪು ಪಾಠ; ಪುಷ್ಪಾ ಲವ್ ಚೀಟಿ ನೋಡಿ ಆಕಾಶ್ ಏನ್ಮಾಡ್ತಾನೋ..!?
ಒಟ್ಟಿನಲ್ಲಿ, ಪುಷ್ಪಾ 2 ಚಿತ್ರಕ್ಕೆ ಕವಿದಿದ್ದ ಸಣ್ಣದೊಂದು ಕಾರ್ಮೋಡ ಈ ಮೂಲಕ ಸರಿದಂತಾಗಿದೆ. ನಟನೊಬ್ಬನ ಕಾಲ್‌ಶೀಟ್ ಪಡೆದು ಅರ್ಧ ಶೂಟಿಂಗ್ ಆಗಿರುವಾಗ ಸಡನ್ನಾಗಿ ಅವರು ಲಭ್ಯವಿಲ್ಲದಿದ್ದರೆ ಸಹಜವಾಗಿಯೇ ನಿರ್ಮಾಪಕರಿಗೆ ಲಾಸ್ ಆಗುತ್ತದೆ. ಆದರೆ, ಸದ್ಯ ಬೇಲ್ ಮೇಲೆ ಆಚೆ ಬಂದಿರುವ ನಟ ಜಗದೀಶ್ ಪ್ರತಾಪ್ ಭಂಡಾರಿ ಶೂಟಿಂಗ್ ತಂಡ ಸೇರಿಕೊಂಡಿದ್ದು, ಇನ್ಮುಂದೆ ಶೂಟಿಂಗೆ ತಲೆನೋವು ಆಗಲಿಕ್ಕಿಲ್ಲ.
ಸಿನಿಮಾಗೆ ಕರ್ಕೊಂಡ್ ಬಂದ್ರು ಶಂಕರ್‌ನಾಗ್, ಅಂಗಡಿ ಬಿಟ್ಟೆ, ಏನೇನೋ ಮಾಡ್ದೆ; ಏನೇನಂದ್ರು ರಮೇಶ್ ಭಟ್..!?