
ಬಾಲಿವುಡ್ ಸ್ಟಾರ್‌ಗಳು ಹೊಟ್ಟೆಗೇನೂ ತಿನ್ನುವುದಿಲ್ಲ. ಬರೀ ಜಿಮ್, ವರ್ಕೌಟ್ ಮಾಡ್ತಾ ಇರುತ್ತಾರೆ. ಹಾಗಾಗಿಯೇ ಅಷ್ಟೊಂದು ತೆಳ್ಳಗಿರುತ್ತಾರೆ ಎಂದು ಕೆಲವರು ಮಾತಾಡಿಕೊಳ್ಳುವುದನ್ನು ನೀವು ಕೇಳಿರಬಹುದು. ಹಾಗಂತ ನಾವು ಅದನ್ನೆಲ್ಲ ಆಡಲಾಗುತ್ತಾ ಅಂತಲೂ ನೀವು ಅಂದುಕೊಳ್ಳಬಹುದು. ಆದರೆ ವಾಸ್ತವ ಹಾಗಿಲ್ಲ. ಅವರ ಬ್ರೇಕ್‌ಫಾಸ್ಟ್, ಲಂಚ್, ಡಿನ್ನರ್‌ಗಳ ಗುಟ್ಟು ತಿಳಿದರೆ ನೀವೂ ಅವನ್ನು ಫಾಲೋ ಮಾಡಬಹುದು. ಅವರಂತೆಯೇ ಹೆಲ್ದೀ ಬಾಡಿಯನ್ನೂ ಮೇಂಟೇನ್ ಮಾಡಬಹುದು.
ಅಂದ ಹಾಗೆ, ಇವರೆಲ್ಲರ ಬ್ರೇಕ್‌ಫಾಸ್ಟ್ ಡಯಟ್‌ನಲ್ಲಿ ಪ್ರಮುಖ ಪಾತ್ರ ವಹಿಸಿರೋದು ಏನು ಗೊತ್ತಾ? ಮೊಟ್ಟೆ! ಮೊಟ್ಟೆಯಲ್ಲಿರುವ ಹಳದಿ, ನಿಮಗೆ ಸಾಕಷ್ಟು ಪ್ರೊಟೀನ್ ನೀಡುತ್ತದೆ. ಎರಡು ಮೊಟ್ಟೆಯಲ್ಲಿರುವ ಹಳದಿ, ಹೆಚ್ಚೇನೂ ಕಠಿಣ ದುಡಿಮೆಯ ಕೆಲಸ ಮಾಡದಿದ್ದರೆ ನಿಮಗೆ ಒಂದು ಹೊತ್ತಿನ ಆಹಾರಕ್ಕೆ ಸಾಕು.
ಉದಾಹರಣೆಗೆ ಐಶ್ವರ್ಯಾ ರೈ. ಆರಾಧ್ಯ ಎಂಬ ಪುಟ್ಟ ಕಂದನನ್ನು ಹೆತ್ತು ಆಕೆಯ ಆರೈಕೆ ಆಗುಹೋಗುಗಳಲ್ಲಿ ತೊಡಗಿದ್ದರೂ, ಒಂದು ಮಿತಿಗಿಂತ ಹೆಚ್ಚು ದಪ್ಪಗಾಗಿಲ್ಲ. ಹಾಗಂತ ತಮ್ಮ ಆಹಾರವನ್ನೂ ಆಕೆ ಹೆಚ್ಚಿಸಿಲ್ಲ. ಮುಂಜಾನೆ ಎದ್ದ ಕೂಡಲೇ ಲಿಂಬೆರಸ ಹಾಗೂ ಜೇನು ಸೇರಿಸಿದ ಬಿಸಿನೀರು ಕುಡಿಯುತ್ತಾರೆ. ನಂತರ ಬ್ರೇಕ್‌ಫಾಸ್ಟ್‌ಗೆ ಮೊಟ್ಟೆ ಸೇವಿಸುತ್ತಾರೆ. ಅದರ ಜೊತೆಗೆ ಬ್ರೌನ್ ಬ್ರೆಡ್ ಟೋಸ್ಟ್ ಮತ್ತು ಓಟ್ಸ್. ಮಧ್ಯಾಹ್ನದ ಊಟಕ್ಕೆ ಚಪಾತಿ, ಬೇಯಿಸಿದ ತರಕಾರಿ, ದಾಲ್. ಸಂಜೆ ಆಯಾ ಕಾಲದಲ್ಲಿ ಸಿಗುವ ಹಣ್ಣುಗಳು. ರಾತ್ರಿ ಊಟಕ್ಕೆ ಕುಚ್ಚಲಕ್ಕಿ ಅನ್ನ ಮತ್ತು ಗ್ರಿಲ್ಡ್ ಫಿಶ್.
ಕರೀನಾ ಕಪೂರ್ ಮುಂಜಾನೆ ಬ್ರೇಕ್‌ಫಾಸ್ಟ್‌ಗೆ ಮೊಟ್ಟೆಯ ಹಳದಿ, ಚೀಸ್, ಮುಸ್ಲಿ, ಬ್ರೆಡ್ ಸ್ಲೈಸ್, ಪರಾಠಾ ಹಾಗೂ ಹಾಲು ಸೇವಿಸುತ್ತಾರೆ. ಮಧ್ಯಾಹ್ನಕ್ಕೆ ಚಪಾತಿ, ಸೂಪ್, ದಾಲ್, ಗ್ರೀನ್ ಸಲಾಡ್. ಸಂಜೆ ಹಣ್ಣುಗಳು ಮತ್ತು ಪ್ರೊಟೀನ್ ಶೇಕ್. ರಾತ್ರಿ ಊಟಕ್ಕೆ ಚಪಾತಿ ಮತ್ತು ದಾಲ್. ಈಕೆಯ ಅಕ್ಕ ಕರಿಷ್ಮಾ ಕಪೂರ್ ಕೂಡ ಹೆಚ್ಚು ಕಡಿಮೆ ಇದೇ ಡಯಟ್. ಇಬ್ಬರನ್ನೂ ಅಕ್ಕಪಕ್ಕ ನಿಲ್ಲಿಸಿದರೆ ಪ್ರಾಯದಲ್ಲಿ ಪೈಪೋಟಿಗೆ ಬಿದ್ದಂತಿದ್ದಾರೆ.
ಬ್ರಹ್ಮಗಂಟಿನ ಗುಂಡಮ್ಮ ಎಷ್ಟು ಮುದ್ದಾಗಿದ್ದಾರೆ ನೋಡಿ!
ವರ್ಷ ನಲುವತ್ತನಾಲ್ಕು ಆದರೂ ಈಗಲೂ ಐಟಂ ಸಾಂಗ್‌ಗೆ ಸಲೀಸಾಗಿ ಹೆಜ್ಜೆ ಹಾಕುವ, ಪಡ್ಡೆ ಹೈಕಳ ಎದೆಯಲ್ಲಿ ಬೆವರು ಇಳಿಯುವಂತೆ ಮಾಡುವ ಮಲೈಕಾ ಅರೋರಾ ಖಾನ್ ಡಯಟ್ ಹೀಗಿದೆ- ಮುಂಜಾನೆ ಬಿಸಿನೀರು, ಜೇನು. ಬ್ರೇಕ್‌ಫಾಸ್ಟ್‌ಗೆ ಮೊಟ್ಟೆ, ಹಣ್ಣು, ಉಪ್ಮಾ, ಇಡ್ಲಿ, ಮಲ್ಟಿಗ್ರೇನ್ ಟೋಸ್ಟ್. ಊಟಕ್ಕೆ ಎರಡು ಚಪಾತಿ, ಅನ್ನ, ಬೇಯಿಸಿದ ತರಕಾರಿ ಪಲ್ಯ, ಚಿಕನ್ ಮತ್ತು ಮೊಳಕೆ ಕಾಳು. ರಾತ್ರಿ ಡಿನ್ನರ್‌ಗೆ ಸೂಪ್ ಮತ್ತು ಬೇಯಿಸಿದ ತರಕಾರಿ.
ಕರಾವಳಿಯ ಹುಡುಗಿ ಶಿಲ್ಪಾ ಶೆಟ್ಟಿಯ ಡಯಟ್ ಸ್ವಲ್ಪ ವಿಭಿನ್ನವಾಗಿದೆ. ಮುಂಜಾನೆ ಎದ್ದ ಕೂಡಲೇ ಈಕೆ ಪ್ರೊಟೀನ್ ಶೇಕ್ ಸೇವಿಸುತ್ತಾಳೆ. ಜೊತೆಗೆ ಎರಡು ಒಣ ಬಾದಾಮಿ. ಬ್ರೇಕ್‌ಫಾಸ್ಟ್‌ಗೆ ಅಲೋವೆರಾ ಅಥವಾ ನೆಲ್ಲಿಕಾಯಿ ಜ್ಯೂಸ್. ಗಂಟಿ, ಟೀ ಮತ್ತು ಮೊಟ್ಟೆ. ಊಟಕ್ಕೆ ಚಪಾತಿ, ಕುಚ್ಚಲಕ್ಕಿ ಗಂಜಿ, ಚಿಕನ್ ಕರಿ, ಸಾಲ್ಮನ್. ಸಂಜೆ ಎಗ್ ವೈಟ್, ಬ್ರೌನ್ ಬ್ರೆಡ್. ರಾತ್ರಿ ಡಿನ್ನರ್‌ಗೆ ಸೂಪ್, ಸಲಾಡ್ ಮತ್ತು ಚಿಕನ್.
ವರ್ಕೌಟ್ ಇಲ್ದೇ ನಾನಿಲ್ಲ ಅನ್ನೋ ಇಲಿಯಾನಾ; ಥಟ್ ಅಂತ ಹೇಳಿದ ಫಿಟ್ ಸ್ಟಾರ್
ಇವರೆಲ್ಲರ ಡಯಟ್‌ನಲ್ಲೂ ಮುಂಜಾನೆ ಮೊಟ್ಟೆ ಮತ್ತು ಜೇನು ಪಾಲು ಪಡೆದಿರುವುದನ್ನು ನೀವು ನೋಡಬಹುದು. ಮೊಟ್ಟೆಯ ಹಳದಿ ಸಕತ್ ಪ್ರೊಟೀನ್‌ಗಳ ಆಗರ. ಮೊಟ್ಟೆಯ ಬಿಳಿ ಅಂಶ ಕೂಡ ಸಾಕಷ್ಟು ಕಾರ್ಬೊಹೈಡ್ರೇಟ್ ಹೊಂದಿದ್ದು. ಹೊಟ್ಟೆ ತುಂಬಿದ ಫೀಲ್ ಕೊಡುತ್ತದೆ. ಹಾಗೇ ಮುಂಜಾನೆ ಖಾಲಿ ಹೊಟ್ಟೆಗೆ ಜೇನು ಸೇವಿಸಿದರೆ ಹೊಟ್ಟೆ ಶುದ್ದಿಯಾಗುವುದು. ಪಚನಶಕ್ತಿ ಹೆಚ್ಚಾಗುತ್ತದೆ. ಅನಗತ್ಯ ಕೊಬ್ಬು ಇಲ್ಲವಾಗುತ್ತದೆ. ಸೇವಿಸುವ ಆಹಾರಗಳ ಶಕ್ತಿಯೆಲ್ಲ ಸಮರ್ಪಕವಾಗಿ ಸೇರಬೇಕಾದಲ್ಲಿ ಸೇರುತ್ತವೆ.
ಸ್ಯಾಂಡಲ್‌ವುಡ್ ಕ್ರಷ್ ರಶ್ಮಿಕಾ ಮಂದಣ್ಣ ತ್ವಚೆಯ ಸೀಕ್ರೇಟ್ ರಿವೀಲ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.