ವೇಶ್ಯೆ ಪಾತ್ರದಲ್ಲಿ ಮಿಂಚಲಿದ್ದಾರೆ ದಕ್ಷಿಣದ ನಟಿ..!

By Suvarna News  |  First Published Aug 13, 2020, 4:34 PM IST

ನಟಿಯರು ನಿರ್ದೇಶಕರ ಐಡಿಯಾಗೆ ತಕ್ಕಂತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕಾಗುತ್ತದೆ. ಅಲ್ಲಿ ಬಹುತೇಕ ಸಂದರ್ಭಗಳಲ್ಲಿ ನಿರ್ದೇಶಕ ಮಾತೇ ಅಂತಿಮವಾಗಿರುತ್ತದೆ.


ನಟಿಯರು ನಿರ್ದೇಶಕರ ಐಡಿಯಾಗೆ ತಕ್ಕಂತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕಾಗುತ್ತದೆ. ಅಲ್ಲಿ ಬಹುತೇಕ ಸಂದರ್ಭಗಳಲ್ಲಿ ನಿರ್ದೇಶಕ ಮಾತೇ ಅಂತಿಮವಾಗಿರುತ್ತದೆ. ಆದರೆ ವೇಶ್ಯೆ ಪಾತ್ರ ಮಾಡುವುದೆಂದರೆ ಅಷ್ಟು ಸುಲಭವಲ್ಲ. ಅದೊಂದು ಸವಾಲಿನ ಪಾತ್ರ.

ಇದೀಗ ಟಾಲಿವುಡ್ ನಟಿ ಈಶಾ ರೆಬ್ಬಾ ಇಂತಹದೊಂದು ಸವಾಲಿನ ಪಾತ್ರ ಮಾಡುತ್ತಿದ್ದಾರೆ. ಹೌದು ಈಶಾ ವೇಶ್ಯೆಯಾಗಿ ಕಾಣಿಸಿಕೊಳ್ಲಲಿದ್ದಾರೆ. ಕೆಲವು ನಟಿಯರು ವೇಶ್ಯೆ ಪಾತ್ರ ಮಾಡಿ ತಮ್ಮ ಅಭಿನಯಕ್ಕೆ ಭಾರೀ ಮೆಚ್ಚುಗೆ ಪಡೆದಿದ್ದಾರೆ.

Tap to resize

Latest Videos

undefined

ರಜನಿಕಾಂತ್ ನಾಯಕಿ, 'ಮಿರ್ಚಿ' ಲತಾ; ನಾದಿಯಾ ಮೊಯ್ಡು ಈಗೆಲ್ಲಿದ್ದಾರೆ?

ರಾಣಿ ಮುಖರ್ಜಿ ಲಾಗಾ ಚುನರೀ ಮೇ ದಾಗ್ ಸಿನಿಮಾದಲ್ಲಿ ವೇಶ್ಯೆಯಾಗಿ ಕಾಣಿಸಿಕೊಂಡಿದ್ದರು. ಚಮೇಲಿ ಸಿನಿಮಾದಲ್ಲಿ ಕರೀನಾ ಕಪೂರ್ ಮಾಡಿದ ವೇಶ್ಯೆಯ ಪಾತ್ರ ಯಾರೂ ಮರೆಯಲಾರರು.

ಹಿರಿಯ ನಟಿ ಮಾಧುರಿ ದೀಕ್ಷಿತ್ ದೇವದಾಸ್‌ ಸಿನಿಮಾದಲ್ಲಿ ಮಾಡಿದ ಚಂದ್ರಮುಖಿ ಪಾತ್ರ ಬಹಳ ಕಾಡುತ್ತದೆ. ಆಸ್ತಾ ಸಿನಿಮಾದಲ್ಲಿ ಜೆಮಿನಿ ಗಣೇಶನ್ ಮಗಳು ಕುಟುಂಬ ಸಲಹಲು ವೇಶ್ಯಾ ವೃತ್ತಿ ಆರಿಸಿಕೊಂಡ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ.

ಸಡಕ್ 2 ಟ್ರೈಲರ್‌ಗೆ ಲೈಕ್ಸ್‌ಗಿಂತ ಡಿಸ್‌ಲೈಕ್‌ ಜಾಸ್ತಿ, ಆಲಿಯಾ ಅಭಿನಯದ ರಾಜಮೌಳಿಯ RRR ಗತಿ ಏನು..?

ಇದೀಗ ಇವರ ಸಾಲಿಗೆ ತೆಲುಗಿನ ಈಶಾ ರೆಬ್ಬಾ ಅವರು ಸೇರಿಕೊಂಡಿದ್ದಾರೆ. ನಗರದಲ್ಲಿರುವ ವೇಶ್ಯೆಯ ಜೀವನ ಕಥೆ ಉಳಗೊಂಡ ವೆನ್ ಸಿರೀಸ್‌ನಲ್ಲಿ ಇಶಾ ಕಾಣಿಸಿಕೊಳ್ಳಲಿದ್ದಾರೆ. 

click me!