ಪೋರ್ನ್ ಚಿತ್ರಗಳಲ್ಲಿ ನಟಿಸುತ್ತಿದ್ದ ನಟಿ ಸೋಫಿಯಾ ಲಿಯೋನ್ ಮೃತಪಟ್ಟಿದ್ದಾರೆ. ಮದ್ಯಪಾನವೇ ಸಾವಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಈಕೆಯ ಸಾವು ಅನುಮಾನಾಸ್ಪದವಾಗಿದೆಯೇ ಅಥವಾ ಸಹಜವಾಗಿದೆಯೇ ಎಂಬುದು ಇನ್ನೂ ನಿಗೂಢವಾಗಿದೆ.
ಪೋರ್ನ್ ಸ್ಟಾರ್ ಆಗಿದ್ದ ಸೋಫಿಯಾ ಲಾರೆನ್ ನಿಗೂಢವಾಗಿ ಮೃತಪಟ್ಟ ಕೇಸ್‌ನಲ್ಲಿ ಆಕೆಯ ಸಾವಿನ ಕಾರಣ ಇದೀಗ ರಿವೀಲ್ ಆಗಿದೆ. ಪೋರ್ನ್ ಚಲನಚಿತ್ರ ಮತ್ತು ನೀಲಿ ಚಿತ್ರ ತಾರೆ ಸೋಫಿಯಾ ಲಿಯೋನ್ ತನ್ನ 26ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಳು. ಮಾರ್ಚ್ 1ರಂದು ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಇದೀಗ ಆಕೆಯ ಸಾವಿನ ತನಿಖೆ ನಡೆಸಿರುವ ಪೊಲೀಸರು, ಆಕೆ ಮಿತಿ ಮೀರಿ ಮದ್ಯ ಸೇವಿಸಿದ್ದೇ ಸಾವಿಗೆ ಕಾರಣ ಎಂದಿದ್ದಾರೆ. ಮಿತಿ ಮೀರಿದ ಮದ್ಯ ಸೇವನೆ ಉದ್ದೇಶಪೂರ್ವಕವೇ ಅಥವಾ ಅಥವಾ ಅನುದ್ದೇಶಿತವೇ ಎಂಬುದು ಮಾತ್ರ ಇನ್ನೂ ನಿಗೂಢವಾಗಿಯೇ ಇದೆ.
ಪೋರ್ನ್ ತಾರೆಯರು ನಿಗೂಢವಾಗಿ ಸಾಯುವುದು, ಆತ್ಮಹತ್ಯೆ ಮಾಡಿಕೊಳ್ಳುವುದು ಇದೇ ಮೊದಲಲ್ಲ. ಕಾಗ್ನಿ ಲಿನ್ ಕಾರ್ಟರ್, ಜೆಸ್ಸಿ ಜೇನ್, ಥೈನಾ ಫೀಲ್ಡ್ಸ್ ಮುಂತಾದವರು ಇತ್ತೀಚಿನ ದಿನಗಳಲ್ಲಿ ಸಾವಿಗೀಡಾಗಿದ್ದಾರೆ. ಸೋಫಿಯಾ ಈ ವರ್ಷ ನಾಲ್ಕನೇ ಅಕಾಲಿಕ ಬಲಿ.
ಸೋಫಿಯಾ ಲಿಯೋನ್ ಜನಿಸಿದ್ದು ಜೂನ್ 10, 1997ರಂದು ಅಮೇರಿಕಾದ ಮಿಯಾಮಿಯಲ್ಲಿ. ತನ್ನ 18ನೇ ವಯಸ್ಸಿನಲ್ಲಿ ಪೋರ್ನ್ ಚಿತ್ರಗಳನ್ನು ಮಾಡುವ ಮನರಂಜನಾ ಉದ್ಯಮವನ್ನು ಪ್ರವೇಶಿಸಿದಳು. 101 ಮಾಡೆಲಿಂಗ್ ಎಂಬ ಮಾಡೆಲಿಂಗ್ ಏಜೆನ್ಸಿಯೊಂದಿಗೆ ಸಂಬಂಧ ಹೊಂದಿದ್ದಳು. ನೂರಾರು ಅಡಲ್ಟ್ ಫಿಲಂಗಳಲ್ಲಿ ನಟಿಸಿದ್ದಾಳೆ. ಸೊಗಸಾದ ಅಂಗಸೌಷ್ಟವ ಇತ್ತು. ಅವಳು ಪ್ರಾಣಿ ಪ್ರಿಯೆಯಂತೆ. 3 ಸಾಕು ನಾಯಿಗಳು ಅವಳ ಬಳಿ ಇದ್ದವು. ಅಂದಾಜು ಪ್ರಕಾರ ಈಕೆ ಸಾಯುವ ಹೊತ್ತಿಗೆ 10 ಲಕ್ಷ ಡಾಲರ್ ಆಸ್ತಿ ಹೊಂದಿದ್ದಳು.
ಇದೆಲ್ಲ ಒಂದು ಕಡೆ. ನೆಟ್ಟಿಗರಲ್ಲಿ ಇರುವ ಕುತೂಹಲ ಎಂದರೆ ಭಾರತ ಮೂಲದ ಸನ್ನಿ ಲಿಯೋನ್‌ಗೂ ಸೋಫಿಯಾ ಲಿಯೋನ್‌ಗೂ ಸಂಬಂಧ ಇದೆಯಾ ಎಂಬುದು, ಕುತೂಹಲ ಯಾಕೆಂದರೆ ಇಬ್ಬರ ಹೆಸರಿನಲ್ಲೂ ಇರುವ ಲಿಯೋನ್ ಎಂಬ ಎರಡನೇ ಹೆಸರು. ಇವರಿಬ್ಬರೂ ಸಂಬಂಧಿಕರೇ ಎಂಬ ಪ್ರಶ್ನೆಗೆ ʼನೋʼ ಎಂಬ ಸ್ಪಷ್ಟ ಉತ್ತರವನ್ನು ಕೊಡಬಹುದು. ಯಾಕೆಂದರೆ ಸನ್ನಿ ಭಾರತೀಯ ಮೂಲದವಳು. ಆಕೆಯ ಮೂಲ ಹೆಸರು ಕರೇನ್‌ಜಿತ್ ಕೌರ್ ವೋಹ್ರಾ. ಸೋಫಿಯಾ ಅಂತೂ ಭಾರತೀಯಳಲ್ಲ. ಭಾರತಕ್ಕೂ ಆಕೆಗೂ ಯಾವ ಸಂಬಂಧವೂ ಇಲ್ಲ.
ಹಾಸಿಗೆಗೆ ಬಾ ಎಂದ ನಿರ್ದೇಶಕನ ಮೇಲೆ ಬೇಸತ್ತು ಸಾಯಲು ಹೊರಟಿದ್ರಂತೆ ಈ ನಟಿ!
IMDB ಪ್ರಕಾರ, ಸೋಫಿಯಾ ಇನ್ನೂ ಕೆಲವು ಹೆಸರುಗಳನ್ನೂ ಬಳಸುತ್ತಿದ್ದಳು. ಉದಾಹರಣೆಗೆ ಗಿಯಾನ್ನಾ ಶನೆಲ್ ಮತ್ತು ಬಿಯಾಂಕಾ. ಈಕೆ ಮೆಕ್ಸಿಕೋ ಮೂಲದವಳು. ಇಬ್ಬರ ನಡುವೆ ಇರಬಹುದಾದ ಏಕೈಕ ಸಂಬಂಧ ಎಂದರೆ ಒಂದೇ ವೃತ್ತಿ. ಸೋಫಿಯಾ ಈ ವೃತ್ತಿಗೆ ಇಳಿಯುವ ಮೊದಲೇ ಸನ್ನಿ ಲಿಯೋನ್ ಇಲ್ಲಿ ಸಾಕಷ್ಟು ಹಣ ಮತ್ತು ಜನಪ್ರಿಯತೆ ಗಳಿಸಿದ್ದಳು. ಬಹುಶಃ ಲಿಯೋನ್ ಎಂಬ ಹೆಸರಿಗೆ ಇರುವ ಜನಪ್ರಿಯತೆಯನ್ನು ನಗದೀಕರಿಸಿಕೊಳ್ಳಲು ಸೋಫಿಯಾ ತನ್ನ ಹೆಸರಿಗೆ ಲಿಯೋನ್ ಜೋಡಿಸಿಕೊಂಡಿರಬಹುದು ಎಂಬುದು ಒಂದು ಊಹೆ. ಈಕೆ ಪೋರ್ನ್ ಇಂಡಸ್ಟ್ರಿಯಲ್ಲಿ ನೆಲೆ ಊರುವ ಮೊದಲೇ ಸನ್ನಿ ಬಾಲಿವುಡ್‌ನತ್ತ ಬಂದುಬಿಟ್ಟಿದ್ದಳು. ಬಾಲಿವುಡ್‌ನಲ್ಲಿ ಹೆಸರು ಬಂದ ಬಳಿಕ ಅಡಲ್ಟ್ ಫಿಲಂಗಳಲ್ಲಿ ನಟಿಸುವುದನ್ನು ಬಿಟ್ಟುಬಿಟ್ಟಿದ್ದಳು. ಹೀಗಾಗಿ ಸೋಫಿಯಾ ಬಗ್ಗೆ ಸನ್ನಿ ಕೂಡ ತಲೆಕೆಡಿಸಿಕೊಳ್ಳಲು ಹೋದಂತಿಲ್ಲ.
ಸಲ್ಮಾನ್ ಖಾನ್ ಅಸಭ್ಯ, ಅವಿವೇಕ ನಟ, ಅವನನ್ನು ಸ್ವಲ್ಪವೂ ಇಷ್ಟಪಡಲ್ಲ ಎಂದಿದ್ದೇಕೆ ಆಮೀರ್?
ಸೋಫಿಯಾ ಇನ್‌ಸ್ಟಾಗ್ರಾಂನಲ್ಲೂ ಆಕ್ಟಿವ್ ಆಗಿದ್ದಳು. ಈಕೆಗೆ 300,000 Instagram ಫಾಲೋವರ್ಸ ಇದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಒಂದು ಹೃತ್ಪೂರ್ವಕ ಟಿಪ್ಪಣಿಯನ್ನು ಹಾಕಿದ್ದಳು. "ಇವತ್ತು ಹೊರಗೆ ಹೋಗುತ್ತೇನೆ ಮತ್ತು ಜೀವನವನ್ನು ಸ್ವಲ್ಪ ಹೆಚ್ಚು ಪ್ರಶಂಸಿಸುತ್ತೇನೆ" ಎಂದು ಈಕೆ ಬರೆದು ತನ್ನದೊಂದು ಫೋಟೋ ಹಾಕಿದ್ದಳು. ಅದರಲ್ಲಿ ಅವಳು ಬಿಳಿ ಸನ್‌ಗ್ಲಾಸ್ ಮತ್ತು ಬಿಳಿ ವ್ಯಾನಿಟಿ ಬ್ಯಾಗ್ ಕೈಚೀಲವನ್ನು ಧರಿಸಿದ್ದಳು.