ಸಲ್ಮಾನ್‌ ಖಾನ್‌ ಅಸಭ್ಯ, ಅವಿವೇಕ ನಟ, ಅವನನ್ನು ಸ್ವಲ್ಪವೂ ಇಷ್ಟಪಡಲ್ಲ ಎಂದಿದ್ದೇಕೆ ಆಮೀರ್‌?

By Suchethana D  |  First Published Aug 22, 2024, 2:26 PM IST

ಸಲ್ಮಾನ್‌ ಖಾನ್‌ ಮತ್ತು ಆಮೀರ್‌ ಖಾನ್‌ ಜೋಡಿ ಬ್ಲಾಕ್‌ಬಸ್ಟರ್‌ ಚಿತ್ರಗಳನ್ನು ಕೊಟ್ಟಿದ್ದರೂ, ಸಲ್ಮಾನ್‌ ಖಾನ್‌ ಅಸಭ್ಯ, ಅಪ್ರಜ್ಞಾಪೂರ್ವಕ ನಟ, ಅವನನ್ನು ಸ್ವಲ್ಪವೂ ಇಷ್ಟಪಡಲ್ಲ ಎಂದಿದ್ದೇಕೆ ಆಮೀರ್‌?
 


ಹಲವು ದಶಕಗಳಿಂದ ಬಾಲಿವುಡ್‌ ಆಳುತ್ತಿರುವವರ ಪೈಕಿ  ಖಾನ್‌ ತ್ರಯರು ಪ್ರಮುಖರು. ಶಾರುಖ್‌, ಸಲ್ಮಾನ್‌ ಮತ್ತು ಆಮೀರ್‌ ಖಾನ್‌ 80-90ರ ದಶಕಗಳಿಂದಲೂ ಚಿತ್ರರಂಗ ಆಳುತ್ತಿದ್ದಾರೆ. ಇವರ ಪೈಕಿ ಸದ್ಯ ಶಾರುಖ್‌ ಒಂದರ ಮೇಲೊಂದು ಬ್ಲಾಕ್‌ಬಸ್ಟರ್‌ ಕೊಡುತ್ತಿದ್ದರೆ, ಉಳಿದ ಇಬ್ಬರು ಖಾನ್‌ಗಳ ಚಿತ್ರಗಳು ಫ್ಲಾಪ್‌ ಆಗುತ್ತಿವೆ.  ಈ ಮೂವರು ಖಾನ್‌ಗಳ ನಡುವೆ ಎಲ್ಲವೂ ಸರಿಯಲ್ಲ ಎಂದು ಹಲವು ಬಾರಿ ಬಿ-ಟೌನ್‌ನಲ್ಲಿ ಚರ್ಚೆ ನಡೆಯುತ್ತಲೇ ಇರುತ್ತದೆ. ಆದರೆ ಜನರ ಮುಂದೆ ಮೂವರೂ ಸ್ನೇಹಿತರಂತೆ ಇರುವುದು ನಡೆದೇ ಇದೆ.

ಇದರ ನಡುವೆಯೇ ಸಲ್ಮಾನ್‌ ಖಾನ್‌ ಅಸಭ್ಯ, ಅಪ್ರಜ್ಞಾಪೂರ್ವಕ ನಟ, ಅವನನ್ನು ಸ್ವಲ್ಪವೂ ಇಷ್ಟಪಡಲ್ಲ ಎಂದು ನಟ ಆಮೀರ್‍ ಖಾನ್‌ ಹಲವು ವರ್ಷಗಳ ಹಿಂದೆ ಹೇಳಿರೋ ವಿಡಿಯೋ ಇದೀಗ ಪುನಃ ವೈರಲ್‌ ಆಗುತ್ತಿದೆ. 2013ರಲ್ಲಿ ಕಾಫಿ ವಿತ್‌ ಕರಣ್‌ ಷೋನಲ್ಲಿ ಆಮೀರ್‌ ಖಾನ್‌ ಈ ವಿಷಯವನ್ನು ತಿಳಿಸಿದ್ದರು. ಅಂದ ಹಾಗೆ, 1994 ರಲ್ಲಿ ಬಿಡುಗಡೆಯಾದ ಅಂದಾಜ್ ಅಪ್ನಾ ಅಪ್ನಾ ಚಿತ್ರದಲ್ಲಿ ಆಮೀರ್‌ ಮತ್ತು ಸಲ್ಮಾನ್‌ ಜೋಡಿ ಮೋಡಿ ಮಾಡಿತ್ತು.  ರವೀನಾ ಟಂಡನ್ ಮತ್ತು ಕರಿಷ್ಮಾ ಕಪೂರ್ ನಟಿಸಿದ ರೋಮ್-ಕಾಮ್ ಕೂಡ ಬ್ಲಾಕ್‌ಬಸ್ಟರ್‌ ಎಂದು ಸಾಬೀತಾಗಿತ್ತು. ಆದರೆ ಈ ಚಿತ್ರಗಳ ಬಳಿಕ ಸಲ್ಮಾನ್‌ ಖಾನ್‌ ಕಂಡ್ರೆ ಆಮೀರ್‌ಗೆ ಆಗಿಬರಲಿಲ್ಲವಂತೆ. ಇದನ್ನು ಅವರು ಓಪನ್‌ ಆಗಿಯೇ ಹೇಳಿದ್ದಾರೆ. 

Tap to resize

Latest Videos

ಸೆಪ್ಟೆಂಬರ್​ 6 ಮನೋರಂಜನಾ ಕ್ಷೇತ್ರಗಳು ಬಂದ್​, ತಪ್ಪಿದ್ರೆ ಜೈಲು: ಕಂಗನಾ ಇದೇನು ಘೋಷಣೆ?

ಸಲ್ಮಾನ್ ಮತ್ತು ಆಮೀರ್ ಪ್ರೇಮ್ ಮತ್ತು ಅಮರ್ ಪಾತ್ರ ಇಂದಿಗೂ ಮರೆಯಲು ಸಾಧ್ಯವಿಲ್ಲ.  ಬಾಲಿವುಡ್‌ನ ಭಾಯಿಜಾನ್‌ ಎಂದೇ ಫೇಮಸ್‌ ಆಗಿರೋ ಸಲ್ಲು ಕಂಡ್ರೆ ಆಮೀರ್‌ಗೆ ಆಗ್ತಿರಲಿಲ್ಲ ಎನ್ನುವುದು ರಿವೀಲ್‌ ಆಗಿದೆ.    ಕಾಫಿ ವಿತ್ ಕರಣ್‌ ಷೋನಲ್ಲಿ ಆಮೀರ್‌ ಖಾನ್‌,   “ಅಂದಾಜ್ ಅಪ್ನಾ ಅಪ್ನಾದಲ್ಲಿ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುವಾಗ ನನಗೆ ತುಂಬಾ ಕೆಟ್ಟ ಅನುಭವವಾಯಿತು. ಅಲ್ಲಿಂದ ಅವನು  ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ನಾನು ಅವನನ್ನು ಅಸಭ್ಯ ಮತ್ತು ಅಪ್ರಜ್ಞಾಪೂರ್ವಕ ನಟ ಎಂದು ಕಂಡುಕೊಂಡೆ. ಅವನೊಂದಿಗೆ ಕೆಲಸ ಮಾಡಿದ ಅನುಭವದ ನಂತರ ನಾನು ಸಲ್ಮಾನ್‌ನಿಂದ ದೂರ ಉಳಿಯಲು ಬಯಸಿದೆ ಎಂದಿದ್ದಾರೆ.  

ಆದರೆ ಪತ್ನಿ ರೀನಾ ದತ್‌ ಅವರಿಂದ ಬೇರ್ಪಡೆಯಾದ ಸಂದರ್ಭದಲ್ಲಿ ಸಲ್ಮಾನ್‌ ಖಾನ್‌ ಜೊತೆ ದೋಸ್ತಿಯಾಯಿತು ಎಂದೂ ಹೇಳಿದ್ದಾರೆ. ಆ ಸಮಯದಲ್ಲಿ ನನ್ನ ಪರಿಸ್ಥಿತಿ ತುಂಬಾ ಕಷ್ಟವಾಗಿತ್ತು. ಆಗ ನನ್ನ ನೆರವಿಗೆ ಬಂದದ್ದು ಸಲ್ಮಾನ್‌ ಖಾನ್‌. ಇದನ್ನು ಕೂಡ ನಾನು ಮರೆಯುವುದಿಲ್ಲ.  “ನಾನು ಅತ್ಯಂತ ಕೆಳಮಟ್ಟದಲ್ಲಿದ್ದಾಗ ಸಲ್ಮಾನ್ ನನ್ನ ಜೀವನದಲ್ಲಿ ಕಾಲಿಟ್ಟ. ಅಂದಿನಿಂದ ಸ್ನೇಹಿತರಾಗಿದ್ದೇವೆ,  ಒಟ್ಟಿಗೆ ಕುಡಿಯುತ್ತೇವೆ ಎಂದು ಹೇಳಿದ್ದಾರೆ. 

ಎಲ್ಲ ಹೆಂಗಸರಂತೆ ಗರ್ಭಿಣಿ ಆಗಿಲ್ವಾ ದೀಪಿಕಾ ಪಡುಕೋಣೆ? ಸೋಷಿಯಲ್​ ಮೀಡಿಯಾದಲ್ಲಿ ಇದೆಂಥ ಚರ್ಚೆ?

click me!