ಶಾರುಕ್ ಖಾನ್, ದೀಪಿಕಾ ಪಡುಕೋಣೆ, ಪ್ರಿಯಾಂಕ ಚೋಪ್ರಾ- ಈ ಮುಂತಾದ ಬಾಲಿವುಡ್ ಸೆಲೆಬ್ರಿಟಿಗಳ ನ್ಯೂ ಯಿಯರ್ ರೆಸೊಲ್ಯೂಷನ್ ಏನಿರಬಹುದು ನಿಮಗೆ ಗೊತ್ತೇ?
ಹೊಸ ವರ್ಷ ರೆಸೊಲ್ಯೂಶನ್ ಮಾಡುವುದು ಕಾಮನ್. ನಾವೆಲ್ಲರೂ ಒಂದಲ್ಲ ಒಂದು ನಿರ್ಣಯ ಮಾಡಿರುತ್ತೇವೆ- ಕಡಿಮೆ ಕುಡಿತೀವಿ, ಕಡಿಮೆ ಸಿಗರೇಟ್ ಸೇದ್ತೀವಿ, ಈ ವರ್ಷ ಹಿಮಾಲಯ ಹೋಗಬೇಕು, ಈ ವರ್ಷ ಒಂದ್ಸಲನಾದ್ರೂ ಬಂಗೀ ಜಂಪಿಂಗ್ ಮಾಡಬೇಕು, ಈ ವರ್ಷ ಮೋದಿಯವರ ಒಂದು ಅಟೋಗ್ರಾಫ್ ತಗೋಬೇಕು- ಹೀಗೆಲ್ಲ. ಆದರೆ ಬಾಲಿವುಡ್ ತಾರೆಯರ ರೆಸೊಲ್ಯೂಷನ್ ಏನಿರ್ಬಬಹುದು?
ದೀಪಿಕಾ ಪಡುಕೋಣೆ
ಕನ್ನಡತಿ ಹುಡುಗಿ ದೀಪಿಕಾ ಪಡುಕೋಣೆ, ಹೊಸ ವರ್ಷದ ಮೊದಲ ದಿನ ತನ್ನ ಟ್ವಿಟ್ಟರ್ ಹಾಗೂ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿದ್ದ ಎಲ್ಲ ಪೋಸ್ಟ್‌ಗಳನ್ನೂ, ಫೋಟೋಗಳನ್ನು ಡಿಲೀಟ್ ಮಾಡಿ ಎಲ್ಲರನ್ನೂ ಶಾಕ್‌ನಲ್ಲಿ ಕೆಡವಿದ್ದಾಳೆ. ಸೆಲೆಬ್ರಿಟಿಗಳ ಅಕೌಂಟ್ ಹ್ಯಾಕಿಂಗ್ ಹೆಚ್ಚುತ್ತಿರುವುದರಿಂದ ಈ ಕೆಲಸ ಮಾಡಿರಬಹುದು ಅಂತ ಕೆಲವರನ್ನುತ್ತಾರೆ. ಆದರೆ ಈಕೆ ಹೊಸ ವರ್ಷಕ್ಕೆ ಎಲ್ಲವನ್ನೂ ಹೊಸತಾಗಿ, ಫ್ರೆಶ್ ಆಗಿ ಆರಂಭಿಸುವ ಸಂಕಲ್ಪ ಮಾಡಿರಬಹುದು ಅಂತಲೂ ಕೆಲವರು ಹೇಳಿದ್ದಾರೆ. ಆದರೆ ಅದ್ಯಾಕೆ ಅಂತ ದೀಪಿಕಾ ರಿವೀಲ್ ಮಾಡಿಲ್ಲ. ಸದ್ಯ ಈಕೆ ಗಂಡ ರಣವೀರ್ ಜೊತೆಗೆ ರಾಜಸ್ಥಾನದಲ್ಲಿ ರಜಾ ಮೂಡ್‌ನಲ್ಲಿದ್ದಾಳೆ.
ತೆಲುಗು ಚಿತ್ರವೊಂದಕ್ಕೆ ಸಹಿ ಮಾಡಿದ ಪುನೀತ್ ರಾಜ್‌ಕುಮಾರ್? ...
ರಣಬೀರ್ ಕಪೂರ್
ರಣಬೀರ್ ಕಪೂರ್ ಈಗಾಗಲೇ ಹಲವು ವರ್ಷಗಳಿಂದ ಆಲಿಯಾ ಭಟ್ ಜೊತೆ ಲಿವಿಂಗ್ ಇನ್ ಸಂಬಂಧದಲ್ಲಿ ಇದ್ದಾನೆ. ಯಾವಾಗ ಮದುವೆ ಅಂತ ಕೇಳೀ ಕೇಳೀ ಮೀಡಿಯಾಗಳು ಸುಸ್ತಾಗಿಬಿಟ್ಟಿವೆ. 2020ರಲ್ಲಿ ಇವರ ಮದುವೆ ನಡೆಯಲಿದೆ ಎಂಬ ಊಹಾಪೋಹ ಇತ್ತು. ಆದರೆ ಆಗಲಿಲ್ಲ. ರಣಬೀರ್ ಒಂದು ಸಂದರ್ಶನದಲ್ಲಿ ಹೇಳಿದ್ದರು- ಕೊರೊನಾ ಪ್ಯಾಂಡೆಮಿಕ್ ಇಲ್ಲದೆ ಹೋಗಿದ್ದರೆ ನಾನು ಊಹಿಸಿದ್ದು 2020ರಲ್ಲಿ ಆಗೇಬಿಡುತ್ತಿತ್ತು. ಆದರೆ ಕೊರೊನಾದಿಂದಾಗಿ ಆಗಲಿಲ್ಲ. ನನ್ನ ಜೀವನದ ಆ ಅತ್ಯಮೂಲ್ಯ ಘಟನೆ 2021ರಲ್ಲಿ ನಡೆಯಲಿದೆ ಎಂದು ಹೇಳಬಹುದು- ಮಾತು ರಣಬೀರ್- ಆಲಿಯಾ ಅವರ ಮದುವೆಗೆ ಸಂಬಂಧಪಟ್ಟದ್ದೇ ಇರಬೇಕು ಎಂಬುದು ಎಲ್ಲರ ಊಹೆ.
ಶುಗರ್ ತ್ಯಜಿಸಿದ ರಮ್ಯಾ ಈಗ ಮಾಂಸಾನೂ ತ್ಯಜಿಸಿದ್ರಾ? ...
ಶಾರುಕ್ ಖಾನ್
ಶಾರುಕ್ ಖಾನ್ ಲಾಸ್ಟ್ ಟೈಮ್ ಕಾಣಿಸಿಕೊಂಡಿದ್ದ ಝೀರೋ ಫಿಲಂನಲ್ಲಿ. ಅದು ಬಂದು ಎರಡು ವರ್ಷಗಳಾದವು. ಆನಂದ್ ರೈ ಅವರ ಆ ಫಿಲಂ ಸಕ್ಸಸ್ ಆಗಲಿಲ್ಲ. ಆ ಫಿಲಂನಲ್ಲಿ ಶಾರುಕ್ ಕೊತೆಗೆ ಕತ್ರಿನಾ ಕೈಫ್ ಮತ್ತು ಅನುಷ್ಕಾ ಶರ್ಮಾ ಇದ್ದರೂ ಫಿಲಂ ಓಡಲಿಲ್ಲ. ಅದಾದ ಬಳಿಕ ಎರಡು ವರ್ಷ ಶಾರುಕ್ ನಟನೆಯಿಂದ ಬ್ರೇಕ್ ತಗೊಂಡರು. ಜೊತೆಗೆ ಕೊರೊನಾದ ಒಂದು ವರ್ಷ ಸೇರಿಕೊಂಡಿತು. ಶಾರುಕ್ ಫ್ಯಾನ್‌ಗಳು ಅಸಹನೆಯಿಂದ ತಮ್ಮ ಬಾದ್‌ಶಾನ ಮರಳಿ ಆಗಮನಕ್ಕೆ ಕಾಯುತ್ತಿದ್ದಾರೆ. ಸಿದ್ಧಾರ್ಥ ಆನಂದ್ ಅವರ ಪಠಾಣ್ ಫಿಲಂನ ಶೂಟಿಂಗ್ ನಡೆಯುತ್ತಿದ್ದು, ಶಾರುಕ್ ಅದರ ಲೀಡ್ ರೋಲ್‌ನಲ್ಲಿದ್ದಾರೆ. ಈ ವರ್ಷ ಅದು ತೆರೆಯನ್ನು ಹಿಟ್ ಮಾಡುವ ನಿರೀಕ್ಷೆ.
'ತಂಗೀ ತಲೆ ಕೆಟ್ಟಿದ್ಯಾ..'? : ಕಂಗನಾಗೆ ನಟಿ ಊರ್ಮಿಳಾ ಟಾಂಗ್ ...
ಕಂಗನಾ ರನೌತ್
ಕಂಗನಾ ರನೌತ್ ಕಳೆದೆರಡು ವರ್ಷಗಳಲ್ಲಿ ಕೆಲಸ ಮಾಡಿದ್ದಕ್ಕಿಂತ ಮಾತನಾಡಿದ್ದೇ ಹೆಚ್ಚು. ಟ್ವಿಟ್ಟರ್‌ನಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದ ಆಕೆ ಬಾಲಿವುಡ್‌ನಲ್ಲಿ ಹಲವರ ಬದುಕನ್ನು ಕಳೆದ ವರ್ಷ ಧೂಳೀಪಟ ಮಾಡಲು ಶ್ರಮಿಸಿದಳು. ಬಹುಶಃ ಆಕೆಗೆ ಸರಿಯಾದ ಒಂದೆರಡು ಫಿಲಂಗಳು ನಟನೆಗೆ ಸಿಕ್ಕಿದರೆ ಆಕೆ ಶಾಂತವಾಗಬಹುದು ಎಂಬ ಅಂದಾಜು. ಹಾಗಾಗಿ ಈ ವರ್ಷವಾದರೂ ಆಕೆ ಒಂದೆರಡು ಫಿಲಂಗಳಲ್ಲಿ ನಟಿಸಿ ತಮ್ಮನ್ನು ಬ್ಯುಸಿಯಾಗಿ ಇಟ್ಟುಕೊಳ್ಳಲಿ ಎಂಬುದು ಅವರ ಫ್ಯಾನ್‌ಗಳ ಅಂಬೋಣ.
ಅನುಷ್ಕಾ ಶರ್ಮಾ
ಈಕೆ ಈಗ ಪ್ರೆಗ್ನೆಂಟ್. ಸದ್ಯದಲ್ಲೇ ಅವರ ಮಗು ಧರೆಗೆ ಅವತರಿಸುವ ನಿರೀಕ್ಷೆ ಇದೆ. ಅದಾದ ಬಳಿಕ ಕನಿಷ್ಠ ಆರು ತಿಂಗಳ ಬ್ರೇಕ್ ಆದರೂ ಅನುಷ್ಕಾಗೆ ಬೇಕು. ಅದಾದ ನಂತರ ಆಕೆ ಸಿನಿಮಾದಲ್ಲಿ ನಟಿಸಲಿದ್ದಾಳೆ ಎಂಬ ನಿರೀಕ್ಷೆ ಎಲ್ಲರದು. ಆಕೆ 2018ರಲ್ಲಿ ಶಾರುಕ್ ನಟನೆಯ ಜೀರೋದಲ್ಲಿ ನಟಿಸಿದ್ದೇ ಕೊನೆ. ನಂತರ ಯಾವ ಫಿಲಂಗಳನ್ನೂ ಆಕೆ ಒಪ್ಪಿಕೊಂಡಿಲ್ಲ.
ಬಾಲಿವುಡ್ ನಟ ದೇವಗನ್, ದರ್ಶನ್ 'ಮದಕರಿನಾಯಕ'ನಿಗಿದೆ ಆ ಒಂದು ನಂಟು! ...
ಪ್ರಿಯಾಂಕ ಚೋಪ್ರಾ
ಪ್ರಿಯಾಂಕ ಚೋಪ್ರಾ ಸದ್ಯ ಹಾಲಿವುಡ್‌ನಿಂದ ಹೊರಬರುತ್ತಿರುವ ಒಟಿಟಿ, ಟಿವಿ ಸೀರಿಯಲ್‌ಗಳಲ್ಲಿ ಬ್ಯುಸಿ. ಹಾಗೂ ತನ್ನ ಗಂಡ ನಿಕ್ ಜೊನಾಸ್ ಜೊತೆ ಎಕ್ಸ್‌ಟೆಂಡೆಡ್ ಮಧುಚಂದ್ರದಲ್ಲಿ ಬ್ಯುಸಿ. ಅಲ್ಲೇ ಕೆಲವಾರು ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿದ್ದಾಳೆ. ಆದರೂ ಈಕೆ ಬಾಲಿವುಡ್‌ನಲ್ಲೂ ನಟಿಸಬೇಕೆಂಬುದೂ ಈಕೆಯ ಅಭಿಮಾನಿಗಳ ಪ್ರೀತಿಯ ಒತ್ತಾಯ. ಈಕೆ ಹಿಂದಿಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಫಿಲಂ ಎಂದರೆ ಸ್ಕೈ ಈಸ್ ಪಿಂಕ್. ಅದು ಎಲ್ಲೂ ಓಡಲಿಲ್ಲ.