ಮನೆ ಮುಂದೆ ಅಭಿಮಾನಿಗೆ ರಚಿತಾ ಮಾಡಿದ್ದೇನು, ನೋಡಿ!

Suvarna News   | Asianet News
Published : Jul 22, 2020, 06:34 PM IST
ಮನೆ ಮುಂದೆ ಅಭಿಮಾನಿಗೆ ರಚಿತಾ ಮಾಡಿದ್ದೇನು, ನೋಡಿ!

ಸಾರಾಂಶ

ರಚಿತಾ ರಾಮ್ ಅನ್ನೋ ಡಿಂಪಲ್ ಕೆನ್ನೆ ಹುಡುಗಿ ಅಂದ್ರೆ ಇಡೀ ಕರುನಾಡೇ ಫಿದಾ ಆಗಿತ್ತೆ. ಆದರೆ ಈ ಸುಂದ್ರಿ ವಾರದ ಹಿಂದೆ ಮಾಡಿರೋ ಕೆಲಸ ನೋಡಿದ್ರೆ ನಿಮಗೆ ರಚಿತಾ ರಾಮ್‌ ಅವರ ಇನ್ನೊಂದು ಮುಖ ಕಾಣುತ್ತೆ. ಅರೆ, ಈ ಹುಡುಗಿ ಹೀಗೆ ಅಂತ ಗೊತ್ತೇ ಇರಲಿಲ್ಲ ಅನ್ನೋ ಡೈಲಾಗ್ ನಿಮ್ ಬಾಯಿಯಿಂದ ಬರದಿದ್ರೆ ನೋಡಿ.  

ರಚಿತಾ ರಾಮ್ ಗಾಡ್ ಫಾದರ್ ಮೂಲಕ ಚಿತ್ರರಂಗಕ್ಕೆ ಬಂದವರಲ್ಲ. ಬಾಯಲ್ಲಿ ಬೆಳ್ಳಿ ಚಮಚ ಇಟ್ಕೊಂಡು ಹುಟ್ಟಿದವರೂ ಅಲ್ಲ. ಆದರೆ ಅದೃಷ್ಟ ಅನ್ನೋದು ಈ ಡಿಂಪಲ್ ಕ್ವೀನ್ ಹಣೆಯಲ್ಲಿತ್ತು ಅನಿಸುತ್ತೆ. ಮುಟ್ಟಿದ್ದೆಲ್ಲ ಚಿನ್ನವಾಗುತ್ತಾ ಬಂತು. ರಚಿತಾ ರಾಮ್ ಸೀರಿಯಲ್ ಮೂಲಕ ಮನರಂಜನಾ ಜಗತ್ತಿಗೆ ಎಂಟ್ರಿ ಕೊಟ್ರು. ಸೀರಿಯಲ್‌ನಲ್ಲಿ ಅವರು ಮಾಡಿರೋ ಪಾತ್ರ ಮಾತ್ರ ಇಂದಿಗೂ ಜನರ ಮನಸ್ಸಿನಲ್ಲಿದೆ. ಈ ಶಾಣ್ಯಾ ಹುಡುಗಿಯ ನಟನೆ ಯಾವ ಪರಿ ಜನರನ್ನು ಆಕರ್ಷಿಸಿತು ಅಂದ್ರೆ ದರ್ಶನ್ ಮೂವಿಗೆ ಈಕೆ ಹೀರೋಯಿನ್ ಆಗಿ ಆಯ್ಕೆಯಾದರು. ಅಲ್ಲಿಂದೀಚೆಗೆ ತಿರುಗಿ ನೋಡಿದ್ದೇ ಅಲ್ಲ. ಕನ್ನಡ ಮಾತ್ರವಲ್ಲ ಅನ್ಯ ಭಾಷೆಯ ಪ್ರೇಕ್ಷಕರೂ ಈಕೆಯ ಸಿನಿಮಾ ನೋಡಿ ಗುಳಿ ಕೆನ್ನೆಗೆ ಫಿದಾ ಆದ್ರು. 

ರಚಿತಾ ರಾಮ್ ಸಿನಿಮಾ ಜಗತ್ತಲ್ಲಿ ಎಷ್ಟೇ ಮೇಲಕ್ಕೆ ಹೋದರೂ ಆಕೆ ಅಹಂಕಾರ ಪಟ್ಟುಕೊಂಡವರಲ್ಲ. ಯಾರನ್ನೂ ಕೇವಲವಾಗಿ ನೋಡಿದವರಲ್ಲ. ಪಕ್ಕದ್ಮನೆ ಹುಡುಗಿಯ ಹಾಗೆ ಎಲ್ಲರ ಜೊತೆಗೆ ಸ್ನೇಹದಿಂದ ಬೆರೆತವರು. ರಚಿತಾಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. 



ಇತ್ತೀಚೆಗೆ ಈಕೆ ತನ್ನ ಮನೆಯೆದುರು ನಡೆದ ಒಂದು ಘಟನೆಯನ್ನು ಸೋಷಲ್ ಮೀಡಿಯಾ ಮೂಲಕ ಜನರ ಮುಂದೆ ಹಂಚಿಕೊಂಡಿದ್ದಾರೆ. ಈ ಉದ್ದದ ಪೋಸ್ಟ್ ನೋಡಿದವರು ರಚಿತಾ ರಾಮ್ ಸಿಂಪ್ಲಿಸಿಟಿಗೆ ಮಾರುಹೋಗಿದ್ದಾರೆ. ಅಷ್ಟಕ್ಕೂ ಆ ಸ್ಟೇಟಸ್‌ನಲ್ಲೇನಿದೆ ಅಂತ ನೀವೇ ಓದಿ. 
*
‘ಅಭಿಮಾನಿಗಳೇ ದೇವ್ರು’ ಎಂದ ಅಣ್ಣಾವ್ರ ಮಾತು ಅಕ್ಷರಶಃ ಸತ್ಯ. ಪ್ರತಿದಿನ ಎಷ್ಟೋ ಅಭಿಮಾನಿಗಳು ಸೋಷಿಯಲ್ ಮೀಡಿಯಾದ ಮುಖಾಂತರ ಅಭಿಮಾನವನ್ನ ವ್ಯಕ್ತಪಡಿಸ್ತಾರೆ. ತುಂಬಾ ಸಂತೋಷ ಆಗುತ್ತೆ. ಆದ್ರೆ ಇವತ್ ಬೆಳಿಗ್ಗೆ ಅಮ್ಮ ಬಂದು ’ರಚ್ಚು ಬೆಳಿಗ್ಬೆಳಗ್ಗೆನೇ ಯಾರೋ ಮನೆ ಮುಂದೆ ಕಾಯ್ತಿದಾರೆ ನೋಡು’ ಅಂದ್ರು. ನಾನು ಹೊರಗಡೆ ಬಂದು ನೋಡ್ದೆ.

100 ಚಿತ್ರದಲ್ಲಿ ರಮೇಶ್‌ ಅರವಿಂದ್‌ಗೆ ತಂಗಿಯಾದ ರಚಿತಾ ರಾಮ್‌!

ಒಂದು ಆಟೋ ಪಕ್ಕ ಮೂರು ಜನ ನಮ್ಮ ಮನೆಯ ಕಡೆ ಮುಖ ಮಾಡಿ ನಿಂತಿದ್ರು. ನನ್ನ ನೋಡ್ತಿದ್ದ ಹಾಗೆ ತುಂಬಾ ಎಕ್ಸೈಟ್ ಆದ್ರು. ಅವರ ಬಳಿ ಹೋಗ್ತಿದ್ದ ಹಾಗೆ ನನ್ನ ಒಂದು ಮಾತು ಆಡಕ್ಕೂ ಬಿಡದೇ ’ಮೇಡಂ ನಾವ್ ನಿಮ್ ದೊಡ್ ಅಭಿಮಾನಿಗಳು ಮೇಡಂ. ನನ್ ಆಟೋ ಮೇಲ್ 1st ಫೋಟೋ ನಿಮ್ದೇ ಇರ್ಬೇಕು ಮೇಡಂ ಎಂದು ಗಿಫ್ಟ್ ವ್ರಾಪರ್ ಒಪೆನ್ ಮಾಡ್ಸಿ ನನ್ನ ಫೋಟೋನ ಆಟೋ ಮೇಲೆ ಅಂಟಿಸಿ ನನ್ನ ಆಟೋಗ್ರಾಫ್ ತೆಗೆದುಕೊಂಡರು. ಅವರ ಆಟೋ ಜೊತೆ ನನ್ನ ಫೋಟೋ ಕ್ಲಿಕ್ಕಿಸಿ ತಾವೂ ಸೆಲ್ಫಿ ತೆಗೆದುಕೊಂಡು ಹೊರಡಲು ಮುಂದಾದರು; ನಿಜಕ್ಕೂ ಭಾವುಕಳಾದೆ. ಹೆಸರು ಕೇಳಬೇಕು ಎನ್ನುವಷ್ಟರಲ್ಲಿ ತುಂಬಾ ಉತ್ಸಾಹಿಕರಾಗಿ ನಗುತ್ತಲೇ ಹೊರಟೇ ಬಿಟ್ಟರು. ತಮ್ಮ ಹೆಸರು, ಊರು ಯಾವುದೂ ಹೇಳದೆ ಕೇವಲ ತಮ್ಮ ಕಾರ್ಯ ವೈಖರಿ; ನನ್ನ ಮೇಲಿನ ಅಭಿಮಾನವನ್ನ ವ್ಯಕ್ತಪಡಿಸಿದ ಅಭಿಮಾನಿಗಳಿಗೆ ಸದಾ ಚಿರಋಣಿ. ನಿಮ್ಮ ಪ್ರೀತಿಯ ಆಟೋ ನಿಮ್ಮ ಜೀವನದ ಪಯಣವನ್ನ ಸುಖಕರವಾಗಿರಿಸಲಿ ಅಂತ ದೇವರಲ್ಲಿ ಬೇಡ್ಕೋತೀನಿ. ನನ್ನ ಕಲಾಬದುಕಿಗೆ ಜೀವ ಕೊಟ್ಟವರು ಅಭಿಮಾನಿಗಳು. ಅಭಿಮಾನಿಗಳ ಹೃದಯ ಶ್ರೀಮಂತಿಕೆಯ ಮುಂದೆ ಬೇರೆಲ್ಲ ಶೂನ್ಯ. ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ. ಭಾವುಕಳಾದ ಕ್ಷಣದಲ್ಲಿ ಅವರ ಹೆಸರು ವಿವರ ತೆಗೆದುಕೊಳ್ಳಲಾಗಲಿಲ್ಲ, ದಯವಿಟ್ಟು ಈ ಪೋಸ್ಟ್ ನೋಡಿದ ಕೂಡಲೇ ನೀವು ಈ ಫೋಟೋವನ್ನ ನಿಮ್ಮ instagram account ನಲ್ಲಿ ಹಾಕಿ ನನ್ನನ್ನ tag ಮಾಡಿ. ನಾನು repost ಮಾಡುತ್ತೇನೆ ಜೊತೆಗೆ ನಿಮ್ಮ ಹೆಸರು ತಿಳಿದುಕೊಳ್ಳಬೇಕೆಂಬ ಆಸಕ್ತಿ ನನಗಿದೆ.

ಗುರುತೇ ತೋರದೆ ಆಹಾರ ವಿತರಿಸಿದ್ದಾರೆ ರಚಿತಾ ರಾಮ್! 

ಸದಾ ಗ್ಲಾಮರಸ್ ಫೋಟೋಗಳನ್ನು ಹರಿಯಬಿಡಲಷ್ಟೇ ಇನ್‌ಸ್ಟಾವನ್ನು ಬಳಸೋ ತಾರೆಯರ ನಡುವೆ ರಚಿತಾ ಮಾದರಿಯಾಗಿ ನಿಲ್ಲುತ್ತಾರೆ. ಅಭಿಮಾನಿಗಳ ಕುರಿತ ಅವರ ಅಭಿಮಾನ ಕಂಡರೆ ಎಂಥವರಿಗೂ ಕಣ್ತುಂಬಿ ಬರುತ್ತೆ. ಅವರ ಆ ಅಭಿಮಾನಿ ಅವರಿಗೆ ಮತ್ತೊಮ್ಮೆ ಸಿಕ್ಕ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ಪೋಸ್ಟ್ ಮೂಲಕ ಇವರ ಹೃದಯ ವೈಶಾಲ್ಯ ಎಂಥಾದ್ದು ಅನ್ನೋದರ ಪರಿಚಯ ಕನ್ನಡಿಗರಿಗೆ ಆಗಿದೆ. 
 

ರಚಿತಾ ರಾಮ್ ಸಖತ್ ಟಿಕ್‌ಟಾಕ್; ನಿವೇದಿತಾ ಗೌಡ ಸೂಪರ್ ಸೈಕಲ್ ಸವಾರಿ..! 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸಾಯಿಬಾಬ ನಟ ಸುಧೀರ್ ಆಸ್ಪತ್ರೆ ದಾಖಲು, ಚಿಕಿತ್ಸೆಗೆ 11 ಲಕ್ಷ ರೂ ನೀಡಲು ಶಿರಡಿ ಟ್ರಸ್ಟ್‌ಗೆ ಸೂಚನೆ
ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!