ಸುಶಾಂತ್‌ಗಿತ್ತಂತೆ ಬೈಪೋಲಾರ್ ಡಿಸಾರ್ಡರ್! ಏನಿದು ಸಮಸ್ಯೆ?

By Suvarna News  |  First Published Jul 22, 2020, 5:53 PM IST

ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್‌ ನಟ ಸುಶಾಂತ್ ಸಿಂಗ್‌ ರಜಪೂತ್ ಅವರಿಗೆ ಬೈ ಪೋಲಾರ್ ಡಿಸಾರ್ಡರ್ ಇತ್ತು ಅಂತ ಅವರ ಸೈಕಾಲಜಿಸ್ಟ್ ಹೇಳಿದ್ದಾರೆ. ಹಾಗೆಂದರೇನು?


ಇನ್ನೂ ಹತ್ತಾರು ವರ್ಷ ಬಾಲಿವುಡ್‌ನ್ನು ಆಳಬೇಕಾಗಿದ್ದ, ಧೋನಿಯ ಪಾತ್ರ ಮಾಡಿದ್ದ ಸುಶಾಂತ್ ಸಿಂಗ್‌ ರಜಪೂತ್ ಅಕಾಲದಲ್ಲೇ ಆತ್ಮಹತ್ಯೆ ಮಾಡಿಕೊಂಡು ಅಗಲಿದ್ದು ನಿಮಗೆ ಗೊತ್ತೇ ಇದೆ. ಸುಶಾಂತ್ ಸತ್ತ ನಂತರ ಅವರ ಬಗ್ಗೆ ನೂರಾರು ಸುದ್ದಿಗಳು ಹರಿದಾಡಿದವು. ಆತ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಖಿನ್ನನಾಗಿದ್ದನೇ ಎಂಬ ಪ್ರಶ್ನೆಗಳನ್ನು ಅನೇಕರು ಕೇಳಿದರು. ಆತನಿಗೆ ಡಿಪ್ರೆಶನ್ ಇತ್ತು ಅಂತಲೂ ಕೆಲವರು ಹೇಳಿದರು. ಅದರಲ್ಲಿ ನಿಜ ಇತ್ತು. ಆದರೆ ಈಗ ಸುಶಾಂತ್‌ಗೆ ಟ್ರೀಟ್‌ಮೆಂಟ್‌ ನೀಡುತ್ತಿದ್ದ ಡಾಕ್ಟರ್‌ ಹೇಳಿದ್ದಾರೆ- ಸುಶಾಂತ್‌ಗೆ ಬೈ ಪೋಲಾರ್‌ ಡಿಸಾರ್ಡರ್‌ ಅಥವಾ ಉಭಯಧ್ರುವ ಕಾಯಿಲೆ ಇತ್ತು ಅಂತ.

ಹೀಗೆಂದರೆ ಒಂದು ಬಗೆಯ ಮಾನಸಿಕ ಸಮಸ್ಯೆ. ಇದನ್ನು ಹೊಂದಿರುವವರು ಒಂದು ಕ್ಷಣ ಇದ್ದಂತೆ ಇನ್ನೊಂದು ಕ್ಷಣ ಇರುವುದೇ ಇಲ್ಲ. ಕೆಲವೊಮ್ಮೆ ಅವರ ಮಾನಸಿಕ ಸ್ಥಿತಿ ಕೆರಳಿದಾಗ, ತಾವು ಏನು ಮಾಡುತ್ತಿದ್ದೇವೆ ಅನ್ನುವುದೂ ಅವರಿಗೆ ಗೊತ್ತಾಗುವುದಿಲ್ಲ. ಈ ಕ್ಷಣ ಮಾಡಿದ ಕೆಲಸ ಮುಂದಿನ ಕ್ಷಣದಲ್ಲಿ ಮರೆತುಹೋಗಲೂಬಹುದು. ಈ ಕಾಯಿಲೆ ಹೊಂದಿದವರು ವೃದ್ಧಾಪ್ಯದಲ್ಲಿ ಪಾರ್ಕಿನ್‌ಸನ್‌, ಅಲ್ಝೀಮರ್ಸ್ ಮುಂತಾದ ಮರೆಗುಳಿ ನರವ್ಯೂಹ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು.


ಸಮಸ್ಯೆ ಏನೆಂದರೆ ಸುಶಾಂತ್‌ ತನ್ನೀ ಕಾಯಿಲೆಗೆ ಸರಿಯಾದ ಔಷಧ, ಚಿಕಿತ್ಸೆ ಪಡೆಯುತ್ತಿರಲೇ ಇಲ್ಲವಂತೆ. ಒಬ್ಬ ಡಾಕ್ಟರ್‌ ಬಳಿಗೆ ತನ್ನ ಸಮಸ್ಯೆಯನ್ನು ಹೊತ್ತುಕೊಂಡು ಹೋಗುತ್ತಿದ್ದ. ನಂತರ ಅವರು ಕೊಡುವ ಟ್ರೀಟ್‌ಮೆಂಟ್‌ ಅಥವಾ ಔಷಧ ಸರಿಯೆನಿಸದೆ, ಇನ್ನೊಬ್ಬರನ್ನು ಹುಡುಕಿಕೊಂಡು ಹೋಗುತ್ತಿದ್ದ. ನಂತರ ಅವರನ್ನೂ ಬಿಟ್ಟು ಮತ್ತೊಬ್ಬರ ಹತ್ತಿರ ಹೋಗುತ್ತಿದ್ದ. ಹೀಗೆ ಹಲವಾರು ಸೈಕಾಲಜಿಸ್ಟ್‌ಗಳನ್ನು ಆತ ಕನ್‌ಸಲ್ಟ್‌ ಮಾಡಿದ್ದಾನೆ. ಆದರೆ ಯಾರ ಟ್ರೀಟ್‌ಮೆಂಟನ್ನೂ ಪೂರ್ತಿಯಾಗಿ ಮಾಡಿಲ್ಲ. ಔಷಧಗಳನ್ನೂ ಆತ ಸರಿಯಾಗಿ ತೆಗೆದುಕೊಳ್ಳುತ್ತಿರಲಿಲ್ಲವಂತೆ. ಕಳೆದ ಬಾರಿ ಒಬ್ಬ ಸೈಕಿಯಾಟ್ರಿಸ್ಟ್‌ ಹತ್ತಿರ ಹೋಗಿದ್ದ. ಆದರೆ ನಂತರ ಲಾಕ್‌ಡೌನ್‌ ವಿಧಿಸಲ್ಪಟ್ಟಿತ್ತು. ನಂತರ ಫೋನ್‌ನಲ್ಲೇ ಕೌನ್ಸೆಲಿಂಗ್‌ ಪಡೆದುಕೊಳ್ಳುತ್ತಿದ್ದ. ಆದರೆ ಆತ್ಮಹತ್ಯೆಗೆ ಒಂದು ತಿಂಗಳ ಮೊದಲು ಎಲ್ಲ ಮೆಡಿಕೇಶನ್‌ ನಿಲ್ಲಿಸಿದ್ದ ಎಂಬುದು ಅವನಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಅಭಿಪ್ರಾಯ. ಈ ಕೌನ್ಸೆಲಿಂಗ್‌ಗಳ ವೇಳೆ ಆತನ ಗೆಳತಿ ರಿಯಾ ಚಕ್ರವರ್ತಿ ಕೂಡ ಆತನ ಜೊತೆಗಿರುತ್ತಿದ್ದಳು ಎನ್ನಲಾಗಿದೆ. 

ದೂರವಾದರೂ ದಾಖಲೆ ನಿರ್ಮಿಸಿದ ಸುಶಾಂತ್ ಸಿಂಗ್

ಬೈಪೋಲಾರ್ ಡಿಸಾರ್ಡರ್ ಹೊಂದಿರುವವರ ಮೂಡ್ ಕ್ಷಣಕ್ಷಣಕ್ಕೂ ಅತ್ತ ಇತ್ತ ತೂಗುಯ್ಯಾಲೆ ಆಗುತ್ತಿರುತ್ತದೆ. ಒಂದು ಕ್ಷಣ ಇದ್ದಂತೆ ಇನ್ನೊಂದು ಕ್ಷಣ ಇರುವುದಿಲ್ಲ. ಸಣ್ಣ ಪುಟ್ಟ ವೈಫಲ್ಯಗಳಿಗೂ ಕೊರಗುತ್ತಾ, ಆತ್ಮಹತ್ಯೆ ಮಾಡಿಕೊಳ್ಳುವ ಲೆವೆಲ್ಲಿಗೆ ಹೋಗುತ್ತಾರೆ. ಅವರಿಗೆ ಆ ಕ್ಷಣ ಒಳ್ಳೆಯ ಮಾತು, ಪ್ರೀತಿ ಸಿಗಬೇಕು. ಈ ಕಾಯಿಲೆ ನಿಜಕ್ಕೂ ಯಾಕೆ ಬರುತ್ತದೆ ಅನ್ನುವುದು ಗೊತ್ತಿಲ್ಲ. ಆದರೆ ಹಲವು ಕಾರಣಗಳು ಒಟ್ಟಾಗಿ ಇದು ಬರಬಹುದು- ಅನುವಂಶೀಯತೆ, ಪರಿಸರದ ನೆಗೆಟಿವ್‌ ಪ್ರಭಾವ, ಮೆದುಳಿನಲ್ಲಿ ಆಗಿರುವ ಸಣ್ಣಪುಟ್ಟ ನರ ಪರಿವರ್ತನೆ ಮತ್ತು ರಾಸಾಯನಿಕ ಪ್ರಚೋದನೆಗಳು. ಇದರಲ್ಲಿ ಹಾರ್ಮೋನ್‌ ಅಸಮತೋಲನ ಕೂಡ ಸೇರಿದೆ. ಸುಶಾಂತ್‌ನಲ್ಲಿ ಈ ಎಲ್ಲ ಕಾರಣಗಳೂ ಒಟ್ಟಾಗಿ ಪರಿಣಾಮ ಬೀರಿರಬಹುದು.

Tap to resize

Latest Videos

ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಗೆ ರೇಪ್ ಬೆದರಿಕೆ! ಹಾಕಿದ್ದು ಯಾರು? 

ಈ ಕಾಯಿಲೆಗೆ ತುತ್ತಾದವರು ಕ್ಷಣಕ್ಷಣವೂ ಹೈ ಎನರ್ಜಿ, ಭಯಂಕರ ಚಟುವಟಿಕೆ ಪ್ರದರ್ಶಿಸುತ್ತಿರುತ್ತಾರೆ. ಇವರಿಗೆ ನಿದ್ದೆ ಹೆಚ್ಚು ಬೇಕಾಗುವುದಿಲ್ಲ ಅಥವಾ ನಿದ್ರಿಸುವುದೇ ಇಲ್ಲ. ವಾಸ್ತವದ ಸ್ಪರ್ಶವನ್ನೇ ಕಳೆದುಕೊಳ್ಳುತ್ತಾರೆ. ಸದಾ ಕನಸಿನ ಜಗತ್ತಿನಲ್ಲಿ, ಅವಾಸ್ತವಿಕ ಜಗತ್ತಿನಲ್ಲಿ ಜೀವಿಸುತ್ತಿರುತ್ತಾರೆ. ಇವರಿಗೆ ಡಿಪ್ರೆಶನ್‌ ಉಂಟಾದಾಗ ಖಿನ್ನತೆ, ಎಲ್ಲ ಚಟುವಟಿಕೆಗಳಲ್ಲಿ ನಿರಾಸಕ್ತಿ, ಸುಸ್ತು ತೋರ್ಪಡಿಸುತ್ತಾರೆ. ಮೂಡ್‌ ವ್ಯತ್ಯಾಸಗಳು ದಿನಗಳಿಂದ ತಿಂಗಳುಗಟ್ಟಲೆ ಇರಬಹುದು. ಈ ಕಾಯಿಲೆಗೆ ಜೀವನಪೂರ್ತಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಅದರಲ್ಲಿ ಮಾನಸಿಕ ಕೌನ್ಸೆಲಿಂಗ್‌ ಮತ್ತು ಔಷಧಗಳು ಎರಡೂ ಬೇಕಿರುತ್ತವೆ.

ಸುಶಾಂತ್‌ ಸಿಂಗ್ ಆತ್ಮ ಮಾತನಾಡುತ್ತಿದೆ

ಬಹುಶಃ ಸುಶಾಂತ್‌ನಲ್ಲಿದ್ದ ಈ ಕಾಯಿಲೆಯನ್ನು ಬಾಲಿವುಡ್‌ನವರು ಇನ್ನಷ್ಟು ಮಾನವೀಯತೆ, ಕಾಳಜಿ, ಪ್ರೀತಿಗಳಿಂದ ಗುರುತಿಸಿ ನೋಡಿಕೊಳ್ಳಬಹುದಿತ್ತು. ಬಾಲಿವುಡ್‌ನಲ್ಲಿ ಆತನನ್ನು ಟಾರ್ಗೆಟ್‌ ಮಾಡಿದವರಿದ್ದರು. ಇತ್ತೀಚೆಗೆ ಆತನಿಗೆ ಸಿಕ್ಕಿದ ಅವಕಾಶಗಳಿಗೂ ಕಲ್ಲು ಹಾಕಿದ ಪ್ರಭಾವಿಗಳಿದ್ದರು. ದಿಲ್‌ ಬೇಚಾರಾ ಸೆಟ್‌ನಲ್ಲಿ ಸಹನಟಿ ಮೀಟೂ ಆರೋಪ ಮಾಡಿದಳು. ನಂತರ ಲಾಕ್‌ಡೌನ್‌ ಬಂತು. ಇವೆಲ್ಲವೂ ಸೇರಿಕೊಂಡು ಸುಶಾಂತ್‌ ಆತ್ಹಹತ್ಯೆ ಮಾಡಿಕೊಂಡಿರಬಹುದು.

ದಕ್ಷಿಣ ಕನ್ನಡದ ದಿಶಾ ಸಾವಿನ ಬಳಿಕ ಔಷಧ ಸೇವನೆ ಬಿಟ್ಟಿದ್ದ ಸುಶಾಂತ್‌ ಸಿಂಗ್‌! 

click me!