ದೇವಸ್ಥಾನದಲ್ಲಿ ಭವಿಷ್ಯ ನುಡಿದು ಆ ಸಂತ ಮಾಯವಾದ: ವಿಚಿತ್ರ ಘಟನೆ ನೆನಪಿಸಿಕೊಂಡ ನಟ ವಿವೇಕ್‌ ಒಬೆರಾಯ್‌

By Suchethana D  |  First Published Dec 16, 2024, 3:05 PM IST

ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಸಂದರ್ಭದಲ್ಲಿ ದೇವಾಲಯವೊಂದಕ್ಕೆ ಭೇಟಿ ನೀಡಿದಾಗ, ತಮ್ಮ ಭವಿಷ್ಯ ನುಡಿದ ಮಾಯವಾದ ಸಂತನ ಕುತೂಹಲದ ಘಟನೆಯನ್ನು ವಿವೇಕ್‌ ಓಬೆರಾಯ್‌ ನೆನಪಿಸಿಕೊಂಡಿದ್ದಾರೆ. 
 


ಅದೊಮ್ಮೆ ಬಾಲಿವುಡ್‌ ಸೂಪರ್ ಸ್ಟಾರ್ ವಿರುದ್ಧ ಹರಿಹಾಯ್ದಿದ್ದಕ್ಕೆ  ಇಂಡಸ್ಟ್ರಿಯಿಂದಲೇ 'ಬಾಯ್ಕಾಟ್' ಆಗಿದ್ದ ನಟ ವಿವೇಕ್‌ ಓಬೆರಾಯ್‌, ಇದೀಗ  1200 ಕೋಟಿ ರೂಪಾಯಿಗಳ ಸಾಮ್ರಾಜ್ಯ ಕಟ್ಟಿದ್ದಾರೆ. ಭಾರತದ ಶ್ರೀಮಂತ ನಟರಲ್ಲಿ ಇವರು ಕೂಡ ಇದ್ದಾರೆ. ದಿ ಸ್ಟೇಟ್ಸ್‌ಮನ್ ಸೇರಿದಂತೆ ಅನೇಕ ವರದಿಗಳು ಅವರ ನಿವ್ವಳ ಮೌಲ್ಯವನ್ನು  1200 ಕೋಟಿ ರೂಪಾಯಿ ಎನ್ನಲಾಗಿದೆ.  ಇದು ದೇಶದ ಟಾಪ್ 10 ಶ್ರೀಮಂತ ನಟರ ಪಟ್ಟಿಯಲ್ಲಿ ತಂದು ನಿಲ್ಲಿಸಿದೆ.  ವಾಸ್ತವವಾಗಿ, ಅವರ ಸಂಪತ್ತು ಹೆಚ್ಚು 'ಯಶಸ್ವಿ ಸಮಕಾಲೀನರಾದ ರಣಬೀರ್ ಕಪೂರ್ ( 350 ಕೋಟಿ), ಅಲ್ಲು ಅರ್ಜುನ್ ( 340 ಕೋಟಿ), ಪ್ರಭಾಸ್ ( 250 ಕೋಟಿ), ಮತ್ತು ರಜನಿಕಾಂತ್ ( 400 ಕೋಟಿ) ರಂತಹ ಸೂಪರ್‌ಸ್ಟಾರ್‌ಗಳನ್ನು ಮೀರಿದೆ. ಇದೀಗ ನಟ ಸೋಷಿಯಲ್‌ ಮೀಡಿಯಾದಲ್ಲಿಯೂ ಸ್ಟಾರ್ ಆಗಿದ್ದಾರೆ. ಇದರ ನಡುವೆಯೇ ತಮಗಾಗಿರುವ ವಿಚಿತ್ರ, ಕುತೂಹಲದ ಅನುಭವವನ್ನು ನಟ ಈಗ ಶೇರ್‍‌ ಮಾಡಿಕೊಂಡಿದ್ದಾರೆ. 
 
ಡಾ. ಜೈ ಮದನ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿನ   ಸಂಭಾಷಣೆಯಲ್ಲಿ, ವಿವೇಕ್ ಓಬೆರಾಯ್ ಅವರು ತಮ್ಮ ಜೀವನದ  ಆಧ್ಯಾತ್ಮಿಕ ಅನುಭವಗಳನ್ನು ತಿಳಿಸಿದ್ದಾರೆ. ಅದೊಂದು ದಿನ ದೇವಾಲಯವೊಂದಕ್ಕೆ ಹೋದ ಸಂದರ್ಭದಲ್ಲಿ ತಮಗಾಗಿದ್ದ ಕುತೂಹಲದ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. '2004ರ ಸಮಯ ಅದು. ದೇವಸ್ಥಾನವೊಂದಕ್ಕೆ ಹೋಗಿದ್ದೆ. ಆ ಸಮಯದಲ್ಲಿ ಉಂಟಾದ ಸುನಾಮಿಯಿಂದ ಬದುಕುಳಿದವರಿಗೆ ಪರಿಹಾರ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೆ. ಆ ಸಮಯದಲ್ಲಿಯೇ ಈ ಘಟನೆ ಸಂಭವಿಸಿತ್ತು. ಆಗ ಒಂದರ ಮೇಲೊಂದು ಚಿತ್ರಗಳು ಫ್ಲಾಪ್‌ ಆಗಿದ್ದವು. ದೇವಸ್ಥಾನಕ್ಕೆ ಭೇಟಿಯಾದ ಸಂದರ್ಭದಲ್ಲಿ,  ವಯಸ್ಸಾದ ವ್ಯಕ್ತಿಯೊಬ್ಬರು ಅಲ್ಲಿಗೆ ಬಂದರು.  ಆ ವ್ಯಕ್ತಿ ಬಿಳಿ ಗಡ್ಡದೊಂದಿಗೆ ಸರಳವಾಗಿ ಧೋತಿ ಧರಿಸಿದ್ದರು, ನನ್ನ ಬಳಿ ಇಂಗ್ಲಿಷ್‌ನಲ್ಲಿಯೇ ಮಾತನಾಡಿದರು. ನಾನೂ ಅವರ ಜೊತೆ ಮಾತನಾಡಿದೆ' ಎನ್ನುತ್ತಲೇ ಮುಂದಾದ ರೋಚಕ ಘಟನೆಯನ್ನು ವಿವರಿಸಿದ್ದಾರೆ.

ಚಿತ್ರಗಳು ತೋಪೆದ್ದು ಬಾಯ್ಕಾಟ್‌ ಮಾಡಿದ್ರೂ 1200 ಕೋಟಿ ಸಾಮ್ರಾಜ್ಯ ಸ್ಥಾಪಿಸಿದ ನಟ ವಿವೇಕ್‌ ಒಬೆರಾಯ್‌!

Tap to resize

Latest Videos

'ಆ ವ್ಯಕ್ತಿ ನನ್ನನ್ನು ತಮ್ಮ  ಪಕ್ಕದಲ್ಲಿ ಕುಳಿತುಕೊಳ್ಳುವಂತೆ ನಿರ್ದೇಶಿಸಿದರು. ನಂತರ ನನ್ನನ್ನು ನೋಡಿ ನೀನು ವಿಪರೀತ ಆರ್ಥಿಕ ಸಂಕಷ್ಟ ಎದುರಿಸುತ್ತಿರುವೆ ಎಂದರು. ನನಗೆ ಅಚ್ಚರಿಯಾಯಿತು. ಹೌದು ಎನ್ನುವಂತೆ ತಲೆಯಾಡಿಸಿದೆ. ಅಷ್ಟರಲ್ಲಿಯೇ ಅವರು ನನ್ನ ತಲೆಯ ಮೇಲೆ ಕೈಯಿಟ್ಟು, ಇವೆಲ್ಲಾ ಕ್ಷಣಿಕ. ನೀನು ಈಗ ಮಾಡುತ್ತಿರುವ ಪರಿಹಾರ ಕಾರ್ಯ, ಪರೋಪಕಾರಿ ಸೇವೆ ನಿನ್ನನ್ನು ರಕ್ಷಿಸುತ್ತದೆ. ಶೀಘ್ರದಲ್ಲಿಯೇ ನೀನುಎಲ್ಲಾ ಸಂಕಷ್ಟಗಳಿಂದ ಪಾರಾಗಿ ದೊಡ್ಡ ವ್ಯಕ್ತಿಯಾಗುತ್ತಿ' ಎಂದು ಹೇಳಿ ಹೊರಟು ಹೋದರು.  ಬಳಿಕ ನನಗೆ ಅವರನ್ನು ಮತ್ತೊಮ್ಮೆ ಸಿಗುವ ಹಂಬಲ ಉಂಟಾಯಿತು. ಆದರೆ ಆ ವ್ಯಕ್ತಿ ಎಲ್ಲಿಯೂ ಕಾಣಿಸಲೇ ಇಲ್ಲ. ತುಂಬಾಹುಡುಕಿದ ಬಳಿಕವೂ ಅವರುಸಿಗಲಿಲ್ಲ. ಕೊನೆಗೆ,  ದೇವಸ್ಥಾನದ ಸಿಬ್ಬಂದಿಯನ್ನು ವಿಚಾರಿಸಿದಾಗ ಇಲ್ಲಿ ಅಂತಹ ವ್ಯಕ್ತಿ ಯಾರೂ ಇಲ್ಲವೇ ಇಲ್ಲ ಎಂದು ಬಿಟ್ಟರು.  ಇದರಿಂದ ನಾನು ದಿಗ್ಭ್ರಮೆಗೊಂಡೆ. ಹಾಗಿದ್ದರೆ ಆ ಸಂತ ಯಾರು? ಇದು ನನ್ನ ಭ್ರಮೆಯೋ, ನಿಜವೋ ಗೊತ್ತಾಗಲಿಲ್ಲ. ದೇವರೇ ಈ ರೂಪದಲ್ಲಿ ಬಂದು ಬಿಟ್ಟರಾ ಎಂದೂ ಅಂದುಕೊಂಡೆ. ಆದರೆ ಉತ್ತರ ಸಿಗಲಿಲ್ಲ. ಆದರೆ, ಆ ವ್ಯಕ್ತಿ ಹೇಳಿದಂತೆ ಈಗ ಇಷ್ಟು ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆ' ಎಂದಿದ್ದಾರೆ.  

 ಇದೇ ವೇಳೆ, ದೇವಸ್ಥಾನವೊಂದಕ್ಕೆ ಹೋದ ಸಮಯದಲ್ಲಿ ವ್ಯಕ್ತಿಯೊಬ್ಬರು ತಮ್ಮ ಬಳಿ ಬಂದು  "ಬಾಲ ವೇಶ್ಯಾವಾಟಿಕೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ತಿಳಿಸಿದರು. ನಂತರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ವಿವೇಕ್‌ ಅವರು, ಈ ಬಗ್ಗೆ ತನಿಖೆ ಮಾಡಿದಾಗ,  ಸಣ್ಣ ಕೋಣೆಯಲ್ಲಿ ಹಲವಾರು ಹುಡುಗಿಯರನ್ನು ಕೈದಿಗಳಾಗಿ ಇರಿಸಿರುವುದನ್ನು ಕಂಡುಕೊಂಡಿದ್ದರು. ಇದರಿಂದ  ಅವರು ತುಂಬಾ ದುಃಖಗೊಂಡು ಮಕ್ಕಳನ್ನುರಕ್ಷಿಸುವ ಸಲುವಾಗಿಯೇ ಒನ್ ಫೌಂಡೇಶನ್ ಎಂಬ ಎನ್‌ಜಿಒವನ್ನು ಶುರು ಮಾಡಿದ್ದು, ಅಸಂಖ್ಯರ ಬಾಳಿಗೆ ದೀಪವಾಗಿದ್ದಾರೆ. ಇದು ಉತ್ತರ ಭಾರತದ ಶಾಲೆಗಳಿಗೆ ಶಿಕ್ಷಣ ಮತ್ತು ಆರೋಗ್ಯವನ್ನು ಒದಗಿಸಲು ಕೆಲಸ ಮಾಡುತ್ತಿದೆ.  
 
2002 ರಲ್ಲಿ ವಿವೇಕ್ ಒಬೆರಾಯ್ ಅವರು  ಬಾಲಿವುಡ್‌ಗೆ ಕಾಲಿಟ್ಟಾಗ ಹಲವು ಬ್ಲಾಕ್‌ಬಸ್ಟರ್‍‌ ಚಿತ್ರಗಳನ್ನು ನೀಡಿದರು.  ಸಾಥಿಯಾ, ಮಸ್ತಿ ಮತ್ತು ಓಂಕಾರದಂತಹ ಹಿಟ್‌ ಚಿತ್ರಗಳು ಅವರ ಪಾಲಿಗೆ ಬಂದವು. ಇದನ್ನು ಗಮನಿಸಿದವರು ನಟ,  ಬಾಲಿವುಡ್ ಅನ್ನು ಆಳುತ್ತಾನೆ ಎಂದೇ ಊಹಿಸಿದ್ದರು.  ಆದರೆ ನಂತರ ಅವರ ವೈಯಕ್ತಿಕ ಜೀವನವು ಬೇರೆ ಮಾರ್ಗ ಹಿಡಿಯಿತು. ಐಶ್ವರ್ಯಾ ರೈ ಅವರೊಂದಿಗಿನ ಸಂಬಂಧವು, ಸಲ್ಮಾನ್ ಖಾನ್ ಅವರೊಂದಿಗಿನ   ಜಗಳಕ್ಕೆ ಇವು ಕಾರಣವಾದವರು.  ಕಾಲಾಂತರದಲ್ಲಿ ವಿವೇಕ್ ಅವರ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದವು. ಅವರಿಗೆ ಸಿಕ್ಕ ಹೊಸ ಚಿತ್ರಗಳು ಕೂಡ ಕೆಲಸ ಮಾಡಲಿಲ್ಲ. ಬಳಿಕ ಆಗಿದ್ದೆಲ್ಲವೂ ಈಗ ಇತಿಹಾಸವೇ. 

ಮೆಟ್ರೋಗೆ ದನಿ ನೀಡುವಾಗ್ಲೇ ಟೈಮ್ ಬಾಂಬ್‌ ಇರೋದು ಗೊತ್ತಿತ್ತು, ವಿಗ್‌ ಧರಿಸಿದ್ಲು; ಅಪರ್ಣಾರ ನೆನೆದ ನಾಗರಾಜ್ ವಸ್ತಾರೆ
 

click me!