ರಶ್ಮಿಕಾ ಮಂದಣ್ಣಗೆ 'ದಳಪತಿ ವಿಜಯ್ ಇಷ್ಟ' ಅಂದ್ರು ವಿಜಯ್ ದೇವರಕೊಂಡ!

Published : Dec 16, 2024, 01:09 PM ISTUpdated : Dec 16, 2024, 01:21 PM IST
ರಶ್ಮಿಕಾ ಮಂದಣ್ಣಗೆ 'ದಳಪತಿ ವಿಜಯ್ ಇಷ್ಟ' ಅಂದ್ರು ವಿಜಯ್ ದೇವರಕೊಂಡ!

ಸಾರಾಂಶ

ರಶ್ಮಿಕಾ ಮಂದಣ್ಣ ಹಳೆಯ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಅವರು ವಿಜಯ್ ಎಂಬ ಹೆಸರು ತಮಗೆ ವಿಶೇಷ ಎಂದಿದ್ದಾರೆ. ದಳಪತಿ ವಿಜಯ್ ಅಥವಾ ವಿಜಯ್ ದೇವರಕೊಂಡ ಅವರಿಬ್ಬರಲ್ಲಿ ಯಾರು ಇಷ್ಟ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದೆ, ಇಬ್ಬರೂ ವಿಜಯ್‌ಗಳು ತಮ್ಮ ಬಾಳಲ್ಲಿ ಮುಖ್ಯ ಎಂದು ಹೇಳಿದ್ದಾರೆ. 

ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸದ್ಯ ಪುಷ್ಪಾ 2 ಸಿನಿಮಾದ ಸಕ್ಸಸ್ ಖುಷಿ ಹವಾದಲ್ಲಿ ತೇಲಾಡುತ್ತಿರುವುದು ಗೊತ್ತೇ ಇದೆ. ರಶ್ಮಿಕಾ-ಅಲ್ಲು ಅರ್ಜುನ್ ನಟನೆಯ ಪುಷ್ಪಾ 2 ಸಿನಿಮಾ ಗಳಿಕೆ ಅಬ್ಬರಕ್ಕೆ ಈ ಹಿಂದಿನ ಸಿನಿಮಾ ದಾಖಲೆಗಳು ಧೂಳೀಪಟವಾಗಿವೆ. ಸಲಾರ್, ಬಾಹುಬಲಿ-2, ಆರ್‌ಆರ್‌ಆರ್‌ ಹಾಗು ಕೆಜಿಎಫ್ ಸಿನಿಮಾಗಳೆಲ್ಲ ಪುಷ್ಪಾ ಅಬ್ಬರಕ್ಕೆ ಮೂಲೆ ಸೇರಿವೆ. ಈ ಸಮಯದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಮಾತನ್ನಾಡಿರುವ ಹಳೆಯ ವಿಡಿಯೋವೊಂದು ಭಾರೀ ವೈರಲ್ಆಗುತ್ತಿವೆ. ಹಾಗಿದ್ದರೆ ಅದರಲ್ಲಿ ಏನಿದೆ? 

ನಟಿ ರಶ್ಮಿಕಾಗೆ ಸಂದರ್ಶನವೊಂದರಲ್ಲಿ ಪ್ರಶ್ನೆ ಕೇಳಲಾಗಿದೆ, 'ನಿಮಗೆ ದಳಪತಿ ವಿಜಯ್ (Thalapathy Vijay) ಅವ್ರು ಇಷ್ಟನಾ ಅಥವಾ ವಿಜಯ್ ದೇವರಕೊಂಡನಾ?' ಅಂತ. ಅದಕ್ಕೆ ರಶ್ಮಿಕಾ ಉತ್ತರ ಹೇಳುವ ಮೊದಲೇ ಅಲ್ಲೇ ಪಕ್ಕದಲ್ಲಿದ್ದ ನಟ ವಿಜಯ್ ದೇವರಕೊಂಡ (Vijay Deverakonda) ಉತ್ತರ ನೀಡಿದ್ದಾರೆ. 'ರಶ್ಮಿಕಾಗೆ ನನಗಿಂತ ಹೆಚ್ಚು ವಿಜಯ್ ದಳಪತಿ' ಅವರೇ ಇಷ್ಟ ಎಂದಿದ್ದಾರೆ. ಅದಕ್ಕೆ ನಿರೂಪಕರು 'ಇರಿ, ರಶ್ಮಿಕಾ ಅದೇನ್ ಹೇಳ್ತಾರೆ ನೋಡೋಣ' ಎಂದಿದ್ದಾರೆ. ಬಳಿಕ ಬಾಯ್ಬಿಟ್ಟ ರಶ್ಮಿಕಾ ಮಂದಣ್ಣ 'ವಿಜಯ್ ಎನ್ನುವ ಹೆಸರೇ ನನಗೆ ಸ್ಪೆಷಲ್' ಎಂದಿದ್ದಾರೆ. 

ದರ್ಶನ್‌ಗೆ ಜಾಮೀನು ಸಿಕ್ಕ ಬಗ್ಗೆ ಸುದೀಪ್ 'ಏನೂ ಹೇಳಲ್ಲ' ಎನ್ನುತ್ತಲೇ ಹೇಳಿದ್ದೇನು?

ಹೌದು, 'ನನ್ನ ಜೀವನದಲ್ಲಿ ವಿಜಯ್ ಎನ್ನುವ ಹೆಸರಿಗೆ ವಿಶಿಷ್ಠ ಸ್ಥಾನವಿದೆ' ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಹೀಗೆ ಹೇಳುವ ಮೂಲಕ ಅವರು ಸಾಕಷ್ಟು ಸೇಫ್ ಗೇಮ್ ಆಡಿದ್ದಾರೆ ಎನ್ನಬಹುದು. ಕೇಳಿದ್ದ ಪ್ರಶ್ನೆಗೆ 'ದಳಪತಿ ವಿಜಯ್ ಇಷ್ಟ ಅಥವಾ ವಿಜಯ್ ದೇವರಕೊಂಡ ಇಷ್ಟ' ಎನ್ನುವ ಎರಡೂ ಉತ್ತರ ಕೊಡದೇ ಜಾರಿಕೊಂಡಿದ್ದಾರೆ ನಟಿ ರಶ್ಮಿಕಾ. ಜೊತೆಗೆ, ನಟ ವಿಜಯ್ ದೇವರಕೊಂಡ ಇಷ್ಟ ಎನ್ನುವ ಅರ್ಥದಲ್ಲೂ ಮಾತನ್ನಾಡಿದ್ದಾರೆ ಎನ್ನಬಹುದು. ಬಲ್ಲವರ ಪ್ರಕಾರ, 'ನಟರಾಗಿ ದಳಪತಿ ವಿಜಯ್, ಫ್ರೆಂಡ್ ಆಗಿ ವಿಜಯ್ ದೇವರಕೊಂಡ' ಎಂದು ರಶ್ಮಿಕಾ ಮಾತನ್ನು ಅರ್ಥೈಸಿಕೊಳ್ಳಬಹುದು. 

ಒಟ್ಟಾರೆಯಾಗಿ ಹೇಳಬೇಕು ಎಂದರೆ, ರಶ್ಮಿಕಾ ಮಂದಣ್ಣ ಬಾಳಲ್ಲಿ ವಿಜಯ್ ದೇವರಕೊಂಡ ಅವರು ಸ್ಪೆಷಲ್ ವ್ಯಕ್ತಿ ಎನ್ನುವುದು ಇಡೀ ಜಗತ್ತಿಗೇ ಗೊತ್ತು. ಅದು ವಿಜಯ್ ದೇವರಕೊಂಡ ಕಡೆಯಿಂದ ಕೂಡ ಸಾಬೀತಾಗಿದೆ. ಸಿನಿಮಾ ಹೊರತಾಗಿಯೂ ವಿಜಯ್ ದೇವರಕೊಂಡ ಹಾಗು ರಶ್ಮಿಕಾ ಮಂದಣ್ಣ ಬೆಸ್ಟ್ ಫ್ರೆಂಡ್ಸ್ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಮೇಲ್ನೋಟಕ್ಕೆ ಜಗತ್ತು ಅಂದುಕೊಂಡಂತೆ ಅವರಿಬ್ಬರೂ ಲವರ್ಸ್ ಹೌದೋ ಅಲ್ಲವೋ ಎಂಬುದು ಪರ್ಸನಲ್‌ ಆಗಿ ಅವರಿಬ್ಬರಿಗೆ ಮಾತ್ರ ಗೊತ್ತು. ಬೇರೆ ಯಾರೇ ಅಂದುಕೊಂಡರೂ ಕೂಡ ಅದು ಅಂತೆ-ಕಂತೆ ಅಷ್ಟೇ!

ಜ್ಞಾನೋದಯಕ್ಕೆ ದಾರಿ ಎಂಬಂತಿದೆ ಸುದೀಪ್ ಮಾತು; ಒಮ್ಮೆ ಕೇಳಿದ್ರೆ ಮತ್ತೆ ಕೇಳ್ತೀರಾ!

ಏಕೆಂದರೆ, ಸಿನಿಮಾದಲ್ಲಿ ನಟಿಸಿದ ಮಾತ್ರಕ್ಕೆ, ಒಟ್ಟೊಟ್ಟಿಗೇ ಓಡಾಡಿದ ಕಾರಣಕ್ಕೆ, ಅವರಿಬ್ಬರೂ ತಮಾಷೆಗೆ ಹೇಳಿದ್ದಕ್ಕೆ, ಅವರಿಬ್ಬರ ಸಂಬಂಧದ ಬಗ್ಗೆ ಯಾರೂ ನಿರ್ಧರಿಸಲು ಸಾಧ್ಯವಿಲ್ಲ. ಜೊತೆಗೆ, ಇವತ್ತು ಇದ್ದ ಸಂಬಂಧ ನಾಳೆ ಇಲ್ಲದಿರಬಹುದು. ಸದ್ಯದ ಮಟ್ಟಿಗೆ ಅವರಿಬ್ಬರೂ ಒಳ್ಳೆಯ ಸ್ನೇಹಿತರು ಎನ್ನಬಹುದಷ್ಟೇ. ಅದನ್ನು ಹೊರತುಪಡಿಸಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಪ್ರೇಮಿಗಳು ಇದ್ದರೂ ಇರಬಹುದು, ಯಾರಿಗೆ ಗೊತ್ತು? ಅವರಿಬ್ಬರ ಮನಸ್ಸು ಸ್ಕ್ಯಾನ್ ಮಾಡಲಾಗದು. ಆದರೆ, ಹಲವು ಬಾರಿ ಅವರಿಬ್ಬರೂ ಲವರ್ಸ್‌ ರೀತಿ ನಡೆದುಕೊಳ್ಳುತ್ತಿರುವುದಂತೂ ಹೌದು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?
ಮುಸ್ಲಿಂ ಆಗಿ ಮತಾಂತರವಾದ್ರಾ ಬಾಲಿವುಡ್‌ನ ಪ್ರಖ್ಯಾತ ನಟಿಯ ಸಹೋದರಿ? ಬುರ್ಖಾ, ಹಿಜಾಬ್‌ ಧರಿಸಿ ಮಸೀದಿ ಪ್ರವೇಶ!