ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಈ ಮೊದಲು ಮೂಡಿಬಂದಿದ್ದ 'ದಿ ಕಾಶ್ಮೀರ್ ಫೈಲ್ಸ್' ಚಿತ್ರವು ಸೂಪರ್ ಹಿಟ್ ದಾಖಲಿಸಿತ್ತು. ಕೇವಲ 20 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ 'ದಿ ಕಾಶ್ಮೀರ್ ಫೈಲ್ಸ್' ರೂ. 500 ಕೋಟಿಗೂ ಅಧಿಕ ಗಳಿಸಿ ದಾಖಲೆ ನಿರ್ಮಿಸಿತ್ತು.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ವಾಕ್ಸಿನ್ ವಾರ್' ಚಿತ್ರವು ಶನಿವಾರ, ಅಂದರೆ 30 ಅಕ್ಟೋಬರ್ 2023 ರಂದು ರೂ. 1.50 ಕೋಟಿ ಕಲೆಕ್ಷನ್ ದಾಖಲಿಸುವ ಮೂಲಕ ಸ್ವಲ್ಪ ಜಂಪ್ ಪಡೆದಿದೆ. ಈ ಚಿತ್ರವು ದಿನಾಂಕ 28 ಅಕ್ಟೋಬರ್ 2023 ರಂದು ಗುರುವಾರ ಭಾರತದಾದ್ಯಂತ ಬಿಡುಗಡೆಯಾಗಿದೆ. ಮೊದಲ ದಿನ ಚಿತ್ರವು 85 ಲಕ್ಷ ಗಳಿಸುವ ಮೂಲಕ 'ಡಲ್' ಓಪನಿಂಗ್ ಪಡೆದುಕೊಂಡಿತ್ತು. ಮಾರನೇ ದಿನ, 29 ರಂದು 90 ಲಕ್ಷ ಮಾತ್ರ ಗಳಿಸಿತ್ತು.
ಶನಿವಾರ 'ದಿ ವ್ಯಾಕ್ಸಿನ್ ವಾರ್' ಚಿತ್ರದ ಗಳಿಕೆಯಲ್ಲಿ ಸ್ವಲ್ಪ ಮಟ್ಟಿಗಿನ ಚೇತರಿಕೆ ಕಂಡು ಬಂದಿದೆ. ಇಂದು, ಅಂದರೆ ಭಾನುವಾರ ಚಿತ್ರದ ಕಲೆಕ್ಷನ್ ಹೆಚ್ಚಬಹುದು. ನಾಳೆ, ಸೋಮವಾರದ ಕಲೆಕ್ಷನ್ ನೋಡಿದರೆ ಚಿತ್ರದ ಮುಂದಿನ ಜರ್ನಿ ಬಗ್ಗೆ ಪಕ್ಕಾ ಹೇಳಬಹುದು. ಬಿಡಗಡೆ ಬಳಿಕ 3-4 ದಿನ ಯಾವುದೇ ಚಿತ್ರದ ಭವಿಷ್ಯ ನಿರ್ಧಾರ ಆಗುವುದಿಲ್ಲ. ನಿಜವಾದ ಫಲಿತಾಂಶ ಬರುವುದು 5ನೇ ದಿನ ಎಂಬ ಮಾತಿದೆ.
ಶಾರುಖ್ ಖಾನ್ ಮೇಲೆ ನನಗೆ ಸಿಕ್ಕಾಪಟ್ಟೆ 'ಕ್ರಶ್' ಆಗಿತ್ತು ಎಂದ ನಟಿ ಪ್ರಿಯಾಮಣಿ!
ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಈ ಮೊದಲು ಮೂಡಿಬಂದಿದ್ದ 'ದಿ ಕಾಶ್ಮೀರ್ ಫೈಲ್ಸ್' ಚಿತ್ರವು ಸೂಪರ್ ಹಿಟ್ ದಾಖಲಿಸಿತ್ತು. ಕೇವಲ 20 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ 'ದಿ ಕಾಶ್ಮೀರ್ ಫೈಲ್ಸ್' ರೂ. 500 ಕೋಟಿಗೂ ಅಧಿಕ ಗಳಿಸಿ ದಾಖಲೆ ನಿರ್ಮಿಸಿತ್ತು. ಆದರೆ ಅದೇ ನಿರ್ದೇಶಕರ ಈ 'ದಿ ವ್ಯಾಕ್ಸಿನ್ ವಾರ್' ಚಿತ್ರವು ಡಲ್ ಓಪನಿಂಗ್ ಪಡೆದುಕೊಂಡಿದೆ. ಮುಂದೆ ಗಳಿಕೆಯಲ್ಲಿ ಚೇತರಿಕೆ ಕಾಣುವುದು ಅನುಮಾನ ಮೂಡಿಸುತ್ತಿದೆ.
ಇಂಜೆಕ್ಷನ್ ತಗೊಳ್ತಿರೋದು ಸಿಹಿ; ನೋವು ಅನುಭವಿಸ್ತಿರೋದು ರಾಮ!
ಒಟ್ಟಿನಲ್ಲಿ, 2019-20ರಲ್ಲಿ ಜಗತ್ತಿಗೆ ಅಪ್ಪಳಿಸಿದ್ದ ಮಹಾಮಾರಿ ಕೋವಿಡ್ ವ್ಯಾಕ್ಸಿನ್ ಕುರಿತಾದ ಚಿತ್ರವು ಸಿನಿಪ್ರೇಕ್ಷಕರನ್ನು ಸೆಳೆಯಲು ವಿಫಲವಾಗಿದೆಯೇ? ಈ ಬಗ್ಗೆ ಭವಿಷ್ಯ ನುಡಿಯಲು ಸಾಧ್ಯವಿಲ್ಲ. ಆದರೆ, ಸದ್ಯದ ಫಲಿತಾಂದ ನೋಡಿದರೆ, ದಿ ವ್ಯಾಕ್ಸಿನ್ ವಾರ್ ಚಿತ್ರವು ಪ್ರೇಕ್ಷಕರಿಗೆ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಮಟ್ಟಿಗೆ ಮೋಡಿ ಮಾಡಲು ವಿಫಲವಾಗಿದೆ. ಮುಂದೇನು ಎಂಬುದಕ್ಕೆ ಸದ್ಯವೇ ಉತ್ತರ ಸಿಗಲಿದೆ, ಕಾದು ನೋಡೋಣ!