ಶಾರುಖ್‌ ಖಾನ್‌ ಮೇಲೆ ನನಗೆ ಸಿಕ್ಕಾಪಟ್ಟೆ 'ಕ್ರಶ್' ಆಗಿತ್ತು ಎಂದ ನಟಿ ಪ್ರಿಯಾಮಣಿ!

By Shriram Bhat  |  First Published Sep 30, 2023, 8:04 PM IST

 ಸಿನಿಮಾ ಒಂದು ಸಕ್ಸಸ್ ಆದರೆ, ಯಾರ ಯಾರಲ್ಲಿರುವ ಯಾವ ಯಾವ ಸಂಗತಿಗಳು ಹೊರಕ್ಕೆ ಬರುತ್ತವೆಯೋ ಎಂಬುದು ಅಚ್ಚರಿ! ಇನ್ನೂ ಮುಂದೆ, ಯಾರಿಗೆ ಯಾರ ಜತೆ ಕ್ರಶ್ ಇತ್ತು, ಯಾರಿಗೆ ಯಾರ ಜತೆ ಲವ್ ಅಫೇರ್ ಇತ್ತು ಎಂಬ ಸಂಗತಿಗಳೆಲ್ಲ ಒಂದೊಂದಾಗಿ ಹೊರಬರಬಹುದು ಎಂಬ ಕುತೂಹಲ ಎಲ್ಲರನ್ನೂ ಕಾಡತೊಡಗಿದೆ.


ನಟಿ ಪ್ರಿಯಾಮಣಿ ಹೊಸದೊಂದು ಸುದ್ದಿ ಹರಿಬಿಟ್ಟಿದ್ದಾರೆ. ಇತ್ತೀಚೆಗೆ, ಶಾರುಖ್ ಖಾನ್ ನಟನೆಯ 'ಜವಾನ್' ಚಿತ್ರದಲ್ಲಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವ ನಟಿ ಪ್ರಿಯಾಮಣಿ, ಈ ಚಿತ್ರದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ.  ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡುತ್ತಿದ್ದ ಪ್ರಿಯಾಮಣಿ 'ನನಗೆ ಶಾರುಖ್ ಖಾನ್ ಜತೆ ಕ್ರಶ್ ಆಗಿತ್ತು' ಎಂದಿದ್ದಾರೆ. ಇಷ್ಟು ದಿನ ಎಲೆ ಮರೆಯ ಕಾಯಿಯಂತೆ ಗುಟ್ಟಾಗಿದ್ದ ಈ ಸಂಗತಿಯೀಗ ಜಗಜ್ಜಾಹೀರಾಗಿದೆ. 

ಈ ಸಂಗತಿ ತಿಳಿದ ಕೆಲವರು "ಶಾರುಖ್ ಖಾನ್ ಈಗ ಪಠಾಣ್ ಮತ್ತು ಜವಾನ್ ಚಿತ್ರಗಳ ಬಳಿಕ ಸಕ್ಸಸ್ ಕಂಡಿರುವ ನಟ. ಹೀಗಾಗಿ ನೀವು ಈಗ ಹೀಗೆ ಹೇಳುತ್ತಿದ್ದೀರಿ. ಈಗ್ಗೆ ಕೆಲವು ವರ್ಷಗಳ ಹಿಂದೆ ನೀವು ಈ ಬಗ್ಗೆ ಏನೂ ಹೇಳಿರಲಿಲ್ಲ. ಹತ್ತು ವರ್ಷಗಳ ಹಿಂದೆ ನೀವು ಇದೇ ನಟನೊಂದಿಗೆ ನಟಿಸಿದ್ದೀರಿ. ಆಗ ಹೇಳಿರದ ವಿಷಯವನ್ನು ಈಗ ಬಾಯಿಬಿಟ್ಟು ಹೇಳಿರುವ ಔಚಿತ್ಯವಾದರೂ ಏನು?" ಎಂದು ಪ್ರಶ್ನಿಸಿದ್ದಾರೆ. ಕೆಲವರು ವಿಧವಿಧವಾಗಿ ನಟಿ ಪ್ರಿಯಾಮಣಿ ಕಾಲೆಳೆದಿದ್ದಾರೆ. 

Tap to resize

Latest Videos

ಕಾವೇರಿ ಜಲ ಸಂಕಷ್ಟದ ಸಮಯದಲ್ಲಿ ನಟಿ ರಚಿತಾ ರಾಮ್‌ ಮಹತ್ವದ ನಿರ್ಧಾರ!

ಇನ್ನೂ ಹಲವರು ನಟಿ ಪ್ರಿಯಾಮಣಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. "ಹೌದು, ಕೆಲವು ಸಂಗತಿಗಳನ್ನು ಕೆಲವು ಸಮಯಗಳಲ್ಲಿ ಮಾತ್ರ ಹೇಳಲು ಸಾಧ್ಯ. ಜವಾನ್ ಸಕ್ಸಸ್ ಬಳಿಕ ನಿಮ್ಮನ್ನು ಸಹಜವಾಗಿ ಮಾತನಾಡಿಸಿದ್ದಾರೆ. ನೀವು ಮನಸ್ಸು ಬಿಚ್ಚಿ ಮಾತನಾಡುತ್ತ ಈ ಸಂಗತಿಯನ್ನು ಹಂಚಿಕೊಂಡಿದ್ದೀರಿ. ಅದರಲ್ಲಿ ತಪ್ಪೇನಿದೆ? ಟೀನ್ ಏಜ್‌ನಲ್ಲಿರುವಾಗ ಹಲವರಿಗೆ ಕೆಲವರೊಂದಿಗೆ ಕ್ರಶ್ ಆಗುತ್ತದೆ. ಅದು ಸಹಜ ಅಥವಾ ಕಾಮನ್ ಸಂಗತಿ ಎನ್ನಬಹುದು. ನೀವು ನಿಮ್ಮ ಕ್ರಶ್ ಮುಚ್ಚಿಟ್ಟುಕೊಳ್ಳದೇ ಹೊರಜಗತ್ತಿಗೆ ಹೇಳಿದ್ದೀರಿ ಅಷ್ಟೇ" ಎಂದು ನಟಿ ಪ್ರಿಯಾಮಣಿ ಸಪೋರ್ಟ್ ಮಾಡಿದ್ದಾರೆ. 

ಹಾಟ್ ಫೋಟೋ ಮೂಲಕ ಸೌಂದರ್ಯ ಅನಾವರಣ ಮಾಡಿದ ರಶ್ಮಿಕಾ ಮಂದಣ್ಣ

ಒಟ್ಟಿನಲ್ಲಿ ಸಿನಿಮಾ ಒಂದು ಸಕ್ಸಸ್ ಆದರೆ, ಯಾರ ಯಾರಲ್ಲಿರುವ ಯಾವ ಯಾವ ಸಂಗತಿಗಳು ಹೊರಕ್ಕೆ ಬರುತ್ತವೆಯೋ ಎಂಬುದು ಅಚ್ಚರಿ! ಇನ್ನೂ ಮುಂದೆ, ಯಾರಿಗೆ ಯಾರ ಜತೆ ಕ್ರಶ್ ಇತ್ತು, ಯಾರಿಗೆ ಯಾರ ಜತೆ ಲವ್ ಅಫೇರ್ ಇತ್ತು ಎಂಬ ಸಂಗತಿಗಳೆಲ್ಲ ಒಂದೊಂದಾಗಿ ಹೊರಬರಬಹುದು ಎಂಬ ಕುತೂಹಲ ಎಲ್ಲರನ್ನೂ ಕಾಡತೊಡಗಿದೆ. ಇರಲಿ, ಇದೀಗ ಒಂದು ಸಂಗತಿ ಜಗಜ್ಜಾಹೀರಾಗಿದೆ, ನಿಮ್ಮೆಲ್ಲರ ಮನಸ್ಸಿನಲ್ಲಿ ಇಟ್ಟುಕೊಂಡಿರಿ.  

click me!