₹15 ಕೋಟಿ ನೀಡುವವರೆಗೂ ಯಾವುದೇ ಫಿಲ್ಮ್​ ರಿಲೀಸ್​​ ಮಾಡುವಂತಿಲ್ಲ, ನಟ ವಿಶಾಲ್​ಗೆ ಮದ್ರಾಸ್‌ ಹೈಕೋರ್ಟ್‌ ​ ಶಾಕ್​!

By Suvarna NewsFirst Published Apr 9, 2023, 9:15 AM IST
Highlights

ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಜೊತೆಗಿನ ಒಪ್ಪಂದ ಉಲ್ಲಂಘಿಸಿದ್ದಕ್ಕೆ  ವಿಶಾಲ್‌ ಅವರಿಗೆ ಮದ್ರಾಸ್ ಹೈಕೋರ್ಟ್ 15 ಕೋಟಿ ರೂಪಾಯಿಗಳ ದಂಡ ವಿಧಿಸಿದೆ. 
 

ಇತ್ತೀಚೆಗೆ ತಮಿಳು ನಟ ವಿಶಾಲ್​ (Vishal) ದೊಡ್ಡ ಪ್ರಾಣ ಕಂಟಕದಿಂದ  ಪಾರಾಗಿದ್ದರು. 'ಮಾರ್ಕ್ ಆಂಟೋನಿ' ಸಿನಿಮಾ ಶೂಟಿಂಗ್ ವೇಳೆ ದೊಡ್ಡ ಅವಘಡ ನಡೆದಿದ್ದು, ನಟ ವಿಶಾಲ್ ಪ್ರಾಣಾಪಾಯದಿಂದ ಪಾರಾಗಿದ್ದರು.  ಆ್ಯಕ್ಷನ್ ದೃಶ್ಯದ ಚಿತ್ರೀಕರಣ ಮಾಡುವಾಗ ಟ್ರಕ್ ಒಂದು ಎಂಟಿ ಕೊಡುತ್ತೆ. ಚಾಲಕನಿಗೆ ಟ್ರಕ್ ನಿಲ್ಲಿಸಲಾಗದೇ ವಿಶಾಲ್ ಪಕ್ಕದಲ್ಲೇ ಹರಿದಿದೆ. ತಕ್ಷಣ ಅಲ್ಲಿದ್ದವರು ವಿಶಾಲ್ ಅವರನ್ನು ಪಕ್ಕಕ್ಕೆ ಎಳೆದುಕೊಂಡಿದ್ದಾರೆ. ಈ ವಿಡಿಯೋವನ್ನ ಹಂಚಿಕೊಂಡು ದೊಡ್ಡ ಅವಘಡದಿಂದ ಸ್ವಲ್ಪದರಲ್ಲೇ ಪಾರಾದೆ ಎಂದು ನಟ ವಿಶಾಲ್ ಟ್ವೀಟ್ (Tweet) ಮಾಡಿದ್ದರು. 'ಕೆಲವೇ ಸೆಕೆಂಡ್‌ಗಳಲ್ಲಿ ಕೆಲವೇ ಇಂಚ್‌ಗಳಲ್ಲಿ ನನ್ನ ಪ್ರಾಣ ಕಳೆದುಕೊಳ್ಳುತ್ತಿದೆ. ದೇವರ ದಯೇ ಕ್ಷೇಮವಾಗಿರುವೆ. ಈ ಘಟನೆಯಿಂದ ಕೊಂಚ ಶಾಕ್ ಆಗಿರುವೆ ಆದರೂ ಚಿತ್ರೀಕರಣ ಮತ್ತೆ ಶುರು ಮಾಡಿರುವೆ' ಎಂದು ವಿಶಾಲ್ ಬರೆದುಕೊಂಡಿದ್ದರು. ಇದಕ್ಕೂ ಮುನ್ನ ವಿಶಾಲ್​ ಅವರು ಸುದ್ದಿಯಲ್ಲಿ ಇದ್ದುದು ನಟ ಪುನೀತ್​ ರಾಜ್​ಕುಮಾರ್​ ನಿಧನದ ಬಳಿಕ.  ಪುನೀತ್  ರಾಜ್ ಕುಮಾರ್ ಸುಮಾರು 1800  ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊತ್ತಿದ್ದರು. ನಟ ವಿಶಾಲ್ ಈ ಮಕ್ಕಳ ವಿದ್ಯಾಭ್ಯಾಸ ಹೊಣೆ ನನ್ನದು ಎಂದು ತಿಳಿಸುವ ಮೂಲಕ  ಅಪಾರ ಶ್ಲಾಘನೆಗೆ ಕಾರಣರಾಗಿದ್ದರು.

ಇದೀಗ ನಟ ವಿಶಾಲ್​ ಇನ್ನೊಮ್ಮೆ ಸುದ್ದಿಯಲ್ಲಿದ್ದಾರೆ. ಇದೀಗ ಅವರು ನೆಗೆಟಿವ್​ (Negative) ಸುದ್ದಿಯಿಂದ ಸದ್ದು ಮಾಡುತ್ತಿದೆ. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಜೊತೆಗಿನ ಒಪ್ಪಂದ ಉಲ್ಲಂಘಿಸಿದ್ದಕ್ಕೆ  ವಿಶಾಲ್‌ ಅವರಿಗೆ ಮದ್ರಾಸ್ ಹೈಕೋರ್ಟ್ ದಂಡ ವಿಧಿಸಿದೆ. ಅದೂ ಒಂದಲ್ಲ, ಎರಡಲ್ಲ 15 ಕೋಟಿ ರೂಪಾಯಿ! ಈ ಹಣವನ್ನು ಶಾಶ್ವತ ಡಿಪಾಸಿಟ್ ಆಗಿ 3 ವಾರಗಳಲ್ಲಿ ಪಾವತಿಸಬೇಕೆಂದು ಕೋರ್ಟ್ ಆದೇಶಿಸಿದೆ. ತಪ್ಪಿದ್ದಲ್ಲಿ ವಿಶಾಲ್ ಫ್ಯಾಕ್ಟರಿ ಸಂಸ್ಥೆಯ ಸಿನಿಮಾಗಳನ್ನು ಥಿಯೇಟರ್‌, ಓಟಿಟಿಯಲ್ಲಿ ಪ್ರದರ್ಶಿಸದಂತೆ ನಿಷೇಧ ಹೇರಲಾಗಿದೆ. ತಮಿಳಿನ ಜನಪ್ರಿಯ ನಿರ್ಮಾಣ ಸಂಸ್ಥೆಯಾಗಿರುವ ಲೈಕಾ ನಟ ವಿಶಾಲ್ ವಿರುದ್ಧ ದಾವೆ ಹೂಡಿತ್ತು. ವಿಶಾಲ್ 30 ಕೋಟಿ ರೂಪಾಯಿ ಸಾಲವನ್ನು ಪ್ರೊಡಕ್ಷನ್‌ (Production) ಹೌಸ್‌ಗೆ ಮರುಪಾವತಿ ಮಾಡುವಂತೆ ನ್ಯಾಯಾಲಯ ಸೂಚಿಸಬೇಕು ಎಂದು ಮನವಿ ಮಾಡಿತ್ತು. ಆದರೆ ಈ ಹಿಂದೆ ಲೈಕಾ ಪ್ರೊಡಕ್ಷನ್‌ನ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಳ್ಳಿ ಹಾಕಿತ್ತು.  ಅಲ್ಲದೆ ವಿಶಾಲ್‌ಗೆ ಐದು ಲಕ್ಷ ದಂಡ ಕಟ್ಟಿಕೊಡಬೇಕೆಂದು ಸಹ ಆದೇಶಿಸಿತ್ತು. 

ರಿಲೀಸ್​ಗೂ ಮುನ್ನವೇ ದಾಖಲೆ ನಿಖಿಲ್ ನಟನೆಯ SPY: ಬಾಚಿತು 40 ಕೋಟಿ ರೂ! 

Latest Videos

ಅಷ್ಟಕ್ಕೂ ಇವರ ವಿರುದ್ಧ ದೂರು ದಾಖಲು ಮಾಡಿದ್ದವರು ಖ್ಯಾತ ನಿರ್ಮಾಪಕ, ಫೈನಾನ್ಷಿಯರ್ ಅನ್ಬುಚೆಳಿಯನ್. 2016 ರಲ್ಲಿ ವಿಶಾಲ್ ಅನ್ಬುಚೆಳಿಯನ್ ಅವರಿಂದ 15 ಕೋಟಿ ಮೊತ್ತದ ಸಾಲ ಪಡೆದಿದ್ದ ಆ ಸಾಲಕ್ಕೆ ಬಡ್ಡಿ ಸೇರಿ ಬೆಳೆದು 21.60 ಕೋಟಿಯಾಗಿತ್ತು. ಆಗ ಮಧ್ಯ ಪ್ರವೇಶಿಸಿದ ಲೈಕಾ ಪ್ರೊಡಕ್ಷನ್, ನಾವು ಅನ್ಬುಚೆಳಿಯನ್ ಸಾಲ ತೀರಿಸುತ್ತೇವೆ, ನೀವು ನಮಗೆ ಒಟ್ಟು ಸೇರಿ 30 ಕೋಟಿ ವಾಪಸ್ ಮಾಡು ಅಲ್ಲಿಯವರೆಗೆ ನಿನ್ನ ಸಿನಿಮಾಗಳಲ್ಲಿ ನಮಗೂ ಹಕ್ಕಿರುತ್ತದೆ'' ಎಂದಿತ್ತು. 'ತುಪ್ಪರಿವಾಳನ್ 2' (Tupparivalan) ಸಿನಿಮಾ ಬಿಡುಗಡೆ ತಡವಾಗಿದೆ ಇದಕ್ಕೆ ವಿಶಾಲ್ ಒಪ್ಪಿಕೊಂಡು ತಮ್ಮ 'ತುಪ್ಪರಿವಾಳನ್-2' ಸಿನಿಮಾ ಬಿಡುಗಡೆ ಆದ ಕೂಡಲೇ ಸಾಲ ತೀರಿಸುವುದಾಗಿ ಹೇಳಿದ್ದರು. ಆದರೆ ಕೊರೊನಾ ಕಾರಣದಿಂದ 'ತುಪ್ಪರಿವಾಳನ್ 2' ಇನ್ನೂ ಬಿಡುಗಡೆ ಆಗಿಲ್ಲ. ಅದಕ್ಕೆ ಮುನ್ನ 'ಚಕ್ರ' ಸಿನಿಮಾ ಬಿಡುಗಡೆ ಆಯಿತು. ಈ ಸಮಯ 'ಚಕ್ರ' ಸಿನಿಮಾದ ಲಾಭವನ್ನು ತಮಗೆ ನೀಡಬೇಕು ಎಂದು ಲೈಕಾ ಪ್ರೊಡೊಕ್ಷನ್ ಹೌಸ್ ಕೇಳಿದಾಗ ವಿಶಾಲ್ ಅದಕ್ಕೆ ಒಲ್ಲೆ ಎಂದಿದ್ದಾರೆ. ಹೀಗಾಗಿ ಲೈಕಾ ಪ್ರೊಡಕ್ಷನ್ಸ್ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು.

ಈ ಸಾಲವನ್ನು ಪ್ರಮುಖ ಸಿನಿಮಾ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಫೈನಾನ್ಷಿಯರ್‌ಗೆ ವಾಪಸ್ ನೀಡಿತ್ತು. ಹಾಗಾಗಿ ವಿಶಾಲ್ ಈ ಹಣವನ್ನು ಮರಳಿ ಕೊಡುವವರೆಗೂ ವಿಶಾಲ್ ನಟಿಸುವ ಸಿನಿಮಾಗಳ ಹಕ್ಕುಗಳನ್ನು ತಮಗೆ ಕೊಡುವಂತೆ ಲೈಕಾ ಸಂಸ್ಥೆ ಜೊತೆ ಒಪ್ಪಂದವಾಗಿತ್ತು. ಈ ಒಪ್ಪಂದವನ್ನು ವಿಶಾಲ್​ ಮೀರಿರುವುದಾಗಿ ಅದು ಆರೋಪಿಸಿತ್ತು. ಈ ಹಿಂದೆ ವಿಶಾಲ್​ ಪರವಾಗಿ ತೀರ್ಪು ಬಂದಿತ್ತು. 'ಲೈಕಾ ಹಾಕಿರುವ ಅರ್ಜಿಯಲ್ಲಿ ಕೆಲವು ಸುಳ್ಳುಗಳಿವೆ. ವಿಶಾಲ್ ಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದಾರೆ ಎಂಬುದು ಸುಳ್ಳು. ಅಲ್ಲದೆ ದುರುದ್ದೇಶಪೂರ್ವಕವಾಗಿ ಲೈಕಾ ದಾವೆ ಹೂಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ'' ಎಂದೂ  ಹೇಳಿದ್ದರು. ಇದೀಗ ತನ್ನ ಆದೇಶವನ್ನು ಮಾರ್ಪಾಡು ಮಾಡಿರುವ ಕೋರ್ಟ್​,  ರಿಜಿಸ್ಟರ್ ಹೆಸರಿನಲ್ಲಿ 15 ಕೋಟಿ ರೂ. ಹಣವನ್ನು 3 ವಾರಗಳಲ್ಲಿ ಡೆಪಾಸಿಟ್ ಮಾಡುವಂತೆ ಆದೇಶಿಸಿದೆ.

ಅನುಷ್ಕಾ ಕರಿಯರ್​ ಹಾಳು ಮಾಡಲು ಹೊರಟಿದ್ದ ಕರಣ್​ ಜೋಹರ್! ಶಾಕಿಂಗ್​ ವಿಡಿಯೋ ವೈರಲ್​

click me!