ಪದ್ಮಶ್ರೀ ಸ್ವೀಕರಿಸಿದ ರವೀನಾ ಟಂಡನ್ ಹಿಗ್ಗಾಮುಗ್ಗಾ ಟ್ರೋಲ್; ಕೊನೆಗೂ ಮೌನ ಮುರಿದ 'ಕೆಜಿಎಫ್ 2' ನಟಿ

Published : Apr 08, 2023, 05:03 PM IST
ಪದ್ಮಶ್ರೀ ಸ್ವೀಕರಿಸಿದ ರವೀನಾ ಟಂಡನ್ ಹಿಗ್ಗಾಮುಗ್ಗಾ ಟ್ರೋಲ್; ಕೊನೆಗೂ ಮೌನ ಮುರಿದ 'ಕೆಜಿಎಫ್ 2' ನಟಿ

ಸಾರಾಂಶ

ಪದ್ಮಶ್ರೀ ಸ್ವೀಕರಿಸಿದ ರವೀನಾ ಟಂಡನ್ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ಈ ಬಗ್ಗೆ ನಟಿ ಕೊನೆಗೂ ಮೌನ ಮುರಿದಿದ್ದಾರೆ. 

ಬಾಲಿವುಡ್ ಖ್ಯಾತ ನಟಿ ರವೀನಾ ಟಂಡನ್ ಭಾರತದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿರುವ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾರೆ. ಏಪ್ರಿಲ್ 5ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ  ರವೀನಾ ಟಂಡನ್ ಪ್ರಶಸ್ತಿ ಸ್ವೀಕರಿಸಿದರು. ರವೀನಾ ಪ್ರಶಸ್ತಿ ಸ್ವೀಕರಿಸುವ ಸಮಯದಲ್ಲಿ ಪತಿ ಅನಿಲ್ ಥಡಾನಿ ಮತ್ತು ಮಕ್ಕಳು ಜೊತೆಯಲಿದ್ದರು. ಪ್ರಶಸ್ತಿ ಬಂದ ಖುಷಿಯನ್ನು ನಟಿ ರವೀನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಪ್ರಶಸ್ತಿ ಸ್ವೀಕರಿಸಿದ ಬೆನ್ನಲ್ಲೇ ನಟಿ ರವೀನಾ ಟಂಡನ್ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ಈ ಬಗ್ಗೆ ಕೊನೆಗೂ ಮೌನ ಮುರಿದಿರುವ ನಟಿ ಟ್ರೋಲಿಗರ ಬಗ್ಗೆ ಮಾತನಾಗಿ ಯಾವುದೇ ಪ್ರಾಮುಖ್ಯಕೆ ನೀಡಲು ನಾನು ಬಯಸುವುದಿಲ್ಲ ಎಂದು ಹೇಳಿದ್ದಾರೆ. 

ರವೀನಾ ಟಂಡನ್ ಪ್ರಶಸ್ತಿ ಯಾಕೆ ಸ್ವೀಕರಿಸಿದರು ಎಂದು ಗೊತ್ತಾಗಿಲ್ಲ ಎಂದು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಆಕೆಗೆ ಏನು ಅರ್ಹತೆ ಇದೆ ಎಂದು ಸರ್ಕಾರ ಪ್ರಶಸ್ತಿ ನೀಡಿದೆ ಎಂದು ಸಖತ್ ಟ್ರೋಲ್ ಮಾಡಲಾಗಿತ್ತು. ಈ ಬಗ್ಗೆ ರವೀನಾ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಟ್ರೋಲಿಗರಿಗೆ ಪ್ರತಿಕ್ರಿಯೆ ನೀಡಿದ ನಟಿ ರವೀನಾ, 'ಅವರ ಕಾಮೆಂಟ್‌ಗಳು ತನ್ನ ಕೆಲಸವನ್ನು ಕಡಿಮೆ ಮಾಡುವುದಿಲ್ಲ ಎಂದು ಹೇಳಿದರು. ರವೀನಾ ಟಂಡನ್ ಪ್ರಶಸ್ತಿ ಯಾಕೆ ಸ್ವೀಕರಿಸಿದರು ಎಂದು ಗೊತ್ತಾಗಿಲ್ಲ ಎಂದು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನಟಿ ರವೀನಾ, 'ಅವರು ತಮ್ಮದೇ ಆದ ಅಜೆಂಡಾ ಹೊಂದಿರುವುದರಿಂದ ಅವರಿಗೆ ಯಾವುದೇ ಪ್ರಮುಖ್ಯತೆ ನೀಡಲು ಬಯಸುವುದಿಲ್ಲ' ಎಂದು ಹೇಳಿದ್ದಾರೆ. 

Raveena Tandon: ನನ್ನ ತೊಡೆಗಳ ಮೇಲೆ ಆ ಸ್ತ್ರೀವಾದಿಗಳ ಕಣ್ಣಿತ್ತು: ಭಯಾನಕ ರಹಸ್ಯ ಬಿಚ್ಚಿಟ್ಟ ನಟಿ

'20 ಫಾಲೋವರ್ಸ್ ಹೊಂದಿರುವ, ನಾನು ಮಾಡಿದ ಕೆಲಸ ನೋಡದ ಕೆಲವರ ಕಾಮೆಂಟ್‌ಗಳು ನನ್ನ ಕೆಲಸವನ್ನು ಕಡಿಮೆ ಮಾಡುವುದಿಲ್ಲ. ಟ್ರೋಲ್ ವಡುವವರು ನನ್ನ ಗ್ಲಾಮರ್ ಅನ್ನು ಮಾತ್ರ ನೋಡುತ್ತಾರೆ. ನಾವು ಮಾಡುವ ಕಠಿಣ ಪರಿಶ್ರಮ ಮತ್ತು ದೀರ್ಘಾವಧಿಯ ಕೆಲಸ ನೋಡಿರುವುದಿಲ್ಲ. ಅನೇಕರು ಶುಭಾಶಯ ತಿಳಿಸಿದ್ದಾರೆ' ಎಂದು ಪ್ರತಿಕ್ರಿಯಿಸಿದರು. ಬಳಿಕ ಮಾತು ಮುಂದುವರೆಸಿ 'ನಾನು ಕಮರ್ಷಿಯಲ್ ಸಿನಿಮಾಗಳನ್ನು ಪ್ರೀತಿಸುತ್ತೇನೆ, ಆದರೆ ಸಮಾಜಕ್ಕೆ ಬದಲಾವಣೆ ತರುವಂತಹ ಪ್ರಾಜೆಕ್ಟ್‌ಗಳನ್ನು ಸಹ ಮಾಡುತ್ತೇನೆ' ಎಂದು ರವೀನಾ ಹೇಳಿದ್ದಾರೆ. 

ನನ್ನ ತಲೆಯಲ್ಲಿ ಇನ್ನೂ ಉಳಿದಿದೆ; ಅಕ್ಷಯ್ ಕುಮಾರ್ ಜೊತೆಗಿನ ನಿಶ್ಚಿತಾರ್ಥ ಮುರಿದ ಬಗ್ಗೆ ಮೌನ ಮುರಿದ ರವೀನಾ ಟಂಡನ್

ಅಮ್ಮನಿಗೆ ಮಗಳ ಹೃದಯಸ್ಪರ್ಶಿ ಪತ್ರ 

ನಟಿ ರವೀನಾ ಮಗಳು ರಾಶಾ ಅಮ್ಮನಿಗೆ ಹೃದಯಸ್ಪರ್ಶಿ ಸಾಲು ಹಂಚಿಕೊಂಡಿದ್ದರು. ಪದ್ಮಶ್ರೀ ಪ್ರಶಸ್ತಿ, ಭಾರತದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿದೆ. ಇದು ನಿಮಗೆ ಎಂಥ ವರ್ಷವಾಗಿದೆ. ನೀವು ಯಾವಾಗಲೂ ಹೇಳುತ್ತಿದ್ದೀರಿ ಇದು ನಿಮ್ಮ ಸಾಧನೆಗೆ ನಿಮ್ಮ ತಂದೆಯೇ ಎಲ್ಲಾ ಅಂತ. ಜೊತೆಗೆ ನಿಮ್ಮ ಶ್ರಮ ಕೂಡ ಇದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನೀವು ಸ್ವೀಕರಿಸುತ್ತಿರುವ ಎಲ್ಲಾ ಯಶಸ್ಸು, ಪ್ರೀತಿ ಮತ್ತು ಗೌರವಕ್ಕೆ ನೀವು ಅರ್ಹರು. ನಮ್ಮ ಅತ್ಯಂತ ಗೌರವಾನ್ವಿತ ಜನರ ಮುಂದೆ ನೀವು ಮತ್ತು ನಿಮ್ಮ ಕೆಲಸವನ್ನು ಗೌರವಿಸುವುದನ್ನು ನೋಡುತ್ತಿರುವ ನಾನು ಹೆಮ್ಮೆಯ ಮಗಳು. ಇದು ನಿಮ್ಮ ಗೆಲುವು ಅಮ್ಮ. ನಿಮ್ಮ ನಮ್ರತೆ, ಅನುಗ್ರಹ ಮತ್ತು ದಯೆ ರಣಬೀರ್ ಮತ್ತು ನಾನು ಕಷ್ಟಪಟ್ಟು ಕೆಲಸ ಮಾಡಲು ಮತ್ತು ನಮ್ಮ ಅತ್ಯುತ್ತಮ ವ್ಯಕ್ತಿಗಳಾಗಿರಲು ಪ್ರೇರೇಪಿಸುತ್ತದೆ. ನೀವು ಮುಂದೆ ಏನು ಮಾಡುತ್ತೀರಿ ಎಂದು ನೋಡಲು ಕಾಯಲು ಸಾಧ್ಯವಿಲ್ಲ' ಎಂದು ಹೇಳಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌
ಐಎಂಡಿಬಿ 2025 ಪಟ್ಟಿಯಲ್ಲಿ ದಾಖಲೆ: ಮೂವರು ಕನ್ನಡದ ತಾರೆಗಳಿಗೆ ಟಾಪ್‌ 10ರಲ್ಲಿ ಸ್ಥಾನ!