Salman Khan: ಕೊನೆಗೂ ಮದ್ವೆಯಾಗ್ತಿದ್ದಾರೆ ಸಲ್ಲು ಭಾಯ್​! ಹೀಗೆ ನೀಡಿದ್ರು ಮದುವೆ ಹಿಂಟ್!​

Published : Apr 08, 2023, 05:17 PM IST
 Salman Khan: ಕೊನೆಗೂ ಮದ್ವೆಯಾಗ್ತಿದ್ದಾರೆ ಸಲ್ಲು ಭಾಯ್​! ಹೀಗೆ ನೀಡಿದ್ರು  ಮದುವೆ ಹಿಂಟ್!​

ಸಾರಾಂಶ

ಬಾಲಿವುಡ್​ನ ಮೋಸ್ಟ್​ ಎಲಿಜಿಬಲ್ ​ಬ್ಯಾಚುಲರ್​ ಎಂದು ಕರೆಸಿಕೊಳ್ಳುತ್ತಿರುವ ನಟ ಸಲ್ಮಾನ್​ ಖಾನ್​ ಪರೋಕ್ಷವಾಗಿ ಮದುವೆಯ ಹಿಂಟ್​ ನೀಡಿದ್ದಾರೆ. ಅವರು ಹೇಳಿದ್ದೇನು?   

ಬಾಲಿವುಡ್​​ನಲ್ಲಿ (Bollywood) ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​ ಯಾರು ಎಂದು ಕೇಳಿದರೆ, ಅದಕ್ಕೆ ಬರುವ ಉತ್ತರ ನಟ ಸಲ್ಮಾನ್​ ಖಾನ್​. ವಯಸ್ಸು 57 ದಾಟಿದರೂ ಅವಿವಾಹಿತರಾಗಿಯೇ ಉಳಿದಿರುವ ಸಲ್ಮಾನ್​  ಖಾನ್​ಗೆ ಗರ್ಲ್​ಫ್ರೆಂಡ್ಸ್​ಗಳಿಗೇನೂ ಬರವಿಲ್ಲ. ಕೆಲವೊಂದು ನಟಿಯರು ಇವರ ವಿರುದ್ಧ ಕೂಡ ಮಾತನಾಡಿರುವುದು ಇದೆ. ಹಲವರ ಜೊತೆ ಕಿರಿಕ್​ ಮಾಡಿಕೊಂಡು ದೂರವಾಗಿದ್ದರೆ, ಕೆಲವು ನಟಿಯರ ಜೊತೆ ಗುಪ್ತ ಸಂಬಂಧ ಇಟ್ಟುಕೊಂಡಿರುವ ಬಗ್ಗೆ ಗುಸುಗುಸು ಸುದ್ದಿಗಳೂ ಇವೆ. . ನಟಿಯರಾದ ಐಶ್ವರ್ಯಾ ರೈಯಿಂದ ಹಿಡಿದು ಕತ್ರಿನಾ ಕೈಫ್​​ವರೆಗೆ ಹಲವಾರು ನಟಿಯರು ಸಲ್ಮಾನ್ ಅವರ ಜೀವನದಲ್ಲಿ ಬಂದು ಹೋಗಿದ್ದಾರೆ. ಆದರೆ ಸಲ್ಮಾನ್ ಮಾತ್ರ ಇನ್ನೂ ತಮ್ಮ ಆತ್ಮ ಸಂಗಾತಿಯನ್ನು ಕಂಡುಕೊಂಡಿಲ್ಲ ಅನ್ನೋದೆ ಅಭಿಮಾನಿಗಳಿಗೆ ಪ್ರಶ್ನೆಯಾಗಿ ಉಳಿದಿದೆ.

ಸದ್ಯ  ಸಲ್ಮಾನ್​,   ಕಿಸಿ ಕಾ ಭಾಯ್​ ಕಿಸಿ ಕಿ ಜಾನ್ (Kisi Ka Bhai Kisi Ki jaan) ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಕಿಸಿ ಕಾ ಭಾಯ್​ ಕಿಸಿ ಕಿ ಜಾನ್ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪೂಜಾ ಹೆಗ್ಡೆ ಮತ್ತು ಸಲ್ಮಾನ್ ಖಾನ್ ಇಬ್ಬರೂ ಮೊದಲ ಬಾರಿಗೆ ಒಟ್ಟಿಗೆ ನಟಿಸಿರುವ ಸಿನಿಮಾವಿದು. ಈಗಾಗಲೇ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಅದರಲ್ಲೂ ಸಲ್ಮಾನ್ ಖಾನ್ ತೆರೆಮೇಲೆ ಬರದೆ ವರ್ಷದ ಮೇಲಾಗಿದೆ. ಅತಿಥಿ ಪಾತ್ರಗಳ ಮೂಲಕ ಸಲ್ಮಾನ್ ಖಾನ್  ಅಭಿಮಾನಿಗಳ ಮುಂದೆ ಬಂದಿದ್ದರು. ಹಾಗಾಗಿ ಬ್ಯಾಡ್ ಬಾಯ್ ತೆರೆಮೇಲೆ ಅಬ್ಬರಿಸುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 

ಸಲ್ಮಾನ್​ಗೆ ಜೀವ ಬೆದರಿಕೆ ಮೇಲ್​ ಬಂದಿದ್ದಾದ್ರೂ ಎಲ್ಲಿಂದ? ಕೊನೆಗೂ ಸಿಕ್ತು ಸುಳಿವು!

ಇದರ ನಡುವೆಯೇ ಸಲ್ಮಾನ್ ಮತ್ತು ಪೂಜಾ (Pooja) ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಈಗಾಗಲೇ ವೈರಲ್ ಆಗಿದೆ. ಅದೇನೇ ಇದ್ದರೂ ಈಗ ಖುದ್ದು ಸಲ್ಲು ಭಾಯ್​ ತಾವು ಸಂಬಂಧದಲ್ಲಿರುವ ಬಗ್ಗೆ ಬಹಿರಂಗವಾಗಿ ಆದರೆ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಕಿಸೀ ಕಾಭಾಯ್​ ಪ್ರಮೋಷನ್​ ವೇಳೆ ಪತ್ರಕರ್ತರು ಮಾಮೂಲಿನಂತೆ ಇವರ ಮುಂದೆ ಮದುವೆಯ ಪ್ರಶ್ನೆಯನ್ನು ಇಟ್ಟಿದ್ದಾರೆ.  ‘ಯಾವಾಗ ಮದುವೆಯಾಗುತ್ತೀರಿ’ ಎಂದು ಕೇಳಿದ್ದಾರೆ.
  
ಆದ ಸಲ್ಮಾನ್​ ಖಾನ್​ ನಾಚಿ ನಕ್ಕಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಇಡೀ ದೇಶದ 'ಭಾಯಿಜಾನ್' ಎಂದು ಇದೇ ಕಾರ್ಯಕ್ರಮದಲ್ಲಿ  ಪತ್ರಕರ್ತರೊಬ್ಬರು ತಮಾಷೆಯಾಗಿ ಹೇಳಿದಾಗ, ಸಲ್ಮಾನ್​ ಅಷ್ಟೇ ತಮಾಷೆಯಾಗಿ, ತುಸು ನಾಚುತ್ತಲೇ ಅಲ್ಲಪ್ಪ ಅಲ್ಲ... ನಾನು  ಎಲ್ಲರ ಭಾಯ್ ಅಲ್ಲವೇ ಅಲ್ಲ,  ಸಲ್ಮಾನ್ ಖಾನ್ ಕೆಲವರ ಜಾನ್​ ಕೂಡ. ಅದರಲ್ಲಿಯೂ  ಒಬ್ಬರ ಜಾನ್​ (Jaan) ಅವರ ಭಾಯಿ ಅಲ್ಲ ಎಂದಿದ್ದಾರೆ. ಇಷ್ಟು ಹೇಳುತ್ತಲೇ  ನೆರೆದಿದ್ದ ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟಿದ್ದು, ಅದರ ವಿಡಿಯೋ ಈಗ ವೈರಲ್​ ಆಗಿದೆ.

ಬಹುನಿರೀಕ್ಷೆಯ ಕಿಸಿ ಕಾ ಭಾಯ್​ ಕಿಸಿ ಕಿ ಜಾನ್ ಸಿನಿಮಾ ಏಪ್ರಿಲ್ 21ರಂದು ರಿಲೀಸ್ ಆಗುತ್ತಿದೆ. ಈಗಾಗಲೇ ಸಿನಿಮಾತಂಡ ಪ್ರಮೋಷನ್ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದೆ. ಸಲ್ಮಾನ್ ಖಾನ್ ಸಿನಿಮಾ ರಿಲೀಸ್ ಆಗದೆ ವರ್ಷದ ಮೇಲಾಗಿದೆ. ಕೊನೆಯದಾಗಿ ಪಠಾಣ್ (Pathaan) ಸಿನಿಮಾದ ಅತಿಥಿ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಕಿಸಿ ಕಾ ಭಾಯ್​ ಕಿಸಿ ಕಿ ಜಾನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.  ಸಲ್ಮಾನ್ ಖಾನ್ ನಿರ್ಮಾಣದ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಚಿತ್ರವನ್ನು ಫರ್ಹಾದ್ ಸಾಮ್ಜಿ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಜೊತೆಗೆ ತೆಲುಗು ನಟ ವೆಂಕಟೇಶ್ ದಗ್ಗುಬಾಟಿ, ನಟಿ ಪೂಜಾ ಹೆಗ್ಡೆ, ಜಗಪತಿ ಬಾಬು ಮತ್ತು ಭೂಮಿಕಾ ಚಾವ್ಲಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿ ಕೊಳ್ಳಲಿದ್ದಾರೆ. ಈ ಚಿತ್ರವು ಇದೇ ಏಪ್ರಿಲ್ 21, 2023 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆಯಂತೆ.

Salman Khan: ಪತ್ರಕರ್ತ ದಾಖಲಿಸಿದ್ದ ಕ್ರಿಮಿನಲ್ ಕೇಸ್​ನಿಂದ ಸಲ್ಲುಗೆ ಮುಕ್ತಿ

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಐಎಂಡಿಬಿ 2025 ಪಟ್ಟಿಯಲ್ಲಿ ದಾಖಲೆ: ಮೂವರು ಕನ್ನಡದ ತಾರೆಗಳಿಗೆ ಟಾಪ್‌ 10ರಲ್ಲಿ ಸ್ಥಾನ!
ಟಾಕ್ಸಿಕ್‌ನಿಂದ ಅನಿರುದ್ಧ್ ರವಿಚಂದರ್ ಔಟ್‌.. ಕನ್ನಡಿಗನಿಗೆ ಆ ಅವಕಾಶ ಕೊಟ್ಟ ರಾಕಿಂಗ್ ಸ್ಟಾರ್ ಯಶ್!