ಲಕ್ಷದ್ವೀಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಬೆನ್ನಲ್ಲೇ ಉಡುಪಿ ಬೀಚ್ಗೂ ಶುಕ್ರದೆಸೆ ಬಂದಿದೆ. ಅಷ್ಟಕ್ಕೂ ಆಗಿದ್ದೇನು?
ಭಾರತವನ್ನು ಎದುರು ಹಾಕಿಕೊಂಡ ಮಾಲ್ಡೀವ್ಸ್ಗೆ ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ಭಾರತದ ಮೇಲೆ ಪ್ರೀತಿ ಇರುವವರೆಲ್ಲರೂ ಮಾಸ್ಟರ್ಸ್ಟ್ರೋಕ್ ಕೊಡುತ್ತಲೇ ಇದ್ದಾರೆ. ಭಾರತೀಯರ ಪ್ರವಾಸೋದ್ಯಮದಿಂದಲೇ ಸಮೃದ್ಧಭರಿತವಾಗಿದ್ದ ಮಾಲ್ಡೀವ್ಸ್ ಇದೀಗ ಜರ್ಜರಿತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಲಕ್ಷದ್ವೀಪಕ್ಕೆ ಭೇಟಿ ಕೊಟ್ಟ ಫೋಟೋಗಳು ಇಡೀ ವಿಶ್ವಾದ್ಯಂತ ಹಲ್ಚಲ್ ಸೃಷ್ಟಿಸುತ್ತಿದೆ. ಭಾರತದಲ್ಲಿನ ಕೆಲವರು ಪ್ರಧಾನಿಯವರ ಈ ಭೇಟಿಯ ಉದ್ದೇಶ ತಿಳಿದುಕೊಳ್ಳದೇ ಟ್ರೋಲ್ ಮಾಡುತ್ತಿದ್ದರೆ, ನರೇಂದ್ರ ಮೋದಿಯವರ ವಿರುದ್ಧ ಟ್ರೋಲ್ ಮಾಡಿದ್ದ ಮಾಲ್ಡೀವ್ಸ್ ಅಲ್ಲಿಯ ಸಚಿವರಾದ ಮರಿಯಮ್ ಶಿಯುನಾ, ಮಲ್ಶಾ ಮತ್ತು ಹಸನ್ ಜಿಹಾನ್ ಅವರನ್ನು ಮಾಲ್ಡೀವ್ಸ್ ಸರ್ಕಾರ ಅಮಾನತುಗೊಳಿಸಿದೆ.
ಅದೇ ಇನ್ನೊಂದೆಡೆ, ಲಕ್ಷದ್ವೀಪಕ್ಕೆ ಶುಕ್ರದೆಸೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯಿಂದ ಲಕ್ಷದ್ವೀಪದಲ್ಲಿ ಹೂಡಿಕೆ ಮಾಡಲು ಹಲವರು ಉತ್ಸುಕರಾಗಿದ್ದಾರೆ. ಬೈಕಾಟ್ ಮಾಲ್ಡೀವ್ಸ್ ಟ್ರೆಂಡ್ ಶುರು ಆಗುವುದರ ಜೊತೆಗೆ ಇತ್ತ ವೆಲ್ಕಮ್ ಟು ಲಕ್ಷದ್ವೀಪ್ ಹ್ಯಾಷ್ಟ್ಯಾಗ್ ಕೂಡ ಶುರುವಾಗಿದೆ. ಲಕ್ಷದ್ವೀಪದಲ್ಲಿ ವಿಮಾನ ನಿಲ್ದಾಣವೂ ಆಗಲಿದೆ ಎಂದು ಇದಾಗಲೇ ಘೋಷಿಸಲಾಗಿದೆ. ಹೀಗೆ ಲಕ್ಷದ್ವೀಪಕ್ಕೆ ಶುಕ್ರದೆಸೆ ಬರುತ್ತಲೇ ಭಾರತದಲ್ಲಿ ಕಡೆಗಣಿಸಲ್ಪಟ್ಟಿರುವ ಅತ್ಯಂತ ಸುಂದರ ತಾಣಗಳು ಮತ್ತೆ ಮುನ್ನೆಲೆಗೆ ಬರುತ್ತಿವೆ. ಅದರ ಜೊತೆಗೆ ಉಡುಪಿಯ ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತಿದೆ.
ಲಕ್ಷದ್ವೀಪಕ್ಕೆ ಸ್ವಾಗತ: ಇರುವೆ ಬಿಟ್ಕೊಂಡ ಮಾಲ್ಡೀವ್ಸ್ಗೆ ಮುಟ್ಟುನೋಡಿಕೊಳ್ಳೋ ಪಾಠ ಕಲಿಸಿದ ಬಾಲಿವುಡ್!
ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮಾಡಿರುವ ಟ್ವೀಟ್ ಸಾಕಷ್ಟು ವೈರಲ್ ಆಗಿದ್ದು, ಅದಕ್ಕೆ ಬಾಲಿವುಡ್ ಬಿಗ್-ಬಿ ಅಮಿತಾಭ್ ಬಚ್ಚನ್ ರಿಪ್ಲೈ ಮಾಡುವುದರ ಜೊತೆಗೆ ಉಡುಪಿ ಬೀಚ್ನ ಹೆಸರೂ ಮುನ್ನೆಲೆಗೆ ಬಂದಿದೆ. ಉಡುಪಿ, ಪಾಂಡಿಚೆರಿ, ಅಂಡಮಾನ್ ಮುಂತಾದ ಬೀಚ್ಗಳು ಸುಂದರವಾಗಿವೆ. ಭಾರತದಲ್ಲಿ ಇಂಥ ಅನೇಕ ಪ್ರೇಕ್ಷಣೀಯ ಸ್ಥಳಗಳು ಇವೆ. ಇವುಗಳಿಗೆ ಮೂಲ ಸೌಕರ್ಯ ಕಲ್ಪಿಸಿ, ಪ್ರವಾಸೋದ್ಯಮ ವೃದ್ಧಿಸಬೇಕು. ನಿಮಗೆ ತಿಳಿದಿರುವ ಇಂತಹ ಸ್ಥಳಗಳ ಬಗ್ಗೆ ಹೇಳಿ ಎಂದು ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಅವರು ಉಡುಪಿಯ ಬಗ್ಗೆಯೂ ಹಾಡಿ ಹೊಗಳಿದ್ದಾರೆ.
ಇದಕ್ಕೆ ರಿಪ್ಲೈ ಮಾಡಿರುವ ಅಮಿತಾಭ್ ಬಚ್ಚನ್, ನೀವು ಹೇಳುತ್ತಿರುವುದು ಸರಿಯಾಗಿದೆ. ಇದು ಸೂಕ್ತ ಸಮಯ. ನಮ್ಮ ಸ್ಥಳಗಳೇ ಅತ್ಯುತ್ತಮವಾಗಿವೆ. ನಾನು ಅಂಡಮಾನ್ ಮತ್ತು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದೇನೆ. ಅವು ತುಂಬ ಸುಂದರವಾದ ಸ್ಥಳಗಳು. ಅಲ್ಲಿನ ಅಂಡರ್ವಾಟರ್ ಅನುಭವ ತುಂಬ ಚೆನ್ನಾಗಿದೆ ಎಂದಿದ್ದಾರೆ. ಈ ಟ್ವೀಟ್ ವೈರಲ್ ಆಗುತ್ತಲೇ ಸೋಷಿಯಲ್ ಮೀಡಿಯಾಗಳಲ್ಲಿ ಉಡುಪಿಯ ಬಗ್ಗೆಯೂ ಹುಡುಕಾಟ ಜೋರಾಗಿದೆ. ಉಡುಪಿಯ ಬಗ್ಗೆ ಅರಿವಿಲ್ಲದ ಹೊರ ರಾಜ್ಯಗಳವರು ಇಲ್ಲಿಯ ಬೀಚ್ ಬಗ್ಗೆ ಸರ್ಚ್ ಮಾಡುತ್ತಿದ್ದಾರೆ. ಅದೇ ಇನ್ನೊಂದೆಡೆ, ಅಕ್ಷಯ್ ಕುಮಾರ್ ಕಂಗನಾ ರಣಾವತ್, ಸಚಿನ್ ತೆಂಡೂಲ್ಕರ್, ಸುರೇಶ್ ರೈನಾ, ಇರ್ಫಾನ್ ಪಠಾಣ್ ಸೇರಿದಂತೆ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ಲಕ್ಷದ್ವೀಪಕ್ಕೆ ವೆಲ್ಕಮ್ ಟ್ರೆಂಡ್ ಶುರು ಮಾಡಿದ್ದಾರೆ.
ಶ್ರೀರಾಮನ ಅವಹೇಳನ, ಲವ್ ಜಿಹಾದ್ಗೆ ಪ್ರೇರಣೆ: ಅನ್ನಪೂರ್ಣಿ, ನಯನತಾರಾ ವಿರುದ್ಧ ಎಫ್ಐಆರ್ ದಾಖಲು
Viru paji .. this is so relevant and in the right spirit of our land .. our own are the very best .. I have been to Lakshadweep and Andamans and they are such astonishingly beautiful locations .. stunning waters beaches and the underwater experience is simply unbelievable ..
हम… https://t.co/NM400eJAbm