ಕ್ರಿಕೆಟ್ ದಂತಕಥೆ ಕಪಿಲ್ ದೇವ್ ನೇತೃತ್ವದಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಸಮಯವನ್ನು ಕ್ರಿಕೆಟ್ ಪ್ರೇಮಿಗಳು ಯಾರೂ ಮರೆಯುವುದಿಲ್ಲ. ಆ ಸಮಯದ ಕ್ರಿಕೆಟ್ ಆಟ, ಕಪಿಲ್ ದೇವ್ ಅನುಭವ, ತಂಡದ ರೀತಿ-ನೀತಿಗಳನ್ನು ಚಿತ್ರದಲ್ಲಿ ಅದ್ಭುತವಾಗಿ ತೆರೆಗೆ ತರಲಾಗಿದೆ. ಈ ಕಾರ್ಯದ ಹಿಂದಿರುವುದು ಕಪಿಲ್ ದೇವ್ ಮಗಳು ಅಮಿಯಾ ದೇವ್ ಎನ್ನುವುದು ವಿಶೇಷ.
ಡಾಕ್ಟರ್ ಮಕ್ಕಳು ವೈದ್ಯಕೀಯ ಶಿಕ್ಷಣವನ್ನೇ ಓದುವುದು, ಇಂಜಿನಿಯರ್ ಮಕ್ಕಳು ಇಂಜಿನಿಯರ್ ಆಗುವುದು ಸಾಮಾನ್ಯ. ಹಾಗೆಯೇ, ಸಂಗೀತಗಾರರ ಮಕ್ಕಳು ಸಂಗೀತದ ಹಾದಿಯಲ್ಲಿ ಮುನ್ನಡೆಯುವುದು ಸಹ ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ, ಇದೇ ಮಾತನ್ನು ಕ್ರೀಡಾಪಟುಗಳ ವಿಚಾರದಲ್ಲಿ ಹೇಳಲು ಸಾಧ್ಯವಿಲ್ಲ. ಖ್ಯಾತ ಖ್ಯಾತ ಕ್ರೀಡಾಪಟುಗಳ ಮಕ್ಕಳು ಕ್ರೀಡೆಯಲ್ಲದೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಕೆರಿಯರ್ ಕಂಡುಕೊಳ್ಳುವುದು ಹೆಚ್ಚು. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹಾಗೂ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಜೋಡಿಯೊಂದೇ ಒಬ್ಬರೇ ಪ್ರಸ್ತುತ ಕಾಣಸಿಗುತ್ತಿರುವ ಪ್ರಮುಖ ತಂದೆ-ಮಕ್ಕಳ ಜೋಡಿ. ಕ್ರಿಕೆಟ್ ವಲಯದಲ್ಲೇ ತೆಗೆದುಕೊಂಡರೆ, ಕ್ರಿಕೆಟ್ ಕ್ರೀಡೆಯ ಲೆಜೆಂಡ್ ಕಪಿಲ್ ದೇವ್ ಅವರಿಗೆ ಮಗಳು ಏನು ಮಾಡುತ್ತಿದ್ದಾರೆ ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಆಕೆ ಬಾಲಿವುಡ್ ನಿರ್ದೇಶಕಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರೆ ಅಚ್ಚರಿಯಾಗಬಹುದು.
ಅಮಿಯಾ ದೇವ್ (Amiya Dev0. ಖ್ಯಾತ ಕ್ರಿಕೆಟ್ ಆಟಗಾರ (Cricket Player) ಕಪಿಲ್ ದೇವ್ (Kapil Dev) ಮಗಳು. 27 ವರ್ಷದ ಅಮಿಯಾ ದೇವ್ ಬಾಲಿವುಡ್ ಗೆ ಕಾಲಿಟ್ಟಿದ್ದು ವಿಶಿಷ್ಟ ಸಿನಿಮಾವೊಂದರ ಮೂಲಕ. 1983ರಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ (England) ನೆಲದಲ್ಲಿ ವಿಶ್ವಕಪ್ (World Cup) ಗೆದ್ದು ಮಾಡಿದ್ದ ಸಾಧನೆಯನ್ನು ಬಿಂಬಿಸುವ ಚಿತ್ರವಾಗಿ ಮೂಡಿ ಬಂದಿದ್ದು “83’. ಈ ಚಿತ್ರದ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದು ಇದೇ ಅಮಿಯಾ ದೇವ್.
ರಿಲೈನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಓರಿ; 6 ವರ್ಷಗಳಿಂದ ಮುಚ್ಚಿಟ್ಟಿರುವ ಗುಟ್ಟು ರಟ್ಟು!
ತಂದೆಯ ಚಿತ್ರ ತೆಗೆದ ಮಗಳು
ಕಪಿಲ್ ದೇವ್ ನಾಯಕತ್ವದ ಭಾರತ ಕ್ರಿಕೆಟ್ ತಂಡ 1983ರಲ್ಲಿ ವಿಶ್ವಕಪ್ ಕ್ರಿಕೆಟ್ ನಲ್ಲಿ ತನ್ನ ಛಾಪು ಮೂಡಿಸಿತ್ತು. ಕಪ್ (Cup) ಗೆದ್ದು ಭಾರತೀಯರ ಕುರಿತು ಅವಹೇಳನ ಮಾಡುತ್ತಿದ್ದ ವಿದೇಶಿ ಜನರಿಗೆ ದಿಟ್ಟವಾದ ಉತ್ತರ ನೀಡಿತ್ತು. ಈ ಸಾಧನೆಗೂ ಮುನ್ನ ಭಾರತದ ಕ್ರಿಕೆಟ್ ತಂಡ (Team) ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಲ್ಲದೆ, ಇಂಗ್ಲಿಷ್ ನೆಲದಲ್ಲಿ ಹಲವು ರೀತಿಯ ಅವಮಾನ (Humiliation) ಎದುರಿಸಿತ್ತು. ಅಷ್ಟೇ ಅಲ್ಲ, ಕ್ರಿಕೆಟ್ ಕುರಿತು ಭಾರತೀಯರಿಗೆ (Indians) ಅಂತಹ ಅರಿವೂ ಇರಲಿಲ್ಲ. ತಂಡದೊಳಗೆ ವಿಭಿನ್ನ ಮನಸ್ಥಿತಿ ಇತ್ತು. ಅಂದಿನ ಅನುಭವಗಳನ್ನು ಕಪಿಲ್ ದೇವ್ ಅವರಷ್ಟು ಉತ್ತಮವಾಗಿ ಬೇರೆ ಯಾರೂ ಸಹ ವಿವರಿಸಲು ಸಾಧ್ಯವಿಲ್ಲ. ಈ ಅನುಭವಗಳನ್ನೇ ಆಧರಿಸಿ “83’ ಚಿತ್ರವನ್ನು ನಿರ್ಮಾಣ (Production) ಮಾಡಲಾಗಿದ್ದು, ಯಾರಿಗೂ ಗೊತ್ತಿರದ ಹಲವು ಸಂಗತಿಗಳನ್ನು ಇದರಲ್ಲಿ ತಿಳಿಸಲಾಗಿದೆ. ಕೆಲವು ಕುತೂಹಲಕರ ವಿಚಾರಗಳನ್ನು ಹೇಳಲಾಗಿದೆ. ಈ ಚಿತ್ರದಲ್ಲಿ ಅಂದಿನ ಕ್ರಿಕೆಟ್ ಆಟವನ್ನು ತೋರಿಸುವ ಮೂಲಕ ತಾಂತ್ರಿಕವಾಗಿಯೂ ಉತ್ತಮ ಕೆಲಸ ಮಾಡಲಾಗಿದೆ. ಇದರ ಹಿಂದಿರುವುದು ಕಪಿಲ್ ದೇವ್ ಮಗಳು (Daughter) ಅಮಿಯಾ ದೇವ್ ಎನ್ನುವುದು ಕಪಿಲ್ ದೇವ್ ಅಭಿಮಾನಿಗಳಿಗೆ ಸಂತಸ ನೀಡುವ ಸಂಗತಿ.
ಜಾನ್ವಿ ಕಪೂರ್ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡ ಸಾರಾ ತೆಂಡೂಲ್ಕರ್: ನೆಟ್ಟಿಗರ ಪ್ರತಿಕ್ರಿಯೆ ನೋಡಿ
2019ರ ಬ್ಲಾಕ್ ಬಸ್ಟರ್ ಚಿತ್ರ “83’. ತಂದೆಯ ಕ್ರಿಕೆಟ್ ವಿಜಯವನ್ನು (Triumph) ತೆರೆಗೆ ತರುವುದೆಂದರೆ ಯಾರಿಗಾದರೂ ಖುಷಿ ಕೊಡುವ ವಿಚಾರವೇ ಆಗಿರುತ್ತದೆ. ಈ ಚಿತ್ರದಲ್ಲಿ ಅಮಿಯಾ ದೇವ್ ಸಹಾಯಕ ನಿರ್ದೇಶಕಿಯಾಗಿ (Assistant Director) ಕೆಲಸ ಮಾಡಿದ್ದಾರೆ. ಕಪಿಲ್ ದೇವ್ ಅವರ ಕ್ರಿಕೆಟ್ ಜೀವನ, ಅವರು ಎದುರಿಸಿದ ಸವಾಲುಗಳು, ಲಂಡನ್ನಿನ ಲಾರ್ಡ್ಸ್ ಕ್ರೀಡಾಂಗಣ, ಐತಿಹಾಸಿಕ ವಿಜಯದ ಸಮಯದಲ್ಲಿ ದೇಶದಲ್ಲಿದ್ದ ವಾತಾವರಣಗಳನ್ನು ಚಿತ್ರದಲ್ಲಿ ಮನಮುಟ್ಟುವಂತೆ ವಿವರಿಸಲಾಗಿದೆ. ದೊಡ್ಡ ತೆರೆಗೆ ಈ ಅನುಭವಗಳನ್ನು (Experience) ಅತ್ಯಂತ ಯಶಸ್ವಿಯಾಗಿ ತರಲಾಗಿದೆ.
ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಅಭಿನಯಿಸಿರುವ ಈ ಚಿತ್ರದಲ್ಲಿ ಅಮಿಯಾ ದೇವ್ ನಿರ್ವಹಿಸಿರುವ ಪಾತ್ರ ಮೆಚ್ಚುಗೆಗೂ ಒಳಗಾಗಿದೆ. ಬಾಲಿವುಡ್ (Bollywood) ನಲ್ಲಿ ಅವರೀಗ ತಮ್ಮದೇ ಹಾದಿಯಲ್ಲಿ ಸಾಗುತ್ತಿದ್ದಾರೆ.