ರಣವೀರ್ ಕಪೂರ್ ಅಮ್ಮ, ನಟಿ ನೀತು ಕಪೂರ್ ಚಿಕ್ಕಪ್ಪನನ್ನೇ ಪ್ರೀತಿಸುತ್ತಿದ್ದರಂತೆ. ಈ ಕುತೂಹಲವ ವಿಷಯವನ್ನು ಅವರು ರಿವೀಲ್ ಮಾಡಿದ್ದಾರೆ. ನಟಿ ಹೇಳಿದ್ದೇನು?
ಕಾಫಿ ವಿತ್ ಕರಣ್ ಸೀಸನ್ 8 ಚರ್ಚೆಯಲ್ಲಿದೆ. ಈ ಷೋನಲ್ಲಿ ಇದಾಗಲೇ ಅನೇಕ ಮಂದಿ ಸೆಲೆಬ್ರಿಟಿಗಳು ಆಗಮಿಸಿದ್ದಾರೆ. ಸದಾ ಕಾಂಟ್ರವರ್ಸಿಗಳಿಂದಲೇ ಈ ಷೋ ಫೇಮಸ್. ಇಲ್ಲಿ ಬಂದಿರುವ ನಟ-ನಟಿಯರು ತೀರಾ ವೈಯಕ್ತಿಯ ಎನಿಸುವಂಥ ವಿಷಯಗಳನ್ನು ಶೇರ್ ಮಾಡಿಕೊಂಡಿದ್ದು ಇದೆ. ಇನ್ನು ಕೆಲವರಿಗೆ ಕರಣ್ ಉಲ್ಟಾ ಪಲ್ಟಾ ಪ್ರಶ್ನೆ ಕೇಳಿ ಬಾಯಿ ಬಿಡಿಸಿದ್ದೂ ಆಗಿದೆ. ಹೆಚ್ಚಾಗಿ ಸೆಕ್ಸ್, ಅಶ್ಲೀಲ ವಿಷಯಗಳನ್ನೇ ಕರಣ್ ಜೋಹರ್ ಕೇಳುತ್ತಾರೆ ಎನ್ನುವ ಆರೋಪಗಳೂ ಸಾಕಷ್ಟು ಇವೆ. ಇವೆಲ್ಲವುಗಳ ನಡುವೆಯೇ ಈಗ ಇನ್ನೊಂದು ಪ್ರೊಮೋ ರಿಲೀಸ್ ಆಗಿದೆ.
ಬರುವ ಜನವರಿ 11 ರಂದು ಸ್ಟ್ರೀಮ್ ಆಗಲಿರುವ ಸಂಚಿಕೆಯ ಪ್ರೊಮೋ ಇದಾಗಿದೆ. ಈ ಬಾರಿ ಲೆಜೆಂಡ್ ನಟಿಯರಾದ ಜೀನತ್ ಅಮನ್ ಮತ್ತು ನೀತು ಕಪೂರ್ ಅವರು ಕರಣ್ ಜೋಹರ್ ಅವರ ಕಾರ್ಯಕ್ರಮದ ಭಾಗವಾಗಲಿದ್ದಾರೆ. ಕಾರ್ಯಕ್ರಮದ ಹೊಸ ಪ್ರೋಮೋ ಕೂಡ ಬಿಡುಗಡೆಯಾಗಿದೆ. ಪ್ರೋಮೋ ಸಾಕಷ್ಟು ತಮಾಷೆಯಾಗಿದೆ. ಪ್ರೋಮೋದಲ್ಲಿ ಜೀನತ್ ಮತ್ತು ನೀತು ಅವರ ವಿಶೇಷ ಬಾಂಧವ್ಯವೂ ಕಂಡುಬರುತ್ತದೆ. ಈ ಕಾರ್ಯಕ್ರಮದಲ್ಲಿ ನಟಿಯರು ತಮ್ಮ ಜೀವನಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಬಹಿರಂಗಪಡಿಸಲಿದ್ದಾರೆ.
ಶ್ರೀರಾಮನ ಅವಹೇಳನ, ಲವ್ ಜಿಹಾದ್ಗೆ ಪ್ರೇರಣೆ: ಅನ್ನಪೂರ್ಣಿ, ನಯನತಾರಾ ವಿರುದ್ಧ ಎಫ್ಐಆರ್ ದಾಖಲು
ನೀತು ಕಪೂರ್‌ಗೆ ಬಾಲಿವುಡ್‌ನಲ್ಲಿನ ಕ್ರಷನ್ ಬಗ್ಗೆ ಕರಣ್ ಜೋಹರ್ ಪ್ರಶ್ನಿಸಿದ್ದಾರೆ. ಅಂದಹಾಗೆ, ಒಂದು ಕಾಲದಲ್ಲಿ ಬಾಲಿವುಡ್ ಆಳಿದ, ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ನೀತು ಕಪೂರ್ ಅವರು ದಿವಂಗತ ನಟ ರಿಷಿ ಕಪೂರ್ ಅವರ ಪತ್ನಿ. ಅವರಿಗೆ ಈಗ 65 ವರ್ಷ ವಯಸ್ಸು. ರಿಷಿ ಕಪೂರ್ ಅವರನ್ನು ಮದುವೆಯಾಗುವ ಮುನ್ನ ಇವರು ನೀತು ಸಿಂಗ್ ಎಂದೇ ಭಾರಿ ಖ್ಯಾತಿ ಪಡೆದವರು. ಅಮಿತಾಭ್ ಬಚ್ಚನ್ ಜೊತೆಯಾಗಿ ನಟಿಸಿದ ಹಲವು ಚಿತ್ರಗಳು ಬ್ಲಾಕ್ಬಸ್ಟರ್ ಎಂದು ಸಾಬೀತಾಗಿದೆ. ಇವರು 1980ರಲ್ಲಿ ಆ ಕಾಲದ ಖ್ಯಾತ ಬಾಲಿವುಡ್ ಸ್ಟಾರ್ ರಿಷಿ ಕಪೂರ್ ಅವರನ್ನು ವಿವಾಹವಾದರು. ಇವರಿಬ್ಬರೂ ಜೊತೆಯಾಗಿ ನಟಿಸಿದ್ದ ರೊಮ್ಯಾಂಟಿಕ್ ಚಿತ್ರಗಳಾದ ರಫೂ ಚಕ್ಕರ್ (1975) ಮತ್ತು ಖೇಲ್ ಖೇಲ್ ಮೇ (1975) ಹಾಗೂ ಆ ನಂತರದ ಚಿತ್ರಗಳಿಂದ ಹತ್ತಿರವಾಗಿ ಪ್ರೀತಿಸಿ ಮದುವೆಯಾದವರು. ಅಂದಹಾಗೆ ನೀತು ಕಪೂರ್ ಅವರು, ನಟ ರಣವೀರ್ ಕಪೂರ್ ಅಂದರೆ ಆಲಿಯಾ ಭಟ್ ಪತಿಯ ಅಮ್ಮ. ಇವರಿಗೆ ಇನ್ನೋರ್ವ ಪುತ್ರಿ ಇದ್ದು, ಅವರ ಹೆಸರು ರಿಧಿಮಾ ಕಪೂರ್. ಅಂದರೆ ನೀತು ಅವರು ಆಲಿಯಾ ಭಟ್ ಅತ್ತೆ.
ಇದೀಗ ತಮ್ಮ ಕ್ರಷ್ ಕುರಿತು ನೀತು ಕಪೂರ್ ಮಾತನಾಡಿದ್ದಾರೆ. ಇವರು ಮತ್ತು ರಿಷಿ ಕಪೂರ್ ಪ್ರೀತಿಸಿ ವಿವಾಹವಾಗಿದ್ದರೂ, ನೀತು ಅವರ ಕ್ರಷ್ ಇದ್ದುದು ಆಗಿನ ಕಾಲದ ಇನ್ನೋರ್ವ ಸೂಪರ್ ಸ್ಟಾರ್ ಶಶಿ ಕಪೂರ್ ಅವರಾಗಿದ್ದರಂತೆ. ಅವರನ್ನು ತಾವು ತುಂಬಾ ಪ್ರೀತಿಸುತ್ತಿದ್ದುದಾಗಿ ನೀತು ಹೇಳಿಕೊಂಡಿದ್ದಾರೆ. ನಿಮಗೆ ಬೇರೆ ಯಾರ ಮೇಲಾದರೂ ಕ್ರಷ್ ಇತ್ತೇ ಎನ್ನುವ ಪ್ರಶ್ನೆಗೆ ನೀತು ಅವರು ಶಶಿ ಕಪೂರ್ ಹೆಸರು ಹೇಳಿದರು. ಇದನ್ನು ಕೇಳಿ ಶಾಕ್ ಆದ ಕರಣ್ ಜೋಹರ್ ಅಂದರೆ ಅಂಕಲ್ ಮೇಲಾ ಎಂದು ಕೇಳಿದರು. ಅದಕ್ಕೆ ನಟಿ ಹೌದು ಎಂದು ಹೇಳಿದರು. ಕರಣ್ ಅವರು ಶಾಕ್ ಆಗಲು ಒಂದು ಕಾರಣವೂ ಇದೆ. ಅದೇನೆಂದರೆ, ನೀತು ಕಪೂರ್ ಸಂಬಂಧದಲ್ಲಿ ಶಶಿ ಕಪೂರ್ ಚಿಕ್ಕಪ್ಪ ಮತ್ತು ಮಾವ ಇದ್ದಂತೆ. ರಾಜ್ ಕಪೂರ್ ಮತ್ತು ಶಶಿ ಕಪೂರ್ ಸಹೋದರರು.
ಸಂದರ್ಶನದ ನಡುವೆಯೇ ದೀಪಿಕಾಗೆ ಲಿಪ್ಲಾಕ್ ಮಾಡಿದ ರಣವೀರ್ ಸಿಂಗ್! ಡಿವೋರ್ಸ್ ಸುದ್ದಿ ಮತ್ತೆ ಮುನ್ನೆಲೆಗೆ
ಇದರ ಪ್ರಮೋದಲ್ಲಿ ನಟಿ ಜಿನತ್ ಅಮಾನ್ ಕೂಡ ಹಲವಾರು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. 70 ರಿಂದ 90ರ ದಶಕದಲ್ಲಿ ಬಾಲಿವುಡ್ ಆಳಿದ ನಟಿಯರಲ್ಲಿ ಒಬ್ಬರು ಜೀನತ್ ಅಮಾನ್ (Zeenat Aman). ತಮ್ಮ ಸೆಕ್ಸಿ ಲಿಕ್ ಹಾಗೂ ಅಮಲೇರಿದ ಕಣ್ಣುಗಳಿಂದಲೇ ಪಡ್ಡೆ ಹುಡುಗರ ಹೃದಯ ಕದ್ದ ನಟಿ ಇವರು. ಆ ಕಾಲದಲ್ಲಿಯೇ ಅತ್ಯಂತ ಬೋಲ್ಡ್ ಆಗಿ ನಟಿಸಿ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದ ನಟಿ ಇವರು. 1971ರಲ್ಲಿ ಬಿಡುಗಡೆಯಾಗಿದ್ದ ಹರೇ ಕೃಷ್ಣ ಹರೇ ರಾಮ್ ಚಿತ್ರದಲ್ಲಿನ ದಮ್ಮೊರೆ ದಂ... ಹಾಡಂತೂ ಕೆಲ ದಶಕಗಳವರೆಗೆ ಎಲ್ಲರ ಬಾಯಲ್ಲೂ ನಲಿದಾಡಿತ್ತು. ತಮ್ಮ ಮಾದಕ ನೋಟ, ನೃತ್ಯದಿಂದ ಜೀನತ್ ಹಲವರ ಹೃದಯ ಗೆದ್ದಿದ್ದರು.