ಅನುಷ್ಕಾ- ವಿರಾಟ್‌ ದಾಂಪತ್ಯದಲ್ಲಿ ಬಿರುಕು? ಕೊಹ್ಲಿ ಭಾವನಾತ್ಮಕ ಪೋಸ್ಟ್‌ಗೆ ಫ್ಯಾನ್ಸ್ ಶಾಕ್‌!

Published : Nov 23, 2024, 12:25 PM IST
ಅನುಷ್ಕಾ- ವಿರಾಟ್‌ ದಾಂಪತ್ಯದಲ್ಲಿ ಬಿರುಕು?  ಕೊಹ್ಲಿ ಭಾವನಾತ್ಮಕ ಪೋಸ್ಟ್‌ಗೆ ಫ್ಯಾನ್ಸ್ ಶಾಕ್‌!

ಸಾರಾಂಶ

ಅನುಷ್ಕಾ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ದಾಂಪತ್ಯದಲ್ಲಿ ಬಿರುಕು ಉಂಟಾಯ್ತಾ? ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ  ಕೊಹ್ಲಿ ಭಾವನಾತ್ಮಕ ಪೋಸ್ಟ್‌!   

'ಹಿಂತಿರುಗಿ ನೋಡಿದರೆ ನಾವು ಯಾವಾಗಲೂ ಸ್ವಲ್ಪ ಭಿನ್ನವಾಗಿರುತ್ತೇವೆ ಎನ್ನಿಸದೇ ಇರಲಾರದು. ನಾವು ಹಲವು ವರ್ಷಗಳಲ್ಲಿ ಸಾಕಷ್ಟು ಬದಲಾಗಿದ್ದೇವೆ. ಆದರೆ, ಯಾವಾಗಲೂ ನಮ್ಮ ರೀತಿಯಲ್ಲಿ ನಾವು ಕೆಲಸ ಮುಂದುವರೆಸಿಕೊಂಡು ಹೋಗಿದ್ದೇವೆ. ಹೀಗಾಗಿ ಕೆಲವರು ನಮ್ಮನ್ನು ಕ್ರೇಜಿ ಎಂದೂ ಕರೆಯುತ್ತಿದ್ದಾರೆ.  ಆದರೆ ಇತರರಿಗೆ ಅದು ಅರ್ಥ ಆಗುತ್ತಿಲ್ಲ.  ಹಿಂದಿರುಗಿ ನೋಡಿದಾಗ ಸದಾ ನಮ್ಮನ್ನು ನಾವು ಕಂಡುಕೊಳ್ಳುವುದಲ್ಲಿ  ನಿರತರಾಗಿರುವುದು ಕಂಡು ಬರುತ್ತದೆ.  ನಂತರ ವರ್ಷಗಳ ಏರಿಳಿತಗಳು ಮತ್ತು ಕೋವಿಡ್‌ನಂಥ  ರೋಗವು ನಮ್ಮನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ, ಆದರೆ...'

ಇದು  ಟೀಮ್ ಇಂಡಿಯಾ ಸೂಪರ್ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಬರೆದುಕೊಂಡಿರುವ ಪೋಸ್ಟ್‌. ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಪೋಸ್ಟ್‌ ಮಾಡಿದ್ದಾರೆ. ಇದನ್ನು ಓದಿದರೆ ಸಂಬಂಧಗಳ ಬಗ್ಗೆ ಇರುವ ಪೋಸ್ಟ್‌ ಎನ್ನುವುದು ಯಾರಿಗಾದರೂ ಅರ್ಥವಾಗುತ್ತದೆ. ಆದರೆ ಇವರು ಏಕೆ ಹೀಗೆ ಬರೆದರು ಎನ್ನುವ ಚಿಂತೆ ನೆಟ್ಟಿಗರನ್ನು ಅದರಲ್ಲಿಯೂ ಈ ಜೋಡಿಯ ಅಭಿಮಾನಿಗಳ ತಲೆ ತಿನ್ನುತ್ತಿದೆ. ಅನುಷ್ಕಾ ಮತ್ತು ವಿರಾಟ್‌ ಬಾಳಲ್ಲಿ ಬಿರುಕು ಮೂಡಿದೆ ಎಂದೇ ಅರ್ಥೈಸಲಾಗುತ್ತಿದೆ. ಇದೇ ಕಾರಣಕ್ಕೆ, ಈ ಪೋಸ್ಟ್‌ ಶರವೇಗದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಏಳು ವರ್ಷಗಳ ದಾಂಪತ್ಯ ಜೀವನವನ್ನು ಬ್ರೇಕ್‌ ಮಾಡಿತಾ ಜೋಡಿ? ಅವರ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣವೇನು ಎಂಬೆಲ್ಲಾ ಪ್ರಶ್ನೆಗಳ ಸುರಿಮಳೆಯೇ ಆಗುತ್ತಿದೆ. ಮೊನ್ನೆಯಷ್ಟೇ ಮೂರು ದಶಕಗಳ ದಾಂಪತ್ಯ ಜೀವನಕ್ಕೆ  ಎ.ಆರ್ ರೆಹಮಾನ್ ಅವರ ಪತ್ನಿ ಸಾಯಿರಾ ಬಾನು ತೆರೆ ಎಳೆದ ಬೆನ್ನಲ್ಲೇ ಇದೇನಿದು ಎಂದು ಹೇಳುತ್ತಿದ್ದಾರೆ ಹಲವರು. #VirushkaDivorce ಎಂಬ ಹ್ಯಾಶ್‌ಟ್ಯಾಗ್‌ ಕೂಡ ಟ್ರೆಂಡಿಂಗ್‌ನಲ್ಲಿ ಇದೆ. 

ನೋಡಲು ಥೇಟ್‌ ಬಾಲ್ಯದ ಅಪ್ಪು ಈ ಬಾಲಕ! ದನಿ ಕೂಡ ಸೇಮ್‌ ಟು ಸೇಮ್‌... ಅವನ ಮಾತು ಕೇಳಿ...

ಆದರೆ ಅಸಲಿಗೆ ಈ ಸ್ಟಾರ್‍‌ ದಂಪತಿ ಬಾಳಲ್ಲಿ ಏನೂ ಆಗಿಲ್ಲ. ಅಷ್ಟಕ್ಕೂ ಈ ರೀತಿಯ ಭಾವನಾತ್ಮಕ ಪೋಸ್ಟ್ ಮಾಡಿರುವುದು ಪತ್ನಿ ಅನುಷ್ಕಾ ಜೊತೆಗಿನ ಸಂಬಂಧದ ಬಗ್ಗೆ ಅಲ್ಲ, ಬದಲಿಗೆ ಬಟ್ಟೆಯೊಂದರ ಜಾಹೀರಾತಿದು. ತಾವು ರಾಯಭಾರಿಯಾಗಿರುವ ಬಟ್ಟೆಯ ಬ್ರಾಂಡ್‌ ಒಂದರ ಬಗ್ಗೆ ಈ ಪೋಸ್ಟ್‌ ಮಾಡಿದ್ದಾರೆ. ತಮ್ಮ ಮತ್ತು ಈ ಬಟ್ಟೆಯ ನಡುವೆ  10ಕ್ಕೂ ಹೆಚ್ಚು ವರ್ಷಗಳ ಸಂಬಂಧದ ಕುರಿತು ಅವರು ಈ ರೀತಿಯಾಗಿ ಮಾತನಾಡಿ ಸಂಚಲನ ಮೂಡಿಸಿದ್ದಾರೆ.  ಆದರೆ ಪೋಸ್ಟ್‌ ಭಾವನಾತ್ಮಕವಾಗಿದ್ದ ಕಾರಣ ವಿಚ್ಛೇದನ ಮತ್ತು ನಿವೃತ್ತಿ ಎಂದು ಅಭಿಮಾನಿಗಳು ತಪ್ಪಾಗಿ ಗ್ರಹಿಸಿದ್ದಾರೆ. ಏನೋ ಆಗಿದೆ ಎನ್ನುವಂತೆ ಅಭಿಮಾನಿಗಳು ತಲೆ ಕೆಡಿಸಿಕೊಳ್ಳಲಿ ಎನ್ನುವ ಕಾರಣಕ್ಕೆ ಕೊಹ್ಲಿ ಈ ರೀತಿಯ ಪೋಸ್ಟ್‌ ಮಾಡಿದ್ದಾರೋ ಗೊತ್ತಿಲ್ಲ ಎಂದು ಈಗ ನೆಟ್ಟಿಗರು ತಿರುಗಿ ಬಿದ್ದಿದ್ದಾರೆ. 

ಅಷ್ಟಕ್ಕೂ ಈ ಪೋಸ್ಟ್‌ ಅನ್ನು ಕೊಹ್ಲಿ ಅವರು ಇದೇ 20ರಂದು ಶೇರ್‍‌ ಮಾಡಿಕೊಂಡಿದ್ದಾರೆ. ಆದರೆ ಅದು ವೈರಲ್‌ ಆಗಿ, ಎಲ್ಲರ ಗಮನ ಸೆಳೆದಿದೆ. ಮಾತ್ರವಲ್ಲದೇ  ಟ್ವಿಟರ್‌ನಲ್ಲೂ ಟ್ರೆಂಡ್‌ ಆಗುವ ಮಟ್ಟಕ್ಕೆ ಬಂದಿದೆ. #VirushkaDivorce ಎಂಬ ಹ್ಯಾಶ್‌ಟ್ಯಾಗ್‌ ಕೂಡ ಸದ್ದು ಮಾಡುತ್ತಿದೆ. ಎಆರ್‍‌ ರೆಹಮಾನ್‌ ಹಾದಿಯನ್ನೇ ಈ ದಂಪತಿ ತುಳಿದರಾ ಎಂದು ಅಚ್ಚರಿ ವ್ಯಕ್ತಪಡಿಸಿದರೆ, ಮತ್ತೆ ಕೆಲವರು, ಸೆಲೆಬ್ರಿಟಿಗಳ ವಿಚಿತ್ರ ಲೈಫ್‌ಸ್ಟೈಲ್‌ ಬಗ್ಗೆ ಮಾತನಾಡಿ, ಇವರಿಗೆ ಸಂಬಂಧಗಳಿಗೆ ಬೆಲೆಯೇ ಇಲ್ಲ ಎಂದೂ ಟೀಕಿಸುತ್ತಿದ್ದಾರೆ.  ಅಂದಹಾಗೆ, ವಿರಾಟ್ ಮತ್ತು ಅನುಷ್ಕಾ 2017ರ ಡಿಸೆಂಬರ್ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಗೆ  ಇಬ್ಬರು ಮಕ್ಕಳಿದ್ದಾರೆ. ಮಗಳು ವಮಿಕಾ, ಮಗ ಅಕಾಯ್. ಇದೇ ವರ್ಷ ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ವಿರಾಟ್ ಪ್ರಸ್ತುತ ಬಾರ್ಡರ್ ಗವಾಸ್ಕರ್ ಟ್ರೋಪಿ ಆಡುತ್ತಿದ್ದಾರೆ. ಅನುಷ್ಕಾ ಸದ್ಯ ಕುಟುಂಬದ ಲಾಲನೆ ಪಾಲನೆಯಲ್ಲಿದ್ದಾರೆ. 

ಸೀತಾರಾಮದ ಸುಲೋಚನಾ ಪಾತ್ರದಿಂದ ಜೀವನದಲ್ಲಿ ಫಸ್ಟ್‌ ಟೈಮ್ ಮಾಸ್ಕ್‌ ಹಾಕ್ಕೊಂಡು ತಿರಗ್ತಾ ಇದ್ದೇನೆ!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!