ಜನರ ಟೀಕೆಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸು ಮಾಡಿದ್ದ ANR. ಯಾರಿಗೂ ಗೊತ್ತಿರದ ಸತ್ಯ ಹಂಚಿಕೊಂಡ ನಾಗಾರ್ಜುನ.
80ರ ದಶಕದಲ್ಲಿ ತೆಲುಗು ಚಿತ್ರರಂಗದ ಖ್ಯಾತ ಹಾಗೂ ಸಿನಿಮಾ ನಿರ್ಮಾಪಕರಾಗಿದ್ದ ಅಕ್ಕಿನೇನಿ ನಾಗೇಶ್ವರ್ ರಾವ್ ಒಮ್ಮೆ ಮರೈನ್ ಬೀಚ್ ಬಳಿ ನಿಂತು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದರು ಎಂದು ಪುತ್ರಿ ನಾಗಾರ್ಜುನ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ರಿವೀಲ್ ಮಾಡಿದ್ದಾರೆ. ಆ ಕಾಲದಲ್ಲೇ ಸಿಕ್ಕಾಪಟ್ಟೆ ಹಣ ಸಂಪಾದನೆ ಮಾಡಿ ಹೆಸರು ಗಳಿಸಿದ ನಟ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? ಅವರ ಮನಸ್ಸಿನ ಮೇಲೆ ನೆಗೆಟಿವ್ ಪರಿಣಾಮ ಬೀರಿದ್ದು ಯಾರು ಎಂದು ಮೊದಲ ಸಲ ನಾಗಾರ್ಜುನ ಹಂಚಿಕೊಂಡಿದ್ದಾರೆ.
'ಆಗಿನ ಕಾಲದಲ್ಲಿ ಮಹಿಳೆಯರು ಹೆಚ್ಚಾಗಿ ನಟಿಸುತ್ತಿರಲಿಲ್ಲ ಹಾಗೂ ಸಿನಿಮಾಗಳಲ್ಲಿ ಕೆಲಸ ಮಾಡಲು ಪೋಷಕರು ಬಿಡುತ್ತಿರಲಿಲ್ಲ. ಹೀಗಾಗಿ ನನ್ನ ತಂದೆ ಹೆಣ್ಣುಮಕ್ಕಳ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಶುರು ಮಾಡಿದ್ದರು. ಮೊದಲು ವೇದಿಕೆ ಮೇಲೆ ಹೀರೋಯಿನ್ ಆಗಿ ಕಾಣಿಸಿಕೊಂಡವರು ಏಎನ್‌ಆರ್. ಹಣಬರಹ ಬದಲಾಗುತ್ತದೆ ಅನ್ನೋದು ಇದ್ದಕ್ಕೆ, ಒಮ್ಮೆ ರೈಲ್ವೇ ಸ್ಟೇಷನ್ ಬಳಿ ತಂದೆ ನಿಂತಿದ್ದಾಗ ಖ್ಯಾತ ನಿರ್ಮಾಪಕರು ಗಂಟಸಾಲ ಬಾಲರಾಮಯ್ಯನವರು ಟ್ರೈನ್‌ನಲ್ಲಿ ಕುಳಿತಿದ್ದರು..ಎದ್ದು ನಡೆದುಕೊಂಡು ANRನ ಕರೆದು ನಿಮ್ಮ ಕಣ್ಣ ಚೆನ್ನಾಗಿ ನಿಮ್ಮ ಮೂಗು ಚೆನ್ನಾಗಿದೆ ನೀವು ನಟಿಸಲು ಇಷ್ಟ ಪಡುತ್ತೀರಾ ಎಂದು ಪ್ರಶ್ನೆ ಮಾಡಿದ್ದರಂತೆ. ಅಲ್ಲಿಂದ ನಡೆದದ್ದು ಹಿಸ್ಟರಿ' ಎಂದು ನಾಗಾರ್ಜುನ ಮಾತನಾಡಿದ್ದಾರೆ.
undefined
'ಅವರು ತಮ್ಮ ಸೊಂಟ ಆಡಿಸುತ್ತಾರೆ ನಡೆಯಲು ಶುರು ಮಾಡಿದ್ದರು ಏಕೆಂದರೆ ವೇದಿಕೆ ಮೇಲೆ ಅದೇ ಅವರಿಗೆ ನಟನೆ ಆಗಿತ್ತು, ಇದನ್ನು ನಾನು ಗಮನಿಸುತ್ತಿದ್ದೆ. ಇದನ್ನು ನೋಡಿ ಜನರು ಕೂಡ ರೇಗಿಸಲು ಶುರು ಮಾಡಿಬಿಟ್ಟರು ಅವರಿಗೆ ತುಂಬಾ ನೋವಾಗುತ್ತಿತ್ತು ಆದರೆ ಹೇಳಿಕೊಳ್ಳುತ್ತಿರಲಿಲ್ಲ. ಬೇಸರಗೊಂಡು ಮರೀನಾ ಬೀಚ್ ಬಳಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡುತ್ತಾರೆ ಏಕೆಂದರೆ ಜನರು ಪದೇ ಪದೇ ಟೀಕಿಸಲು ಶುರು ಮಾಡಿಬಿಟ್ಟರು. ನೀರಿನ ಬಳಿ ಹೋಗಿ ನಿಂತು ಕಾಲಿಗೆ ನೀರು ತಗುಲಿದಾಗ ಮನಸ್ಸು ಬೇಡ ಎನ್ನುತ್ತಿದ್ದಂತೆ..ಅಲ್ಲಿಂದ ಹೊರ ಬಂತು ನಮ್ಮ ಮನಸ್ಥಿತಿಯನ್ನು ಗಟ್ಟಿ ಮಾಡಿಕೊಂಡು ಸರಿ ಮಾಡಿಕೊಂಡು ಕೆಲಸ ಮಾಡಲು ಶುರು ಮಾಡಿದ್ದರಂತೆ' ಎಂದು ನಾಗಾರ್ಜುನ ಹೇಳಿದ್ದಾರೆ.
2028ರವರೆಗೂ ಯಶ್ ದೆಸೆ ಚೆನ್ನಾಗಿದೆ, ರಿಷಬ್ ಶೆಟ್ಟಿ ಕಾಂತಾರ 2 ಲಕ್ ಕೊಡುತ್ತಾ?
'ಧೂಮಪಾನ ಮಾಡುವುದರಿಂದ ನಿಮ್ಮ ಧ್ವನಿ ಗಟ್ಟಿಯಾಗುತ್ತದೆ ಎಂದು ಯಾರೋ ಹೇಳಿದ್ದರು ಅದಕ್ಕೆ ಭಯದಿಂದ ಸ್ಮೋಕ್ ಮಾಡಲಿಲ್ಲ. ಪ್ರತಿ ನಿತ್ಯ ಬೆಳಗ್ಗೆ ಬೀಚ್ ಕಡೆ ವಾಕಿಂಗ್ ಮಾಡಿಕೊಂಡು 5 ರಿಂದ 10 ನಿಮಿಷ ಜೋರಾಗಿ ಕೂಗುತ್ತಿದ್ದರು, ಹೀಗೆ ಮಾಡುವುದರಿಂದ ತಮ್ಮ ಧ್ವನಿ ಚೆನ್ನಾಗಿ ಬರಲಿದೆ' ಎಂದು ತಂದೆ ಬಗ್ಗೆ ನಾಗಾರ್ಜುನ ಹೆಮ್ಮೆಯಿಂದ ಮಾತನಾಡಿದ್ದಾರೆ.