ಅಂಬಾನಿ ಮದ್ವೆಯಲ್ಲಿ ಕಾಣಿಸಿಕೊಳ್ಳದ ತಾರೆಯರಿವರು, ಒಬ್ಬೊಬ್ಬರದು ಒಂದೊಂದು ನೆಪ! ಮತ್ತೋರ್ವನನ್ನು ಕರೆದೇ ಇಲ್ಲ!

By Gowthami K  |  First Published Jul 15, 2024, 5:37 PM IST

ಜುಲೈ 12ರಂದು ಅದ್ಧೂರಿಯಾಗಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹಕ್ಕೆ ದೇಶ ವಿದೇಶದಿಂದ ಗಣ್ಯಾತಿಗಣ್ಯರು ಆಗಮಿಸಿದ್ದರು. ಆದರೆ ಬಾಲಿವುಡ್‌ ನ ಅನೇಕ ಸೆಲೆಬ್ರೆಟಿಗಳು, ಕ್ರೀಡಾತಾರೆಯರು ಮದುವೆಗೆ ಆಗಮಿಸಿಲ್ಲ. ಯಾವೆಲ್ಲ ತಾರೆಯರು ಗೈರಾಗಿದ್ದರು ಎಂಬ ಮಾಹಿತಿ ಇಲ್ಲಿದೆ.


ಜುಲೈ 12ರಂದು ಅದ್ಧೂರಿಯಾಗಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹಕ್ಕೆ ದೇಶ ವಿದೇಶದಿಂದ ಗಣ್ಯಾತಿಗಣ್ಯರು ಆಗಮಿಸಿದ್ದರು. ಆದರೆ ಬಾಲಿವುಡ್‌ ನ ಅನೇಕ ಸೆಲೆಬ್ರೆಟಿಗಳು, ಕ್ರೀಡಾತಾರೆಯರು ಮದುವೆಗೆ ಆಗಮಿಸಿಲ್ಲ. ಯಾವೆಲ್ಲ ತಾರೆಯರು ಗೈರಾಗಿದ್ದರು ಎಂಬ ಮಾಹಿತಿ ಇಲ್ಲಿದೆ.

ವಿರಾಟ್‌ ಕೊಹ್ಲಿ -ಅನುಷ್ಕಾ: T20 ವಿಶ್ವಕಪ್ ಗೆದ್ದ ಬಳಿಕ ಭಾರತಕ್ಕೆ ಬಂದಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿ   ಪತ್ನಿ ಅನುಷ್ಕಾ ಶರ್ಮಾ ಮತ್ತು ಅವರ ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಅವರ ಭೇಟಿಗಾಗಿ ಲಂಡನ್‌ ಗೆ ತೆರಳಿದ್ದರು. ವಿರುಷ್ಕಾ ಜೋಡಿ ಲಂಡನ್‌ ನಲ್ಲೇ ಮುಂದಿನ ಜೀವನ ಕಳೆಯಲಿದ್ದಾರೆ ಎನ್ನಲಾಗ್ತಿದೆ. ಸದ್ಯ ಲಂಡನ್ ಯೂನಿಯನ್ ಚಾಪೆಲ್‌ನಲ್ಲಿ ಕೃಷ್ಣ ದಾಸ್ ಅವರ ಕೀರ್ತನೆಯಲ್ಲಿ ಭಾಗವಹಿಸಿರುವ ವಿಡಿಯೋ ವೈರಲ್‌ ಆಗ್ತಿದೆ.

ಮದುವೆ ಬಳಿಕ 10 ಸಾವಿರ ಅತಿಥಿಗಳನ್ನು ಗಂಟೆಗಟ್ಟಲೆ ನಿಂತೇ ಗೌರವಿಸಿದ ಅಂ ...

Tap to resize

Latest Videos

ಕಾರ್ತಿಕ್ ಆರ್ಯನ್ : ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರು ಭೂಲ್ ಭುಲೈಯಾ 3 ಚಿತ್ರೀಕರಣದಲ್ಲಿದ್ದಾರೆ. ಇದರ ಜೊತೆಗೆ ಅಂಬಾನಿ ಮದುವೆಗೆ ಆತನನ್ನು ಕರೆದಿಲ್ಲ ಎನ್ನಲಾಗಿದೆ. ಒಂದು ಕಾಲದಲ್ಲಿ ಜಾಹ್ನವಿ ಕಪೂರ್‌ ಕಾರ್ತಿಕ್ ಆರ್ಯನ್ ಡೇಟಿಂಗ್ ನಲ್ಲಿದ್ದರು. ಈಗ ಅವರಿಬ್ಬರು ಬ್ರೇಕಪ್ ಮಾಡಿಕೊಂಡಿದ್ದು, ಜಾಹ್ನವಿ ಈಗ  ಅನಂತ್ ಅಂಬಾನಿ ಆತ್ಮೀಯ ಗೆಳೆಯ ಶಿಖರ್ ಪಹಾರಿಯಾ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ. ಈ ಕಾರಣದಿಂದ ಮದುವೆಗೆ ಕರೆದಿಲ್ಲ ಎನ್ನಲಾಗುತ್ತಿದೆ.

ಕರೀನಾ-ಸೈಫ್ ಅಲಿ ಖಾನ್: ಮಾರ್ಚ್‌ನಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ನಡೆದ ಅನಂತ್ ಮತ್ತು ರಾಧಿಕಾ ಅವರ ಮೊದಲ ವಿವಾಹಪೂರ್ವ ಸಂಭ್ರಮಾಚರಣೆಯಲ್ಲಿ ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಭಾಗಿಯಾಗಿದ್ದರು. ಸದ್ಯ ದಂಪತಿ ತಮ್ಮ ಮಕ್ಕಳಾದ ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಅಲಿ ಖಾನ್ ಅವರೊಂದಿಗೆ ಪ್ರವಾಸದಲ್ಲಿದ್ದಾರೆ. ಬೇಬೋ ಮತ್ತು ಸೈಫ್ ಜುಲೈ ತಿಂಗಳಲ್ಲಿ ತಾವು ಕೈಗೊಳ್ಳುವ  ಪ್ರವಾಸವನ್ನು ಎಂದೂ ಮಿಸ್ ಮಾಡುವುದಿಲ್ಲ. ಸೈಫ್ ಅವರ ಪುತ್ರಿ ಸಾರಾ ಅಲಿ ಖಾನ್ ಮತ್ತು ಹಿರಿಯ ಮಗ ಇಬ್ರಾಹಿಂ ಅಲಿ ಖಾನ್ ಅವರು ಮದುವೆಯಲ್ಲಿದ್ದರು.

ನಟ ದರ್ಶನ್ ಬಿಡುಗಡೆ ಭವಿಷ್ಯ ನುಡಿದ ದಸರೀಘಟ್ಟ ಚೌಡೇಶ್ವರಿ, ದೇವಿ ಕಳಸದ ...

ಅಕ್ಷಯ್ -ಟ್ವಿಂಕಲ್ ಖನ್ನಾ: ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಜಾಮ್‌ನಗರದಲ್ಲಿ ನಡೆದ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮದುವೆಗೂ ಮುನ್ನ COVID-19 ಪರೀಕ್ಷೆ ಮಾಡಿಸಿದ್ದು ಕೋವಿಡ್‌ ಪಾಸಿಟಿವ್ ಬಂದಿದೆ ಎಂದು ವರದಿ ತಿಳಿಸಿದ್ದು ಈ ಕಾರಣಕ್ಕೆ ಮದುವೆಯಲ್ಲಿ ಭಾಗವಹಿಸಿಲ್ಲ. ಇತ್ತೀಚೆಗೆ ಬಿಡುಗಡೆಯಾದ ಸರ್ಫಿರಾ ಚಲನಚಿತ್ರದ ಪ್ರಚಾರದ ಕೊನೆಯ ಹಂತವನ್ನೂ ಸಹ ತಪ್ಪಿಸಿಕೊಂಡರು. ಪತ್ನಿ ಟ್ವಿಂಕಲ್ ಖನ್ನಾ ಕೂಡ ಐಸೋಲೇಶನ್‌ನಲ್ಲಿದ್ದಾರೆ.

ಕಂಗನಾ ರಣಾವತ್:  ನಟಿ, ರಾಜಕಾರಣಿ, ಸಂಸದೆ ಕಂಗನಾ  ತನ್ನ  ಕಮಿಟ್‌ಮೆಂಟ್‌ಗಳ ಹೊರತಾಗಿ,  ಸೋದರ ಸಂಬಂಧಿ ವರುಣ್ ರನೌತ್ ಅವರ ಮದುವೆಯಲ್ಲಿ ಭಾಗವಹಿಸಿದ್ದರು.  ಕುಟುಂಬದ ಕಾರ್ಯಕ್ರಮವಾಗಿದ್ದರಿಂದ ರಾಧಿಕಾ ಮತ್ತು ಅನಂತ್  ಮದುವೆಗೆ ಬರಲಾಗಲಿಲ್ಲ. 

ಅಮೀರ್ ಖಾನ್: ಜಾಮ್‌ನಗರದ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಬಾಲಿವುಡ್‌ನ 3 ಖಾನ್‌ಗಳಾದ ಅಮೀರ್ ಖಾನ್, ಶಾರುಖ್ ಮತ್ತು ಸಲ್ಮಾನ್ ಖಾನ್ ವೇದಿಕೆ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಮದುವೆಯಲ್ಲಿ ಕಾಣಿಸಲಿಲ್ಲ. ಮಗಳು ಇರಾ ಖಾನ್ ಮತ್ತು ಅಳಿಯ ನೂಪುರ್ ಶಿಖರೆ ಮದುವೆಯಲ್ಲಿ ಭಾಗವಹಿಸಿದ್ದರು.

ಪರಿಣಿತಿ ಚೋಪ್ರಾ-ರಾಘವ್: ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಮತ್ತು ರಾಜಕಾರಣಿ ರಾಘವ್ ಚಡ್ಡಾ ಮದುವೆಯಲ್ಲಿ ಭಾಗವಹಿಸಿಲ್ಲ, ಮಾತ್ರವಲ್ಲ ಅವರು ಭಾರತದಲ್ಲಿ ಇರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಯಾಕೆದಂತೆ ವಿಂಬಲ್ಡನ್ ಫೈನಲ್ಸ್ 2024 ನಲ್ಲಿ ಭಾಗವಹಿಸಿದ್ದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಸೋನಂ-ಅಹುಜಾ: ನಟ ಅನಿಲ್ ಕಪೂರ್ ಕಿರಿಯ  ಮಗಳು ರಿಯಾ ಕಪೂರ್ ಮಧುಮಗಳು ರಾಧಿಕಾಗೆ ಸ್ಟೈಲಿಶ್ ಆಗಿದ್ದರು. ಆದರೆ ಅವರ ಇನ್ನೊಬ್ಬ ಮಗಳು ನಟಿ ಸೋನಮ್ ಕಪೂರ್ ಮತ್ತು ಅಹುಜಾ ಯುಕೆಯಲ್ಲಿ ವಿಂಬಲ್ಡನ್ ಮಹಿಳಾ ಫೈನಲ್‌ ನಲ್ಲಿ ಭಾಗಿಯಾದ ಕಾರಣ  ಮದುವೆಯಲ್ಲಿ ಭಾಗಿಯಾಗಲಿಲ್ಲ. 

ಸೋನಾಕ್ಷಿ - ಜಹೀರ್‌: ಇತ್ತೀಚೆಗೆ ಮದುವೆಯಾದ ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್‌ ಇಕ್ಬಾಲ್‌ ಕೂಡ ವೈಯಕ್ತಿಕ ಕಾರಣದಿಂದ ಮದುವೆಯಲ್ಲಿ ಭಾಗವಹಿಸಲಿಲ್ಲ.  ಜೂನ್ 23 ರಂದು ಇವರಿಬ್ಬರು ರಿಜಿಸ್ಟರ್  ಮದುವೆಯಾಗಿದ್ದರು.

ಮಲೈಕಾ ಅರೋರಾ: ನಟಿ ಮಲೈಕಾ ಅರೋರಾ ಅವರು ಕೂಡ ವೈಯಕ್ತಿಕ ಕಾರಣದಿಂದ ಅಂಬಾನಿ ಮದುವೆಯಲ್ಲಿ ಭಾಗಿಯಾಗಿಲ್ಲ. ತನ್ನ ಪ್ರಿಯತಮ ಅರ್ಜುನ್ ಕಪೂರ್  ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಇದೆ. ಆದರೆ ಅರ್ಜುನ್ ಕಪೂರ್ ತನ್ನ ಸಹೋದರಿ ಜೊತೆಗೆ ಮದುವೆಗೆ ಬಂದಿದ್ದರು.

click me!