ತವರು ಮನೆಯಿಂದ ಮಗಳನ್ನು ಬೀಳ್ಕೊಡುವ ಸಂದರ್ಭದಲ್ಲಿ ಮಾವ ಮುಕೇಶ್ ಅಂಬಾನಿ ಭಾವುಕರಾಗಿದ್ದು, ಅದರ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಹೇಳ್ತಿರೋದೇನು?
ಲವ್ ಮ್ಯಾರೇಜ್ ಆಗಲಿ, ಅರೇಂಜ್ಡ್ ಮ್ಯಾರೇಜೇ ಆಗಲಿ... ಆಗರ್ಭ ಶ್ರೀಮಂತರೇ ಆಗಲಿ, ಕಡು ಬಡವರೇ ಆಗಲಿ... ಮದುವೆಯಾಗಿ ಅಮ್ಮನ ಮನೆಯಿಂದ ಗಂಡನ ಮನೆಗೆ ಹೋಗುವಾಗ ಬಹುತೇಕ ಹೆಣ್ಣುಮಕ್ಕಳು ಭಾವುಕರಾಗುವುದು ಇದದ್ದೇ. ಅದೇ ಇನ್ನೊಂದೆಡೆ ಮುದ್ದು ಮಗಳು ಮದುವೆಯಾಗಿ ಗಂಡನ ಮನೆ ಸೇರುತ್ತಿದ್ದಾಳೆ ಎಂದು ಖುಷಿಯಲ್ಲಿ ಇರುವ ಅಪ್ಪ-ಅಮ್ಮ ಕೂಡ ಮಗಳು ಇನ್ನು ಗಂಡನ ಮನೆಗೆ ಸೇರಿದವಳು, ಅವಳನ್ನು ನೋಡುವುದು ಅಪರೂಪವಾಗಬಹುದು ಎಂದೆಲ್ಲಾ ಕಣ್ಣೀರು ಹಾಕುವುದು ಸರ್ವೇ ಸಾಮಾನ್ಯ. ಹುಟ್ಟು ಬೆಳೆದ ತವರನ್ನು ಬಿಟ್ಟು ಬರುವುದು ಹೆಚ್ಚಿನ ಹೆಣ್ಣುಮಕ್ಕಳಿಗೆ ಸುಲಭದ ಮಾತಲ್ಲ. ಆದರೆ ಇದು ಹಿಂದೂ ಸಂಪ್ರದಾಯ. ಮದುವೆಯಾದ ಹೆಣ್ಣು ಕುಲದಿಂದ ಹೊರಕ್ಕೆ ಎನ್ನುವ ಗಾದೆಮಾತಿನಂತೆ, ಪ್ರತಿ ಹೆಣ್ಣೂ ಗಂಡನ ಮನೆ ಸೇರಲೇಬೇಕು, ತವರಿನ ನೆನಪಿನ ಬುತ್ತಿಯೊಂದೇ ಅವಳ ಪಾಲಿಗೆ ಇರುವುದು. ಇದು ಆಸ್ತಿ, ಅಂತಸ್ತು ಎಲ್ಲವನ್ನೂ ಮೀರಿದ್ದು. ಪ್ರತಿಯೊಂದು ಹೆಣ್ಣೂ ತನ್ನ ಜೀವನದಲ್ಲಿ ಅನುಭವಿಸುವ ಅವ್ಯಕ್ತ ನೋವಿದು.
ಇದೀಗ ಮುಕೇಶ್ ಅಂಬಾನಿ ಮನೆಗೆ ಸೊಸೆಯಾಗಿ ಹೋಗುತ್ತಿರುವ ರಾಧಿಕಾ ಮರ್ಚೆಂಟ್ ಕೂಡ ತವರು ಮನೆಯಿಂದ ವಿದಾಯಿಯ ವೇಳೆ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಅಷ್ಟಕ್ಕೂ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಬಹಳ ದಿನಗಳ ಸೆಲೆಬ್ರೇಷನ್ ಬಳಿ ಅದ್ಧೂರಿಯಾಗಿ ನಡೆದಿದೆ. ವಿಶ್ವದಲ್ಲಿಯೇ ಅತ್ಯಂತ ದುಬಾರಿ ಮದುವೆಗಳಲ್ಲಿ ಇದು ಒಂದು ಎಂದೂ ಹೇಳಲಾಗುತ್ತಿದೆ. ಇದಾಗಲೇ ನಡೆದ ಪ್ರೀ ವೆಡ್ಡಿಂಗ್ ಮತ್ತು ಮದುವೆಯು ಹಲವಾರು ವಿಶೇಷತೆಗಳಿಂದ ಕೂಡಿತ್ತು. ಚಿತ್ರರಂಗದ ಘಟಾನುಘಟಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಬಂದು ಶುಭಾಶಯ ಕೋರಿದ್ದಾರೆ. ಸಹಸ್ರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದ ಪ್ರೀ-ವೆಡ್ಡಿಂಗ್ ಮತ್ತು ಮದುವೆ ಸಂಭ್ರಮಕ್ಕೆ ದೇಶ-ವಿದೇಶಗಳಿಂದ ಗಣ್ಯಾತಿಗಣ್ಯರ ದಂಡೇ ಆಗಮಿಸಿತ್ತು. ಈ ಮೂಲಕ ಭಾರತ ಅತ್ಯಂತ ವೈಭವೋಪೇತ ಮದುವೆಯೊಂದಕ್ಕೆ ಸಾಕ್ಷಿಯಾಯಿತು.
ಮದುಮಗಳ ಭರ್ಜರಿ ಎಂಟ್ರಿ: ಅಬ್ಬಬ್ಬಾ ವರಮಾಲಾ ಹಾಕಲು ಇಷ್ಟೊಂದು ಸರ್ಕಸ್ಸಾ? ವಿಡಿಯೋ ನೋಡಿ ಸುಸ್ತಾದ ಜನರು!
ಮದುವೆಯ ಬೆನ್ನಲ್ಲೇ ಮದುವೆಗೆ ಸಂಬಂಧಿಸಿದಂತೆ ಒಂದೊಂದೇ ವಿಶೇಷ ಹಾಗೂ ಅಚ್ಚರಿಯ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ಮದುವೆಗೆ ಸಂಬಂಧಿಸಿದಂತೆ ಇದಾಗಲೇ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದ್ದು, ಔಚಿತ್ಯಪೂರ್ಣ ಮದುವೆಯ ಕುರಿತು ಇಂಟರೆಸ್ಟಿಂಗ್ ವಿಷಯಗಳು ಹೊರಬರುತ್ತಿವೆ. ಮದುವೆ ಮುಗಿದ ಮೇಲೆ ಹೆಣ್ಣನ್ನು ತವರಿನಿಂದ ಬೀಳ್ಕೊಡುವ ವೇಳೆ ಸಹಜವಾಗಿ ರಾಧಿಕಾ ಭಾವುಕರಾಗಿದ್ದಾರೆ. ಆದರೆ ಎಲ್ಲರ ಗಮನ ಸೆಳೆದದ್ದು ಮುಕೇಶ್ ಅಂಬಾನಿಯವರು.
ಸೊಸೆ ಭಾವುಕರಾಗಿ ಬೀಳ್ಕೊಡುವ ಸಂದರ್ಭದಲ್ಲಿ ಮುಕೇಶ್ ಅಂಬಾನಿ ಕೂಡ ತುಂಬಾ ಭಾವುಕರಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಸೊಸೆಯ ಕಣ್ಣೀರನ್ನು ಅವರು ಸಹಿಸಲು ಸಾಧ್ಯವಾಗದೇ ಖುದ್ದು ಮಗಳನ್ನೇ ತವರಿನಿಂದ ಬೀಳ್ಕೊಡುವ ರೀತಿಯಲ್ಲಿ ಭಾವುಕರಾಗಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಇಂಥ ಮಾವನನ್ನು ಪಡೆಯುವುದೇ ಪುಣ್ಯ ಎನ್ನುತ್ತಿದ್ದಾರೆ ನೆಟ್ಟಿಗರು. ಹಣ ಎಷ್ಟಿದ್ದರೇನು, ಮಾನವೀಯತೆ ಇರಬೇಕು. ಅದಕ್ಕೆ ಸಾಕ್ಷಿ ಮುಕೇಶ್ ಅಂಬಾನಿ. ಅವರು ತಮ್ಮಸೊಸೆಯ ನೋವನ್ನು ಯಾವ ರೀತಿ ಸ್ವೀಕರಿಸುತ್ತಿದ್ದಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ ಎನ್ನುತ್ತಿದ್ದಾರೆ.
ಮಗನ ಮದುವೆಯ ಬೆನ್ನಲ್ಲೇ ಎಲ್ಲರ ಕ್ಷಮೆ ಕೋರಿದ ನೀತಾ ಅಂಬಾನಿ: ವಿಡಿಯೋದಲ್ಲಿ ಹೇಳಿದ್ದೇನು?