ಶ್ರೀಮಂತರನ್ನು ಬುಟ್ಟಿಗೆ ಹಾಕಿಕೊಳ್ಳೋದನ್ನ ಕಲಿಸ್ತಾಳೆ ಈ ಲವ್​ ಗುರು! ಪ್ರೇಮ ಪಾಠವೇ ಆದಾಯದ ಮೂಲ...

By Suchethana D  |  First Published Jul 15, 2024, 5:04 PM IST

ಕೋಟ್ಯಧಿಪತಿ ಪುರುಷರನ್ನು ಬುಟ್ಟಿಗೆ ಹಾಕಿಕೊಳ್ಳುವುದು ಹೇಗೆ ಎಂಬ ಪಾಠ ಮಾಡುತ್ತಲೇ ವರ್ಷಕ್ಕೆ ಸುಮಾರು 163ಕೋಟಿ ದುಡಿಯುತ್ತಿರೋ ಮಹಿಳೆ ಕುರಿತು ಇಂಟರೆಸ್ಟಿಂಗ್​ ಸ್ಟೋರಿ! 
 


ಈ ಪ್ರಪಂಚದಲ್ಲಿ ಯಾವ ಯಾವ ರೀತಿಯ ವ್ಯಕ್ತಿಗಳು ಇರುತ್ತಾರೆ ಎಂದು ಹೇಳುವುದೇ ಕಷ್ಟ. ಕೆಲವರು ದುಡ್ಡು ಮಾಡುವ ಮಾರ್ಗ ಕಂಡುಕೊಳ್ಳುವುದು ವಿಚಿತ್ರ ರೀತಿಯಲ್ಲಿಯೇ. ಕೋಟ್ಯಧೀಶ್ವರರಾಗುವವರ ಲಿಸ್ಟ್​ ನೋಡಿದರೆ ಕೆಲವರು ಕಷ್ಟಪಟ್ಟು ಮೇಲಕ್ಕೆ ಬಂದಿದ್ದರೆ, ಮತ್ತೆ ಕೆಲವರು ಅಡ್ಡದಾರಿ ಹಿಡಿದೇ ಬಂದವರಾಗಿರುತ್ತಾರೆ. ಇನ್ನು ಕೆಲವರು ಮಾಡುವ ಕಸುಬು, ದುಡ್ಡು ಮಾಡಲು ಅವರು ಕಂಡುಕೊಳ್ಳುವ ಮಾರ್ಗ ನಿಜಕ್ಕೂ ವಿಚಿತ್ರ ಅಷ್ಟೇ ಕುತೂಹಲವನ್ನೂ ಕೆರಳಿಸುತ್ತದೆ. ಅಂಥವರಲ್ಲಿ ಒಬ್ಬಾಕೆ ಚೀನಾದ ಲೆ ಚುವಾಂಕು.

ಲೆ ಚುವಾಂಕುವಿನ ವಾರ್ಷಿಕ ಆದಾಯ ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಸರಿ ಸುಮಾರು 163 ಕೋಟಿ ರೂಪಾಯಿಗಳು. ಅಷ್ಟಕ್ಕೂ ಇವಳು ಮಾಡುವುದು ಏನು ಗೊತ್ತಾ? ಶ್ರೀಮಂತ ಹುಡುಗರನ್ನು ಹೇಗೆ ಬುಟ್ಟಿಗೆ ಹಾಕಿಕೊಳ್ಳಬೇಕು ಎಂಬ ಬಗ್ಗೆ ಯುವತಿಯರಿಗೆ ಪ್ರೇಮ ಪಾಠಮಾಡುತ್ತಾಳೆ. ಇವಳನ್ನು ಲವ್​ ಗುರು ಎಂದೇ ಕರೆಯಲಾಗುತ್ತದೆ. ಚೀನಾದಲ್ಲಿ ಅಷ್ಟೆಲ್ಲಾ ಕಾನೂನುಗಳಿದ್ದರೂ ಅವುಗಳ ಮಧ್ಯೆಯೇ ಇಂಥದ್ದೊಂದು ಕಸುಬು ಮಾಡುತ್ತಿದ್ದಾಳೆ ಲೆ  ಚುವಾಂಕು. ಈಕೆಯನ್ನು ಸದ್ಯ 'ವಿವಾದಾತ್ಮಕ ಪ್ರೇಮ ಗುರು" ಲೆ ಚುವಾಂಕು ಎಂದು ಕರೆಯಲಾಗುತ್ತದೆ.  ಶ್ರೀಮಂತ ಪುರುಷರನ್ನು ಹೇಗೆ ಬಲೆ ಬೀಳಿಸಿ ಮದುವೆಯಾಗಬೇಕೆಂದು ಮಹಿಳೆಯರಿಗೆ ಪಾಠ ಕಲಿಸುತ್ತಾಳೆ. ಈ ಮೂಲಕ ಸಾಕಷ್ಟು ಹೆಸರು ಕೂಡ ಮಾಡಿದ್ದಾಳೆ ಈಕೆ.  ಆಗಾಗ್ಗೆ ವಿವಾದವನ್ನು ಹುಟ್ಟುಹಾಕುವ ಲೆ ಚುವಾಂಕು  ವಾರ್ಷಿಕವಾಗಿ 163 ಕೋಟಿ ರೂಪಾಯಿಗಳನ್ನು ಗಳಿಸುತ್ತಿದ್ದಾಳೆ.  ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಚುವಾಂಕು ಸಂಬಂಧ ಮತ್ತು ಆರ್ಥಿಕ ಸಲಹೆಗಳನ್ನು ನೀಡುವ ಮೂಲಕ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಜನಪ್ರಿಯತೆ ಗಳಿಸಿದ್ದಾಳೆ. ಈ ಮೂಲಕ ಹೆಚ್ಚಿನ ಸಂಖ್ಯೆಯ ಅನುಯಾಯಿಗಳನ್ನು ಆಕರ್ಷಿಸುತ್ತಿದ್ದಾಳೆ. 

Tap to resize

Latest Videos

ಬಿಗ್​ಬಾಸ್​ ಮಂಚದ ಮೇಲೆ ಸ್ಪರ್ಧಿಗಳ ಖುಲ್ಲಂ ಖುಲ್ಲಾ ರೊಮಾನ್ಸ್​! ವೈರಲ್​ ಆಯ್ತು ವಿಡಿಯೋ...

ಚುವಾಂಕು ಅವರ ಸಲಹೆಯು ಆಗಾಗ್ಗೆ ಚರ್ಚೆಯನ್ನು ಹುಟ್ಟುಹಾಕುತ್ತದೆ. ಏಕೆಂದರೆ ಇದು ಸಂಬಂಧಗಳಲ್ಲಿ ಅನೈತಿಕವೆಂದು ಪರಿಗಣಿಸುವ ಕಸುಬಾಗಿದೆ. ಮಹಿಳೆಯರನ್ನು ಆಕರ್ಷಿಸುತ್ತಲೇ ಪ್ರೇಮ ಪಾಠ ಮಾಡುತ್ತಿದ್ದಾಳೆ.  ಮದುವೆ ಮತ್ತು ಸಂಬಂಧಗಳನ್ನು ಹಣಕಾಸಿನ ಆಧಾರದ  ಮೇಲೆ ನೋಡುವುದರಿಂದ ಈಕೆಯ ವಿರುದ್ಧದ ಸಾಕಷ್ಟು ಆರೋಪಗಳೂ ಕೇಳಿಬರುತ್ತಿವೆ.  ಈಕೆ ತನ್ನ  ವಿಡಿಯೊದಲ್ಲಿ,  "ಎಲ್ಲಾ ಸಂಬಂಧಗಳು ಮೂಲತಃ ಲಾಭದಾಯಕವಾಗಿವೆ. ಅವುಗಳು ನಮ್ಮ ಜೀವವನ್ನು ಇನ್ನಷ್ಟು ಉತ್ತೇಜಿಸಲು  ಮತ್ತು  ಸಬಲೀಕರಣಗೊಳಿಸಲು ಆಧಾರವಾಗಿದೆ. ಆದ್ದರಿಂದ ನಾನು ಮಾಡುತ್ತಿರುವುದಕ್ಕೆ ಯಾವುದೇ ತಪ್ಪು ಇಲ್ಲ ಎಂದಿದ್ದಾಳೆ.  

ಅಂದಹಾಗೆ, ಚುವಾಂಕು ತನ್ನ ಲೈವ್ ಸ್ಟ್ರೀಮ್‌ಗಳಲ್ಲಿ ಒಂದು ಸಲಹೆಗಾಗಿ 12,945 ರೂಪಾಯಿ ಪಡೆಯುತ್ತಾಳೆ.  ಆಕೆಯ ಅತ್ಯಂತ ಜನಪ್ರಿಯ ಕೋರ್ಸ್ ಅಂದರೆ "ಮೌಲ್ಯಯುತ ಸಂಬಂಧಗಳು" ಎನ್ನುವುದು. ಈ ಪ್ರೇಮಪಾಠಕ್ಕೆ ಸಕತ್​ ಡಿಮಾಂಡ್​ ಕೂಡ ಇದೆ. ಈಕೆ ವೈಯಕ್ತಿಕ ಸಮಾಲೋಚನೆಗಾಗಿ 43,179 ರೂ. ಪಡೆಯುತ್ತಾಳೆ.  ತಿಂಗಳಿಗೆ 1,16,927 ರೂಪಾಯಿಗಳ ಶುಲ್ಕವಿಟ್ಟು ಕಾರ್ಯಾಗಾರ ಆಯೋಜಿಸುತ್ತಾಳೆ. ಸೆಮಿನಾರ್​ ಮಾಡುತ್ತಾಳೆ.  ಡೇಟಿಂಗ್ ತಂತ್ರಗಳ ಕುರಿತು ಜನರಿಗೆ ಮಾರ್ಗದರ್ಶನ ನೀಡುತ್ತಾಳೆ. ವಿವಾದದ ಹೊರತಾಗಿಯೂ ಸಾಕಷ್ಟು ಜನಪ್ರಿಯಳಾಗಿದ್ದಾಳೆ.  ಈಕೆ ಕೂಡ ಮಿಲೇನಿಯರ್​ನನ್ನು ಮದುವೆಯಾಗಿದ್ದಾಳೆ. ಸದ್ಯ ಚೀನಾದಲ್ಲಿ ಈಕೆಯನ್ನು ಬ್ಯಾನ್​ ಮಾಡಲಾಗಿದೆ ಎನ್ನುವ ವರದಿ ಇದೆ.

ಡಿವೋರ್ಸ್​ಗೆ ಕಾರಣ ಆ 3ನೇ ವ್ಯಕ್ತಿಯೇ... ಅವ್ರು... ತಿಂಗಳ ಬಳಿಕ ಮನದಾಳದ ಮಾತು ತೆರೆದಿಟ್ಟ ಚಂದನ್​ ಶೆಟ್ಟಿ

click me!