Adipurush: ಸೀಟ್​ ಸಿಗದೇ ನೆಲದ ಮೇಲೆ ಟ್ರೈಲರ್​ ನೋಡಿದ ಕೃತಿ ಸನೋನ್​!

Published : May 10, 2023, 03:40 PM IST
 Adipurush: ಸೀಟ್​ ಸಿಗದೇ ನೆಲದ ಮೇಲೆ ಟ್ರೈಲರ್​ ನೋಡಿದ ಕೃತಿ ಸನೋನ್​!

ಸಾರಾಂಶ

ಕೃತಿ ಸನೋನ್​, ಪ್ರಭಾಸ್​ ಅಭಿನಯದ ಆದಿಪುರುಷ್​ ಚಿತ್ರದ ಟ್ರೈಲರ್​ ಬಿಡುಗಡೆ ಸಮಾರಂಭದಲ್ಲಿ ಸೀಟು ಸಿಗದೇ ನೆಲದ ಮೇಲೆ ಕುಳಿತ ನಟಿ?  

‘ಆದಿಪುರುಷ್’ (Adipurush) ಸಿನಿಮಾ ಜೂನ್ 16ರಂದು ವಿಶ್ವಾದ್ಯಂತ 3ಡಿ ಅವತರಣಿಕೆಯಲ್ಲಿ ರಿಲೀಸ್ ಆಗಲಿದೆ. ಅದಕ್ಕೂ ಮೊದಲು ಸಿನಿಮಾದ  ಟ್ರೈಲರ್ ಮಂಗಳವಾರ (ಮೇ 9) ಬಿಡುಗಡೆಯಾಗಿದೆ.  3 ನಿಮಿಷ 19 ಸೆಕೆಂಡ್​ನ ಟ್ರೇಲರ್ ಗಮನ ಸೆಳೆದಿದೆ. ಈಗಾಗಲೇ ರಾಮಾಯಣ ಆಧರಿಸಿ ಹಲವು ಧಾರಾವಾಹಿ ಹಾಗೂ ಸಿನಿಮಾಗಳು ಬಂದು ಹೋಗಿವೆ. ಆದಾಗ್ಯೂ ಓಂ ರಾವತ್ ಇದೇ ಕಥೆ ಆಧರಿಸಿ ಸಿನಿಮಾ ಮಾಡುವ ಪ್ರಯತ್ನ ಮಾಡಿದ್ದಾರೆ. ರಾಮನಾಗಿ ಪ್ರಭಾಸ್ (Prabhas) ಕಾಣಿಸಿಕೊಂಡಿದ್ದಾರೆ. ಸೀತೆಯ ಪಾತ್ರಕ್ಕೆ ಕೃತಿ ಸನೋನ್ ಬಣ್ಣ ಹಚ್ಚಿದ್ದಾರೆ. ಟ್ರೇಲರ್ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಕೃತಿ 'ಆದಿಪುರುಷ' ಚಿತ್ರದಲ್ಲಿ ಜಾನಕಿ ಪಾತ್ರ ನಿರ್ವಹಿಸುತ್ತಿರುವ ವಿಡಿಯೋವೊಂದು ಹೊರಬಿದ್ದಿದ್ದು, ಇದನ್ನು ನೋಡಿದ ಅಭಿಮಾನಿಗಳು ಆಕೆಯನ್ನು ತೀವ್ರವಾಗಿ ಹೊಗಳುತ್ತಿದ್ದಾರೆ. 

ಸೀತೆಯನ್ನು ರಾವಣ ಅಪಹರಿಸುತ್ತಾನೆ. ನಂತರ ಆಕೆಯನ್ನು ಮರಳಿ ಕರೆತರಲು ರಾಮ ತೆರಳುತ್ತಾನೆ. ಟ್ರೇಲರ್​ನಲ್ಲಿ (Trailer) ಈ ಎಲ್ಲಾ ವಿಚಾರಗಳನ್ನು ತೋರಿಸಲಾಗಿದೆ. ರಾಮಾಯಣದ ಕಥೆಯೇ ಆದರೂ ಮೇಕಿಂಗ್ ವಿಚಾರದಲ್ಲಿ ‘ಆದಿಪುರುಷ್​’ ಗಮನ ಸೆಳೆಯುವ ಸಾಧ್ಯತೆ ಇದೆ. ಸಿನಿಮಾ 3ಡಿಯಲ್ಲಿ ಮೂಡಿ ಬರುತ್ತಿದೆ ಅನ್ನೋದು ವಿಶೇಷ. ಆದರೆ ಅದಕ್ಕಿಂತಲೂ ಕುತೂಲಹವಾದ ವಿಷಯವೇನೆಂದರೆ, ತಮ್ಮದೇ ಚಿತ್ರದ ಟ್ರೇಲರ್​ ನೋಡಲು ಕೃತಿ ಸನೋನ್​ ಅವರಿಗೆ ಸೀಟು ಸಿಗಲಿಲ್ಲ ಎನ್ನುವುದು! ಹೌದು. ಕೃತಿ ಸನೋನ್ (Kruthi Sanon) ಮತ್ತು ಪ್ರಭಾಸ್ ಚಿತ್ರದ ಸಂಪೂರ್ಣ ತಂಡದೊಂದಿಗೆ 'ಆದಿಪುರುಷ' ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು.  ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕೃತಿ ಬಿಳಿ ಮತ್ತು ಗೋಲ್ಡನ್ ಸೀರೆಯಲ್ಲಿ ಡ್ರಾಪ್ ಡೆಡ್ ಸುಂದರವಾಗಿ ಕಾಣುತ್ತಿದ್ದರು. ಅದೇ ಸಮಯದಲ್ಲಿ, ಅಭಿಮಾನಿಗಳು ಕೃತಿಯ ಈ ಸಾಂಪ್ರದಾಯಿಕ ನೋಟವನ್ನು ಇಷ್ಟಪಡುತ್ತಿದ್ದಾರೆ.

Kriti Sanon: ಸೋಷಿಯಲ್‌ ಮೀಡಿಯಾದಲ್ಲಿ ನಟಿಯ ಮೂಗಿನದ್ದೇ ಚರ್ಚೆ- ಅಂಥದ್ದೇನಿದೆ?

ಆದರೆ ಕೃತಿ ಅವರಿಗೆ ತಮ್ಮ ಚಿತ್ರದ ಟ್ರೈಲರ್ ಅನ್ನು ಥಿಯೇಟರ್‌ನಲ್ಲಿ ವೀಕ್ಷಿಸಲು ಸ್ಥಳ ಸಿಗದೇ ಇರುವುದನ್ನು ವಿಡಿಯೋದಲ್ಲಿ ನೋಡಬಹುದು. ಇದರಿಂದಾಗಿ ಕೃತಿ ತಕ್ಷಣ ಏನೂ ತೋಚದೆ ನೆಲದ ಮೇಲೆ ಕೂರುವುದನ್ನು ನೋಡಬಹುದು. ಅದನ್ನು ನೋಡಿದ ಅಲ್ಲಿದ್ದವರು ಎಲ್ಲರೂ ಎದ್ದು ನಿಂತು ಸೀಟು ಬಿಟ್ಟುಕೊಡಲು ಮುಂದಾಗುತ್ತಾರೆ. ಆದರೆ ಕೃತಿ ಮಾತ್ರ ಸ್ವಲ್ಪವೂ ತಲೆಕೆಡಿಸಿಕೊಳ್ಳದೇ, ನೆಲದ ಮೇಲೆ ಕುಳಿತುಕೊಂಡಿದ್ದು, ಇದರ ವಿಡಿಯೋ ಸಕತ್​ ಸೌಂಡ್​ ಮಾಡುತ್ತಿದೆ.
 
ಇದೀಗ ಕೃತಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ (Viral) ಆಗುತ್ತಿದೆ. ಅದೇ ಸಮಯದಲ್ಲಿ, ಅಭಿಮಾನಿಗಳು ಅವರ ಸ್ಟೈಲ್ ಅನ್ನು ಸಾಕಷ್ಟು ಹೊಗಳುತ್ತಿದ್ದಾರೆ. ಇಷ್ಟು ದೊಡ್ಡ ಸೆಲೆಬ್ರಿಟಿಯಾಗಿದ್ದರೂ ಕೃತಿಯೊಳಗೆ ದುರಹಂಕಾರವೇ ಇಲ್ಲ ಎನ್ನುತ್ತಾರೆ ಜನ. ಆದರೆ ಮತ್ತೊಂದಿಷ್ಟು ಮಂದಿ ಇವೆಲ್ಲಾ  ಪ್ರಚಾರಕ್ಕಾಗಿ ಅಷ್ಟೇ ಎಂದಿದ್ದಾರೆ. ಸೆಲೆಬ್ರಿಟಿಗಳು ಬರುವಾಗ ಅವರಿಗಾಗಿಯೇ ವಿಶೇಷ ಸೀಟಿನ ವ್ಯವಸ್ಥೆ ಮಾಡಲಾಗಿರುತ್ತದೆ. ಅದರಲ್ಲಿಯೂ ಅದರದ್ದೇ ಚಿತ್ರದ ನಟಿ ಬಂದಾಗ ಹೀಗೆಲ್ಲಾ ಅವ್ಯವಸ್ಥೆ ಇರುವುದಿಲ್ಲ. ಆದರೂ ಇದು ಪ್ರಚಾರದ ಸ್ಟಂಟ್​ ಎಂದು  ಟ್ರೋಲ್ ಮಾಡುತ್ತಿದ್ದಾರೆ. ಆಕೆ ನೆಲದ ಮೇಲೆ ಕುಳಿತಿರಲಿಲ್ಲ ಎಂದು ಕೆಲವರು ಹೇಳಿದರೆ, ಅವಳು ಜಾರಿ ಬಿದ್ದಳು ಮತ್ತು ಇದರಿಂದಾಗಿ ಅವಳು ನೆಲದ ಮೇಲೆ ಕುಳಿತುಕೊಳ್ಳಬೇಕಾಯಿತು ಎಂದು ಇನ್ನು ಹಲವರು ಹೇಳಿದ್ದಾರೆ!  

 'ಆದಿಪುರುಷ'ದಲ್ಲಿ ಪ್ರಭಾಸ್ ರಾಮನಾಗಿ, ಕೃತಿ ಸನೋನ್ ಮಾ ಸೀತೆಯಾಗಿ ಮತ್ತು ಸೈಫ್ ಅಲಿ ಖಾನ್ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಾವು ನಿಮಗೆ ಹೇಳೋಣ. ಸನ್ನಿ ಸಿಂಗ್ ಲಕ್ಷ್ಮಣ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಹಿಂದಿ ಸೇರಿದಂತೆ ಇತರ 4 ಭಾಷೆಗಳಲ್ಲಿ ಜೂನ್ 16 ರಂದು ಥಿಯೇಟರ್‌ಗಳಲ್ಲಿ 3D ನಲ್ಲಿ ಬಿಡುಗಡೆಯಾಗಲಿದೆ.

Janhvi Kapoor: ಮೇಲೆ-ಕೆಳಗೆ ಸರಿ ಮಾಡ್ಕೊಂಡೇ ಮುಗೀತಿಲ್ವಲ್ಲಾ ತಾಯೀ ಎಂದು ನಟಿ ಟ್ರೋಲ್​

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮೈಸೂರಿನಲ್ಲಿ ಕಿಚ್ಚನ ಹವಾ; 'ಮಾರ್ಕ್' ಸಕ್ಸಸ್ ಬೆನ್ನಲ್ಲೇ ಅಭಿಮಾನಿಗಳ ಜೊತೆ ಸುದೀಪ್ ಸಿನಿಮಾ ವೀಕ್ಷಣೆ!
'ಅವಳೇ ನನ್ನ ಜೀವನದ ಆಧಾರ ಸ್ತಂಭ'.. ಹೆಂಡ್ತಿ ಬಗ್ಗೆ ಹೀಗ್ ಹೇಳಿದ ರಣವೀರ್ ಸಿಂಗ್; ನೆಟ್ಟಿಗರು ಹೇಳೋದೇನು?