ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಸೂಪರ್ ಸ್ಟಾರ್ ರಜನಿಕಾಂತ್ ಎರಡನೇ ಪುತ್ರಿ ಸೌಂದರ್ಯ; ದೂರು ದಾಖಲು

Published : May 10, 2023, 01:46 PM IST
ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಸೂಪರ್ ಸ್ಟಾರ್  ರಜನಿಕಾಂತ್ ಎರಡನೇ ಪುತ್ರಿ ಸೌಂದರ್ಯ; ದೂರು ದಾಖಲು

ಸಾರಾಂಶ

ರಜನಿಕಾಂತ್ ಎರಡನೇ ಪುತ್ರಿ ಸೌಂದರ್ಯ ರಜನಿಕಾಂತ್ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ.

ಇತ್ತೀಚೆಗಷ್ಟೆ ಸೂಪರ್ ಸ್ಟಾರ್ ರಜನಿಕಾಂತ್ ಮೊದಲ ಪುತ್ರಿ ಐಶ್ವರ್ಯಾ ರಜನಿಕಾಂತ್ ಕಳ್ಳತನದ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಇದೀಗ ತಲೈವಾ ಮತ್ತೋರ್ವ ಪುತ್ರಿ ಸೌಂದರ್ಯ ರಜನಿಕಾಂತ್ ಕೂಡ ಇದೀಗ ಪೊಲೀಸ್ ದೂರು ದಾಖಲಿಸಿದ್ದಾರೆ. ತಮ್ಮ ದುಬಾರಿ ಕಾರಿನ ಕೀ ಕಳೆದು ಹೋಗಿದೆ ಎಂದು ಸೌಂದರ್ಯ ರಜನಿಕಾಂತ್ ಚೈನ್ನೈನ ತೇನಾಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.  ಏಪ್ರಿಲ್ 23 ರಂದು ಕಾಲೇಜು ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಕೀ ಕಳೆದು ಹೋಗಿರುವುದು ಗಮನಕ್ಕೆ ಬಂದಿದೆ. ರೇಂಜ್ ರೋವರ್ ಕಾರನ್ನು ಬಿಟ್ಟು ಮತ್ತೊಂದು ಕಾರಿನಲ್ಲಿ ಕಾರ್ಯಕ್ರಮಕ್ಕೆ ತೆರಳಿದರು. 

ತನ್ನ ಪೌಚ್ ನಲ್ಲಿಟ್ಟಿದ್ದ ಐಷಾರಾಮಿ ವಾಹನದ ಕೀ ನಾಪತ್ತೆಯಾಗಿದ್ದು ಅದನ್ನು ಪತ್ತೆ ಹಚ್ಚಲು ಪೊಲೀಸರ ಸಹಾಯ ಕೋರಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಂದಹಾಗೆ ಈ ಮೊದಲು ರಜನಿಕಾಂತ್ ಅವರ ಮೊದಲ ಪುತ್ರಿ ಐಶ್ವರ್ಯಾ ರಜನಿಕಾಂತ್ ತನ್ನ ತಮ್ಮ ಮನೆಯಲ್ಲಿ ಆಭರಣ ಕಳ್ಳತನವಾಗಿದೆ ಎಂದು ತೆನಾಂಪೇಟೆ ಪೊಲೀಸ್ ಸ್ಟೇಷನ್‌ನಲ್ಲಿ ದೂರು ನೀಡಿದ್ದರು. ಮನೆ ಕೆಲಸದ ಇಬ್ಬರ ಮೇಲೆ ಅನುಮಾನ ವ್ಯಕ್ತಪಡಿಸಿ ಐಶ್ವರ್ಯಾ ದೂರು ದಾಖಲಿಸಿದ್ದರು. ಐಶ್ವರ್ಯಾ ಅವರ ದೂರಿನ ಆಧಾರದ ಮೇಲೆ ಮನೆ ಕೆಲಸದಾಕೆ ಈಶ್ವರಿ ಮತ್ತು ಕಾರು ಚಾಲಕ ವೆಂಕಟೇಶನ್ ಎಂಬ ಇಬ್ಬರನ್ನೂ ಪೊಲೀಸರು ಬಂದಿಸಿ ವಿಚಾರಣೆ ನಡೆಸಿದಾಗ ಅವರೇ ಕದ್ದಿರುವುದಾಗಿ ಒಪ್ಪಿಕೊಂಡಿದ್ದರು.

Lal Salaam: ರಜನಿಕಾಂತ್ ಪೋಸ್ಟರ್ ಹಿಗ್ಗಾಮುಗ್ಗಾ ಟ್ರೋಲ್; ನಿರ್ದೇಶನದಿಂದ ಮಗಳನ್ನು ತೆಗೆದಾಕಿ ಎಂದ ಫ್ಯಾನ್ಸ್

ರಜನಿಕಾಂತ್ ಎರಡನೇ ಪುತ್ರಿ ಸೌಂದರ್ಯ ರಜನಿಕಾಂತ್ ನಿರ್ದೇಶಕಿ, ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಜೊತೆ ಗ್ರಾಫಿಕ್ಸ್ ಡಿಸೈನರ್ ಕೂಡ ಹೌದು. ಸೌಂದರ್ಯ ರಜನಿಕಾಂತ್ ಕೊನೆಯದಾಗಿ ವೆಲೈಯಿಲ್ಲ ಪಟ್ಟಧಾರಿ 2 ಸಿನಿಮಾ ನಿರ್ದೇಶನ ಮಾಡಿದ್ದರು. ತಲೈವಾ ಮೊದಲ ಪುತ್ರಿ ಐಶ್ವರ್ಯಾ ರಜನಿಕಾಂತ್ ಲಾಲ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ರಜನಿಕಾಂತ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಾಜಕಾಂತ್ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಸಿನಿಮಾ ಜೊತೆಗೆ ರಜನಿಕಾಂತ್ ಜೈಲರ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?
ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!