Salman Khan Wedding: ಸೀಕ್ರೆಟ್‌ ಆಗಿ ಸೋನಾಕ್ಷಿ ಸಿನ್ಹಾ ಮದ್ವೆ ಆದ್ರಾ? ವೈರಲ್ ಆಗ್ತಿದೆ ಫೋಟೋ

Suvarna News   | Asianet News
Published : Mar 02, 2022, 02:19 PM IST
Salman Khan Wedding:   ಸೀಕ್ರೆಟ್‌ ಆಗಿ ಸೋನಾಕ್ಷಿ ಸಿನ್ಹಾ ಮದ್ವೆ ಆದ್ರಾ? ವೈರಲ್ ಆಗ್ತಿದೆ ಫೋಟೋ

ಸಾರಾಂಶ

ಬಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್ ಸಲ್ಮಾನ್ ಖಾನ್ 56ನೇ ವಯಸ್ಸಿನಲ್ಲಿ ದಬಾಂಗ್ ಚಿತ್ರದ ನಾಯಕಿ ಸೋನಾಕ್ಷಿ ಸಿನ್ಹಾ ಅವರನ್ನು ಮದ್ವೆ ಆದ್ರಾ.. ವೈರಲ್ ಆಗ್ತಿದೆ ಇವ್ರ ಮದುವೆ ಫೋಟೋ.   

ಬಾಲಿವುಡ್ (Bollywood) ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan). ತನ್ನ 56ರ ಹರೆಯದಲ್ಲೂ ಖಡಕ್ ಮೈಕಟ್ಟು, ಹ್ಯಾಂಡ್‌ಸಮ್ ಲುಕ್‌ನಿಂದ ಗಮನ ಸೆಳೆಯುತ್ತಿರುವ ಈ ಹೀರೋ ಸಿನಿಮಾ ರಂಗಕ್ಕೆ ಬಂದು 30 ವರ್ಷಗಳೇ ಕಳೆದಿವೆ. ತನ್ನ ಅನುಭವದಷ್ಟು ವಯಸ್ಸಿನ ನಾಯಕಿಯರ ಜೊತೆಗೆ ಸ್ಕ್ರೀನ್‌ನಲ್ಲಿ ಡ್ಯುಯೆಟ್ ಹಾಡೋ ಈ ಹೀರೋ (Hero) ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರೋದು ಸುಳ್ಳಲ್ಲ. ಬಾಲಿವುಡ್‌ನ ಬಹಳ ಜನಪ್ರಿಯ ಹಾಗೂ ಪ್ರಭಾವಿ ಹೀರೋ ಸಲ್ಮಾನ್ ಖಾನ್ ಸಿನಿಮಾಗಳೆಂದರೆ ಅವು ಬಾಕ್ಸ್ ಆಫೀಸ್ ರೆಕಾರ್ಡ್ ಬ್ರೇಕ್ ಮಾಡೋದು ಗ್ಯಾರಂಟಿ ಅನ್ನೋ ಮಾತೂ ಬಾಲಿವುಡ್‌ನಲ್ಲಿ ಚಾಲ್ತಿಯಲ್ಲಿದೆ. ಜನ ಇವರ ಸಿನಿಮಾಗಳ ಬಗ್ಗೆ ಮಾತನಾಡುವಷ್ಟೇ ಇವರ ಲೈಫಿನ ಬಗ್ಗೆಯೂ ಮಾತಾಡ್ತಾರೆ. ಆಗಾಗ ಅವರ ಗರ್ಲ್ ಫ್ರೆಂಡ್ (Girl Friend)  ಸುದ್ದಿ, ರಿಲೇಶನ್‌ಶಿಪ್‌ನ ಸುದ್ದಿ, ಅವರ ಮದುವೆಯ ಸುದ್ದಿ ಜನರ ಬಾಯಲ್ಲಿ ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರಾಡ್ತನೇ ಇರ್ತವೆ. ಸದ್ಯಕ್ಕೀಗ ಸಲ್ಮಾನ್ ಖಾನ್ ದಬಾಂಗ್ (Dabang) ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರನ್ನು ವರಿಸಿದ್ದಾರೆ ಅನ್ನುವ ಸುದ್ದಿ ದಟ್ಟವಾಗಿ ಹಬ್ಬಿದೆ. ಅದಕ್ಕೆ ಪೂರಕವಾಗಿ ಅವರ ಮದುವೆಯ ಫೋಟೋಗಳೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 

ಸಲ್ಮಾನ್ ಖಾನ್ ಬಾಲಿವುಡ್‌ನ ಹೈಯೆಸ್ಟ್ ಸಂಭಾವನೆ ತಗೊಳ್ಳೋ ನಟ ಅಂತ ಹೆಸರಾದವರು. ಅವರ 30 ವರ್ಷಗಳ ಸಿನಿಮಾ (Cinema) ಕೆರಿಯರ್‌ನಲ್ಲಿ ತೆಗೆದುಕೊಂಡ ಪ್ರಶಸ್ತಿಗಳು ಅನೇಕ. ಅವರ ನಿರ್ಮಾಣದ ಸಿನಿಮಾಕ್ಕೆ ಎರಡು ನ್ಯಾಶನಲ್ ಅವಾರ್ಡೂ ಬಂದಿದೆ. ಅವರ ಆಕ್ಟಿಂಗ್‌ಗೆ ಎರಡು ಬಾರಿ ಫಿಲಂ ಫೇರ್ (Film Fare award) ಅವಾರ್ಡ್ ಬಂದಿದೆ. ಇದರ ಜೊತೆಗೆ ಸಲ್ಮಾನ್ ಖಾನ್ ಅವರ ವೈಯುಕ್ತಿಕ ಲೈಫು ಅನೇಕ ಸಲ ಸಿನಿಮಾ ಮ್ಯಾಗಜಿನ್‌ಗಳ ಹೆಡ್‌ಲೈನ್‌ ಆಗಿದೆ. ಸದ್ಯಕ್ಕೀಗ ಹೊರಬಂದಿರುವ ಈ ನಟನ ಮದುವೆ ಫೋಟೋದಲ್ಲಿ ಸಲ್ಮಾನ್‌ ಖಾನ್ ಮದುಮಗನ (Bride groom) ಬಟ್ಟೆಯಲ್ಲಿದ್ದಾರೆ. ಸೋನಾಕ್ಷಿ ಸಿನ್ಹಾ ಮದುಮಗಳ (Bride) ಅವತಾರ್‌ನಲ್ಲಿದ್ದಾರೆ. ಈಗ ಸಿಕ್ಕಿರುವ ಫೋಟೋದಲ್ಲಿ ಸಲ್ಮಾನ್‌ ಅವರು ಸೋನಾಕ್ಷಿ ಹಣೆಗೆ ಕುಂಕುಮವಿಡುತ್ತಾ ಮುಗುಳ್ನಗುತ್ತಿದ್ದಾರೆ. ಈ ಫೋಟೋ ಯಾವ ಮಟ್ಟಿಗೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ (Viral) ಆಗಿದೆ ಅಂದರೆ ಜನ ನಿಜಕ್ಕೂ ವಯಸ್ಸಲ್ಲಿ ಸಿಕ್ಕಾಪಟ್ಟೆ ದೊಡ್ಡವನಾದ ಸಲ್ಮಾನ್ ಖಾನ್ ಸೋನಾಕ್ಷಿ ಅವರನ್ನು ವರಿಸಿದರಾ ಅಂತ ಸಣ್ಣ ಅನುಮಾನದಲ್ಲೇ ನೋಡೋ ಹಾಗಾಗಿದೆ. 

Depressionನಲ್ಲಿದ್ದ ಯುವರಾಜ್‌ ಸಿಂಗ್‌ ಪತ್ನಿ ಹೇಜಲ್‌ ಕಿಚ್‌; ಯಾಕಪ್ಪ ಹೀಗೆ?

ಸೋನಾಕ್ಷಿ ಸಿನ್ಹಾ ದಬಾಂಗ್‌ನಲ್ಲಿ ಎಷ್ಟೇ ಚೆನ್ನಾಗಿ ನಟಿಸಿದರೂ ಶತ್ರುಘ್ನ ಸಿನ್ಹಾ (Shatrughna Sinha) ಮಗಳು ಪ್ರತಿಭಾವಂತ ನಟಿ ಅಂತ ಹೆಸರು ತಗೊಂಡಿದ್ರೂ ಸದ್ಯ ಅವರಿಗೆ ಸಿನಿಮಾ ಅವಕಾಶಗಳು ಬರುತ್ತಿಲ್ಲ. ಇದಕ್ಕೆ ಅವರ ಬಾಡಿಟೈಪ್‌ (Body Type) ಮುಖ್ಯ ಕಾರಣ ಅಂತ ಬಾಲಿವುಡ್‌ (Bollywood) ಮಂದಿ ಮಾತನಾಡುತ್ತಿದ್ದಾರೆ. ಅಗಲ ಶೋಲ್ಡರ್‌ಗಳ ಈ ನಟಿ ಎಷ್ಟೇ ಜಿಮ್ (Gym) ಮಾಡಿ, ವರ್ಕೌಟ್ (Workout) ಮಾಡಿದ್ರೂ ಸ್ಕ್ರೀನ್‌ (Screen) ಮೇಲೆ ಸಣ್ಣಗೆ ಬಳುಕುವ ಬಳ್ಳಿಯಾಗಿ ಕಾಣಿಸಿಕೊಳ್ಳೋಕೆ ಸಾಧ್ಯವಾಗ್ತಿಲ್ಲ. ಬಾಲಿವುಡ್‌ನಲ್ಲಿ ಕೆಲವರು, ಸೋನಾಕ್ಷಿ ತನ್ನ ಉಡುಗೆಗಾಗಿ ಒಬ್ಬ ಡಿಸೈನರ್ ಇಟ್ಕೊಂಡಿದ್ದಾರೆ. ಏಕೆಂದರೆ ಅವರ ಸೈಜ್‌ನ ಬಟ್ಟೆಗಳು ಶಾಪ್ ನಲ್ಲಿ ಸಿಗೋದಿಲ್ವಲ್ಲಾ' ಅನ್ನೋ ಥರದ ಚೀಪ್ ಜೋಕ್ ಮಾಡಿ ಸೋನಾಕ್ಷಿ ಕಣ್ಣಲ್ಲಿ ಸಣ್ಣವರಾಗಿದ್ರು. ಒಂದು ಹಂತದವರೆಗೆ ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತಿದ್ದ ಸೋನಾಕ್ಷಿ ಆಮೇಲೆ ಇಂಥದ್ದಕ್ಕೆಲ್ಲ ತಲೆ ಕೆಡಿಸಿಕೊಳ್ಳೋದು ಬಿಟ್ಟು ಬಿಟ್ಟರು. 

ಸೋನಾಕ್ಷಿಗೆ ಅವಕಾಶ ಸಿಕ್ತಿಲ್ಲ. ಸಲ್ಮಾನ್‌ ಸಿನಿಮಾಗಳು ಮೊದಲಿನಂತೆ ಹಿಟ್ ಆಗ್ತಿಲ್ಲ. ಸಮಾನ ದುಃಖಿಗಳಾದ ಈ ಜೋಡಿ ಮದ್ವೆ ಆಗ್ತಿದ್ದಾರೆ ಅನ್ನೋದು ಜನರ ಮಾತು. ಆದರೆ ಈ ಬಗ್ಗೆ ಫಾಕ್ಟ್ ಚೆಕ್ (Fact Check) ಮಾಡಿದಾಗ ಈ ಸುದ್ದಿ ಸುಳ್ಳು ಅಂತ ಗೊತ್ತಾಗಿದೆ. ಯಾರೋ ಕಿಡಿಗೇಡಿಗಳು ಫೋಟೋಶಾಪ್ ಮಾಡಿ ಈ ಫೋಟ್‌ಗಳನ್ನು ಹರಿಯಬಿಟ್ಟಿದ್ದಾರೆ. ಹೀಗಾಗಿ ಸಲ್ಮಾನ್ ಖಾನ್ ಮದ್ವೆ ಕೊನೆಗೂ ಆಗಿಯೇ ಬಿಟ್ತಾ ಅಂತ ಕಣ್ಣರಳಿಸಿದವ್ರಿಗೆ ಮತ್ತೆ ನಿರಾಸೆ ಆಗಿದೆ.

Happy Birthday: ಟೈಗರ್ ಶ್ರಾಫ್ ಅಸಲಿ ಹೆಸರು ಏನು ಗೊತ್ತಾ ?
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜಗಳದ ಕಾರಣದಿಂದ ನಾವು ದೂರವಾಗಲು ಬಯಸಲಿಲ್ಲ, ಜಗಳವನ್ನೇ ದೂರಮಾಡಲು ಬಯಸಿದ್ದೇವೆ; ಸೋನಾಕ್ಷಿ ಸಿನ್ಹಾ!
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?