
ಬಾಲಿವುಡ್ (Bollywood) ಜನಪ್ರಿಯ ನಿರ್ದೇಶಕಿ, ನಟಿ, ನಿರ್ಮಾಪಕಿ ಹಾಗೂ ನಿರೂಪಕಿಯಾಗಿರುವ ಸಿಮಿ ಗರೆವಾಲ್ (Simi Garewal) ಇತ್ತೀಚಿಗೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ (Social Media) ಸಖತ್ ವೈರಲ್ ಆಗುತ್ತಿದೆ. ಹಲವು ವರ್ಷಗಳ ಹಿಂದೆ ರೆಂಡೆಜ್ವಸ್ ವಿತ್ ಸಿಮಿ (Rendezvous wih Simi) ಎಂಬ ಮಾತುಕತೆ ಕಾರ್ಯಕ್ರಮಕ್ಕೆ ಪ್ರಿಯಾಂಕಾ ಚೋಪ್ರಾ (Priyanka Chopra) ಆಗಮಿಸಿದ್ದರು, ಈ ವೇಳೆ ಯಾರಿಗೂ ತಿಳಿಯದಂತೆ ಪಿಗ್ಗಿ ಮಾಡಿದ ತುಂಟಾಟ ಅಭಿಷೇಕ್ ಬಚ್ಚನ್ ಅವರನ್ನು ದೊಡ್ಡ ತೊಂದರೆಯಲ್ಲಿ ಸಿಲುಕಿಸಿತ್ತು.
ಏನಿದು ಘಟನೆ?:
ಚಿತ್ರರಂಗದಲ್ಲಿ ಏನೆಲ್ಲಾ ನಡೆಯುತ್ತಿವೆ, ಸಿನಿಮಾ ಅಪ್ಡೇಟ್‌ಗಳ ಬಗ್ಗೆ ಮಾತನಾಡುವಾಗ ಪ್ರಿಯಾಂಕಾ, ರಾಣಿ ಮತ್ತು ಅಭಿಷೇಕ್ ನಡುವೆ ಮಾತ್ರ ನಡೆದ ಘಟನೆ ಬಗ್ಗೆ ರಿವೀಲ್ ಮಾಡಿದ್ದಾರೆ. ಮೊದಲು ಇದನ್ನು ಕೇಳಿ ಶಾಕ್ ಆದ ಪ್ರಿಯಾಂಕಾ ನಗುತ್ತಲೇ ಉತ್ತರಿಸುತ್ತಾಳೆ. 'ನೀನು ಒಂದು ಸಲ ಅಭಿಷೇಕ್ ಬಚ್ಚನ್ (Abhishek Bachchan) ಫೋನ್ ಕಳ್ಳತನ ಮಾಡಿದ್ಯಾ? ಎಂದು ಸಿಮಿ ಕೇಳುತ್ತಾರೆ. 'ಇಲ್ಲ ಮೊದಲು ಕಳ್ಳತನ ಮಾಡಿದ್ದು ಅಭಿಷೇಕ್. ನನ್ನ ಫೋನ್ (Phone) ಮೇಲೆ ಕುಳಿತು ಕೊಂಡಿದ್ದರು. ಹೆಚ್ಚು ಹೊತ್ತು ಹೀಗೆ ಮಾಡಲು ಆಗಲಿಲ್ಲ. ಕಾರಣ ಅವನಿಗೆ ಶೂಟಿಂಗ್ ಇತ್ತು. ಹೊರಗಡೆ ಹೋಗಲೇಬೇಕಿತ್ತು,' ಎಂದು ಪ್ರಿಯಾಂಕಾ ಹೇಳಿದ್ದಾರೆ. 'ಆದರೆ ನೀವು ಯಾರಿಗೂ ಅಭಿಷೇಕ್ ಮೊಬೈಲ್‌ನಿಂದ ಮೆಸೇಜ್ (Message) ಮಾಡಿದ್ದೀರಿ ಅಲ್ವಾ?' ಎಂದು ಸಿಮಿ ಮತ್ತೆ ಪ್ರಶ್ನೆ ಕೇಳಿದ್ದರು.
'ಅಬ್ಬಾ!!...ಹಾ ಹೌದು ನಾನು ಅಭಿಷೇಕ್ ಫೋನ್ ಕದ್ದು ಬಚ್ಚಿಟ್ಟಿದ್ದೆ,' ಎಂದು ಪಿಗ್ಗಿ ಸೈಲೆಂಟ್ ಆಗಿದ್ದಾರೆ. ತಕ್ಷಣವೇ ಸಿಮಿ ಇಲ್ಲ ನೀವು ಯಾರಿಗೋ ಮೆಸೇಜ್ ಮಾಡಿದ್ದೀರಿ. 'ಒಬ್ಬರಿಗೆ ಅಭಿಷೇಕ್ ಮೊಬೈಲ್‌ನಿಂದ ಮೆಸೇಜ್ ಮಾಡಿದ್ದೆ' ಎಂದು ಪ್ರಿಯಾಂಕಾ ನಿಧಾನಕ್ಕೆ ಸತ್ಯ ಒಪ್ಪಿಕೊಳ್ಳುವಷ್ಟರಲ್ಲಿ ಸಿಮಿ ಅದು ರಾಣಿ ಮುಖರ್ಜಿ (Rani Mukherji) ಎಂದು ಹೆಸರು ರಿವೀಲ್ ಮಾಡುತ್ತಾರೆ. ತಪ್ಪು ಒಪ್ಪಿ ಕೊಳ್ಳುವುದು ಅನಿವಾರ್ಯವಾದ ಪಿಗ್ಗಿ, ನಗುತ್ತಲೇ ಪ್ರಿಯಾಂಕ 'ಹೌದು ಮೆಸೇಜ್ ಮಾಡಿದ್ದೆ...'ನಾನು ನಿನ್ನ ಮಿಸ್ ಮಾಡ್ತಿದ್ದೀನಿ. ನೀನು ಹೇಗಿದ್ಯಾ? You wanna...' ಎಂದು ಸೆಂಡ್ ಮಾಡಿದ್ದೆ.... ಎಂದು ನಗುತ್ತಾರೆ.
ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿರುವ ಸಿಮಿ ಈ ಮೆಸೇಜ್‌ಗೆ ಕೆಲವೇ ನಿಮಿಷಗಳಲ್ಲಿ ರಾಣಿ ಪ್ರತಿಕ್ರಿಯೆ ಕೊಟ್ಟಿದ್ದಾರೆ ಅಲ್ವಾ? 'ಹಾಯ್ AB ನಿನಗೆ ಏನಾಗಿದೆ? ಎಂದು ರಾಣಿ' ಕಳುಹಿಸಿದ್ದಾರೆ ಎಂದು ಸಿಮಿ ಹೇಳುತ್ತಾರೆ. ಇದೊಂದು ಸಣ್ಣ ವಿಡಿಯೋ ಆಗಿದ್ದು, ಇಷ್ಟೆಲ್ಲಾ ಮಾಹಿತಿ ನಿಮಗೆ ಹೇಗೆ ಸಿಕ್ತು ಎಂದು ಪ್ರಿಯಾಂಕಾ ಪದೇ ಪದೇ ಸಿಮಿಯನ್ನು ಪ್ರಶ್ನೆ ಮಾಡುತ್ತಾರೆ. 'ಬಿ-ಟೌನ್‌ನಲ್ಲಿ ನನಗೆ ತುಂಬಾ ಜನ ಗೊತ್ತಿದ್ದಾರೆ' ಎಂದು ಸಿಮಿ ಹೇಳುತ್ತಾರೆ. 'ಹೌದು ನಿಮಗೆ ಗೊತ್ತು ಆದರೆ ಇದು ಹೇಳಿರುವುದು ಅಭಿಷೇಕ್ ಬಚ್ಚನ್ ಅವರೇ,' ಎಂದಿದ್ದಾರೆ ಪಿಗ್ಗಿ.
ಸಿಮಿ ಅಗರ್ವಾಲ್ ನಡೆಸುತ್ತಿದ್ದ ಈ ಟಾಕ್ ಶೋ 1997ರಲ್ಲಿ ಪ್ರಸಾರವಾಗಿತ್ತು. ಸ್ಟಾರ್ ವರ್ಲ್ಡ್ (Star world) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮ ಅತಿ ಹೆಚ್ಚು ಟಿಆರ್‌ಪಿ ಪಡೆದುಕೊಂಡಿತ್ತು. ಸಿಮಿ ಜನಪ್ರಿಯತೆ ಹೆಚ್ಚಿದ್ದ ಕಾರಣ ಯಾವ ಸೆಲೆಬ್ರಿಟಿಯೂ ಕಾರ್ಯಕ್ರಮ ಆಹ್ವಾನಕ್ಕೆ 'No' ಅಂದಿಲ್ಲವಂತೆ. ಒಟ್ಟಿನಲ್ಲಿ ಪಿಗ್ಗಿ ಈ ರೀತಿಯೂ ಪ್ರ್ಯಾಂಕ್ ಮಾಡುತ್ತಾರೆ ಎಂದು ಅಭಿಮಾನಿಗಳಿಗೆ ಈಗ ತಿಳಿದು ಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.