ಬಾಲಿವುಡ್ (Bollywood)ನ ಹ್ಯಾಂಡ್‌ಸಮ್, ಕ್ಯೂಟ್, ಹಂಬಲ್ ನಟ ಟೈಗರ್ ಶ್ರಾಫ್ (Tiger Shroff) ಬಗ್ಗೆ ಎಲ್ಲರಿಗೂ ಗೊತ್ತು. ಆದ್ರೆ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ನಟನ ಅಸಲಿ ಹೆಸ್ರು ಅದಲ್ಲ ಅನ್ನೋದು ಗೊತ್ತಾ ?
ಬಾಲಿವುಡ್ (Bollywood) ನಟ ಟೈಗರ್ ಶ್ರಾಫ್ (Tiger Shroff). 2014ರಲ್ಲಿ ಬಿಡುಗಡೆಯಾದ ಹೀರೋಪಂತಿ ಚಿತ್ರದ ಮೂಲಕ ಅಭಿನಯ ಆರಂಭಿಸಿದ ನಟ. ತನ್ನ ಕಠಿಣ ಪರಿಶ್ರಮ, ಅಭಿನಯದೆಡೆಗಿನ ಸಮರ್ಪಣಾ ಮನೋಭಾವದಿಂದ ಬಿಟೌನ್‌ನಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೊಮ್ಯಾಂಟಿಕ್ ಹೀರೋ ಆಗಿ ನಟಿಸುವುದರಿಂದ ಹಿಡಿದು ಡ್ಯಾನ್ಸಿಂಗ್ ಸ್ಟಾರ್, ಆಕ್ಷನ್ ಹೀರೋ ಹೀಗೆ ಎಲ್ಲದರಲ್ಲೂ ದಿ ಬೆಸ್ಟ್ ಎನಿಸಿಕೊಂಡಿದ್ದಾರೆ. ಹೀಗಿರುವ ಟೈಗರ್ ಶ್ರಾಫ್‌ಗೆ ಇವತ್ತು ಹ್ಯಾಪಿ ಬರ್ತ್‌ಡೇ (Birthday). ಟೈಗರ್ ಶ್ರಾಫ್ ಇಂದು ತಮ್ಮ 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಸೋಷಿಯಲ್ ಮೀಡಿಯಾ (Social Media)ದಲ್ಲಿ ಸಾಕಷ್ಟು ಸಕ್ರಿಯರಾಗಿರುವ ದಿ ಸ್ಟೂಡೆಂಟ್ ಆಫ್ ದಿ ಇಯರ್ 2 ನಟ, ತಂದೆ ಜಾಕಿ ಶ್ರಾಫ್, ಮಮ್ಮಿ ಆಯೇಶಾ ಶ್ರಾಫ್ ಮತ್ತು ಸಹೋದರಿ ಕೃಷ್ಣ ಶ್ರಾಫ್. ಟೈಗರ್ ಶ್ರಾಫ್ ಸಂದರ್ಶನವೊಂದರಲ್ಲಿ, ತನ್ನ ಜೀವನದಲ್ಲಿ ತನ್ನ ಏಕೈಕ ಗುರಿ ತನ್ನ ತಂದೆಯನ್ನು ಹೆಮ್ಮೆಪಡಿಸುವುದಾಗಿದೆ ಎಂದು ಒತ್ತಿ ಹೇಳಿದ್ದರು. ಇತರರು ನಾನು ನನ್ನ ತಂದೆಯ ಹೆಜ್ಜೆಗಳನ್ನು ಅನುಸರಿಸಿ ಬಾಲಿವುಡ್‌ಗೆ ಪ್ರವೇಶಿಸುತ್ತಾರೆ ಎಂದು ನಿರೀಕ್ಷಿಸಿದ್ದರು. ಆದರೆ ಆರಂಭದಲ್ಲಿ ನಾನು ವಿಭಿನ್ನ ವೃತ್ತಿಜೀವನವನ್ನು ಆಯ್ಕೆಯನ್ನು ಮಾಡಲು ಬಯಸಿದ್ದೆ ಎಂದು ನಟ ಹೇಳಿದ್ದಾರೆ. ಕ್ರೀಡೆಯಲ್ಲಿ ನನಗೆ ಹೆಚ್ಚು ಆಸಕ್ತಿಯಿತ್ತು. ಫುಟ್‌ಬಾಲ್ ನನ್ನ ನೆಚ್ಚಿನದು. ಆದರೆ ನನ್ನ ತಂದೆಯ ಸ್ನೇಹಿತರು ನನ್ನನ್ನು ಬಾಲಿವುಡ್‌ನಲ್ಲಿ ನೋಡುವ ಬಗ್ಗೆ ಮಾತನಾಡುತ್ತಲೇ ಇದ್ದರು ಎಂದು ಟೈಗರ್ ಶ್ರಾಫ್ ತಿಳಿಸಿದ್ದಾರೆ.
ಟೈಗರ್ ಶ್ರಾಫ್ ಅಭಿನಯದ ಹೀರೋಪಂತಿ-೨ ಈದ್‌ಗೆ ಬಿಡುಗಡೆಯಾಗಲಿದೆ. ಚಿತ್ರ ಸಂಪೂರ್ಣ ಆಕ್ಷನ್ ಹಾಗೂ ಮನರಂಜನೆಯಿಂದ ಕೂಡಿರಲಿದೆ ಎಂದು ನಟ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಟೈಗರ್ ಶ್ರಾಫ್ ಹೊಸ ಸೀ ಸೈಡ್ ಅಪಾರ್ಟ್‌ಮೆಂಟ್ ಹೇಗಿದೆ ನೋಡಿ!
ಟೈಗರ್ ಶ್ರಾಫ್ ಹ್ಯಾಂಡ್‌ಸಮ್, ಕ್ಯೂಟ್, ಹಂಬಲ್ ನಟ ಎಂದು ಎಲ್ಲರಿಗೂ ಗೊತ್ತು. ಆದ್ರೆ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ನಟನ ಅಸಲಿ ಹೆಸ್ರು ಅದಲ್ಲ ಅನ್ನೋದು ಗೊತ್ತಾ ?
ಟೈಗರ್ ಶ್ರಾಫ್ ಹೆಸ್ರು ಹಾಗಲ್ಲ ಜೈ ಹೇಮಂತ್ ಶ್ರಾಫ್ !
ಬಾಲಿವುಡ್‌ನ ಟೈಗರ್ ಶ್ರಾಫ್ ಎಲ್ಲರಿಗೂ ಗೊತ್ತು. ಆದರೆ ಅವರ ಅಸಲಿ ಹೆಸರು ಅದಲ್ಲ ಅನ್ನೋದು ಹಲವರಿಗೆ ಗೊತ್ತಿಲ್ಲ. ಹೌದು ಬಾಗಿ ಚಿತ್ರನಟನ ಅಸಲಿ ಹೆಸರು ಇದಲ್ಲ. ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿರುವ ಟೈಗರ್ ಶ್ರಾಫ್ ಅಸಲಿ ಹೆಸರು ಜೈ ಹೇಮಂತ್ ಶ್ರಾಫ್.
ಹೌದು, ಟೈಗರ್ ಶ್ರಾಫ್ ಹುಟ್ಟಿದ ಸಮಯದಲ್ಲಿ, ಅವರ ಪೋಷಕರು ಜಾಕಿ ಶ್ರಾಫ್ (Jackie Shroff) ಮತ್ತು ಆಯೇಶಾ ಶ್ರಾಫ್ ಅವರಿಗೆ ಜೈ ಹೇಮಂತ್ ಶ್ರಾಫ್ ಎಂದು ಹೆಸರಿಸಿಟ್ಟರು. ಆದರೆ ಜೈ ಹೇಮಂತ್ ಶ್ರಾಫ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಸಮಯದಲ್ಲಿ ಇದನ್ನು ಟೈಗರ್ ಶ್ರಾಫ್ ಎಂದು ಬದಲಾಯಿಸಲಾಯಿತು.
ಬಾಲಿವುಡ್ ಹಾಟ್ ಜೋಡಿ ಜೊತೆಗಿದ್ದಾಗ ಏನ್ಮಾಡ್ತಾರೆ ? ಟೈಗರ್ ತಂಗಿ ಹೇಳಿದ್ದಿಷ್ಟು
ಟೈಗರ್ ಶ್ರಾಫ್ ಎಂಬ ಹೆಸರು ಯಾಕೆ ಬಂತು ?
ಅಷ್ಟಕ್ಕೂ ಹೆಸರನ್ಯಾಕೆ ಟೈಗರ್ ಎಂದಿಟ್ಟರು ಎಂದು ಹಲವರಿಗೆ ಕುತೂಹಲವಾಗಬಹುದು. ಆದರೆ ಜೈ ಹೇಮಂತ್ ಶ್ರಾಫ್‌ಗೆ ಚಿಕ್ಕಂದಿನಿಂದಲೇ ಎಲ್ಲರನ್ನೂ ಕಚ್ಚುವ ಅಭ್ಯಾಸವಿತ್ತಂತೆ. ಇದೇ ಕಾರಣಕ್ಕೆ ಟೈಗರ್ ಎಂದು ಹೆಸರಿಡಲಾಯಿತು ಎಂದು ತಿಳಿದುಬಂದಿದೆ. ಸಂದರ್ಶನವೊಂದರಲ್ಲಿ ಟೈಗರ್ ಶ್ರಾಫ್ ಈ ವಿಚಾರವನ್ನು ಬಹಿರಂಗಪಡಿಸಿದದ್ಆರೆ. ಚಿಕ್ಕಂದಿನಲ್ಲಿ ಮನೆಯಲ್ಲಿ, ಸ್ಕೂಲ್‌ನಲ್ಲಿ ಎಲ್ಲರಿಗೂ ಕಚ್ಚುತ್ತಿದ್ದೆ. ಸುತ್ತಮುತ್ತಲಿನವರಿಗೆ ಎಲ್ಲರಿಗೂ ಕಚ್ಚುವ ಅಭ್ಯಾಸವಿತ್ತು. ನನ್ನ ಕಚ್ಚುವ ಅಭ್ಯಾಸದಿಂದಾಗಿ ಜನರು ನನ್ನನ್ನು ಹುಲಿಗೆ ಹೋಲಿಸಲು ಪ್ರಾರಂಭಿಸಿದಾಗ ತನಗೆ ಈ ಹೆಸರು ಬಂದಿತು ಎಂದು ಬಹಿರಂಗಪಡಿಸಿದರು. ನಾನು ಶಾಲೆಯಲ್ಲಿ ನನ್ನ ಶಿಕ್ಷಕರನ್ನು ಕಚ್ಚಿದೆ ಮತ್ತು ಅದಕ್ಕಾಗಿ ಶಿಕ್ಷೆಯನ್ನು ಸಹ ಅನುಭವಿಸಿದೆ ಎಂದು ಹೇಳಿಕೊಂಡರು.
ಟೈಗರ್ ಅಥವಾ ಹುಲಿಯೆಂದು ಹೆಸರಿಟ್ಟಿದ್ದು ಟೈಗರ್ ಶ್ರಾಫ್ ಪ್ರಾಣಿಗಾಗಿ ಏನಾದರೂ ಉತ್ತಮ ಕಾರ್ಯಗಳನ್ನು ಮಾಡಬೇಕೆಂದು ಪ್ರೇರೇಪಿಸಿತು. 2014ರಲ್ಲಿ, ನಟ ನಾಗ್ಪುರದ ಮಹಾರಾಜ್‌ಬಾಗ್ ಮೃಗಾಲಯದಲ್ಲಿ ಲೀ ಎಂಬ ಹುಲಿಯನ್ನು ದತ್ತು ಪಡೆದರು.