ಸೆಕ್ಸ್​ ಸೀನ್​ಗಳಿಗೆ ಮೂಡ್​ ಕ್ರಿಯೇಟ್​ ಮಾಡ್ತಾರೆ, ಭಾವನೆ ತಡೆಯಲು ಆಗಲ್ಲ.. ಆಗ... ವಿಜಯ್‌ ವರ್ಮಾ ಓಪನ್ ಮಾತು

By Suchethana D  |  First Published Jul 3, 2024, 3:42 PM IST

ಸೆಕ್ಸ್​, ಇಂಟಿಮೇಟ್​ ದೃಶ್ಯಗಳ ಶೂಟಿಂಗ್​ ಮಾಡುವಾಗ ನಿರ್ದೇಶಕರು ಹೇಗೆಲ್ಲಾ ಮೂಡ್​ ಕ್ರಿಯೇಟ್​ ಮಾಡುತ್ತಾರೆ, ಆ ಸಂದರ್ಭದಲ್ಲಿ ಏನಾಗುತ್ತದೆ ಎಂಬ ಬಗ್ಗೆ ನಟ ವಿಜಯ್​ ವರ್ಮಾ ಹೇಳಿದ್ದೇನು? 
 


ಇತ್ತೀಚಿನ ದಿನಗಳಲ್ಲಿ ಚಿತ್ರಗಳಲ್ಲಿ ಇಂಟಿಮೇಟ್​ ಸೀನ್​ಗಳೇನೂ ಹೊಸತಲ್ಲ. ಅಂಥ ಚಿತ್ರಗಳು ಹಿಟ್​ ಆಗುತ್ತವೆ ಎನ್ನುವ ಕಾರಣಕ್ಕೆ ಚಿತ್ರ ತಾರೆಯರು ಸುಲಭದಲ್ಲಿ ಬಟ್ಟೆ ಬಿಚ್ಚಲು ತಯಾರಾಗಿರುತ್ತಾರೆ. ಅದರಲ್ಲಿಯೂ ನಟಿಯರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಸ್ಟಾರ್​ಡಮ್​ ಗಿಟ್ಟಿಸಿಕೊಳ್ಳಲು ನಿರ್ದಾಕ್ಷಿಣ್ಯವಾಗಿ ಬೆತ್ತಲಾಗಲು ರೆಡಿಯಾಗುವ ದೊಡ್ಡ ನಟಿಯರ ವರ್ಗವೇ ಇದೆ. ಚಿತ್ರಕ್ಕೆ ಅಗತ್ಯ ಬಿದ್ದರೆ ಬೆತ್ತಲಾಗುತ್ತೇನೆ ಎನ್ನುವ ಮಾತು ಬೇರೆ. ಇದೇ ಕಾರಣಕ್ಕೆ ಬೆಡ್​ರೂಮ್​ ದೃಶ್ಯಗಳನ್ನು ಒತ್ತಾಯಪೂರ್ವಕವಾಗಿಯೂ ತುರುಕುವ ಟ್ರೆಂಡ್​ ಶುರುವಾಗಿದೆ. ಇದೀಗ ಇಂಥ ದೃಶ್ಯಗಳಲ್ಲಿ ನಾಯಕ-ನಾಯಕಿ ಹೇಗೆಲ್ಲಾ ರೆಡಿಯಾಗಿರುತ್ತಾರೆ, ಪೂರ್ವ ಸಿದ್ಧತೆ ಹೇಗಿರುತ್ತದೆ? ಇಂಟಿಮೇಟ್​ ಸೀನ್​ ಮಾಡುವ ಮುನ್ನ ಹೇಗೆಲ್ಲಾ ಮೈಂಡ್​ ಪ್ರಿಪೇರ್​ ಆಗಿರಬೇಕಾಗುತ್ತದೆ ಎನ್ನುವ ಬಗ್ಗೆ ಮಾತನಾಡಿದ್ದಾರೆ ನಟ ವಿಜಯ್‌ ವರ್ಮಾ.

ಮಿರ್ಜಾಪುರ್‌ ಸೀಸನ್‌ 3 ಚಿತ್ರಕ್ಕೆ ಸಂಬಂಧಿಸಿದಂತೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯವನ್ನು ಬಹಿರಂಗಗೊಳಿಸಿದ್ದಾರೆ. ಅಂದಹಾಗೆ ಚಿತ್ರವು ನಾಡಿದ್ದು ಅಂದರೆ ಇದೇ 5ರಂದು  ಅಮೆಜಾನ್‌ ಪ್ರೈಂನಲ್ಲಿ  ಸ್ಟ್ರೀಮಿಂಗ್‌ ಆರಂಭಿಸಲಿದೆ. ಇದಾಗಲೆ ಸೀಸನ್​ 2 ಸಾಕಷ್ಟು ಇಂಟಿಮೇಟ್​ ದೃಶ್ಯಗಳಿಂದ ಕೂಡಿತ್ತು. ಅವುಗಳ ಕುರಿತು ಮಾತನಾಡಿದ್ದಾರೆ ವಿಜಯ್​ ವರ್ಮಾ. ಲಸ್ಟ್​ ಸ್ಟೋರೀಸ್​ನ ಹಿಟ್​ ಬಳಿಕ ಅಂಥದ್ದೇ ಸೆಕ್ಸ್​ ಸೀನ್​ಗಳೇ ಧಾರಾಳವಾಗಿ ತುಂಬಿರುವ ಇನ್ನೊಂದು ವೆಬ್​ಸೀರೀಸ್​ ಕುರಿತು ಮಾತನಾಡಿದ್ದಾರೆ. ಲಸ್ಟ್ ಸ್ಟೋರೀಸ್ 2 ಚಿತ್ರೀಕರಣದ ಸಮಯದಲ್ಲಿ ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಇದೇ ರೀತಿ ಇಂಟಿಮೇಟ್​ ಸೀನ್​ಗಳಲ್ಲಿ ಕಾಣಿಸಿಕೊಂಡು  ಡೇಟಿಂಗ್ ಶುರು ಮಾಡಿದ್ದಾರೆ. ಇದೀಗ ಶ್ವೇತಾ ತ್ರಿಪಾಠಿ  ಜೊತೆ ವಿಜಯ ವರ್ಮಾ ಸೆಕ್ಸ್​ ಸೀನ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. 

Tap to resize

Latest Videos

ಹಸಿಬಿಸಿ ದೃಶ್ಯ ಎಂದ್ರು, ಬಟ್ಟೆ ಬಿಚ್ಚಿ ಹೀರೊ ಜೊತೆ ಮಲಗಿದೆ... ಅದ್ರಲ್ಲೇನಿದೆ? ನಟಿ ದರ್ಶನಾ ಓಪನ್​ ಮಾತು...
    
ಈ ಸಂದರ್ಭದಲ್ಲಿ ಇಂಟಿಮೇಟ್​ ಸೀನ್​ಗಳಿಗೆ ತಮ್ಮನ್ನು ಹೇಗೆ ರೆಡಿ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಸೆಕ್ಸ್​ ದೃಶ್ಯಗಳಿಗೆ ಹೊಸದಾಗಿ ಏನೂ ಮಾಡಲ್ಲ. ಆದರೆ ಉಳಿದ ದೃಶ್ಯಗಳಂತೆಯೇ ಇದನ್ನೂ ಶೂಟ್​ ಮಾಡಲಾಗುತ್ತದೆ, ಇದಕ್ಕೂ ಡಾನ್ಸ್​ ಮತ್ತು  ಫೈಟ್‌ಗಳಿಗೆ ಮಾಡುವಂತೆ  ಕೋರಿಯೋಗ್ರಫಿ ಮಾಡಲಾಗುತ್ತದೆ ಎಂದಿದ್ದಾರೆ. ಇಂಟಿಮೇಟ್​ ಸೀನ್​ ತಯಾರಿ ಸುಲಭವಲ್ಲ. ಇಲ್ಲಿ  ನಿರ್ದೇಶಕ ನಾಯಕ ಮತ್ತು ನಾಯಕಿಗೆ ತುಂಬಾ ತಯಾರಿಯ ಅಗತ್ಯವಿರುತ್ತದೆ. ಸೆಕ್ಸ್​ ಸೀನ್​ಗಳ  ಸಂದರ್ಭದಲ್ಲಿ ಏನನ್ನು ಮುಟ್ಟಬೇಕು, ಏನನ್ನು ಮುಟ್ಟಬಾರದು ಎಂದು ಮೊದಲೇ ಹೇಳಿರುತ್ತಾರೆ. ಆದ್ದರಿಂದ ಸೇಫ್‌ ಝೋನ್‌ನಲ್ಲಿಯೇ ನಾವು ರೊಮ್ಯಾಂಟಿಕ್‌ ಸೀನ್‌ಗಳನ್ನು ಮಾಡಬೇಕಾಗುತ್ತದೆ. ಆದರೆ ಹಲವು ಸಂದರ್ಭಗಳಲ್ಲಿ ಸೆಕ್ಸ್​ ಸೀನ್​ ಮಾಡುವಾಗ ಭಾವನೆಗಳನ್ನು ತಡೆದಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಓಪನ್​ ಆಗಿ ಹೇಳಿದ್ದಾರೆ.  

ಇದೇ ವೇಳೆ ಇಂಥ ದೃಶ್ಯಗಳ ಶೂಟಿಂಗ್​ ಮಾಡುವ ಸಮಯದಲ್ಲಿ,  ಇಂಥ ದೃಶ್ಯಗಳು ಚೆನ್ನಾಗಿ ಬರಬೇಕೆಂಬ ಉದ್ದೇಶದಿಂದ ಸೆಟ್​ನಲ್ಲಿ ಶೂಟಿಂಗ್​ ವೇಳೆ ಹೆಚ್ಚು ಜನರು ಇರುವುದಿಲ್ಲ. ನಾಯಕಿ  ಜತೆಗೆ ಹೆಚ್ಚು ಹೊತ್ತು ಸಮಯ ಕಳೆಯುವಂತೆ ಮಾಡುತ್ತಾರೆ. ಇಬ್ಬರ ನಡುವೆ ಒಲವು ಮೂಡಿಸುವ ಸೀನ್ ಕ್ರಿಯೇಟ್​ ಮಾಡುತ್ತಾರೆ.  ಅಲ್ಲಿ ನಾವು ಎಷ್ಟು ಹೊತ್ತು ಮಾತನಾಡುತ್ತ, ಸಮಯ ಕಳೆಯುತ್ತೇವೋ ಅದು ಶೂಟಿಂಗ್‌ ಸಮಯದಲ್ಲಿ ತುಂಬ ಸಹಕಾರಿಯಾಗುತ್ತದೆ. ಸೀನ್​ಗಳಲ್ಲಿ ನೈಜತೆ ಬರುತ್ತದೆ ಎಂದಿದ್ದಾರೆ. 
 

ಅರ್ಜುನ್ ಕಪೂರ್​ ಜೀವನ ನಾನು ಹಾಳು ಮಾಡಿದ್ನಾ? ರಸ್ತೆಯಲ್ಲಿ ಹೋಗ್ತಿರೋನನ್ನು ಎಳ್ಕೊಂಡು ಬಂದು ಇಟ್ಕೊಂಡ್ನಾ ಅಥ್ವಾ...
 

click me!