ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಸಿಬ್ಬಂದಿ ಬೆಂಗಳೂರಿಗೆ ಟ್ರಾನ್ಸಫರ್

By Mahmad Rafik  |  First Published Jul 3, 2024, 3:17 PM IST

ಘಟನೆ ಬಳಿಕ ಕುಲ್ವಿಂದರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ವಿಚಾರಣೆ ನಡೆಯುತ್ತಿರುವ ಹಿನ್ನೆಲೆ ಕುಲ್ವಿಂದರ್ ಇನ್ನು ಸೇವೆಗೆ ಮರಳಿಲ್ಲ.


ನವದೆಹಲಿ: ಬಾಲಿವುಡ್ ನಟಿ, ಬಿಜೆಪಿ ಸಂಸದೆ ಕಂಗಣಾ ರಣಾವತ್‌ಗೆ (Bollywood Actress Kangana Ranaut) ಕಪಾಳಮೋಕ್ಷ ಮಾಡಿದ್ದ ಸಿಐಎಸ್‌ಎಫ್ ಮಹಿಳಾ ಸಿಬ್ಬಂದಿ (CISF Woman Security Guard) ಕುಲ್ವಿಂದರ್ ಕೌರ್ ಅವರನ್ನು ಬೆಂಗಳೂರಿಗೆ (Bengaluru) ವರ್ಗಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ. ಘಟನೆ ಬಳಿಕ ಕುಲ್ವಿಂದರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ವಿಚಾರಣೆ ನಡೆಯುತ್ತಿರುವ ಹಿನ್ನೆಲೆ ಕುಲ್ವಿಂದರ್ ಇನ್ನು ಸೇವೆಗೆ ಮರಳಿಲ್ಲ. ಚಂಡೀಗಢ ಏರ್‌ಪೋರ್ಟ್‌ನಲ್ಲಿ (Chandigarh Airport)  ಕಂಗನಾ ರಣಾವತ್ ಅವರ ಮೇಲೆ ಕುಲ್ವಿಂದರ್ ಆಕ್ರಮಣಕಾರಿಯಾಗಿ ದಾಳಿ ನಡೆಸಿ ಕಪಾಳಕ್ಕೆ ಏಟು ನೀಡಿದ್ದರು. ದೆಹಲಿ ರೈತರ ಪ್ರತಿಭಟನೆಯನ್ನು ಟೀಕಿಸಿದ್ದಕ್ಕೆ ಹೊಡೆದಿದ್ದೇನೆ ಎಂದು ಕುಲ್ವಿಂದರ್ ಹೇಳಿಕೊಂಡಿದ್ದರು.

ಸಂಸದೆ ಮೇಲಿನ ಸಂಬಂಧ ವಿಶೇಷ ತನಿಖಾದಳ ತಂಡವನ್ನು ರಚಿಸಲಾಗಿದೆ. ಪ್ರಕರಣದ ಸಂಪೂರ್ಣ ತನಿಖೆ ನಡೆಸಿರುವ ಎಸ್‌ಐಟಿ ತಂಡ ವರದಿಯನ್ನು ಉನ್ನತ ಅಧಿಕಾರಿಗಳಿಗೆ ಸಲ್ಲಿಕೆ ಮಾಡಿದೆ. ಆದರೆ ಈ ಕುರಿತು ಎಸ್‌ಐಟಿ ಅಧಿಕಾರಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

Tap to resize

Latest Videos

7ನೇ ಜೂನ್ 2024ರಂದು ಮಂಡಿ ಲೋಕಸಭಾ ಕ್ಷೇತ್ರದ ಸಂಸದೆ ಕಂಗನಾ ರಣಾವತ್ ಚಂಡೀಗಢ್‌ನಿಂದ ದೆಹಲಿಗೆ ಹೊರಟಿದ್ದರು. ಚಂಡೀಗಢ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯದಲ್ಲಿದ್ದ ಕುಲ್ವಿಂದರ್ ನಟಿಗೆ ಕಪಾಳಮೋಕ್ಷ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಪಂಜಾಬ್​ ಉಗ್ರವಾದವನ್ನು ಪ್ರಶ್ನಿಸುತ್ತಲೇ ಕೆನ್ನೆಗೆ ಹೊಡೆದ ಘಟನೆಗೆ ಪ್ರತಿಕ್ರಿಯೆ ನೀಡಿದ ಕಂಗನಾ

ಬಾಲಿವುಡ್ ಗಾಯಕ ವಿಶಾಲ್‌ ದಡ್ಲಾನಿ ಬೆಂಬಲ

ಬಾಲಿವುಡ್ ಗಾಯಕ ವಿಶಾಲ್‌ ದಡ್ಲಾನಿ ಅವರು ಕೌರ್‌ಗೆ ಉದ್ಯೋಗದ ಆಫರ್‌ ನೀಡಿದ್ರು.  ‘ನಾನು ಎಂದಿಗೂ ಹಿಂಸೆಯನ್ನು ಬೆಂಬಲಿಸುವುದಿಲ್ಲ, ಆದರೆ ಕೌರ್‌ಗೆ ಕೋಪ ಏಕೆ ಬಂದಿತ್ತೆಂಬುದನ್ನು ನಾನು  ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ. ಹೀಗಾಗಿ ಸಿಐಎಸ್‌ಎಫ್‌ ಆಕೆಯ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡರೆ, ನಾನು ಆಕೆಗೆ ಪರ್ಯಾಯ ಉದ್ಯೋಗ ಕೊಡಿಸುವೆ’ ಎಂದು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಇನ್ನು ಅನೇಕ ಬಾಲಿವುಡ್ ಕಲಾವಿದರು ಕಂಗನಾ ಮೇಲಿನ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದ್ದರು. 

ಪಂಜಾಬ್‌ನಲ್ಲಿ ಭಯೋತ್ಪಾದನೆ ಹೆಚ್ಚಾಗಿದೆ ಎಂದ ಕಂಗನಾ

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ನಟಿ ಕಂಗನಾ , ಏರ್‌ಪೋರ್ಟ್‌ನ ಸೆಕ್ಯೂರಿಟಿ ಚೆಕ್ಇನ್‌ನಲ್ಲಿ ಘಟನೆ ನಡೆಯಿತು. ಮಹಿಳಾ ಕಾನ್ಸ್‌ಟೇಬಲ್ ನಾನು ಪಾಸಾಗುವುದಕ್ಕೆ ಕಾಯುತ್ತಿದ್ದು, ಸೀದಾ ಬಂದು ನನಗೆ ಹೊಡೆದಳು. ಅಲ್ಲದೇ ಕೆಟ್ಟದಾಗಿ ನಿಂದಿಸಿದಳು, ಏಕೆ ನನಗೆ ಹೊಡೆದೆ ಎಂದು ನಾನು ಆಕೆಯನ್ನು ಕೇಳಿದೆ. ಅದಕ್ಕೆ ಆಕೆ ನಾನು ರೈತರನ್ನು ಬೆಂಬಲಿಸುವುದಾಗಿ ಹೇಳಿದಳು, ಸದ್ಯ ನಾನು ಸುರಕ್ಷಿತವಾಗಿದ್ದೇನೆ. ಆದರೆ ನನ್ನ ಕಳವಳ ಎಂದರೆ ಪಂಜಾಬ್‌ನಲ್ಲಿ ಭಯೋತ್ಪಾದನೆ ಹೆಚ್ಚಳವಾಗಿದೆ. ನಾವು ಅದನ್ನು ನಿರ್ವಹಿಸುವುದು ಹೇಗೆ ಎಂಬುದು ಎಂದು ಕಂಗನಾ ಟ್ವಿಟ್ ಮಾಡಿದ್ದರು. 

ಗೆಲುವಿನ ಸಂಭ್ರಮದಲ್ಲಿರುವ ಕಂಗನಾಗೆ ಶಾಕ್, ವಿಮಾನ ನಿಲ್ದಾಣದಲ್ಲಿ ಸಂಸದೆ ಮೇಲೆ ಹಲ್ಲೆ!

Shocking rise in terror and violence in Punjab…. pic.twitter.com/7aefpp4blQ

— Kangana Ranaut (@KanganaTeam)
click me!