ಯುವಕರು ಹೆಚ್ಚು ಸುಖ ಕೊಡ್ತಾರೋ, ಅಂಕಲ್​ಗಳೊ? ಶಿಲ್ಪಾ ಶೆಟ್ಟಿಗೆ ಎದುರಾಯ್ತು ದಿಢೀರ್​ ಪ್ರಶ್ನೆ- ನಟಿ ಕೊಟ್ಟ ಉತ್ತರ ವೈರಲ್​​!

By Suchethana D  |  First Published Jul 3, 2024, 2:40 PM IST

ನಟಿ ಶಿಲ್ಪಾ ಶೆಟ್ಟಿ ಸದ್ಯ ನ್ಯೂಯಾರ್ಕ್​ನಲ್ಲಿ ಎಂಜಾಯ್​ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಹಳೆಯ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸಿದೆ. ಏನದು?
 


ಸದ್ಯ ನಟಿ ಶಿಲ್ಪಾ ಶೆಟ್ಟಿ ನ್ಯೂಯಾರ್ಕ್​ನಲ್ಲಿ ಎಂಜಾಯ್​  ಮಾಡುತ್ತಿದ್ದಾರೆ. ಇದಾಗಲೇ ಬ್ಲೂ ಫಿಲ್ಮ್​ ಕೇಸ್​ನಲ್ಲಿ ಸಿಲುಕಿರೋ ನಟಿ ಮತ್ತು ಪತಿ ಉದ್ಯಮಿ ರಾಜ್ ಕುಂದ್ರಾ ಸದ್ಯ ಚಿನ್ನ ಹೂಡಿಕೆ ಸ್ಕೀಂ ವಂಚನೆ ಪ್ರಕರಣದಲ್ಲಿಯೂ ಸಿಲುಕಿದ್ದಾರೆ. ಶಿಲ್ಪಾ ಶೆಟ್ಟಿ ವಿರುದ್ಧ ತನಿಖೆಗೆ ಮುಂಬೈ ಕೋರ್ಟ್‌ ಆದೇಶ ಹೊರಡಿಸಿರುವ ಬೆನ್ನಲ್ಲೇ ನ್ಯೂಯಾರ್ಕ್​ನಲ್ಲಿ ಎಂಜಾಯ್​ ಮಾಡುತ್ತಿದ್ದಾರೆ. ಹಲವಾರು ಫೋಟೋಗಳನ್ನು ನಟಿ ಶೇರ್​ ಮಾಡಿಕೊಂಡಿರೋ ಹಿನ್ನೆಲೆಯಲ್ಲಿ, ಅವರ ಹಳೆಯ ವಿಡಿಯೋ ಒಂದು ಇದೀಗ ಸಕತ್​ ವೈರಲ್​ ಆಗ್ತಿದೆ. ಇದರಲ್ಲಿ ನಟಿಗೆ ನೀವು ಸುಖ ಕಾನೋದು ಯುವಕರಲ್ಲಿಯೋ, ಅಂಕಲ್​ಗಳಲ್ಲಿಯೋ ಎಂಬ ಪ್ರಶ್ನೆ ಎದುರಾಗಿತ್ತು. ಆಗ ಒಂದು ಕ್ಷಣ ತಡಬಡಿಸಿದ ನಟಿ ಕೊಟ್ಟ ಉತ್ತರ ಇದೀಗ ಮತ್ತೊಮ್ಮೆ ವೈರಲ್​ ಆಗಿದೆ. 

ಅಂದಹಾಗೆ ಈ ವಿಡಿಯೋ ಕಳೆದ ವರ್ಷದ್ದು. ಚಿತ್ರವೊಂದರ ಪ್ರಮೋಷನ್​ ವೇಳೆ ಅವರಿಗೆ ಈ ಪ್ರಶ್ನೆ ಎದುರಾಗಿತ್ತು. ಆಗ ಅಲ್ಲಿಗೆ ಬಂದಿದ್ದ ಅಭಿಮಾನಿಯೊಬ್ಬರು,  ನಿಮ್ಮನ್ನು ಎಲ್ಲಾ ವಯೋಮಾನದವರೂ ನೋಡುತ್ತಾರೆ.  ವೃದ್ಧರು, ಯುವಕರು, ಅಂಕಲ್​ಗಳು ಎಲ್ಲರೂ ನಿಮ್ಮನ್ನು ನೋಡ್ತಾರೆ, ನಿಮಗೆ ಸುಖ ಯಾವುದರಿಂದ ಸಿಗುತ್ತದೆ ಎಂದು ಪ್ರಶ್ನೆ ಕೇಳಿದ್ದ. ಸಡನ್​ ಆಗಿ ಎದುರಾದ ಪ್ರಶ್ನೆಗೆ ಆರಂಭದಲ್ಲಿ ತಡಬಡಿಸಿದ ನಟಿ, ಕೊನೆಗೆ, ದೊಡ್ಡದಾಗಿ ನಗುತ್ತಲೇ,  ನೋಡಿ,  ಜನರನ್ನು ಖುಷಿ ಪಡಿಸುವಲ್ಲಿ ನನ್ನ ಸುಖ ಇದೆ. ಜನರಿಗೆ ಮನೋರಂಜನೆ ಕೊಡುವುದೇ ನಮ್ಮ ಕೆಲಸ. ಅದರಲ್ಲಿಯೇ ನಟರಾದವರಿಗೆ  ಖುಷಿ ಇರುತ್ತದೆ. ಯಾವುದರಲ್ಲಿ ಖುಷಿ ಸಿಗುತ್ತದೆ ಎಂದು ತೀರ್ಪು ಕೊಡಲು ನನಗೆ ಸಾಧ್ಯವಿಲ್ಲ. ನನಗೆ ದುಡ್ಡು ಕೊಟ್ಟರೆ ಮಾತ್ರ ಟಿವಿಗಳಲ್ಲಿ ತೀರ್ಪುಗಾರಳಾಗಿ ಹೋಗ್ತೇನೆ. ಸುಮ್ಮನೆ ತೀರ್ಪು ಕೊಡಲ್ಲ ಎಂದು  ಎಲ್ಲರನ್ನೂ ನಗಿಸಿದ್ದಾರೆ.  ಇದರ ವಿಡಿಯೋ ಮತ್ತೆ ಮುನ್ನೆಲೆಗೆ ಬಂದಿದೆ. 

Tap to resize

Latest Videos

ಕೊಲೆ, ದೌರ್ಜನ್ಯ ಏನೇ ಮಾಡಿದ್ರೂ ಸೈ... ಅದು ನನಗೋಸ್ಕರ ಮಾತ್ರ ಆಗಿರ್ಬೇಕು... ಅಂಥ ಬಾಯ್​ಫ್ರೆಂಡ್​​ ನಂಗಿಷ್ಟ...

ಸದ್ಯ ಶಿಲ್ಪಾ ಶೆಟ್ಟಿ, ಬಹುನಿರೀಕ್ಷಿತ ‘ಕೆಡಿ’ ಸಿನಿಮಾದಲ್ಲಿ ನಟಿ ಶಿಲ್ಪಾ ಶೆಟ್ಟಿ ಅವರು ಸತ್ಯವತಿ ಎಂಬ ಪಾತ್ರ ಮಾಡುತ್ತಿದ್ದಾರೆ.   ಚಿತ್ರದ ಶೂಟಿಂಗ್​ ಮುಗಿದಿದ್ದು,  ಅದೇ ಖುಷಿಯಲ್ಲಿ ಚಿತ್ರೀಕರಣದ ಸೆಟ್​ನಿಂದಲೇ ಹೊಸ ವಿಡಿಯೋ ಶೇರ್​ ಮಾಡಿಕೊಂಡಿದ್ದರು.  ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾಗೆ ಪ್ರೇಮ್​ ನಿರ್ದೇಶನ ಮಾಡುತ್ತಿದ್ದಾರೆ. ‘ಕೆವಿಎನ್​ ಪ್ರೊಡಕ್ಷನ್ಸ್​’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಧ್ರುವ ಸರ್ಜಾ ಅವರು ‘ಕೆಡಿ’ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಪಾತ್ರವರ್ಗದ ಕಾರಣದಿಂದ ಈ ಸಿನಿಮಾ ಹೈಪ್​ ಸೃಷ್ಟಿ ಮಾಡಿದೆ. ಬಾಲಿವುಡ್​ ಕಲಾವಿದರಾದ ಸಂಜಯ್​ ದತ್​ ಹಾಗೂ ಶಿಲ್ಪಾ ಶೆಟ್ಟಿ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಶಿಲ್ಪಾ ಶೆಟ್ಟಿ ಅವರ ಪಾತ್ರದ ಹೆಸರು ಸತ್ಯವತಿ. ಇದು ತಮ್ಮ ಫೇವರಿಟ್​ ಪಾತ್ರಗಳಲ್ಲಿ ಒಂದು ಎಂದು ಅವರು ಹೇಳಿದ್ದಾರೆ.

ಅಷ್ಟಕ್ಕೂ ಎಲ್ಲರಿಗೂ ತಿಳಿದಿರುವಂತೆ, ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್​ ಕುಂದ್ರಾ ಪೋರ್ನ್​ ಕೇಸ್​ನಲ್ಲಿ ಸಿಲುಕಿದ್ದು, ಅದರ ಪ್ರಕರಣ ಇನ್ನೂ ನಡೆಯುತ್ತಿದೆ.  2021ರಲ್ಲಿ ಶಿಲ್ಪಾ ಬಾಳಲ್ಲಿ ಬಿರುಗಾಳಿ ಬಂದಿತ್ತು. ಇವರ ಪತಿ,  ರಾಜ್​ ಕುಂದ್ರಾ ನೀಲಿ ಚಿತ್ರ (porn film) ಕೇಸ್​ನಲ್ಲಿ ಸಿಲುಕಿ ಬಿದ್ದಿದ್ದರು. ನಟಿಯರನ್ನು ಮತ್ತು ಮಾಡೆಲ್​ಗಳನ್ನು ಬಳಸಿಕೊಂಡು ರಾಜ್​ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರು ಹಲವು ಸಾಕ್ಷ್ಯಗಳನ್ನು ಒದಗಿಸಿದ್ದರು.  ಬ್ಲೂ ಫಿಲ್ಮ್​ ಆರೋಪದ ಮೇಲೆ ಅವರು 63 ದಿನಗಳವರೆಗೆ ಜೈಲಿನಲ್ಲಿ ಇದ್ದರು. ನೀಲಿ ಚಿತ್ರಗಳ  ನಿರ್ಮಾಣ ದಂಧೆಯಲ್ಲಿ ತೊಡಗಿದ್ದ ಆರೋಪವನ್ನು ಇಂದಿಗೂ ರಾಜ್​ ಕುಂದ್ರಾ ಇಂದಿಗೂ ಎದುರಿಸುತ್ತಿದ್ದಾರೆ.   ‘ನಾನು ಮಾಡಿದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕದ ಸಿನಿಮಾ ಮಾತ್ರ’ ಎಂದು ರಾಜ್​ ಕುಂದ್ರಾ ಹೇಳಿಕೆ ನೀಡಿದ್ದರು. ತಾವು ಬ್ಲೂಫಿಲ್ಮ್​ ಮಾಡುವುದನ್ನು ಅವರು ಒಪ್ಪಿಕೊಂಡಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಹಲವು ನಟಿಯರ ಜೊತೆ ಖುದ್ದು ಶಿಲ್ಪಾ ಶೆಟ್ಟಿಯವರ (Shilpa Shetty) ಹೆಸರೂ ಥಳಕು ಹಾಕಿಕೊಂಡಿತ್ತು.  

ಮಗಳ ಮದ್ವೆ ಬೆನ್ನಲ್ಲೇ ಆಸ್ಪತ್ರೆ ಸೇರಿರೋ ನಟ ಶತ್ರುಘ್ನ ಸಿನ್ಹಾ ಹೇಗಿದ್ದಾರೆ? ಮಗ ಹೇಳಿದ್ದೇನು?

click me!