KGF 2 ಎದುರು ಹೀನಾಯ ಸೋತು OTTಯಲ್ಲಿ ಬರ್ತಿದೆ ವಿಜಯ್ 'ಬೀಸ್ಟ್'

By Shruiti G KrishnaFirst Published Apr 17, 2022, 11:09 AM IST
Highlights

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಎದುರು ಬಂದ ವಿಜಯ್ ಬೀಸ್ಟ್ ಸಿನಿಮಾ ಹೀನಾಯ ಸೋಲು ಕಂಡಿದೆ. ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದ ಬೀಸ್ಟ್ ಸಿನಿಮಾ ಇದೀಗ ಒಟಿಟಿಯಲ್ಲಿ ಬರಲು ಸಜ್ಜಾಗಿದೆ.

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಸಿನಿಮಾ ಅರ್ಭಟದ ಮುಂದೆ ಹೀನಾಯ ಸೋತ ದಳಪತಿ ವಿಜಯ್ ನಟನೆಯ ಬೀಸ್ಟ್ ಸಿನಿಮಾ ಒಟಿಟಿಯಲ್ಲಿ ಬರಲು ಸಜ್ಜಾಗಿದ್ದಾರೆ. ಏಪ್ರಿಲ್ 13ರಂದು ತೆರೆಗೆ ಬಂದ ದಳಪತಿ ವಿಜಯ್ ನಟನೆಯ ಬೀಸ್ಟ್ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಮಾಯಿ ಮಾಡಿದ್ದ ಬೀಸ್ಟ್ ಕೆಜಿಎಫ್-2 ಬಿಡುಗಡೆ ಬಳಿಕ ದೂಳಿಪಾಟ ಆಗಿದೆ. ತಮಿಳುನಾಡಿನಲ್ಲೇ ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿವೆ. ಪ್ರೇಕ್ಷಕರು ಕೆಜಿಎಫ್-2 ನೋಡಲು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ.

ಕೆಜಿಎಫ್-2 ದೇಶ-ವಿದೇಶದಲ್ಲಿ ದೊಡ್ಡ ಮಟ್ಟದ ಕ್ರೇಜ್ ಹುಟ್ಟುಹಾಕಿದ ಸಿನಿಮಾ. ರಾಕಿ ಭಾಯ್ ಗಾಗಿ ಸಿನಿ ಪ್ರಿಯರು ಭಾರಿ ಕುತೂಹಲ ಮತ್ತು ನಿರೀಕ್ಷೆಯಿಂದ ಕಾದಿದ್ದರು. ಕೆಜಿಎಫ್-2 ಸಿನಿಮಾ ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ ಎಂದು ಅನೌನ್ಸ್ ಮಾಡುತ್ತಿದ್ದಂತೆ ಸಿನಿಮಾ ನೋಡಲು ಅಭಿಮಾನಿಗಳು ಉಸಿರು ಬಿಗಿಹಿಡಿದು ಕುಳಿತಿದ್ದರು. ಎಲ್ಲೆಲ್ಲೂ ಕೆಜಿಎಫ್-2 ಸಿನಿಮಾದೇ ಹವಾ. ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದ ಸಿನಿಮಾದ ಎದುರು ವಿಜಯ್ ಅಭಿನಯ ಬೀಸ್ಟ್ ಸಿನಿಮಾವನ್ನು ಎಪ್ರಿಲ್ 13ರಂದು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿರುವುದೇ ತಪ್ಪಿನ ನಿರ್ಧಾರವಾಗಿತ್ತು. ಕೆಜಿಎಫ್-2 ಕ್ರೇಜ್ ಬಗ್ಗೆ ಗೊತ್ತಿದ್ದರೂ ವಿಜಯ್ ಬೀಸ್ಟ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಿರುವುದು ಕನ್ನಡ ಸಿನಿಮಾಗೆ ಸವಾಲ್ ಹಾಕಿದ ರೀತಿ ಇತ್ತು.

KGF 2 ಅಬ್ಬರದ ನಡುವೆ ವಿಜಯ್ 'ಬೀಸ್ಟ್' ಸಿನಿಮಾ ಗಳಿಸಿದೆಷ್ಟು?

ಕೆಜಿಎಫ್-2 ಎದುರು ಗೆಲವು ದಾಖಲಿಸಲು ಬೀಸ್ಟ್ ಸೋತಿದೆ. ಇದೀಗ ಒಟಿಟಿ ಪ್ಲಾಟ್ ಫಾರ್ಮ್ ಮೂಲಕವಾದರೂ ಲಾಭ ಗಳಿಸಲು ತಯಾರಾಗಿದೆ. ಚಿತ್ರಮಂದಿರಗಳಲ್ಲಿ ಯಶಸ್ಸು ಕಾಣದ ಸಿನಿಮಾಗಳನ್ನು ಶೀಘ್ರದಲ್ಲೇ ಒಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ತಯಾರಿ ನಡೆಸುತ್ತಾರೆ. ಇದೀಗ ಬೀಸ್ಟ್ ಕೂಡ ಅದೇ ದಾರಿ ಹಿಡಿದಿದೆ. ಕೆಜಿಎಫ್-2 ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್ ಗೆ ರೆಡಿಯಾಗಿದೆ. ಸಿನಿಮಾ ಬಿಡುಗಡೆಯಾಗಿ 5 ದಿನಗಳಲ್ಲೇ ಒಟಿಟಿಗೆ ಬರಲು ಪ್ಲಾನ್ ಮಾಡಲಾಗಿದೆ. ಮೂಲಗಳ ಪ್ರಕಾರ ಬೀಸ್ಟ್ ಸಿನಿಮಾ ಮೇ 11ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಅಂದು ಶಾರುಖ್ ಇಂದು ವಿಜಯ್; KGF 2 ಮುಂದೆ ಹೀನಾಯ ಸೋತ 'ಬೀಸ್ಟ್'

ಬೀಸ್ಟ್ ಸಿನಿಮಾ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತೆರೆಗೆ ಬಂದಿತ್ತು. ತಮಿಳು ಬಿಟ್ಟರೆ ಬೀಸ್ಟ್ ಸಿನಿಮಾ ಎಲ್ಲೂ ಪ್ರಚಾರ ಮಾಡಿಲ್ಲ. ಉತ್ತರ ಭಾರತದ ಕಡೆ ಮುಖ ಮಾಡಿಲ್ಲ. ಇದು ಕೂಡ ಬೀಸ್ಟ್ ಸೋಲಿಗೆ ದೊಡ್ಡ ಕಾರಣವಾಗಿದೆ ಎನ್ನಲಾಗುತ್ತಿದೆ. ನ ವಿಜಯ್ ಸಂದರ್ಶನ ನೀಡದೆ 10 ವರ್ಷಗಳ ಮೇಲಾಗಿತ್ತು. ಬೀಸ್ಟ್ ಬಿಡುಗಡೆ ವೇಳೆ ಸಂದರ್ಶನ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ವೇಳೆ ವಿಜಯ್ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದ್ದರು. 10 ವರ್ಷಗಳು ಸಂದರ್ಶನ ನೀಡದೆ ಇರಲು ಕಾರಣವನ್ನು ತಿಳಿಸಿದ್ದರು. ಇಷ್ಟಾದರೂ ಬೀಸ್ಟ್ ಬಾಕ್ಸ್ ಆಫೀಸ್ ನಲ್ಲಿ ಸಕ್ಸಸ್ ಕಂಡಿಲ್ಲ. ಒಟಿಟಿಯಲ್ಲಾದರೂ ಲಾಭಗಳಿಸುತ್ತಾ ಎನ್ನುವುದು ಪ್ರೇಕ್ಷಕರ ಕುತೂಹಲ.

click me!