240 ಕೋಟಿ ರೂ. ಬಾಚಿದ ಯಶ್ KGF 2; ಇಲ್ಲಿದೆ 2ನೇ ದಿನದ ಪಕ್ಕಾ ಲೆಕ್ಕ

By Shruiti G KrishnaFirst Published Apr 16, 2022, 7:13 PM IST
Highlights

ಕೆಜಿಎಫ್-2 ಭಾರತದ ಕಲೆಕ್ಷನ್ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಮಾಹಿತಿ ಹಂಚಿಕೊಂಡಿದ್ದಾರೆ. ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿರುವ ಹೊಂಬಾಳೆ ಫಿಲ್ಮ್ಸ್ 2ದಿನದಲ್ಲಿ ಬರೋಬ್ಬರಿ 240 ಕೋಟಿ ಕಲೆಕ್ಷನ್ ಮಾಡಿದೆ ಎಂದು ಬಹಿರಂಗ ಪಡಿಸಿದ್ದಾರೆ.

ಪ್ಯಾನ್ ಇಂಡಿಯಾ ಹೀರೋ ರಾಕಿಂಗ್ ಸ್ಟಾರ್ ಯಶ್(Yash) ನಟನೆಯ ಕೆಜಿಎಫ್-2 (KGF 2)ಸಿನಿಮಾ ಬಾಕ್ಸ ಆಫೀಸ್ ನಲ್ಲಿ ಸುನಾಮಿ ಎಬ್ಬಸಿದೆ. ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಕೆಜಿಎಫ್-2 ಎರಡನೇ ದಿನವೂ ಭರ್ಜರಿ ಕಲೆಕ್ಷನ್ ಮಾಡಿದೆ. ಸಿನಿಮಾ ಬಿಡುಗಡೆಯಾಗಿ ಎರಡೇ ದಿನಕ್ಕೆ ಬಾಲಿವುಡ್ ನಲ್ಲಿ 100 ಕೋಟಿ ಕ್ಲಬ್(KGF2 Cross 100 Crore Club) ಸೇರುವ ಮೂಲಕ ಎಲ್ಲಾ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡಿದೆ. ಇದೀಗ ಸಿನಿಮಾದ ಭಾರತದ ಕಲೆಕ್ಷನ್ ವರದಿ ಬಹಿರಂಗವಾಗಿದೆ. ಘಟಾನುಘಟಿ ಸ್ಟಾರ್ ಗಳ ದಾಖಲೆಗಳನ್ನು ಬ್ರೇಕ್ ಮಾಡಿರುವ ಯಶ್ ನಟನೆಯ ಕೆಜಿಎಫ್-2 ಎರಡನೇ ದಿನ 240 ಕೋಟಿ ರೂಪಾಯಿ ಬಾಚಿಕೊಂಡಿದೆ.

ಕೆಜಿಎಫ್-2 ಭಾರತದ ಕಲೆಕ್ಷನ್ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಮಾಹಿತಿ ಹಂಚಿಕೊಂಡಿದ್ದಾರೆ. ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿರುವ ಹೊಂಬಾಳೆ ಫಿಲ್ಮ್ಸ್ 2ದಿನದಲ್ಲಿ ಬರೋಬ್ಬರಿ 240 ಕೋಟಿ ಕಲೆಕ್ಷನ್ ಮಾಡಿದೆ ಎಂದು ಬಹಿರಂಗ ಪಡಿಸಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್2 ತೂಫಾನ್ ಎಂದು ಟ್ವೀಟ್ ಹೊಂಬಾಳೆ ಫಿಲ್ಮ್ಸ್ ಸಂತಸ ವ್ಯಕ್ತಪಡಿಸಿದೆ. ಇದು ಭಾರತದ ಕಲೆಕ್ಷನ್ ವರದಿಯಾದರೇ ವಿಶ್ವದಾದ್ಯಂತ ಸಿನಿಮಾ ಕಲೆಕ್ಷನ್ 300 ಕೋಟಿ ರೂಪಾಯಿ ದಾಟಿದೆ ಎನ್ನಲಾಗಿದೆ.

ವಿಶ್ವದಾದ್ಯಂತ 300 ಕೋಟಿ ರೂಪಾಯಿ ಕಲೆಕ್ಷನ್

ಕೆಜಿಎಫ್2 ಸಿನಿಮಾ ವಿಶ್ವದಾದ್ಯಂತ ಅಬ್ಬರಿಸುತ್ತಿದ್ದೆ. ಎರಡು ದಿನಗಳಲ್ಲಿ ವಿಶ್ವದಾದ್ಯಂತ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಸಿನಿಮಾ ವಿಶ್ಲೇಷಕ ರಮೇಶ್ ಬಾಲಾ ಮಾಹಿತಿ ನೀಡಿದ್ದಾರೆ. ಕೇವಲ ಎರಡು ದಿನಗಳಲ್ಲಿ ಕನ್ನಡ ಸಿನಿಮಾವೊಂದು 300 ಕೋಟಿ ದಾಟಿ ಮುನ್ನುಗ್ಗುತ್ತಿರುವುದು ಭಾರತೀಯ ಸಿನಿಮಾರಂಗಕ್ಕೆ ಅಚ್ಚರಿಯ ವಿಚಾರವಾಗಿದೆ. ಮೊದಲನೇ ದಿನ ಕೆಜಿಎಫ್-2 ವಿಶ್ವದಾದ್ಯಂತ 165 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.

KGF 2 ರಿಲೀಸ್ ಬಳಿಕ ಮಾಯವಾದ ಯಶ್; ಎಲ್ಲಿದ್ದಾರೆ ರಾಕಿಂಗ್ ದಂಪತಿ?

ಬಾಲಿವುಡ್ ನಲ್ಲಿ ಇತಿಹಾಸ ಬರೆದ ರಾಕಿ ಭಾಯ್

ಹಿಂದಿಯಲ್ಲಿ ಕೆಜಿಎಫ್-2 ಸಿನಿಮಾ ದಾಖಲೆ ಬರೆದಿದೆ. ಸಿನಿಮಾ ಬಿಡುಗಡೆಯಾಗಿ 2 ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಿದೆ. ಮೊದಲ ದಿನ ಹಿಂದಿಯಲ್ಲಿ ಕೆಜಿಎಫ್2 53.95 ಕೋಟಿ ಕಲೆಕ್ಷನ್ ಮಾಡಿತ್ತು. 2ನೇ ದಿನ 46.79 ಕೋಟಿ ರೂ. ಗಳಿಸುವ ಮೂಲಕ 100 ಕೋಟಿ ಕ್ಲಬ್ ಸೇರಿದೆ. ಈ ಬಗ್ಗೆ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಮಾಹಿತಿ ಹಂಚಿಕೊಂಡಿದ್ದಾರೆ. 'ಕೆಜಿಎಫ್-2 ಹಿಂದಿಯಲ್ಲಿ ಸುನಾಮಿ ಎಬ್ಬಿಸಿದೆ. ಎರಡನೇ ದಿನವೂ ಭರ್ಜರಿ ಕಲೆಕ್ಷನ್ ಮಾಡಿದೆ. ಬಾಹುಬಲಿ-2 ಮತ್ತು ದಂಗಲ್ ದಾಖಲೆಯನ್ನು ಮುರಿದಿದೆ. ಮೊದಲ ದಿನ 53.95 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಶುಕ್ರವಾರ 46.79 ಕೋಟಿ ರೂಪಾಯಿ ಬಾಚಿಕೊಂಡಿದೆ. ಒಟ್ಟು 100.47 ಕೋಟಿ ಕಲೆಕ್ಷನ್ ಮಾಡಿದೆ' ಎಂದು ಹೇಳಿದ್ದಾರೆ.

KGF Chapter 2: ರಾಕಿ ಡೋಂಟ್ ಲೈಕ್ ರೆಕಾರ್ಡ್: ರೆಕಾರ್ಡ್ ಲೈಕ್ಸ್ ರಾಕಿ!

ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಮತ್ತು ಸಂಜಯ್ ದತ್ ನಟನೆ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್ ಹೀಗೆ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಆಕ್ಷನ್ ದೃಶ್ಯ, ಸಂಗೀತ ಮಾಸ್ ಎಲಿಮೆಂಟ್, ತಾಯಿ ಸೆಂಟಿಮೆಂಟ್ ಪ್ರತಿಯೊಂದು ವಿಭಾಗದಲ್ಲೂ ಕೆಜಿಎಫ್-2 ಅಭಿಮಾನಿಗಳ ಹೃದಯ ಗೆದ್ದಿದೆ. 3ನೇ ದಿನವು ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ.

 

click me!