ಟರ್ಕಿಯಲ್ಲಿ ಜೊತೆಯಾಗಿದ್ದ ರಶ್ಮಿಕಾ-ವಿಜಯ್​: ಬೇರೆ ಬೇರೆ ಫೋಟೋ ಹಾಕಿದ್ರೂ ಸಿಕ್ಕಿಬಿದ್ದ 'ಕಳ್ಳರು'!

By Suvarna News  |  First Published Oct 8, 2023, 4:03 PM IST

ವಿಜಯ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ  ಟರ್ಕಿಯಲ್ಲಿ ಜೊತೆಯಲ್ಲಿ ಇದ್ರಾ? ಇಬ್ಬರೂ ಪ್ರತ್ಯೇಕವಾಗಿ ಫೋಟೋ ಶೇರ್​ ಮಾಡಿ ಸಿಕ್ಕಿಬಿದ್ದಿದ್ದಾರೆ. 
 


ವಿಜಯ್​ ದೇವರಕೊಂಡ ಅವರು ನಟಿ ರಶ್ಮಿಕಾ ಮಂದಣ್ಣ ಜೊತೆ ಡೇಟಿಂಗ್ (Dating) ಮಾಡುತ್ತಿದ್ದಾರೆ ಎನ್ನುವ ಸುದ್ದಿ ತುಂಬಾ ಹಳೆಯದ್ದು. ಇವರಿಬ್ಬರು ಎಲ್ಲಿಯೇ ಹೋದರೂ ಹೆಸರು ಥಳಕು ಹಾಕಿಕೊಳ್ಳುತ್ತಿದೆ. ಆದರೆ ಈ ಸುದ್ದಿಯನ್ನು ರಶ್ಮಿಕಾ ಒಮ್ಮೆ ಅಲ್ಲಗಳೆದಿದ್ದರು.  ನಾನು, ವಿಜಯ್ ದೇವರಕೊಂಡ ಉತ್ತಮ ಸ್ನೇಹಿತರು. ನನಗೆ ಫ್ರೆಂಡ್ಸ್ ಸರ್ಕಲ್ ಇದೆ, ಅವರ ಜೊತೆಯೇ ನಾನು ಜಾಸ್ತಿ ಮಾತನಾಡ್ತೀನಿ, ತಿರುಗಾಡ್ತೀನಿ. ಅದರಲ್ಲೇನು ಎಂದು ಸ್ವಲ್ಪ ಗರಂ ಆಗಿದ್ದರು.  ಇವರಿಬ್ಬರೂ ನ್ಯೂಯಾರ್ಕ್​ಗೆ ಹೋಗಿದ್ದರು ಎನ್ನುವ ಸುದ್ದಿ ಬಹಳ ಸದ್ದು ಮಾಡಿದ್ದ ಬಗ್ಗೆಯೂ ಮಾತನಾಡಿದ್ದ ರಶ್ಮಿಕಾ  ನಾವು 10 ಜನರು ಒಟ್ಟಿಗೆ ಟ್ರಿಪ್ ಹೋಗ್ತೀವಿ. ಈಗ ಎಲ್ಲರೂ ಸ್ನೇಹಿತರ ಜೊತೆ ಟ್ರಿಪ್ ಹೋಗ್ತಾರೆ. ಅದರಲ್ಲೇನಿದೆ ಎಂದಿದ್ದರು.

ಆದರೆ ಇದೀಗ ಇವರು ಟರ್ಕಿಯಲ್ಲಿ ಒಟ್ಟಿಗೇ ಇದ್ದರು ಎನ್ನುವುದು ಇಬ್ಬರ ಫೋಟೋಗಳಿಂದ ಫ್ಯಾನ್ಸ್​ ಪತ್ತೆ ಹಚ್ಚಿದ್ದಾರೆ. ಟರ್ಕಿಯಲ್ಲಿ ಒಟ್ಟಿಗೇ ಸುತ್ತಾಡಿದ್ದರು ಎನ್ನುವುದು ಈ ಫೋಟೋಗಳಿಂದ ತಿಳಿದುಬರುತ್ತದೆ. ಅಷ್ಟಕ್ಕೂ ವಿಜಯ ಮತ್ತು ರಶ್ಮಿಕಾ ಟರ್ಕಿಯ ಫೋಟೋಗಳನ್ನು ತುಂಬಾ ದಿನಗಳ ಅಂತರದಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಶೇರ್​  ಮಾಡಿಕೊಂಡಿದ್ದಾರೆ. ಮೊದಲು ಇದನ್ನು ವಿಜಯ್​ ಶೇರ್​ ಮಾಡಿಕೊಂಡಿದ್ದರು. ರೆಸ್ಟೋರೆಂಟ್​ ಒಂದರಲ್ಲಿ ಆಹಾರ ಸೇವಿಸುವ ಫೋಟೋ ಇದಾಗಿದೆ. ಅದೇ ಬ್ಯಾಕ್​ಗ್ರೌಂಡ್​ ಇರುವ ಫೋಟೋವನ್ನು ರಶ್ಮಿಕಾ ಬಹಳ ದಿನಗಳ ಬಳಿ ಶೇರ್​ ಮಾಡಿಕೊಂಡಿದ್ದು, ಇದು ತುಂಬಾ ಹಳೆಯ ಫೋಟೋ ಎಂದಿದ್ದಾರೆ. ಆದರೆ ಇಬ್ಬರ ಫೋಟೋಗಳನ್ನು ಕಂಪೇರ್​ ಮಾಡಿರುವ ಫ್ಯಾನ್ಸ್​ ಇವೆರಡೂ ಒಂದೇ ಹೋಟೆಲ್​ನದ್ದು ಎಂದಿದ್ದಾರೆ.

Tap to resize

Latest Videos

ಜವಾನ್ ಜೋಡಿ ಶಾರುಖ್​- ದೀಪಿಕಾಗೆ ಮಗು ಹುಟ್ಟಿಸಿದ ಫ್ಯಾನ್ಸ್​! ನಾಮಕರಣವನ್ನೂ ಮಾಡಿದ್ದಾರೆ ನೋಡಿ

ಅಷ್ಟಕ್ಕೂ ಈ ಹಿಂದೆ ಕೂಡ ರಶ್ಮಿಕಾ ಇದೇ ರೀತಿ ಸೇಮ್​ ಬ್ಯಾಕ್​ಗ್ರೌಂಡ್ ಇರುವ ಫೋಟೋ ಶೇರ್​ ಮಾಡಿಕೊಂಡಿದ್ದರು. ಆಗಲೂ ಫ್ಯಾನ್ಸ್​ ಸಕತ್​ ಕಮೆಂಟ್​ಮಾಡಿದ್ದರು. ಈಗ ಪುನಃ ಅದೇ ರೀತಿ ಮಾಡಿರುವ ಕಾರಣ ಕೆಲವೊಂದು ನಟಿಯ ವಿರುದ್ಧ ಅನುಮಾನವನ್ನೂ ವ್ಯಕ್ತಪಡಿಸುತ್ತಿದ್ದಾರೆ. ತಾವು ಮತ್ತು ವಿಜಯ್​ ದೇವರಕೊಂಡ ರಿಲೇಷನ್​ನಲ್ಲಿ ಇರುವುದು ಫ್ಯಾನ್ಸ್​ಗಳಿಗೆ ತಿಳಿಯಲಿ ಎನ್ನುವ ಕಾರಣಕ್ಕೆ ಈ ರೀತಿ ನಟಿ ನಾಟಕ ಮಾಡುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ವಿಜಯ್​ ದೇವರಕೊಂಡ ಅವರು ಫೋಟೋ ಶೇರ್​ ಮಾಡಿದ ಮೇಲೆ ಅದೇ ರೀತಿಯ ಬ್ಯಾಕ್​ಗ್ರೌಂಡ್​ ಇರುವ ಫೋಟೋಗಳನ್ನು ತಾವೂ ಶೇರ್​ ಮಾಡುತ್ತಾರೆ ಎನ್ನುತ್ತಿದ್ದಾರೆ. 

 ಕೆಲ ದಿನಗಳ ಹಿಂದೆ ಇವರಿಬ್ಬರ ಖುಷಿ ಸಿನಿಮಾದ ಪ್ರಮೋಷನ್​ ಸಮಯದಲ್ಲಿ,  ವಿಜಯ್​ ದೇವರಕೊಂಡ ಅವರು ವಿಜಯ್ ದೇವರಕೊಂಡ ಹುಡುಗಿಯೊಬ್ಬಳ ಕೈ ಹಿಡಿದುಕೊಂಡಿರುವ ಫೋಟೋ ಶೇರ್​ ಮಾಡಿದ್ದರು. ಈ ಕೈ ಯಾರದ್ದು ಎನ್ನುವ ಬಗ್ಗೆ ಚರ್ಚೆ್ ಶುರುವಾಗಿತ್ತು. ಶೀಘ್ರದಲ್ಲೇ ಹೊಸ ಅಪ್​ಡೇಟ್ ಕೊಡುವುದಾಗಿ ವಿಜಯ್​ ಹೇಳಿಕೊಂಡಿದ್ದರು. ‘ಬಹಳಷ್ಟು ವಿಚಾರಗಳು ನಡೆಯುತ್ತಿವೆ. ಆದರೆ ಇದು ನಿಜವಾಗಿಯೂ ವಿಶೇಷ- ಶೀಘ್ರದಲ್ಲೇ ಘೋಷಿಸುತ್ತೇನೆ’ ಎಂದಿದ್ದರು. ಆದರೆ ಇದನ್ನು ನೋಡಿದರೆ ರಶ್ಮಿಕಾ ಕೈ ಥರ ಕಾಣಿಸುತ್ತಿಲ್ಲ ಎಂದು ಹಲವರು ಹೇಳಿದ್ದರು.  ಇದು ಸಿನಿಮಾದ ಪ್ರಮೋಷನ್​ ಇರ್ಬೇಕು ಅಂದಿದ್ದರು. ಖುಷಿ ಸಿನಿಮಾ ರಿಲೀಸ್​ ಆಗಿ ತಿಂಗಳುಗಳೇ ಆದರೂ ಆ ಬಗ್ಗೆ ಇನ್ನೂ ಅಪ್​ಡೇಟ್​ ಹೊರಬಂದಿಲ್ಲ. 

ಆಫ್ಘನ್ ಪ್ರಜೆ ಅಮಿತಾಭ್​ ಪುರುಷತ್ವದ ಸಂಕೇತ, ವಿರಾಟ್​ ಕೊಹ್ಲಿ ಸಲಿಂಗಕಾಮಿ ಎಂದ ತಾಲಿಬಾನ್​!

click me!