ನಯನತಾರಾ ಜೊತೆಗಿನ ಶಾರುಖ್ ರೊಮ್ಯಾನ್ಸ್ ಪ್ರಶ್ನೆ ಮಾಡಿದ ಪತಿ ವಿಘ್ನೇಶ್ ಶಿವನ್

Published : Jul 13, 2023, 02:52 PM IST
ನಯನತಾರಾ ಜೊತೆಗಿನ ಶಾರುಖ್ ರೊಮ್ಯಾನ್ಸ್ ಪ್ರಶ್ನೆ ಮಾಡಿದ ಪತಿ ವಿಘ್ನೇಶ್ ಶಿವನ್

ಸಾರಾಂಶ

ಜವಾನ್ ಸಿನಿಮಾದಲ್ಲಿ ನಯನತಾರಾ ಜೊತೆಗಿನ ಶಾರುಖ್ ಖಾನ್ ರೊಮ್ಯಾನ್ಸ್ ಅನ್ನು ಪತಿ ವಿಘ್ನೇಶ್ ಶಿವನ್  ಪ್ರಶ್ನೆ ಮಾಡಿದ್ದಾರೆ. 

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸದ್ಯ ಜವಾನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ಜವಾನ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಶಾರುಖ್ ಖಾನ್ ಮತ್ತೆ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪಠಾಣ್ ಸೂಪರ್ ಸಕ್ಸಸ್ ಬಳಿಕ ಕಿಂಗ್ ಖಾನ್ ಮತ್ತೊಮ್ಮೆ ಆಕ್ಷನ್ ದೃಶ್ಯಗಳಲ್ಲಿ ಅಬ್ಬರಿಸಿದ್ದಾರೆ. ಇನ್ನೂ ಶಾರುಖ್‌ಗೆ ಜೋಡಿಯಾಗಿ ನಯನತಾರಾ ನಟಿಸಿದ್ದಾರೆ. ಜೊತೆಗೆ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್‌ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.  ಶಾರುಖ್ ಟ್ರೈಲರ್ ಬಗ್ಗೆ ನಯನತಾರಾ ಪತಿ ವಿಘ್ನೇಶ್ ಶಿವನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಜವಾನ್ ಪ್ರಿವ್ಯೂ ಬಗ್ಗೆ ವಿಘ್ನೇಶ್ ಶಿವನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಘ್ನೇಶ್ ಮಾತಿಗೆ ಶಾರುಖ್ ಪ್ರತಿಕ್ರಿಯೆ ನೀಡಿದ್ದಾರೆ. 'ವಿಘ್ನೇಶ್ ಶಿವನ್, ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು. ನಯನತಾರಾ ಅದ್ಭುತ. ಆದರೆ ನಾನು ಇದನ್ನು ಯಾರಿಗೆ ಹೇಳುತ್ತಿದ್ದೇನೆ. ನಿಮಗೂ ಈಗಾಗಲೇ ತಿಳಿದಿದೆ ಪತ್ನಿ ಅಲ್ವಾ.  ಆದರೆ ಹುಷಾರಾಗಿರಿ, ಅವರು ಈಗ ಕೆಲವು ಪ್ರಮುಖ ಕಿಕ್ಗಳನ್ನು ಮತ್ತು ಹೊಡೆತಗಳನ್ನು ಕಲಿತಿದ್ದಾರೆ' ಎಂದು ಹೇಳಿದ್ದಾರೆ. 

ಶಾರುಖ್ ಮಾತಿಗೆ ವಿಘ್ನೇಶ್ ಶಿವನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಜೊತೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಯನತಾರಾ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. 'ಹೌದು ಸರ್ ತುಂಬಾ ಜಾಗರೂಕರಾಗಿರಿ. ಆದರೆ ಸಿನಿಮಾದಲ್ಲಿ ನಿಮ್ಮಿಬ್ಬರ ನಡುವೆ ಉತ್ತಮ ರೊಮ್ಯಾನ್ಸ್ ಇದೆ ಎಂದು ನಾನು ಕೇಳಿದ್ದೇನೆ. ಅವಳು ಅದನ್ನು ಪ್ರಣಯ ರಾಜನಿಂದ ಕಲಿತಿದ್ದಾಳೆ.  ಆಕೆ ತನ್ನ ಕನಸಿನ ಸಂತೋಷದಿಂದ ನಿಮ್ಮೊಂದಿಗೆ ಪಾದಾರ್ಪಣೆ ಮಾಡುತ್ತಿದ್ದಾಳೆ. ದಿ ಕಿಂಗ್ ಆಫ್ ಹಾರ್ಟ್ಸ್, ಬಾದ್‌ಶಾಹ್ ಜವಾನ್ ಬ್ಲಾಕ್ ಬಸ್ಟರ್ ಆಗಲಿ' ಎಂದು ಹೇಳಿದ್ದಾರೆ. ಶಾರುಖ್ ಖಾನ್ ಮತ್ತು ವಿಘ್ನೇಶ್ ಶಿವನ್ ಇಬ್ಬರ ಮಾತುಕತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Jawan Prevue: ಶಾರುಖ್ ಖಾನ್ ಹೀರೋನಾ OR ವಿಲನ್ನಾ? ಮೊಟ್ಟೆ ಲುಕ್‌ನಲ್ಲಿ ಕಿಂಗ್ ಖಾನ್ ಎಂಟ್ರಿ

ವಿಜಯ್ ಸೇತುಪತಿ ಬಗ್ಗೆ ಶಾರುಖ್ ಹೇಳಿದ್ದೇನು?

ಇನ್ನೂ ಈ ಸಿನಿಮಾದಲ್ಲಿ ತಮಿಳು ಸ್ಟಾರ್ ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟ ವಿಜಯ್ ಸೇತುಪತಿ ಅವರನ್ನು ಕಿಂಗ್ ಖಾನ್ ಹೊಗಳಿದ್ದಾರೆ. ಜೊತೆಗೆ ಅವರಿಂದ ತಮಿಳು ಕಲಿತಿರುವುದಾಗಿ ಹೇಳಿದ್ದಾರೆ. ಜವಾನ್ ಪ್ರಿವ್ಯೂ ರಿಲೀಸ್ ಬಳಿಕ ವಿಜಯ್ ಸೇತುಪತಿ ಮಾಡಿದ ಟ್ವೀಟ್‌ಗೆ ಶಾರುಖ್ ಖಾನ್ ಪ್ರತಿಕ್ರಿಯಿಸಿ, ವಿಜಯ್ ಸೇತುಪತಿ ಅವರೊಂದಿಗೆ ಕೆಲಸ ಮಾಡುವುದು ಗೌರವ ಎಂದಿದ್ದಾರೆ. ಜವಾನ್‌ನ ಸೆಟ್‌ಗಳಲ್ಲಿ ಸ್ವಲ್ಪ ತಮಿಳು ಕಲಿಸಿದ್ದಕ್ಕಾಗಿ ಮತ್ತು ಸೆಟ್‌ಗಳಲ್ಲಿ ರುಚಿಕರವಾದ ಆಹಾರವನ್ನು ತಂದಿದ್ದಕ್ಕಾಗಿ ಧನ್ಯವಾದ ಹೇಳಿದರು. 'ಸರ್ ನಿಮ್ಮೊಂದಿಗೆ ಕೆಲಸ ಮಾಡಿದ್ದು ಗೌರವವಾಗಿದೆ. ಸೆಟ್‌ಗಳಲ್ಲಿ ನನಗೆ ಸ್ವಲ್ಪ ತಮಿಳು ಕಲಿಸಿದ್ದಕ್ಕಾಗಿ ಧನ್ಯವಾದಗಳು ಮತ್ತು ನೀವು ಪಡೆದ ರುಚಿಕರವಾದ ಆಹಾರ. ಲವ್ ಯು ನನ್ಬಾ'  ಎಂದು ಹೇಳಿದ್ದಾರೆ.

ಶಾರುಖ್‌ ಖಾನ್‌ಗೆ ತಮಿಳು ಕಲಿಸಿದ ವಿಜಯ್ ಸೇತುಪತಿ: ಕಿಂಗ್ ಖಾನ್ ರಿಯಾಕ್ಷನ್ ಹೀಗಿತ್ತು

ಸದ್ಯ ಟೀಸರ್ ಮತ್ತು ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ ಜವಾನ್ ಸಿನಿಮಾ ಸೆಪ್ಟಂಬರ್ ನಲ್ಲಿ ತೆರೆಗೆ ಬರುತ್ತಿದೆ. ಸೆಪ್ಟಂಬರ್ 7ಕ್ಕೆ ರಿಲೀಸ್ ಆಗುತ್ತಿದೆ. ಜವಾನ್ ಸಿನಿಮಾ ಪಠಾಣ್ ಚಿತ್ರವನ್ನು ಮೀರಿಸಿ ಅತೀ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ದಾಖಲೆ ನಿರ್ಮಿಸುತ್ತಾ ಕಾದುನೋಡಬೇಕಿದೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!