ಅಂದು ಮಹೇಶ್ ಬಾಬು ಕಾಲು ಹಿಡಿದಿದ್ದಕ್ಕೆ ಕೃತಿ ಕಾಲೆಳೆದ ಸಮಂತಾ ಮೈಮೇಲೆ ಇಂದು ಕಾಲಿಟ್ಟ ದೇವರಕೊಂಡ: ಸಖತ್ ಟ್ರೋಲ್

Published : Jul 13, 2023, 12:52 PM ISTUpdated : Jul 15, 2023, 03:52 PM IST
ಅಂದು ಮಹೇಶ್ ಬಾಬು ಕಾಲು ಹಿಡಿದಿದ್ದಕ್ಕೆ ಕೃತಿ ಕಾಲೆಳೆದ ಸಮಂತಾ ಮೈಮೇಲೆ ಇಂದು ಕಾಲಿಟ್ಟ ದೇವರಕೊಂಡ: ಸಖತ್ ಟ್ರೋಲ್

ಸಾರಾಂಶ

ಅಂದು ಮಹೇಶ್ ಬಾಬು ಕಾಲು ಹಿಡಿದಿದ್ದಕ್ಕೆ ಕೃತಿ ಸನೊನ್ ಕಾಲೆಳೆದಿದ್ದರು ಸಮಂತಾ. ಆದರೆ ಇಂದು ವಿಜಯ್ ದೇವರಕೊಂಡ ಮೈಮೇಲೆ ಕಾಲಿಟ್ಟಿದ್ದಾರೆ. ಸಮಂತಾ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಸೌತ್ ಸುಂದರಿ ಸಮಂತಾ ಸದ್ಯ ಸಿಟಾಡೆಲ್ ಮತ್ತು ಖುಷಿ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಅನಾರೋಗ್ಯದ ನಡುವೆಯೂ ಸಮಂತಾ ಸಿನಿಮಾ ಶೂಟಿಂಗ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಎರಡು ಸಿನಿಮಾ ಮುಗಿಸಿ ಮತ್ತೆ ಬ್ರೇಕ್ ಪಡೆಯುತ್ತಾರೆ ಎನ್ನುವ ಸುದ್ದಿ ಕೂಡ ಇದೆ. ಈ ನಡುವೆ ಸಮಂತಾ ನಟನೆಯ ಬಹುನಿರೀಕ್ಷೆಯ ಖುಷಿ ಸಿನಿಮಾದ ಹಾಡು ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು ಸಮಂತಾ ವಿಜಯ್ ದೇವರಕೊಂಡ ನಟನೆಯ ಖುಷಿ ಸಿನಿಮಾದ ರೊಮ್ಯಾಂಟಿಕ್ ಹಾಡು ರಿಲೀಸ್ ಆಗಿದೆ. ಸಮಂತಾ ಮತ್ತು ವಿಜಯ್ ದೇವರಕೊಂಡ ಅವರ ಹಾಡು ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಷ್ಟೆಯಲ್ಲದೇ ಇಬ್ಬರ ಕೆಮಿಸ್ಟ್ರಿಗೆ ಫ್ಯಾನ್ ಫಿದಾ ಆಗಿದ್ದಾರೆ. 

ಅಂದಹಾಗೆ ಸದ್ಯ ರಿಲೀಸ್ ಆಗಿರುವ ಲಿರಿಕಲ್ ಹಾಡಿನಲ್ಲಿ ಸಮಂತಾ ಮೈ ಮೇಲೆ ವಿಜಯ್ ದೇವರಕೊಂಡ ಕಾಲಿಟ್ಟಿದ್ದಾರೆ. ಸಮಂತಾ ಭಜದ ಮೇಲೆ ದೇವರಕೊಂಡ ಕಾಲಿಟ್ಟಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಅಭಿಮಾನಿಗಳು ತರಹಾವೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಟ್ರೋಲ್ ಆಗಲೂ ಕಾರಣ ಈ ಹಿಂದೆ ಮಹೇಶ್ ಬಾಬು ಸಿನಿಮಾವೊಂದರ ಪೋಸ್ಟರ್‌ಗೆ ಸಮಂತಾ ಕಾಮೆಂಟ್ ಮಾಡಿದ್ದರು. ಸಮಂತಾ ಹಳೆಯ ಟ್ವೀಟ್ ಸ್ಕ್ರೀನ್ ಶಾಟ್ ಮತ್ತು ಖುಷಿ ಸಿನಿಮಾದ ಪೋಸ್ಟರ್ ಎರಡರನ್ನು ಶೇರ್ ಮಾಡಿ ಸಖತ್ ಟ್ರೋಲ್ ಮಡಲಾಗುತ್ತಿದೆ. 

ಅಷ್ಟಕ್ಕೂ ಮಹೇಶ್ ಬಾಬು ಪೋಸ್ಟರ್ ಬಗ್ಗೆ ಸಮಂತಾ ಹೇಳಿದ್ದೇನು ಅಂತಿರಾ? ಮಹೇಶ್ ಬಾಬು ಮತ್ತು ಬಾಲಿವುಡ್ ನಟಿ ಕೃತಿ ಸನೊನ್ ನಟನೆಯ ಚೊಚ್ಚಲ ಸಿನಿಮಾ 'ನೆನೊಕ್ಕಡಿನೆ' ಚಿತ್ರದ ಪೋಸ್ಟರ್ ವಿವಾದ ಸೃಷ್ಟಿಸಿತ್ತು. ಮಹೇಶ್ ಬಾಬು ನಡೆದುಕೊಂಡು ಹೋಗುತ್ತಿದ್ದರೆ ಹಿಂದೆ ಕೃತಿ ಸನೊನ್ ಅವರ ಕಾಲು ಮುಟ್ಟುವ ದೃಶ್ಯ ಆದಾಗಿತ್ತು. ಸಿನಿಮಾತಂಡ ಆ ಪೋಸ್ಟರ್ ಶೇರ್ ಮಾಡಿದ ಬಳಿಕ ಸಮಂತಾ ಕಾಮೆಂಟ್ ಮಾಡಿ ಕೃತಿ ಕಾಲೆಳೆದಿದ್ದರು. 

ಸಮಂತಾ ಅಭಿಮಾನಿಗಳಿಗೆ ಬೇಸರದ ವಿಚಾರ: ನಟನೆಯಿಂದ ದೀರ್ಘ ಬ್ರೇಕ್ ಪಡೆಯಲು ಸ್ಯಾಮ್ ನಿರ್ಧಾರ

'ಇನ್ನೂ ಬಿಡುಗಡೆಯಾಗದ ತೆಲುಗು ಚಿತ್ರದ ಪೋಸ್ಟರ್ ನೋಡಿದೆ. ಇದು ಆಳವಾದ ಹಿಮ್ಮೆಟ್ಟುವಿಕೆ ಆಗಿದೆ. ಅಷ್ಟೆಯಲ್ಲ ಅದು ಆಳವಾಗಿ ಹಿಂಜರಿತವಾಗಿದೆ' ಎಂದು ಹೇಳಿದ್ದರು. ಸಮಂತಾ ಮಾಡಿರುವ ಟ್ವೀಟ್ ಈಗ ವೈರಲ್ ಆಗಿದೆ. ಆ ಟ್ವೀಟ್ ಹಿಡಿದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಅಂದು ಹಾಗೆ ಹೇಳಿದ್ರಿ ಈಗ್ಯಾಕೆ ವಿಜಯ್ ದೇವರಕೊಂಡ ನಿಮ್ಮ ಮೇಲೆ ಕಾಲಿಟ್ಟಿದ್ದಾರೆ. ಈಗ್ಯಾಕೆ ಬಿಟ್ರಿ ನೀವು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಪೋಸ್ಟರ್ ಈಗ ಸಾಮಾಜಿಕ ಜಾಲತಾಣದಲ್ಲಿ  ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮುಂಬೈನಲ್ಲಿ ಕಾಣಿಸಿಕೊಂಡ ಸಮಂತಾ: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್

ಸಮಂತಾ ಸದ್ಯ ಖುಷಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಖುಷಿ ಸಿನಿಮಾದಲ್ಲಿ ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮುಸ್ಲಿಂ ಯುವತಿ ಹಾಗು ಗೃಹಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಖುಷಿ ಸಿನಿಮಾದ ಹಾಡು ಮತ್ತು ಟೀಸರ್ ವೈರಲ್ ಆಗಿದ್ದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಈ ಸಿನಿಮಾ ಜೊತೆಗೆ ಸಮಂತಾ ಸಿಟಾಡೆಲ್ ಸಿನಿಮಾದ ಶೂಟಿಂಗ್ ಕೂಡ ಮುಗಿಸಿದ್ದಾರೆ. ಸಿಟಾಡೆಲ್ ನಲ್ಲಿ ಸಮಂತಾ ಬಾಲಿವುಡ್ ನಟ ವರುಣ್ ಧವನ್ ಜೊತೆ ನಟಿಸುತ್ತಿದ್ದಾರೆ. ಮೊದ ಬಾರಿಗೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಸೀರಿಸ್‌ಗೆ  ರಾಜ್ ಮತ್ತು ಡಿಕೆ ಆಕ್ಷನ್ ಕಟ್ ಹೇಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಬ್ಬಬ್ಬಾ! ಈ ಸ್ಟಾರ್​ ನಟರು ನೋಡಲು ಸೇಮ್​ ಟು ಸೇಮ್: ಕುತೂಹಲದ ಫೋಟೋಸ್​ ವೈರಲ್​
ಸಿದ್ಧಾರ್ಥ ಮಲ್ಹೋತ್ರ ಕಿಯಾರ ಅಡ್ವಾಣಿ ಹಗ್ಗಿಂಗ್ ಹಳೇ ವಿಡಿಯೋ ವೈರಲ್, ಕಾರಣವೇನು?