ಮಹೇಶ್ ಬಾಬು ಜೊತೆ ನಟಿಸುವುದೇ ತನ್ನ ದೊಡ್ಡ ಕನಸು: ಮನದಾಸೆ ಬಿಚ್ಚಿಟ್ಟ ನಟಿ ಮೃಣಾಲ್ ಠಾಕೂರ್

Published : Jul 13, 2023, 02:13 PM IST
ಮಹೇಶ್ ಬಾಬು ಜೊತೆ ನಟಿಸುವುದೇ ತನ್ನ ದೊಡ್ಡ ಕನಸು: ಮನದಾಸೆ ಬಿಚ್ಚಿಟ್ಟ ನಟಿ ಮೃಣಾಲ್ ಠಾಕೂರ್

ಸಾರಾಂಶ

ತೆಲುಗು ಸ್ಟಾರ್ ಮಹೇಶ್ ಬಾಬು ಜೊತೆ ನಟಿಸುವುದೇ ತನ್ನ ದೊಡ್ಡ ಕನಸು ಎಂದು ನಟಿ ಮೃಣಾಲ್ ಠಾಕೂರ್ ಮನದಾಸೆ ಬಿಚ್ಚಿಟ್ಟಿದ್ದಾರೆ. 

ಬಹುಭಾಷಾ ನಟಿ ಮೃಣಾಲ್ ಠಾಕೂರ್ ಒಂದಲ್ಲೊಂದು ವಿಚಾರಕ್ಕೆ ಗಮನ ಸೆಳೆಯುತ್ತಿರುತ್ತಾರೆ. ಸೀತಾ ರಾಮಂ ಸಿನಿಮಾ ಬಳಿಕ ಸೌತ್ ಸಿನಿಮಾರಂಗದಲ್ಲೂ ದೊಡ್ಡ ಮಟ್ಟದ ಖ್ಯಾತಿ ಗಳಿಸಿರುವ ಮೃಣಾಲ್ ಠಾಕೂರ್ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಬಿಗ್ ಸಕ್ಸಸ್ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮೃಣಾಲ್ ಇತ್ತೀಚೆಗಷ್ಟೆ ಲಸ್ಟ್ ಸ್ಟೋರಿ 2 ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ತೆಲುಗು ಸಿನಿಮಾರಂಗದ ಬೇಡಿಕೆಯ ನಟಿಯರಲ್ಲಿ ಮೃಣಾಲ್ ಕೂಡ ಒಬ್ಬರು. ಸೀತಾ ರಾಮಂ ಖ್ಯಾತಿಯಲ್ಲಿಯೇ ಮೃಣಾಲ್ ಅನೇಕ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಸಕ್ಸಸ್ ಬೆನ್ನಲ್ಲೇ ಮೃಣಾಲ್ ತನ್ನ ಸಂಭಾವನೆಯನ್ನು ಏರಿಸಿಕೊಂಡಿದ್ದಾರೆ. 

ಸೌತ್ ಸಿನಿಮಾರಂಗದಲ್ಲಿ ಅನೇಕ ಸಿನಿಮಾಗಳನ್ನು ಮಾಡುವ ಕನಸು ಕಂಡಿರುವ ಮೃಣಾಲ್ ಅವರಿಗೆ ಮತ್ತೊಂದು ದೊಡ್ಡ ಆಸೆ ಇದೆ. ಈ ಬಗ್ಗೆ ಮೃಣಾಲ್ ಬಹಿರಂಗ ಪಡಿಸಿದ್ದಾರೆ. ಮಹೇಶ್ ಬಾಬು ಜೊತೆ ನಟಿಸುವುದು ತನ್ನ ದೊಡ್ಡ ಕನಸು. ವೃತ್ತಿ ಜೀವನದ ಪ್ರಾರಂಭದಿಂದನೂ ಈ ಆಸೆಯಿದೆ. ಕನಸು ನನಸು ಮಾಡಿಕೊಳ್ಳುವತ್ತ ಗಮನ ಹರಿಸುತ್ತಿರುವುದಾಗಿ ಹೇಳಿದ್ದಾರೆ. 

ಮೃಣಾಲ್ ಅವರಿಗೆ ಮಹೇಶ್ ಬಾಬು ಎಂದರೆ ತುಂಬಾ ಇಷ್ಟ. ತನ್ನ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಉತ್ತಮ ನಟ. ಅವರ ಜೊತೆ ನಟಿಸುವುದು ದೊಡ್ಡ ಆಸೆ ಎಂದು ಹೇಳಿದ್ದಾರೆ. ತನ್ನ ನಟನಾ ಕೌಶಲ್ಯ ಹೆಚ್ಚಿಸಿಕೊಳ್ಳಲು ಪ್ರತಿ ದಿನ ಶ್ರಮ ಹಾಕುತ್ತಾರೆ. ಹಾಗಾಗಿಯೇ ಮೃಮಾಲ್ ಪರ್ತಿ ಸಿನಿಮಾದಲ್ಲೂ ಅದ್ಭುತವಾಗಿ ನಟಿಸುತ್ತಾರೆ. ಯಾವುದೇ ಪಾತ್ರವಾದರೂ ಲೀಲಾಜಾಲವಾಗಿ ನಟಿಸುತ್ತಾರೆ. 

Cannes 2023: ಸೀರೆಯಲ್ಲಿ ದೇಸಿ ಗರ್ಲ್‌ ಅನಿಸುತ್ತಿದೆ ಎಂದ ಮೃಣಾಲ್‌ ಠಾಕೂರ್‌; ಮೆಚ್ಚಿದ ಸಮಂತಾ ರುತ್‌ ಫ್ರಭು!

ಒಂದಲ್ಲೊಂದು ದಿನ ಮಹೇಶ್ ಬಾಬು ಜೊತೆ ನಟಿಸುತ್ತೇನೆ ಎನ್ನುವ ಭರವಸೆಯಲ್ಲಿದ್ದಾರೆ. ಮೃಣಾಲ್ ಮತ್ತು ಮಹೇಶ್ ಬಾಬು ಅವರನ್ನು ಒಟ್ಟಿಗೆ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ. ಇಬ್ಬರೂ ಆದಷ್ಟು ಬೇಗ ಒಟ್ಟಿಗೆ ಸಿನಿಮಾ ಮಾಡಲಿ ಎಂದು ಅಭಿಮಾನಿಗಳು ಸಹ ಹಾರೈಸುತ್ತಿದ್ದಾರೆ. ಮಹೇಶ್ ಬಾಬು ಸದ್ಯ ಗುಂಟೂರು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗೆ ತ್ರಿವಿಕ್ರಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಕನ್ನಡದ ನಟಿ ಶ್ರೀಲೀಲಾ ನಟಿಸುತ್ತಿದ್ದಾರೆ. 

ಮತ್ತೆ ಸಂಭಾವನೆ ಏರಿಸಿಕೊಂಡ ಮೃಣಾಲ್: ದೇವರಕೊಂಡ ಜೊತೆ ನಟಿಸಲು ಇಷ್ಟೊಂದು ಹಣ ಪಡೆದ್ರಾ 'ಸೀತಾ ರಾಮಂ' ನಟಿ?

ಮೃಣಾಲ್ ಸದ್ಯ ಪೂಜಾ ಮೇರಿ ಜಾನ್, ಪಿಪ್ಪಾ, ಆಂಕ್ ಮಿಚೋಲಿ, ನಾನಿ 30 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸೀತಾ ರಾಮಂ ಬಳಿಕ ಬಂದ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿಲ್ಲ. ಹಾಗಾಗಿ ಮತ್ತೊಂದು ಸಕ್ಸಸ್‌ಗಾಗಿ ಮೃಣಾಲ್ ಕಾಯುತ್ತಿದ್ದಾರೆ. ಸೌತ್ ಪ್ರೇಕ್ಷಕರು ಮೃಣಾಲ್ ಕೈ ಹಿಡಿಯುತ್ತಾರಾ ಕಾದುನೋಡಬೇಕಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!