ನಯನತಾರಾ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದು ನಿಜವೇ?ತಾಯಿ ಕಳೆದುಕೊಂಡ ಸುದೀಪ್ಗೆ ಪ್ರಧಾನಿ ಮೋದಿ ಸಾಂತ್ವನ.
ಲೇಡಿ ಸೂಪರ್ ಸ್ಟಾರ್ ನಯನತಾರಾ ಸಿನಿ ಇಂಡಸ್ಟ್ರಿಗೆ ಬಂದು ಎರಡು ದಶಕಗಳೇ ಕಳೆದವು. ಈಗಲೂ ನಯನತಾರಾ ಸಿನಿ ಇಂಡಸ್ಟ್ರಿಯಲ್ಲಿ ಬಹು ಬೇಡಿಕೆಯ ತಾರೆ. ಇಷ್ಟು ದಿನ ಸೌತ್ನಲ್ಲಷ್ಟೇ ಬ್ಯುಸಿಯಾಗಿದ್ದ ನಯನತಾರಾ ಜವಾನ್ ಸಿನಿಮಾ ಬಳಿಕ ಬಾಲಿವುಡ್ನಲ್ಲೂ ಮೋಡಿ ಮಾಡ್ತಾ ಇದ್ದಾರೆ. ಈ ಸುಂದರಿಯ ಮಾಸದ ಬ್ಯೂಟಿ ಹಿಂದಿರೋ ಸೀಕ್ರೆಟ್.. ಕಾಸ್ಮೆಟಿಕ್ ಸರ್ಜರಿ ಅಂತ ಇತ್ತೀಚಿಗೆ ಗಾಸಿಪ್ ಹರಿದಾಡ್ತಾ ಇತ್ತು. ಆದರೆ ಇದಕ್ಕೆ ಉತ್ತರ ಕೊಟ್ಟಿರೋ ನಯನ ತಾನೂ ಸೌಂದರ್ಯಕ್ಕಾಗಿ ಸರ್ಜರಿ ಮೊರೆ ಹೋಗಿಲ್ಲ. ಬದಲಾಗಿ ಪ್ರತಿ ಇವೆಂಟ್ನಲ್ಲೂ ಐಬ್ರೋಗೆ ಹೊಸ ಟಚ್ ಕೊಡ್ತಿನಿ, ಅದಕ್ಕೆ ತಾನು ವಿಭಿನ್ನವಾಗಿ ಕಾಣಿಸ್ತಿನಿ ಅಂತ ಹೇಳಿದ್ದಾರೆ.
ಮತ್ತೆ ಬಿಗ್ ಸ್ಕ್ರೀನ್ ಮೇಲೆ ಶಾರೂಖ್-ಸಲ್ಮಾನ್ ಜೋಡಿ..!
ಬಾಲಿವುಡ್ ಬಾದ್‌ಶಾ ಮತ್ತು ಟೈಗರ್ ಸಲ್ಲು ಮತ್ತೊಮ್ಮೆ ಒಟ್ಟಾಗಿ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ತಾ ಇದ್ದಾರೆ. ಈ ಹಿಂದೆ ಶಾರೂಖ್ ನಟನೆಯ ಪಠಾಣ್ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಸಲ್ಲು ಕೆಮಿಯೋ ಅಪೀಯರೆನ್ಸ್ ಮಾಡಿದ್ದರು. ಹಾಗಂತ ಇದೀಗ ಈ ಇಬ್ಬರು ಬಿಗ್ ಸ್ಟಾರ್ಸ್ ಮತ್ತೆ ಒಂದಾಗಿ ನಟಿಸ್ತಾ ಇಲ್ಲ. ಬದಲಾಗಿ ಈ ಇಬ್ಬರು ಜೊತೆಯಾಗಿ ನಟಿಸಿದ್ದ 3 ದಶಕಗಳ ಹಿಂದಿನ ಕರಣ್ ಅರ್ಜುನ್ ಸಿನಿಮಾ ರೀ ರಿಲೀಸ್ ಆಗ್ತಾ ಇದೆ. ಸದ್ಯ ಎಲ್ಲಾ ಭಾಷೆಗಳಲ್ಲೂ ರೀ ರಿಲೀಸ್ ಪರ್ವ ಜೋರಾಗಿದ್ದು, ಬಾಲಿವುಡ್ನಲ್ಲೂ ಈ ಟ್ರೆಂಡ್ ಶುರುವಾಗಿದೆ. ನಿರ್ಮಾಪಕ ರಾಕೇಶ್ ರೋಷನ್ ಕರಣ್ ಅರ್ಜುನ್ ಚಿತ್ರವನ್ನ ಹೊಸ ತಂತ್ರಜ್ಞಾನದೊಂದಿಗೆ ತೆರೆಗೆ ತರಲಿಕ್ಕೆ ಸಜ್ಜಾಗಿದ್ದು, ಇದೇ ನವೆಂಬರ್ 22ಕ್ಕೆ ಸಿನಿಮಾ ದೇಶಾದ್ಯಂತ ತೆರೆಗೆ ಬರಲಿದೆ.
ನಿರ್ಮಾಪಕ ಹಾಗೂ ನಟ ನವರಸನ್, ಕಳೆದ 2 ವರ್ಷಗಳ ಹಿಂದೆ ಕನ್ನಡ ಚಿತ್ರಗಳ ಪ್ರಮೋಷನ್
ಅನುಕೂಲವಾಗುವಂತಹ MMB legacy ಎಂಬ ಸುಸಜ್ಜಿತ ಸಭಾಂಗಣ ಆರಂಭಿಸಿದ್ದರು. 2 ವರ್ಷಗಳಲ್ಲಿ 300 ರ ಆಸುಪಾಸಿನ ಸಿನಿಮಾ ಸಮಾರಂಭಗಳು ಈ ಸ್ಥಳದಲ್ಲಿ ನಡೆದಿವೆ. ಇತ್ತೀಚಿಗೆ MMB legacyಯ ದ್ವಿತೀಯ ವಾರ್ಷಿಕೋತ್ಸವ ಅದ್ದೂರಿಯಾಗಿ ನೆರವೇರಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ನಟರಾದ ಚಂದನ್ ಶೆಟ್ಟಿ, ಶ್ರೇಯಸ್ ಮಂಜು, ನಿರ್ಮಾಪಕರಾದ ಕೃಷ್ಣ ಸಾರ್ಥಕ್, ಗೋವಿಂದರಾಜು, , "ಜಾಲಿವುಡ್" ಸ್ಟುಡಿಯೋಸ್ ನ ಬಶೀರ್ ಹಾಗೂ ಪ್ರಚಾರಕರ್ತರಾದ ಸುಧೀಂದ್ರ ವೆಂಕಟೇಶ್, ನಾಗೇಂದ್ರ, ವಿಜಯ್ ಕುಮಾರ್, ಕಲ್ಲೇಶ್ ಮುಂತಾದವರು ಸಮಾರಂಭದಲ್ಲಿ ಭಾಗವಹಿಸಿ ನವರಸನ್ ಅವರಿಗೆ ಶುಭ ಕೋರಿದರು.
ತಾಯಿಯನ್ನ ಕಳೆದುಕೊಂಡ ಕಿಚ್ಚ ಸುದೀಪ್ಗೆ ಕರುನಾಡು ಮಾತ್ರ ಅಲ್ಲ ಇಡೀ ಭಾರತೀಯ ಸಿನಿರಂಗದ ಕಲಾವಿದರು - ತಂತ್ರಜ್ಞರು ಸಾಂತ್ವನ ಹೇಳಿದ್ರು. ಇದೀಗ ಪ್ರಧಾನಿ ನರೇಂದ್ರ ಮೋದಿ ಕೂಡ ಕಿಚ್ಚ ಸುದೀಪ್ಗೆ ಪತ್ರದ ಮೂಲಕ ಸಾಂತ್ವನ ಹೇಳುದ್ದಾರೆ. ನಿಮ್ಮ ತಾಯಿ ಶ್ರೀಮತಿ ಸರೋಜಾ ಸಂಜೀವ್ ಅವರ ನಿಧನದ ಸುದ್ದಿ ಕೇಳಿ ನನಗೆ ಆಳವಾದ ದುಃಖವಾಗಿದೆ. ತಾಯಿಯ ಅಗಲಿಕೆ ತುಂಬಲಾರದ ನಷ್ಟ. ನಿಮ್ಮ ಜೀವನದಲ್ಲಿ ನಿಜವಾಗಿಯೂ ಅತ್ಯಂತ ಕಷ್ಟಕರವಾದ ಹಂತ ಇದು ಅಂತ ಗೊತ್ತು . ನಿಮಗೆ ನನ್ನ ಆಳವಾದ ಸಂತಾಪ ಮತ್ತು ಸಹಾನುಭೂತಿ. ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ನಿಮಗೆ ದಯಪಾಲಿಸಲಿ ಓಂ ಶಾಂತಿ! ಅಂತ ಪತ್ರದಲ್ಲಿ ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.