
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ತಮ್ಮ ಮುಂಬರುವ ಚಿತ್ರ 'ಟೈಗರ್ 3' ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಸೋಲು-ಗೆಲುವು ಏನೇ ಇದ್ದರೂ ಸಲ್ಮಾನ್ ಖಾನ್ (Salman Khan) ಅವರಿಗೆ ಇರುವ ಡಿಮ್ಯಾಂಡ್ ಕಡಿಮೆ ಆಗಿಲ್ಲ. ಅವರೀಗ ‘ಟೈಗರ್ 3’ ಚಿತ್ರದ ಮೇಲೆ ಗಮನ ಹರಿಸಿದ್ದಾರೆ. ಯಶ್ ರಾಜ್ ಫಿಲ್ಮ್ಸ್ (YRF) ನ ಮುಂಬರುವ ಸ್ಪೈ ಯೂನಿವರ್ಸ್ ಚಿತ್ರ 'ಟೈಗರ್ 3 ಫಿಲ್ಮ್' ಚಿತ್ರೀಕರಣವು ಪ್ರಸ್ತುತ ನಡೆಯುತ್ತಿದೆ. ಈ ಚಿತ್ರದಲ್ಲಿ, ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಮತ್ತೊಮ್ಮೆ ತಮ್ಮ ಆಕ್ಷನ್ ಮತ್ತು ರೊಮ್ಯಾನ್ಸ್‌ನಿಂದ (Romance) ಪ್ರೇಕ್ಷಕರ ಮನಸೂರೆಗೊಳ್ಳಲಿದ್ದಾರೆ. ಆದರೆ, 'ಪಠಾಣ್' ನಂತರ ಮತ್ತೊಮ್ಮೆ 'ಟೈಗರ್ 3' ಚಿತ್ರದಲ್ಲಿ ಶಾರುಖ್ ಮತ್ತು ಸಲ್ಮಾನ್ ಜೋಡಿ ದೊಡ್ಡ ಪರದೆಯ ಮೇಲೆ ಆಕ್ಷನ್ ತೋರಿಸಲಿದೆ. ಶಾರುಖ್ ಖಾನ್ 'ಟೈಗರ್ 3' ನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ. ಪ್ರಸ್ತುತ ಈ ಇಬ್ಬರೂ ಸ್ಟಾರ್‌ಗಳು ಈ ಚಿತ್ರದ ವಿಶೇಷ ವಿಭಾಗದ ಚಿತ್ರೀಕರಣದಲ್ಲಿದ್ದಾರೆ. ಚಿತ್ರೀಕರಣಕ್ಕಾಗಿ ₹ 35 ಕೋಟಿ ಮೌಲ್ಯದ ಸೆಟ್ ಅನ್ನು ನಿರ್ಮಿಸಲಾಗಿತ್ತು.
ಅಭಿಮಾನಿಗಳ ಪಾಲಿನ ಖುಷಿಯ ವಿಚಾರ ಏನೆಂದರೆ ಈ ಸಿನಿಮಾದ ಶೂಟಿಂಗ್ ಮುಕ್ತಾಯ ಆಗಿದೆ. ಈ ವಿಷಯವನ್ನು ಸ್ವತಃ ಸಲ್ಮಾನ್ ಖಾನ್ ಇತ್ತೀಚೆಗೆ ಖಚಿತ ಪಡಿಸಿದ್ದರು. ಮನೀಶ್ ಶರ್ಮಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಮೂಲಕ ನಿರ್ಮಾಣ ಆಗುತ್ತಿದೆ. ಸಲ್ಮಾನ್ ಖಾನ್ (Salman Khan) ಜೊತೆ ಕತ್ರಿನಾ ಕೈಫ್, ಇಮ್ರಾನ್ ಹಷ್ಮಿ ಕೂಡ ಪಾತ್ರವರ್ಗದಲ್ಲಿದ್ದಾರೆ. ಇತ್ತೀಚೆಗೆ ಐಫಾ ಅವಾರ್ಡ್ಸ್ (IIFA Awards) ಸಲುವಾಗಿ ಸಲ್ಮಾನ್ ಖಾನ್ ಅವರು ಅಬುಧಾಬಿಗೆ ತೆರಳಿದ್ದರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡುವಾಗ ಅವರು ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದರು. ಅಂತೂ ಟೈಗರ್ 3 ಅದರ ಚಿತ್ರೀಕರಣ ಮುಗಿಸಿದ್ದೇನೆ. ಅದು ತುಂಬ ಕಷ್ಟಕರವಾಗಿತ್ತು. ಆದರೂ ಚೆನ್ನಾಗಿತ್ತು. ದೀಪಾವಳಿ ಹಬ್ಬಕ್ಕೆ ನೀವು ಈ ಸಿನಿಮಾ ನೋಡುತ್ತೀರಿ’ ಎಂದು ಸಲ್ಮಾನ್ ಖಾನ್ ಹೇಳಿದ್ದರು.
ಸ್ನಾನದ ವಿಡಿಯೋ ಶೇರ್ ಮಾಡಿ ಫ್ಯಾನ್ಸ್ ಎದೆಬಡಿತ ಹೆಚ್ಚಿಸಿದ ನಟಿ ಸೋನಂ, ವೀಡಿಯೋ ನೋಡಿ
ಈ ಮಧ್ಯೆ, 'ಟೈಗರ್ 3' ಸೆಟ್‌ನಿಂದ ಶಾರುಖ್ ಖಾನ್ (Shahrukh Khan) ಮತ್ತು ಸಲ್ಮಾನ್ ಖಾನ್ ಅವರ ವಿಡಿಯೋ ಲೀಕ್ ಆಗಿದೆ. ಈ ವಿಡಿಯೋದಲ್ಲಿ, ಸಲ್ಮಾನ್ ಖಾನ್ ಕಂದು ಬಣ್ಣದ ಟೀ ಶರ್ಟ್ ಮತ್ತು ಜೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಖಾನ್ ಅವರು 'ಪಠಾಣ್' ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 'ಟೈಗರ್ 3' ಸೆಟ್‌ನಿಂದ ಈ ವಿಡಿಯೋ ಕಾಣಿಸಿಕೊಂಡ ನಂತರ ಅಭಿಮಾನಿಗಳ ಉತ್ಸಾಹ ದುಪ್ಪಟ್ಟಾಗಿದೆ. 'ಟೈಗರ್ 3' ಸೆಟ್‌ನಿಂದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರ ಈ ವಿಡಿಯೋಗೆ ಅಭಿಮಾನಿಗಳು ಸಾಕಷ್ಟು ಪ್ರತಿಕ್ರಿಯಿಸುತ್ತಿದ್ದಾರೆ. ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರ ಈ ವಿಡಿಯೋದ ಕುರಿತು ಪ್ರತಿಕ್ರಿಯಿಸಿದ ಬಳಕೆದಾರರು 'ಸೂಪರ್‌ಹಿಟ್ ಜೋಡಿ' ಎಂದು ಬರೆದರೆ, ಇನ್ನೊಬ್ಬ ಬಳಕೆದಾರರು 'ನಾನು ಈ ಚಿತ್ರವನ್ನು ವೀಕ್ಷಿಸಲು ತುಂಬಾ ಉತ್ಸುಕನಾಗಿದ್ದೇನೆ' ಎಂದಿದ್ದಾರೆ. ಅಂದಹಾಗೆ ಸಲ್ಮಾನ್ ಖಾನ್ ಅಭಿನಯದ 'ಟೈಗರ್ 3' ದೀಪಾವಳಿಗೆ ಬಿಡುಗಡೆಯಾಗಲಿದೆ.
ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ 'ಟೈಗರ್ 3' ಚಿತ್ರದಲ್ಲಿ ನಟ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನಟ ಇಮ್ರಾನ್ ಹಶ್ಮಿ ಚಿತ್ರದಲ್ಲಿ ವಿಲನ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮನೀಶ್ ಶರ್ಮಾ ನಿರ್ದೇಶನದ ಈ ಚಿತ್ರವು ದೀಪಾವಳಿ ಸಂದರ್ಭದಲ್ಲಿ ನವೆಂಬರ್ 10 ರಂದು ಬಿಡುಗಡೆಯಾಗಲಿದೆ. ಹಿಂದಿಯ ಜೊತೆಗೆ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಪ್ಯಾನ್ ಇಂಡಿಯಾ ಚಿತ್ರವು ದೀಪಾವಳಿ ಸಂದರ್ಭದಲ್ಲಿ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಲಿದೆ.
ಕೆನ್ನೆಗೆ ಹೊಡೆದವನನ್ನೇ ಮದ್ವೆಯಾದ ಇಶಾ ಡಿಯೋಲ್: ಇಂಟರೆಸ್ಟಿಂಗ್ ಲವ್ ಸ್ಟೋರಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.