ಹಾಟ್ ತಾರೆ ಎಂದೇ ಪರಿಚಿತವಾಗಿರುವ ಬಹುಭಾಷಾ ನಟಿ ಸೋನಮ್ ಬಾಜ್ವಾ ತಮ್ಮ ಮನೆಯ ಬಾತ್ರೂಂನಿಂದ ನೇರವಾಗಿ ವಿಡಿಯೋ ಮಾಡಿ ತಾವು ಸ್ನಾನ ಮಾಡ್ತಿರೋ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಬಹುಭಾಷಾ ನಟಿ ಮತ್ತು ರೂಪದರ್ಶಿಯಾಗಿರುವ ಸೋನಮ್ ಬಾಜ್ವಾ (Sonam Bajwa) ಹೆಚ್ಚು ಫೇಮಸ್ ಆಗಿದ್ದು 2012ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮೇಲೆ. 34 ವರ್ಷಗಳ ಈ ಚೆಲುವೆ ಪಂಜಾಬಿ ಚಿತ್ರರಂಗದಲ್ಲಿ ಸಕತ್ ಫೇಮಸ್. ಹಾಟ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇವರ ಅಸಲಿ ಹೆಸರು ಸೋನಮ್‌ಪ್ರೀತ್ ಬಾಜ್ವಾ. ಪಂಜಾಬಿ ಚಲನಚಿತ್ರ ಬೆಸ್ಟ್ ಆಫ್ ಲಕ್ (2013) ನೊಂದಿಗೆ ಸಿನಿ ಪ್ರಪಂಚಕ್ಕೆ ಪದಾರ್ಪಣೆ ಮಾಡಿರೋ ನಟಿ, ತಮಿಳು ಚಿತ್ರರಂಗದಲ್ಲಿಯೂ ಸಕತ್ ಫೇಮಸ್. ಕಪ್ಪಾಲ್ ಎಂಬ ಚಿತ್ರದ ಮೂಲಕ ಈಕೆ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇವರಿಗೆ ತುಂಬಾ ಹೆಸರು ತಂದುಕೊಟ್ಟ ಚಿತ್ರಗಳೆಂದರೆ ಪಂಜಾಬ್ 1984 (2014), ಸರ್ದಾರ್ ಜಿ 2 (2016), ನಿಕ್ಕಾ ಜೈಲ್ದಾರ್ (2016), ಮಂಜೇ ಬಿಸ್ತ್ರೆ (2017), ನಿಕ್ಕಾ ಜೈಲ್ದಾರ್ 2 (2017), ಕ್ಯಾರಿ ಆನ್ ಜಟ್ಟಾ ಮುಂತಾದವು. ಗುಡ್ಡಿಯನ್ ಪಟೋಲೆ (2019), ಅರ್ದಾಬ್ ಮುತಿಯಾರನ್ (2019) ಮತ್ತು ಆಟಾದುಕುಂದಂ ರಾ (2016) ನೊಂದಿಗೆ ತೆಲುಗು ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅರ್ದಾಬ್ ಮುತಿಯಾರನ್ ಚಿತ್ರದಲ್ಲಿನ ಅಭಿನಯಕ್ಕಾಗಿ ಬಾಜ್ವಾ ಅತ್ಯುತ್ತಮ ನಟಿಗಾಗಿ ಪಿಟಿಸಿ ಪಂಜಾಬಿ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು . ಅವರು ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟಿಯಾಗಿ ನಾಮನಿರ್ದೇಶನಗೊಂಡಿದ್ದಾರೆ. ಕೆಲವು ಹಿಂದಿ ಚಿತ್ರಗಳಲ್ಲಿಯೂ ಅವರು ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ.
ಇಂತಿಪ್ಪ ನಟಿ ಈಗ ಜಾಲತಾಣದಲ್ಲಿ (Social Media) ಕೋಲಾಹಲ ಸೃಷ್ಟಿಸಿದ್ದು, ಆಕೆಯ ಫ್ಯಾನ್ಸ್ ಅದರಲ್ಲಿಯೂ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಹಾಟ್ ಫೋಟೋಶೂಟ್ ಮಾಡಿಸಿಕೊಂಡು ಅದನ್ನು ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದು ಕೇವಲ ಫೋಟೋಶೂಟ್ ಅಲ್ಲ. ಇದಾಗಲೇ ಬಾಲಿವುಡ್ ಸೇರಿದಂತೆ ಹಲವು ನಟಿಯರು ಬಿಂದಾಸ್ ಆಗಿ ಡ್ರೆಸ್ ಮಾಡಿಕೊಂಡು ಫೋಟೋಶೂಟ್ ಮಾಡಿಸಿಕೊಳ್ಳುವುದು ಮಾಮೂಲು. ಮೈಮೇಲೆ ಅತ್ಯಂತ ಕಡಿಮೆ ಬಟ್ಟೆ ತೊಡುವಲ್ಲಿ ಪೈಪೋಟಿಗೆ ಬಿದ್ದು ಫೋಟೋ ತೆಗೆಸಿಕೊಳ್ಳುವ ನಟಿಯರೇ ಇಂದು ಹೆಚ್ಚಾಗಿದ್ದಾರೆ. ಕೆಲವೊಮ್ಮೆ ತೀರಾ ಅಶ್ಲೀಲ ಎನ್ನಿಸುವಂಥ ಫೋಟೋಗಳನ್ನು ಶೇರ್ ಮಾಡಿ ಫ್ಯಾನ್ಸ್ಗಳಿಂದ ಭೇಷ್ ಭೇಷ್ ಎನಿಸಿಕೊಂಡು, ಕೆಲವರಿಂದ ಟ್ರೋಲ್ಗೂ ಒಳಗಾಗುತ್ತಾರೆ. ಆದರೆ ಇಲ್ಲಿ ಇವೆಲ್ಲವುಗಳಿಂತಲೂ ಭಿನ್ನವಾದ ವಿಡಿಯೋ ಒಂದನ್ನು ನಟಿ ಸೋನಮ್ ಬಾಜ್ವಾ ಶೇರ್ ಮಾಡಿದ್ದಾರೆ.
Tip Tip Barsa Pani: ಸೀರೆ ಬಿಚ್ಬಾರ್ದು, ಕಿಸ್ ಕೊಡ್ಬಾರ್ದು.... ಮಳೆ ಸೀನ್ಗೆ ರವೀನಾ ಟಂಡನ್ ಕಂಡೀಷನ್!
ಅಂಥದ್ದೇನಪ್ಪಾ ಎಂದರೆ ಅದು ಸ್ನಾನ ಮಾಡುವ ವಿಡಿಯೋ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ನಟಿಯರು ಸ್ನಾನ ಮಾಡುವ ಇಲ್ಲವೇ ಮಳೆಯಲ್ಲಿ ಚಳಿ ಬಿಟ್ಟು ನಟಿಸುವ ದೃಶ್ಯಗಳನ್ನು ನೋಡಿರಬಹುದು. ಆದರೆ ಇಲ್ಲಿ ನಟಿ ಬಾಜ್ವಾ ನಿಜವಾಗಿಯೂ ಸ್ನಾನ ಮಾಡುವ ವಿಡಿಯೋ ಒಂದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ (Instagram) ಶೇರ್ ಮಾಡಿಕೊಂಡು ಹಲ್ಚಲ್ ಸೃಷ್ಟಿಸಿದ್ದಾರೆ. ಅಸಲಿಗೆ ಈಕೆ ಇಂಥ ವಿಡಿಯೋ, ಫೋಟೋ ಹಾಕಿ ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಲೇ ಇರುತ್ತಅರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಟಿ ಇದೀಗ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿರುವ ಫೋಟೋ, ವಿಡಿಯೋ ನೋಡಿ ಅಭಿಮಾನಿಗಳ ಉಸಿರು ನಿಂತಂತಾಗಿದೆ.
ತಮ್ಮ ಮನೆಯ ಬಾತ್ರೂಮಿನಲ್ಲಿ (Bathroom) ಸ್ನಾನ ಮಾಡುವಾಗಿನ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಒದ್ದೆಯಾದ ದೇಹದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳನ್ನು ನೋಡಿದ ಕೆಲವು ಅಭಿಮಾನಿಗಳು ಈಖೆಯನ್ನು ಮಂದಾಕಿನಿ ಜೊತೆ ಹೋಲಿಕೆ ಮಾಡುತ್ತಿದ್ದರೆ, ಇನ್ನು ಹಲವರು ಕಣ್ಕಣ್ ಬಿಟ್ಟು ಪದೇ ಪದೇ ವಿಡಿಯೋ ನೋಡುತ್ತಿದ್ದಾರೆ. ಮೊದಲು ಶವರ್ ಬಿಟ್ಟುಕೊಂಡು ಬಿಕಿನಿಯಲ್ಲಿ ಸ್ನಾನಗೃಹಕ್ಕೆ ಹೋಗುವ ನಟಿ ನಂತರ ಶವರ್ ಮಾಡುವ ಮೂಲಕ ನೀರಿನಲ್ಲಿ ಮುಳುಗುವುದನ್ನು ನೋಡಬಹುದು. ನಂತರ ಆಕೆಯ ಮೈಮೇಲೆ ನೀರಿನ ಹನಿಗಳು ಬೀಳುತ್ತಿವೆ. ಅದೇ ಸಮಯದಲ್ಲಿ ಅವರು ನೀಡಿದ ಪೋಸ್ ಕೂಡ ಅದ್ಭುತವಾಗಿದೆ. ನಟಿಯ ಈ ಫೋಟೋಶೂಟ್ ಅವರ ಅಭಿಮಾನಿಗಳ ಬೆವರಿಳಿಸಿದೆ.
ಮಲೈಕಾ ಅರೋರಾ- ಅರ್ಜುನ್ ಕಪೂರ್ ಅಪ್ಪ-ಅಮ್ಮ ಆಗ್ತಿದ್ದಾರಾ? ನಟ ಹೇಳಿದ್ದೇನು?
ಒದ್ದೆಯಾದ ದೇಹವು ಅವಳ ಸೌಂದರ್ಯದ ಸಿರಿ ಕಾಣಿಸುತ್ತಿದೆ ಎಂದು ಹಲವರು ಹೇಳುತ್ತಿದ್ದರೆ, ಇದು ಅಶ್ಲೀಲತೆಯ ಪರಮಾವಧಿ ಎಂದು ಇನ್ನು ಕೆಲವರು ಬೈಯುತ್ತಿದ್ದಾರೆ. ಬಜ್ವಾ ಅವರ ಇಂತಹ ಹಾಟ್ ಮತ್ತು ಮಾದಕ ನೋಟವನ್ನು ತಾವೆಂದಿಗೂ ನೋಡಿರಲಿಲ್ಲ, ಹೀಗೊಂದು ಫೋಟೋಶೂಟ್ (Photoshoot) ಮಾಡಿಸಿಕೊಳ್ಳಬಹುದು ಎಂದು ಊಹಿಸಿಯೂ ಇರಲಿಲ್ಲ ಎಂದು ಕೆಲವರು ಹೇಳಿದ್ದಾರೆ. ಈ ಚಿತ್ರಗಳಲ್ಲಿ ಸೋನಂ ಕೆಂಪು ಬಣ್ಣದ ಮೊನೊಕಿನಿ ಧರಿಸಿರುವುದನ್ನು ನೋಡಬಹುದು.