Actors who converted religion for marriage: ಅನೇಕ ನಟಿಯರು ಅಂತರ್‌ಧರ್ಮೀಯ ವಿವಾಹ ಮಾಡಿಕೊಂಡಿದ್ದಾರೆ. ಇವರಲ್ಲಿ ಹಲವರು ತಮ್ಮ ಧರ್ಮವನ್ನೇ ಗಂಡನ ಧರ್ಮಕ್ಕೆ ಬದಲಾಯಿಸಿಕೊಂಡಿದ್ದಾರೆ. ಅಂಥ ನಟಿಯರು ಯಾರು? ಇಲ್ಲಿದೆ ವಿವರ.
ಪ್ರೀತಿ ಎಂಬುದು ಅತ್ಯಂತ ಆಳವಾದ ಅರ್ಥವನ್ನು ಹೊಂದಿರುವ ಒಂದು ಪದ. ಪ್ರೀತಿ ಕುರುಡು ಅಂತ ಕೆಲವರು ಹೇಳಿದರೆ, ಪ್ರೀತಿಯ ಮುಂದೆ ಎಲ್ಲವೂ ಕುರುಡು ಅಂತ ಮತ್ತೆ ಕೆಲವರು ಹೇಳುತ್ತಾರೆ. ಬಹುಶಃ ಪ್ರೀತಿಗೆ ನಾವೇ ಕಟ್ಟಿಕೊಂಡ ಎಲ್ಲ ಚೌಕಟ್ಟುಗಳನ್ನು ಮೀರುವ ಶಕ್ತಿ ಇದೆಯೇನೋ. ಪ್ರದೇಶ, ಧರ್ಮ, ಜಾತಿ, ಪಂಥ, ಬಣ್ಣ, ಭಾಷೆ ಮತ್ತಿತರ ಯಾವುದೇ ಅಡೆತಡೆಗಳು ಪ್ರೇಮಿಗಳ ನಡುವೆ ಇರೋಲ್ಲ. ಕೆಲವು ಭಾರತೀಯ ಚಿತ್ರರಂಗದ ಸೆಲೆಬ್ರಿಟಿಗಳ ವಿಷಯದಲ್ಲೂ ಇದೇ ಆಗಿದೆ. ಬೇರೊಂದು ಧರ್ಮದ ವ್ಯಕ್ತಿಯನ್ನು ಪ್ರೀತಿಸಿ, ಮದುವೆಯಾಗಿ ತಮ್ಮದೇ ಧರ್ಮದಲ್ಲೇ ಮುಂದುವರಿದವರೂ ಇದ್ದಾರೆ. ಗಂಡ- ಗಂಡನ ಮನೆಯವರ ಅಪೇಕ್ಷಗೆ ಒಳಪಟ್ಟು, ಸ್ವ ಇಚ್ಛೆಯಿಂದಲೂ ಮತಾಂತರ ಆದವರೂ ಇದ್ದಾರೆ. ನಮಗೆ ಜಾತಿ, ಧರ್ಮಕ್ಕಿಂತಲೂ ಪ್ರೀತಿ, ಕುಟುಂಬ ದೊಡ್ಡದು ಅನ್ನುವುದು ಅವರ ನಂಬಿಕೆ. ವಿಭಿನ್ನ ನಂಬಿಕೆಯ ವ್ಯಕ್ತಿಯನ್ನು ವಿವಾಹವಾಗಿ ಹೆಚ್ಚು ಯೋಚಿಸದೆ ಆ ಧರ್ಮಕ್ಕೆ ಹೋಗಿಬಿಟ್ಟ ಕೆಲವು ದಕ್ಷಿಣ ಭಾರತದ ಚಲನಚಿತ್ರ ನಟಿಯರನ್ನು ಈಗ ನೋಡೋಣ. ಸಿನಿಮಾ ಜೀವನದ ಉತ್ತುಂಗದಲ್ಲಿದ್ದಾಗಲೇ ವಿವಾಹವಾಗಿ ಅವರು ಈ ನಿರ್ಧಾರ ತೆಗೆದುಕೊಂಡದ್ದು ವಿಶೇಷ.
ನಯನತಾರಾ
ನಯನತಾರಾ ಕ್ರಿಶ್ಚಿಯನ್ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಆದರೆ ಅವರು 7 ಆಗಸ್ಟ್ 2011ರಂದು ಚೆನ್ನೈನ ಆರ್ಯ ಸಮಾಜದಲ್ಲಿ ಹಿಂದೂ ಧರ್ಮವನ್ನು ಸ್ವೀಕರಿಸಿದರು. ವೇದಾಚರಣೆಗಳ ಪ್ರಕಾರ 'ಶುದ್ಧಿ ಕರ್ಮ'ದಂತಹ ಎಲ್ಲಾ ಆಚರಣೆಗಳನ್ನು ಅನುಸರಿಸಿ ಹಿಂದೂ ಧರ್ಮಕ್ಕೆ ಪರಿವರ್ತನೆ ಪ್ರಮಾಣಪತ್ರವನ್ನು ಪಡೆದರು. ಬಾಪು ಅವರ ‘ಶ್ರೀರಾಮ ರಾಜ್ಯ’ದಲ್ಲಿ ರಾಮನಾಗಿ ನಂದಮೂರಿ ಬಾಲಕೃಷ್ಣ ಜೊತೆಗೆ ‘ಸೀತೆ’ ಪಾತ್ರವನ್ನೂ ನಯನತಾರಾ ನಿರ್ವಹಿಸಿದ್ದಾರೆ. ಇಷ್ಟು ದಿನ ಗೆಳೆತನ ಹೊಂದಿದ್ದ ತಮಿಳು ಚಲನಚಿತ್ರ ನಿರ್ಮಾಪಕ ವಿಘ್ನೇಶ್ ಶಿವನ್ ಅವರನ್ನು ಮದುವೆಯಾಗಿದ್ದಾರೆ.
ಜ್ಯೋತಿಕಾ
'ಟ್ಯಾಗೋರ್', 'ಮಾಸ್' ಮತ್ತು 'ಶಾಕ್'ನಂತಹ ಸೂಪರ್‌ಹಿಟ್(Super hit) ತೆಲುಗು ಚಲನಚಿತ್ರ(Movies)ಗಳಲ್ಲಿ ನಟಿಸಿ ಮನರಂಜಿಸಿದ ಜ್ಯೋತಿಕಾ ಪಂಜಾಬಿ ತಂದೆ ಮತ್ತು ಮುಸ್ಲಿಂ ತಾಯಿಗೆ ಜನಿಸಿದವರು. ಹೀಗಾಗಿ ಕುಟುಂಬದಲ್ಲೇ ಮಿಶ್ರ ನಂಬಿಕೆಯನ್ನು ಹೊಂದಿದ್ದಾರೆ. ಇವರ ಅಕ್ಕ ನಟಿ ನಗ್ಮಾ ಅವರ ಗಂಡ ಕ್ರಿಶ್ಚಿಯನ್ ಅನ್ನು ಮದುವೆಯಾಗಿದ್ದು, ತಮ್ಮನ್ನು ಕ್ರಿಶ್ಚಿಯನ್(Christian) ಎಂದು ಗುರುತಿಸಿಕೊಳ್ಳುತ್ತಾರೆ. ಜ್ಯೋತಿಕಾ ಅವರು ತಮಿಳು ನಟ ಸೂರ್ಯ ಅವರನ್ನು ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾದರು. ಆದರೆ ಹೆಸರಿನ ದಾಖಲೆ ಪರಿವರ್ತನೆಯ ಬಗ್ಗೆ ವಿಶೇಷ ಮಾಹಿತಿ ಇಲ್ಲ. ಈ ದಂಪತಿಗಳು ತಮ್ಮ ಇಬ್ಬರು ಮಕ್ಕಳಿಗೆ ದೇವ್ ಮತ್ತು ದಿಯಾ ಎಂದು ಹೆಸರಿಟ್ಟಿದ್ದಾರೆ.
ಇದನ್ನೂ ಓದಿ: ಅಣ್ಣ ತಂಗಿ ಸೆಂಟಿಮೆಂಟ್ ಪ್ರಧಾನ ಸಿನಿಮಾ ಬೆಂಕಿ: ಅನೀಶ್ ತೇಜೇಶ್ವರ್
ಅಯೇಷಾ ಟಕಿಯಾ
ಪುರಿ ಜಗನ್ನಾಥ್ ಅವರ ನಿರ್ದೇಶನದಲ್ಲಿ ನಾಗಾರ್ಜುನ ಅಕ್ಕಿನೇನಿ ಅವರ 'ಸೂಪರ್' ಚಿತ್ರದಲ್ಲಿ ನಟಿಸಿರುವ ಟಾಲಿವುಡ್(Tollywood)ನ ಸೂಪರ್ ಗರ್ಲ್(Super Girl) ಆಯೇಷಾ ಟಾಕಿಯಾ ಮಿಶ್ರ ಧಾರ್ಮಿಕ ನಂಬಿಕೆಯನ್ನು ಹೊಂದಿದ್ದವರು. ನಟಿ ನಗ್ಮಾ ಅವರಂತೆಯೇ, ಆಯೇಷಾ ಟಕಿಯಾ ಸಹ ಅಂತರ್ಧರ್ಮೀಯ ಪೋಷಕರಿಗೆ ಜನಿಸಿದವರು. ಅವರ ತಂದೆ ಗುಜರಾತಿ ಹಿಂದೂ ಆಗಿದ್ದರೆ, ತಾಯಿ ಕಾಶ್ಮೀರಿ ಮುಸ್ಲಿಂ. ಆಯೇಶಾ ರೆಸ್ಟೊರೇಟರ್ ಫರ್ಹಾನ್ ಅಜ್ಮಿ (ಇವರು ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಅವರ ಮಗ) ಅವರನ್ನು ವಿವಾಹವಾದರು ಎಂದು ವರದಿಯಾಗಿದೆ. ಅಯೇಷಾ ಸಂಪೂರ್ಣವಾಗಿ ಇಸ್ಲಾಂಗೆ ಮತಾಂತರಗೊಂಡರು. ತಮ್ಮ ಮಗನಿಗೆ ಮಿಕೈಲ್ ಅಜ್ಮಿ ಎಂದು ಹೆಸರಿಸಿದರು.
ಖುಷ್‌ಬೂ
ವಿಕ್ಟರಿ ವೆಂಕಟೇಶ್ ಅವರ 1986 ರ ಚಿತ್ರ 'ಕಲಿಯುಗ ಪಾಂಡವುಲು' ಮೂಲಕ ದಕ್ಷಿಣ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಖುಷ್ಬು ಸುಂದರ್ ಮುಂಬಯಿಯಯಲ್ಲಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಇವರ ಮೂಲ ಹೆಸರು ನಖತ್ ಖಾನ್. ನಂತರ ಹಿಂದೂ ಧರ್ಮೀಯ ಸುಂದರ್ ಅವರನ್ನು ಮದುವೆಯಾಗುವ ಮುನ್ನ ಅವರು ಹಿಂದೂ ಸಂಪ್ರದಾಯಗಳನ್ನು ಅನುಸರಿಸಿದರು. ತಮ್ಮ ಗಂಡನ ಹೆಸರನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡರು. ದಂಪತಿಗಳು ತಮ್ಮ ಮಕ್ಕಳಿಗೆ ಆವಂತಿಕಾ ಮತ್ತು ಆನಂದಿತಾ ಎಂದು ಹೆಸರಿಸಿದ್ದಾರೆ. ಸದ್ಯ ಖುಷ್‌ಬೂ ತಮಿಳುನಾಡಿನ ಭಾರತೀಯ ಜನತಾ ಪಾರ್ಟಿಯಲ್ಲಿ ಕ್ರಿಯಾಶೀಲವಾಗಿ ಇದ್ದಾರೆ. ಇವರಿಗಾಗಿ ಒಂದು ದೇವಾಲಯವನ್ನೂ ಕಟ್ಟಲಾಗಿದೆ.
ಇದನ್ನೂ ಓದಿ: ಸೌಂದರ್ಯದಲ್ಲಿ ಸೊಸೆಗೆ ಸ್ವರ್ಧೆ ನೀಡುವ ಪ್ರಿಯಾಂಕಾ ಚೋಪ್ರಾ ಅತ್ತೆ; ಇಬ್ಬರ ಏಜ್‌ಗ್ಯಾಪ್ ಗೊತ್ತಾ?
ಹೇಮಾ ಮಾಲಿನಿ
ಬಾಲಕೃಷ್ಣ ಅವರ 'ಗೌತಮಿಪುತ್ರ ಶಾತಕರ್ಣಿ' ಚಿತ್ರದಲ್ಲಿ ನಟಿಸಿರುವ ನಟಿ ಹೇಮಾಮಾಲಿನಿ ಅವರು ಹುಟ್ಟಿನಿಂದ ಹಿಂದೂ ತಮಿಳು ಅಯ್ಯಂಗಾರ್ ಬ್ರಾಹ್ಮಣರು. ಹಿಂದಿ ನಟ ಧರ್ಮೇಂದ್ರ ಅವರ ಮೊದಲ ಪತ್ನಿ ವಿಚ್ಛೇದನ ನೀಡಲು ನಿರಾಕರಿಸಿದ್ದರಿಂದ ಇಸ್ಲಾಂಗೆ ಮತಾಂತರಗೊಂಡು ಖಂಡಾಲಾದಲ್ಲಿ ರಹಸ್ಯ ಸಮಾರಂಭದಲ್ಲಿ ಮದುವೆಯಾದರು ಎಂದು ವರದಿಯಾಯಿತು. ಹೇಮಾಮಾಲಿನಿ ಮತ್ತು ಧರ್ಮೇಂದ್ರ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಇಶಾ ಡಿಯೋಲ್ (1981) ಮತ್ತು ಅಹಾನಾ ಡಿಯೋಲ್ (1985). ಮಣಿರತ್ನಂ ನಿರ್ದೇಶನದಲ್ಲಿ ಇಶಾ ದಕ್ಷಿಣದ 'ಯುವ' ಚಿತ್ರದಲ್ಲಿ ನಟಿಸಿದ್ದಾರೆ.