ನಟ ಮಿಥುನ್ ಚಕ್ರವರ್ತಿ ಮೊದಲ ಪತ್ನಿ ಹೆಲೆನಾ ಲ್ಯೂಕ್ ನಿಧನ

By Anusha Kb  |  First Published Nov 4, 2024, 1:46 PM IST

ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರ ಮೊದಲ ಪತ್ನಿ ಹೆಲೆನಾ ಲ್ಯೂಕ್ ಅಮೆರಿಕಾದಲ್ಲಿ ನಿಧನರಾಗಿದ್ದಾರೆ. 


ಬಾಲಿವುಡ್‌ನ ಖ್ಯಾತ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರ ಮೊದಲ ಪತ್ನಿ ಹಾಗೂ ನಟಿ ಹೆಲೆನಾ ಲ್ಯೂಕ್ ಅವರು ನಿಧನರಾಗಿದ್ದಾರೆ.  ನಿನ್ನೆ ಭಾನುವಾರ ಅವರು ಅಮೆರಿಕಾದಲ್ಲಿ ನಿಧನರಾಗಿದ್ದಾರೆ ಎಂದು ಮತ್ತೊಬ್ಬ ಹಿರಿಯ ನಟಿ ನೃತ್ಯಗಾರ್ತಿ ಕಲ್ಪನಾ ಅಯ್ಯರ್ ಅವರು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. ಹೆಲೆನಾ ಅವರು 1985ರಲ್ಲಿ ತೆರೆಕಂಡ ಮರ್ದ್‌ ಸಿನಿಮಾದಲ್ಲಿನ ತಮ್ಮ ನಟನೆಯಿಂದ ಜನಮನ್ನಣೆ ಗಳಿಸಿದ್ದರು. ಈ ಸಿನಿಮಾದಲ್ಲಿ ಅವರು ಅಮಿತಾಭ್ ಜೊತೆಯಾಗಿ ನಟಿಸಿದ್ದರು. ನಂತರ ನಟ ಮಿಥುನ್ ಚಕ್ರವರ್ತಿ ಅವರನ್ನು ಹೆಲೆನಾ ಮದುವೆಯಾಗಿದ್ದರು. ಆದರೆ ದುರಾದೃಷ್ಟವಶಾತ್ ಕೇವಲ 4 ತಿಂಗಳ ಕಾಲ ಮಾತ್ರ ಇವರಿಬ್ಬರು ಜೊತೆಗಿದ್ದರು. 

ಭಾನುವಾರ ಸಾಯುವುದಕ್ಕೂ ಸ್ವಲ್ಪ ಸಮಯದ ಮೊದಲು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಹೆಲೆನಾ ಏನು ಒಂತರ ವಿಚಿತ್ರ ಅನುಭವವಾಗ್ತಿದೆ. ಮಿಶ್ರ ಭಾವನೆಗಳು ಏಕೆ ಎಂದು ಅರ್ಥವಾಗುತ್ತಿಲ್ಲ ಎಂದು ಬರೆದುಕೊಂಡಿದ್ದರು. 

Tap to resize

Latest Videos

ಹೆಲೆನಾ ಲ್ಯೂಕ್ ಅವರು ಹಿಂದೊಮ್ಮೆ ತಮ್ಮ ಹಾಗೂ ಮಿಥುನ್ ಚಕ್ರವರ್ತಿಯ ಮದುವೆ ಹಾಗೂ ಸಂಬಂಧದ ಬಗ್ಗೆ ಮಾತನಾಡುತ್ತಾ ಅದೊಂದು ಮಬ್ಬು ಗನಸಾಗಿತ್ತು, ತನ್ನ ಜೀವನದಲ್ಲಿ ಈ ರೀತಿ ಆಗಬಾರದಿತ್ತು ಎಂದು ಹೇಳಿಕೊಂಡಿದ್ದರು.  ನಟ ಮಿಥುನ್ ಅವರು ತಾನು ಎಷ್ಟು ಸರಿಯಾದ ವ್ಯಕ್ತಿ ಎಂಬ ವಿಚಾರವನ್ನು ತನಗೆ ಹೇಗೆ  ಮನವರಿಕೆ ಮಾಡಿಕೊಟ್ಟಿದ್ದರು ಎಂಬುದನ್ನು ಅವರು ಹಳೆಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಸ್ಟಾರ್ ಡಸ್ಟ್ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಹೆಲೆನಾ, ಈ ರೀತಿ ನಡೆಯಬಾರದಿತ್ತು ಎಂದು ನಾನು ಬಯಸುತ್ತೇನೆ. ಅವನು ನನಗೆ ಸೇರಿದ ವ್ಯಕ್ತಿ ಎಂದು ನಾನು ನಂಬುವಂತೆ ಆತ ನನ್ನ ಬ್ರೈನ್ ವಾಶ್ ಮಾಡಿದ್ದ. ಅವನೆಷ್ಟೇ ಸಿರಿವಂತ ವ್ಯಕ್ತಿಯಾದರೂ ನಾನು ಮತ್ತೆ ಅವನ ಬಳಿ ಹೋಗುವುದಿಲ್ಲ ನಾನು ಅವನ ಬಳಿ ಜೀವನಾಂಶವನ್ನು ಸಹ ಕೇಳಿಲ್ಲ, ಅದೊಂದು ದುಸ್ವಪ್ನವಾಗಿತ್ತು ಹಾಗೂ ಅದು ಮುಗಿದು ಹೋಗಿತ್ತು ಎಂದು ಅವರು ಹೇಳಿಕೊಂಡಿದ್ದರು. 

click me!