ದೇಶಿ ಸೊಗಡಿನ ನಟ ಮನೋಜ್ ಕುಮಾರ್: ದೇಶಭಕ್ತಿಯ ಪ್ರತಿರೂಪ, ಭಾರತ್ ಕುಮಾರ್ ಇನ್ನಿಲ್ಲ

Published : Apr 04, 2025, 01:29 PM ISTUpdated : Apr 04, 2025, 01:31 PM IST
ದೇಶಿ ಸೊಗಡಿನ ನಟ ಮನೋಜ್ ಕುಮಾರ್: ದೇಶಭಕ್ತಿಯ ಪ್ರತಿರೂಪ, ಭಾರತ್ ಕುಮಾರ್ ಇನ್ನಿಲ್ಲ

ಸಾರಾಂಶ

ಮನೋಜ್ ಕುಮಾರ್, ಭಾರತೀಯ ಚಿತ್ರರಂಗದ ಪ್ರಮುಖ ನಟ, ನಿರ್ದೇಶಕ, ಮತ್ತು ನಿರ್ಮಾಪಕರಾಗಿದ್ದರು. ಅವರ ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಚಿತ್ರಣಗಳು ಅವರನ್ನು 'ಭಾರತ್ ಕುಮಾರ್' ಎಂದು ಪ್ರಸಿದ್ಧವಾಗಿಸಿವೆ.

ವಿನಯ್ ಶಿವಮೊಗ್ಗ

“ಮೇರೇ ದೇಶ್ ಕೀ ಧರ್ತಿ ಸೋನ ಉಗುಲೇ…. ಉಗಲೇ ಹೀರೇ ಮೋತಿ”  ಎಂದು ಹಾಡಿ ಸಿನಿಮಾ  ನೋಡುವವರ ಎದೆಯಲ್ಲಿ ದೇಶಭಕ್ತಿಯ ಕಿಡಿಯನ್ನು ಹೊತ್ತಿಸಿದವರು ಮನೋಜ್ ಕುಮಾರ್. ಅವರ  ಉಪಕಾರ್ , ಕ್ರಾಂತಿ, ಪೂರಬ್ ಪಶ್ಚಿಮ್ ಮುಂತಾದ ಬಹುತೇಕ ಚಿತ್ರಗಳಗಳಲ್ಲಿ ಅವರಿಗಿದ್ದ ರಾಷ್ಟ್ರ ಪ್ರಜ್ಞೆ ಎದ್ದು ಕಾಣುತ್ತಿತ್ತು .  ಅವರಲಿದ್ದ ದೇಶಭಕ್ತಿಯ ಕಾರಣ ಅವರನ್ನು ಭಾರತ್ ಕುಮಾರ್ ಎಂದು ಸಿನಿ ರಸಿಕರು ಕೊಂಡಾಡಿದ್ದರು. ಇಂದು ಬೆಳಗ್ಗೆ ಮನೋಜ್ ಕುಮಾರ್ ತಮ್ಮ 87ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ.

ಕೇವಲ ನಾಯಕ ನಟ ಮಾತ್ರವಲ್ಲದೇ ಗೀತ ರಚನೆಕಾರರಾಗಿ, ನಿರ್ದೇಶಕರಾಗಿ ಹಾಗೂ ನಿರ್ಮಾಪಕರಾಗಿ ಮನೋಜ್ ಕುಮಾರ್ ಅವರು  ದೊಡ್ಡ ಹೆಸರು ಮಾಡಿದ್ದರು . ಅವರ ನಿರ್ದೇಶನದಲ್ಲಿ ಮೂಡಿ ಬಂದಿದ “ಶೋರ್” ಅವರಲ್ಲಿರುವ ಕಲಾತ್ಮತೆಗೆ ಸಾಕ್ಷಿಯಾಗಿತ್ತು . ಮನೋಜ್ ಕುಮಾರ್ ನಟಿಸಿದ್ದ ಕ್ರಾಂತಿಕಾರಿ ಭಗತ್ ಸಿಂಗ್ ಜೀವನಾಧಾರಿತ  ಚಿತ್ರ 'ಶಹೀದ್' ಅಂದಿನ ಕಾಲದಲ್ಲಿ ಮನೆಮಾತಾಗಿತ್ತು .  ಮನೋಜ್ ಕುಮಾರ್ ನಿರ್ದೇಶನದಲ್ಲಿ ತೆರೆ ಕಂಡ ರೋಟಿ ಕಪ್ಡಾ ಔರ್ ಮಕಾನ್, ಉಪಕಾರ್ ಚಿತ್ರಗಳನ್ನು ಚಿತ್ರ ರಸಿಕರು ಮರೆಯಲು ಸಾಧ್ಯವೇ ಇಲ್ಲ . ಇಂದಿನ ಬಾಲಿವುಡ್ ಚಿತ್ರಗಳಲ್ಲಿ  ನಮ್ಮ ರಾಷ್ಟ್ರೀಯತೆ ಹಾಗೂ ಸಂಸ್ಕೃತಿಯನ್ನು ಹೀಗಳೆಯುವ ಸನ್ನಿವೇಶಗಳಿರುವುದು ಸರ್ವೇಸಾಮಾನ್ಯ. ಆದರೆ  ಇದಕ್ಕೆ ಅಪವಾದವೆನ್ನುವಂತೆ ಮನೋಜ್ ಕುಮಾರ್ ಚಿತ್ರಗಳು ಅಪ್ಪಟ ದೇಶಿಯತೆಯ ಸೊಗಡನ್ನು ಹೊಂದಿದ್ದವು .

ಇದನ್ನೂ ಓದಿ: ಸಿಕಂದರ್‌ ಸೋಲು, ಕೊರಿಯನ್ ಹಾರ್ಟ್ ಪೋಸ್‌ಗೆ ಒತ್ತಾಯಿಸಿದ ರಶ್ಮಿಕಾ, ನಿರಾಕರಿಸಿದ ಸಲ್ಮಾನ್ ಖಾನ್!

“ಭಾರತ್ ಕಾ ರೆಹೆನೆವಾಲ ಹೂ ಭಾರತ್ ಕಾ ಗೀತ್ ಸುನಾತಾ ಹೂ “ ಎಂದು ತನ್ನದೇ ಹಾದಿಯಲ್ಲಿ ಕಲಾವಿದನಾಗಿ ಬೆಳೆದವರು ಮನೋಜ್ ಕುಮಾರ್ . ಅವರ ಕಾಲಾವಂತಿಕೆ ಹಾಗೂ ಸಾಧನೆಯನ್ನು ಪರಿಗಣಿಸಿ ಅವರಿಗೆ ಪದ್ಮಶ್ರೀ ಹಾಗೂ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳನ್ನಿತ್ತು ಭಾರತ ಸರ್ಕಾರ ಅವರನ್ನು ಗೌರವಿಸಿದೆ.  ಅತ್ಯಂತ ಸ್ಪುರದ್ರೂಪಿಯಾಗಿದ್ದ ಮನೋಜ್ ಕುಮಾರ್ ತಮ್ಮ ಸಂಭಾಷಣೆಯ ಶೈಲಿ, ಮನೋಜ್ಞ ಅಭಿನಯದ ಕಾರಣ  ಹೆಸರುವಾಸಿಯಾಗಿದ್ದರು .

ವೋ ಕೌನ್ ಥಿ? ಹರಿಯಾಲಿ ಔರ್ ರಾಸ್ತಾ, ಆದ್ಮಿ, ಸಂಸ್ಯಾಸಿ ಹೀಗೆ ಹತ್ತು ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದ ಮನೋಜ್ ಕುಮಾರ್ 60ರ ದಶಕದಲ್ಲಿ ಜನಪ್ರಿಯ ನಾಯಕನಟರಾಗಿ  ಗುರುತಿಸಿಕೊಂಡಿದ್ದರು. ಇಂದು ತಮ್ಮ 88ರ ಹರೆಯದಲ್ಲಿ  ವಯೋಸಹಜ ತೊಂದರೆಯ ಕಾರಣ ಇಹ ಲೋಕ ತ್ಯಜಿಸಿದ ಮನೋಜ್ ಕುಮಾರ್ ತಮ್ಮ ತತ್ವ-ಸಿದ್ಧಾಂತ ಹಾಗು ದೇಶಪ್ರೇಮ ಎತ್ತಿ ಹಿಡಿಯುವ ಚಿತ್ರಗಳ ಮೂಲಕ ಸದಾ ಅಮರರಾಗಿರುತ್ತಾರೆ .  

ಇದನ್ನೂ ಓದಿ: ಪಂಚಾಯತ್ ಸೀಸನ್ 4 ಒಟಿಟಿ ಬಿಡುಗಡೆ ದಿನಾಂಕ ಘೋಷಣೆ, ಎಲ್ಲಿ? ಹೇಗೆ ವೀಕ್ಷಣೆ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?