ಬರ್ತ್‌ಡೇ ಪಾರ್ಟಿಯಲ್ಲಿ ಮೈಮರೆತ ಚೆಲುವೆ; ಬೋಲ್ಡ್‌ನೆಸ್ ಗಡಿ ದಾಟಿದ ನಟಿಯ ವಿಡಿಯೋ ವೈರಲ್

Published : Apr 04, 2025, 12:11 PM ISTUpdated : Apr 04, 2025, 12:12 PM IST
ಬರ್ತ್‌ಡೇ ಪಾರ್ಟಿಯಲ್ಲಿ ಮೈಮರೆತ ಚೆಲುವೆ; ಬೋಲ್ಡ್‌ನೆಸ್ ಗಡಿ ದಾಟಿದ ನಟಿಯ ವಿಡಿಯೋ ವೈರಲ್

ಸಾರಾಂಶ

ನಟಿ ಕಂಗನಾ ಶರ್ಮಾ ಅವರ ಹುಟ್ಟುಹಬ್ಬದ ಆಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೋಲ್ಡ್ ಡ್ರೆಸ್‌ನಿಂದಾಗಿ ಟ್ರೋಲ್ ಆಗುತ್ತಿರುವ ಕಂಗನಾ, ತಮ್ಮ ಸ್ಟೈಲ್‌ನಿಂದ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಮುಂಬೈ: ನಟಿ ಕಂಗನಾ ಶರ್ಮಾ ತಮ್ಮ ಬೋಲ್ಡ್ ಲುಕ್  ಮತ್ತು ಸ್ಟೈಲ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತಿರುತ್ತಾರೆ. ಫ್ಯಾಶನ್ ಐಕಾನ್ ಆಗಿ ಗುರುತಿಸಿಕೊಂಡಿರುವ ಕಂಗನಾ ಶರ್ಮಾ, ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಕಂಗನಾ ಶರ್ಮಾ ಹುಟ್ಟುಹಬ್ಬ ಆಚರಿಸಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು, ಧರಿಸಿದ್ದ ಡ್ರೆಸ್‌ನಿಂದಾಗಿ ಟ್ರೋಲ್ ಆಗುತ್ತಿದ್ದಾರೆ. ತಮ್ಮ ಬೋಲ್ಡ್ ಡ್ರೆಸ್‌ನಿಂದ ತುಂಡೈಕ್ಳ ಮನಸ್ಸು ಗೆದ್ದಿದ್ದಾರೆ. 

ಇನ್‌ಸ್ಟಾಗ್ರಾಂನಲ್ಲಿ 30 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿರುವ ಕಂಗನಾ ಶರ್ಮಾ, ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಂಗನಾ ಶರ್ಮಾ ಪ್ರತಿಯೊಂದು ಪೋಸ್ಟ್‌ಗೂ ಸಾವಿರಾರು ಲೈಕ್ಸ್, ಕಮೆಂಟ್‌ಗಳು ಬರುತ್ತವೆ. ಇದೀಗ ತಮ್ಮ ಬರ್ತ್ ಡೇ ಪಾರ್ಟಿಯಲ್ಲಿ ಗೋಲ್ಡನ್ ಕಲರ್ ಲಾಂಗ್ ಗೌನ್ ಧರಿಸಿದ್ದು, ಇದು ಡೀಪ್ ನೆಕ್ ಹೊಂದಿತ್ತು. ಕೇಕ್ ಕತ್ತರಿಸುವಾಗ ನಟಿಯ ಎದೆ ಭಾಗ ಭಾಗಶಃ ಕಾಣಿಸಿದ್ದು, ಈ ವಿಡಿಯೋ ವೈರಲ್ ಆಗಿದೆ. ಎದೆಭಾಗ ಕಾಣುತ್ತಿದ್ರೂ ನಟಿ ಮುಚ್ಚಿಕೊಳ್ಳಲು ಪ್ರಯತ್ನಿಸಿಲ್ಲ. ಒಂದು ಕೈಯನ್ನು ಹಿಂದೆ ಇಟ್ಕೊಂಡು ಕತ್ತರಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ನೀನು ಉರ್ಫಿಯ ಅಕ್ಕ ಎಂದು ಕಮೆಂಟ್ ಮಾಡಿದ್ದಾರೆ. 

ವೆಬ್‌ಸೈಟ್‌ಗೆ ಸಂದರ್ಶನ ನೀಡಿರುವ ಕಂಗನಾ ಶರ್ಮಾ,  2019ರಲ್ಲಿ ನನಗೆ ಯೋಗೇಶ್ ಎಂಬಾತನ ಪರಿಚಯವಾಯ್ತು. ನಮ್ಮಿಬ್ಬರ ಮದುವೆಯೂ ಆಯ್ತು. ಆದರೆ ನನಗೆ ಆ ಮದುವೆ ಖಂಡಿತ ಇಷ್ಟವಿರಲಿಲ್ಲ. ನನ್ನ ಮನೆಯಲ್ಲಿ ದುಡಿಯೋರು ಯಾರು ಇರಲಿಲ್ಲ ಮತ್ತು ಸೋದರ ತುಂಬಾ ಚಿಕ್ಕವನಿದ್ದನು. ಹಾಗಾಗಿ ನಾನು ಯೋಗೇಶ್‌ನನ್ನು ಮದುವೆಯಾದೆ. ತಾಯಿ ಮತ್ತು ನನ್ನ ವೈವಾಹಿಕ ಜೀವನ ಸಕ್ಸಸ್‌ಫುಲ್ ಆಗಿಲ್ಲ. ಹಾಗೆ ವೃತ್ತಿಜೀವನದಲ್ಲಿ ನಾನು ತುಂಬಾ ಸ್ಟ್ರಗಲ್ ಮಾಡಿದ್ದೇನೆ. ಯೋಗೇಶ್ ಮತ್ತು ನಾನು ಬೇರೆಯಾಗುತ್ತಿದ್ದೇವೆ. ಈ ಸಂಬಂಧ ಕೆಲಸಗಳು ನಡೆಯುತ್ತಿವೆ ಎಂದು ಹೇಳಿದ್ದರು. 

ವೈರಲ್ ವಿಡಿಯೋಗೆ ತರೇಹವಾರಿ ಕಮೆಂಟ್
ಕಂಗನಾ ಶರ್ಮಾ ಬರ್ತ್ ಡೇ ವಿಡಿಯೋಗೆ ತರೇಹವಾರಿ ಕಮೆಂಟ್‌ಗಳು ಬಂದಿವೆ. ಓರ್ವ ನೆಟ್ಟಿಗ, ನಾನು ನಟಿಯ ಧೈರ್ಯವನ್ನು ಖಂಡಿತ ಮೆಚ್ಚುತ್ತೇನೆ. ಈ ರೀತಿ ಅಂಗದ ಪ್ರದರ್ಶಿಸಲು ಧೈರ್ಯ ಬೇಕು ಎಂದು ಕಮೆಂಟ್ ಮಾಡಿದ್ದಾರೆ. ಮತ್ತೋರ್ವ ನೆಟ್ಟಿಗ, ಹ್ಯಾಪಿ ಬರ್ತ್ ಡೇ ಮೇಡಂ. ನಿಮ್ಮ ಹುಟ್ಟುಹಬ್ಬಕ್ಕೆ ಗಿಫ್ಟ್ ಆಗಿ ನಾನು ನಿಮಗೆ ಬಟ್ಟೆ ಕೊಡಿಸುತ್ತೇನೆ. ವಿಡಿಯೋದಲ್ಲಿರುವ ಎಲ್ಲಾ ಕೇಕ್‌ಗಳು ಸುಂದರವಾಗಿವೆ ಎಂದು ಬರೆದುಕೊಂಡಿದ್ದಾರೆ. 

ಇದನ್ನೂ ಓದಿ: ಹೂಗುಚ್ಛ ಹಿಡಿದು ನಿಂತ ನೆನಪಿರಲಿ ಪ್ರೇಮ್ ಪುತ್ರಿ; ಹುಡುಗ ಸಿಕ್ಕಿರುವ ಸೂಚನೆ ಕೊಟ್ರಾ?

ಇನ್ನು ಕೆಲವರು ಭಾರತದ ನಟಿಯರಿಗೆ ಏನಾಗ್ತಿದೆ? ಸಾರ್ವಜನಿಕವಾಗಿ ಹೇಗೆ ಕಾಣಿಸಿಕೊಳ್ಳಬೇಕು ಎಂಬ ಸಾಮಾನ್ಯಪ್ರಜ್ಞೆಯೂ ಇಲ್ಲದಂತಾಗಿದೆ. ಉದ್ದೇಶಪೂರ್ವಕವಾಗಿಯೇ ಕಂಗನಾ ಶರ್ಮಾ ತನ್ನ ದೇಹದ ಭಾಗವನ್ನು ತೋರಿಸುವಂತೆ ಕಾಣಿಸುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿನ ಒಂದಿಷ್ಟು ಲೈಕ್ಸ್‌ಗಾಗಿ ಇಷ್ಟೊಂದು ಎಕ್ಸ್‌ಪೋಸ್ ಆಗುವ ಅಗತ್ಯವಿರಲಿಲ್ಲ ಎಂದು ಬಹುತೇಕ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. 

ಕಂಗನಾ ಶರ್ಮಾ ಬಾಲಿವುಡ್‌ನ ಮಸ್ತಿ, ಗ್ರೇಟ್ ಗ್ರ್ಯಾಂಡ್ ಮಸ್ತಿ, ಮೋನಾ ಹೋಮ್ ಡೆಲಿವರಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೆ ಕೆಲವೊಂದು ಮ್ಯೂಸಿಕ್ ಅಲ್ಬಂನಲ್ಲಿಯೂ ಕಂಗನಾ ಶರ್ಮಾ ಕಾಣಿಸಿಕೊಂಡಿದ್ದಾರೆ. ತಮ್ಮ ಉಡುಪುಗಳಿಂದಲೇ ಕಂಗನಾ ಶರ್ಮಾ ಹೆಚ್ಚು ಟ್ರೋಲ್ ಆಗುತ್ತಿರುತ್ತಾರೆ.

ಇದನ್ನೂ ಓದಿ: ಗಂಡ್ಮಕ್ಳು ಜಾಕೆಟ್‌ನಲ್ಲಿ ಪೋಸ್‌ ಕೊಟ್ಟ ಚೈತ್ರಾ ಆಚಾರ್; ಇದರ ಸಿಂಪಲ್ ಜಾಕೆಟ್‌ ಬೆಲೆ ಕೇಳಿ ಶಾಕ್ ಆಗ್ಬೇಡಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!