ಪ್ಲಾಸ್ಟಿಕ್​ ಅಷ್ಟು ಬೇಗ ಸಾಯಲ್ಲ ಅಂತ ಗೊತ್ತಿತ್ತು, ತಪ್ಪು ತಿಳಿಯಬೇಡಿ... ಇದು ಪ್ಲಾಸ್ಟಿಕ್​ ಅರಿವು ಅಷ್ಟೇ...

Published : Feb 04, 2024, 05:25 PM IST
ಪ್ಲಾಸ್ಟಿಕ್​ ಅಷ್ಟು ಬೇಗ ಸಾಯಲ್ಲ ಅಂತ ಗೊತ್ತಿತ್ತು, ತಪ್ಪು ತಿಳಿಯಬೇಡಿ... ಇದು  ಪ್ಲಾಸ್ಟಿಕ್​ ಅರಿವು ಅಷ್ಟೇ...

ಸಾರಾಂಶ

ನಟಿ ಪೂನಂ ಪಾಂಡೆ ವಿರುದ್ಧ ಸೋಷಿಯಲ್​ ಮೀಡಿಯಾದಲ್ಲಿ ಹಲವಾರು ರೀತಿಯ ಮೀಮ್ಸ್​ಗಳು ಹರಿದಾಡುತ್ತಿವೆ. ಅವುಗಳಲ್ಲಿ ಒಂದು ಈ ಪ್ಲಾಸ್ಟಿಕ್​ ವಿಷ್ಯ. ಏನದು?  

ಪ್ಲಾಸ್ಟಿಕ್​ ಆಯಸ್ಸು ಏನಿಲ್ಲ ಎಂದ್ರೂ ಒಂದು ಸಾವಿರ ವರ್ಷ. ಅದು ಅಷ್ಟು ಬೇಗ ಸಾಯಲ್ಲ. ಆದ್ದರಿಂದ ನಟಿ ಪೂನಂ ಪಾಂಡೆ ಸತ್ತಿಲ್ಲ ಎನ್ನುವುದು ನನಗೆ ಮೊದಲೇ ಗೊತ್ತಿತ್ತು... ಇದು ನಿಮಗೆ ಕೀಳು ಮಟ್ಟದ ಅಭಿರುಚಿ ಎನ್ನಿಸಬಹುದು. ಆದರೆ ನಾನು ಸುಳ್ಳು ಹೇಳುತ್ತಿಲ್ಲ. ಪ್ಲಾಸ್ಟಿಕ್​ ಎಷ್ಟು ಮಾರಕ ಎಂದು ಅರಿವು ಮೂಡಿಸುತ್ತಿದ್ದೇನೆ ಅಷ್ಟೇ...

ಹೀಗೊಂದು ಮೀಮ್ಸ್​ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸದ್ದು ಮಾಡುತ್ತಿದೆ. ದೇವಯ್ಯ ಬೋಪಣ್ಣ ಎನ್ನುವವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರೋ ಈ ಸಾಲುಗಳು ವೈರಲ್​ ಆಗಿದ್ದು, ಇದಕ್ಕೆ  ಸಹಸ್ರಾರು ಮಂದಿ ಕಮೆಂಟ್​ ಮೂಲಕ ನಗುವಿನ ಅಲೆ ಹರಿಸಿದ್ದಾರೆ.    ತಾವು ಸತ್ತಿರುವುದಾಗಿ ತಮ್ಮ ಮ್ಯಾನೇಜರ್​ ಹಾಗೂ ಕುಟುಂಬಸ್ಥರ ಮೂಲಕ ಹೇಳಿಸಿ ಈಗ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ ನಟಿ ಪೂನಂ ಪಾಂಡೆ. ಕ್ರಿಕೆಟ್​ನಲ್ಲಿ ಭಾರತ ಗೆದ್ದರೆ  ಬೆತ್ತಲಾಗುವೆ ಎನ್ನುವಂಥ ಅಶ್ಲೀಲ ಹೇಳಿಕೆಗಳನ್ನು ಕೆಲವು ಬಾರಿ ನೀಡಿದ್ದೂ ಅಲ್ಲದೇ ಇದೇ ರೀತಿ ಹಲವಾರು ರೀತಿಯ ಕಾಂಟ್ರವರ್ಸಿಗಳನ್ನು ಮೈಮೇಲೆ ನಟಿ ಎಳೆದುಕೊಂಡಿದ್ದರೂ, ಅವೆಲ್ಲಾ ಪ್ರಚಾರದ ಗಿಮಿಕ್​ ಎಂದು ಸುಮ್ಮನಾದವರೇ ಹೆಚ್ಚು. ಆದರೆ ತಾವು ಸತ್ತಿರುವುದಾಗಿ ಹೇಳಿಕೊಂಡು ಜನರ ಭಾವನೆಗಳ ಮೇಲೆ ಚೆಲ್ಲಾಟ ಆಡಿದ್ದ ಪೂನಂ ಪಾಂಡೆ ವಿರುದ್ಧ ಟ್ರೋಲ್​ಗಳ ಸುರಿಮಳೆಯಾಗುತ್ತಿದೆ. ಮೀಮ್ಸ್​ಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ.

ನಾನು ಸತ್ತಿಲ್ಲ, ಹ್ಯಾಂಗ್​ ಓವರ್​ ಕುರಿತು ಅರಿವು ಮೂಡಿಸ್ತಿದ್ದೇನೆ.. ಪೂನಂಗೆ ತಿರುಗೇಟು ಕೊಟ್ಟ ಉರ್ಫಿ ಹೇಳಿದ್ದೇನು?

ಗರ್ಭಕಂಠದ ಕ್ಯಾನ್ಸರ್​ನಿಂದ ಇವರು ಸತ್ತಿದ್ದುದ್ದಾಗಿ ಸುದ್ದಿಯಾಗಿತ್ತು.  ನಂತರ ತಾವು ಬದುಕಿರುವುದಾಗಿ ಹೇಳಿಕೊಂಡಿದ್ದ ನಟಿ, ಈ ಕ್ಯಾನ್ಸರ್​ ಅರಿವು ಮೂಡಿಸುವುದಾಗಿ ಹೇಳಿದ್ದರು. ಇವರ ವಿರುದ್ಧ ಕೇಸ್​ ದಾಖಲು ಮಾಡಲು ಕೂಡ ರೆಡಿಯಾಗುತ್ತಿರುವ ಮಧ್ಯೆಯೇ, ಹಲವು ರೀತಿಯ ಮೀಮ್ಸ್​ಗಳು ಓಡಾಡುತ್ತಿವೆ. ಅಷ್ಟಕ್ಕೂ ನಟಿಯ ಮಧ್ಯೆ ಪ್ಲಾಸ್ಟಿಕ್​ ಮಾತು ಏಕೆ ಬಂದಿದೆ ಎಂದು ಹೆಚ್ಚು ಮಂದಿಗೆ ತಿಳಿದೇ ಇರುತ್ತದೆ. ಅಷ್ಟಕ್ಕೂ ಮಾದಕ ನಟಿಯೆಂದೇ ಗುರುತಿಸಿಕೊಂಡಿರುವ ಪೂನಂ ಪಾಂಡೆ ತಮ್ಮ ಸ್ತನದ ಭಾಗಕ್ಕೆ ಪ್ಲಾಸ್ಟಿಕ್​ ಸರ್ಜರಿ ಮಾಡಿಕೊಂಡಿದ್ದಾರೆ. ರಾಖಿ ಸಾವಂತ್​, ಶೆರ್ಲಿನ್​ ಚೋಪ್ರಾ ಸೇರಿದಂತೆ ಕೆಲವು ನಟಿಯರು ಸ್ತನದ ಗಾತ್ರ ದೊಡ್ಡದಾಗಿ ಕಾಣಿಸಿಕೊಳ್ಳಲು ಪ್ಲಾಸ್ಟಿಕ್​ ಸರ್ಜರಿ ಮೊರೆ ಹೋದವರು. ಇದಾಗಲೇ ಹಲವಾರು ನಟಿಯರು ತಮ್ಮ ವಿಧವಿಧ ಅಂಗಾಂಗಗಳನ್ನು ಪ್ಲಾಸ್ಟಿಕ್​ ಸರ್ಜರಿ ಮೂಲಕ ಚೆಂದ ಕಾಣಿಸುವಂತೆ ಮಾಡಿಕೊಂಡಿದ್ದು ಇದೆ. ಆದರೆ ಉಳಿದ ಭಾಗಗಳೆಲ್ಲವೂ ಬಳಕುವ ಬಳ್ಳಿಯಂತಿದ್ದು, ಸ್ತನಗಳ ಗಾತ್ರ ಮಾತ್ರ ದೊಡ್ಡದಿದ್ದರೆ ತಮಗೆ ಹೆಚ್ಚು ಡಿಮ್ಯಾಂಡ್ ಎನ್ನುವ ಕಾರಣಕ್ಕೆ ಕೆಲವು ನಟಿಯರು ಇದಕ್ಕೂ ಪ್ಲಾಸ್ಟಿಕ್​ ಸರ್ಜರಿ ಮಾಡಿಕೊಂಡಿದ್ದಾರೆ. ಅಂಥವರಲ್ಲಿ ಒಬ್ಬರು ಪೂನಂ ಪಾಂಡೆ.

ಈಗ ಇದೇ ವಿಷಯ ಇಟ್ಟುಕೊಂಡು ಪ್ಲಾಸ್ಟಿಕ್​ಗೆ ಸಾವಿರ ವರ್ಷ ಆಯಸ್ಸು, ಅದಕ್ಕೇ ಅದು ಬೇಗ ಸಾಯುವುದಿಲ್ಲ ಎಂದು ತಿಳಿದಿತ್ತು ಎಂದು ಮೀಮ್ಸ್​ ಹರಿದಾಡುತ್ತಿದೆ. ಅಂದಹಾಗೆ ನಟಿಗೆ ಈಗ 32 ವರ್ಷ ವಯಸ್ಸು. ನಿನ್ನೆಯಷ್ಟೇ ನಟಿ ಉರ್ಫಿ ಜಾವೇದ್​ ಕೂಡ ತಮ್ಮದೇ ಆದ ರೀತಿಯಲ್ಲಿ ಪೂನಂರನ್ನು ಟೀಕಿಸಿದ್ದರು. ಹಾಸಿಗೆ ಮೇಲೆ ಮಲಗಿರುವ ಫೋಟೋ ಶೇರ್​ ಮಾಡಿರುವ ನಟಿ, ಪೂನಂ ಪಾಂಡೆಗೆ ಟಾಂಗ್​ ಕೊಟ್ಟಿದ್ದಾರೆ. ನಾನು ಸತ್ತಿಲ್ಲ. ಹ್ಯಾಂಗೋವರ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ. ನೀವು ಕುಡಿಯುವಾಗ ಬದುಕಿದ್ದಂತೆ ಅನಿಸುತ್ತದೆ. ಮರುದಿನ ಸತ್ತಂತೆ ಅನಿಸುತ್ತದೆ. ಆದರೆ ನೀವು ನಿಜವಾಗಿ ಸತ್ತಿರುವುದಿಲ್ಲ. ಸಾಯುವುದೆಂದರೆ ಸಾಯುವುದಲ್ಲ ಎಂದಿದ್ದಾರೆ ಉರ್ಫಿ ಜಾವೇದ್. 

ಪೂನಂ ಪಾಂಡೆ ವಿರುದ್ಧ ದಾಖಲಾಗತ್ತಾ ಕೇಸ್​? ಪ್ರಚಾರಕ್ಕಾಗಿ ಸತ್ತೆನೆಂದ ನಟಿಗೆ ಹೀಗಿದೆ ಶಿಕ್ಷೆ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Baahubali Movie: ಬಾಹುಬಲಿ ನನಗೆ ಸಿನಿಮಾ ಆಗಿರಲಿಲ್ಲ; ಯುದ್ಧ ಆಗಿತ್ತು: ನಟ ಪ್ರಭಾಸ್!
Chiranjeevi Shock: 'ಮೊನ್ನೆಯಷ್ಟೇ ನಗುನಗುತ್ತಿದ್ದ'.. ಕೆ ಭಾಗ್ಯರಾಜ್ ನಿಧನಕ್ಕೆ ಮೆಗಾಸ್ಟಾರ್ ಚಿರಂಜೀವಿ ದಿಗ್ಭ್ರಮೆ; ಭಾವನಾತ್ಮಕ ಪೋಸ್ಟ್