'ಹೇ ಪೂನಂ ಪಾಂಡೆ... ನೀವು ಇಟ್ಟಿರುವ ಹೆಜ್ಜೆಗೆ ಸೆಲ್ಯೂಟ್': ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ!

Published : Feb 04, 2024, 02:40 PM IST
'ಹೇ ಪೂನಂ ಪಾಂಡೆ... ನೀವು ಇಟ್ಟಿರುವ ಹೆಜ್ಜೆಗೆ ಸೆಲ್ಯೂಟ್': ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ!

ಸಾರಾಂಶ

ಬಾಲಿವುಡ್ ಮತ್ತು ಟಾಲಿವುಡ್‌ನ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಯಾವಾಗಲೂ ಸ್ವಲ್ಪ ವಿಭಿನ್ನವಾಗಿ ಆಲೋಚನೆ ಮಾಡುತ್ತಾರೆ. ಸದ್ಯಕ್ಕೆ ರಾಮ್​ ಗೋಪಾಲ್​ ವರ್ಮಾ ಮಾತ್ರ ಪೂನಂ ಪಾಂಡೆಗೆ ಬೆಂಬಲ ಸೂಚಿಸುತ್ತಿದ್ದಾರೆ.

ಬಾಲಿವುಡ್ ಮತ್ತು ಟಾಲಿವುಡ್‌ನ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಯಾವಾಗಲೂ ಸ್ವಲ್ಪ ವಿಭಿನ್ನವಾಗಿ ಆಲೋಚನೆ ಮಾಡುತ್ತಾರೆ. ಸದ್ಯಕ್ಕೆ ರಾಮ್​ ಗೋಪಾಲ್​ ವರ್ಮಾ ಮಾತ್ರ ಪೂನಂ ಪಾಂಡೆಗೆ ಬೆಂಬಲ ಸೂಚಿಸುತ್ತಿದ್ದಾರೆ. ಗರ್ಭಕಂಠದ ಕ್ಯಾನ್ಸರ್​ ಬಗ್ಗೆ ಜಾಗೃತಿ ಮೂಡಿಸಲು ಸುಳ್ಳು ಸುದ್ದಿ ಹಬ್ಬಿಸಿದ ನಟಿಯ ಹುಚ್ಚು ಸಾಹಸವನ್ನು ಇದೀಗ ಆರ್​ಜಿವಿ ಶ್ಲಾಘಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್​ ಮಾಡಿ, ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಪೂನಂ ಪಾಂಡೆಯ ಇನ್​ಸ್ಟಾಗ್ರಾಮ್​ ಪೋಸ್ಟ್​ ಅನ್ನು ಕೂಡ ರಾಮ್​ ಗೋಪಾಲ್​ ವರ್ಮಾ ಹಂಚಿಕೊಂಡಿದ್ದಾರೆ.

‘ಹೇ ಪೂನಂ ಪಾಂಡೆ… ಈ ಒಂದು ಕಾರಣಕ್ಕಾಗಿ ನೀವು ಇಟ್ಟಿರುವ ಹೆಜ್ಜೆಗೆ ಎಲ್ಲರಿಂದ ಕೆಲವು ಟೀಕೆಗಳು ಬರಬಹುದು. ಆದರೆ, ಸಾವಿನ ಸುಳ್ಳು ಸುದ್ದಿ ಮೂಲಕ ನೀವು ಮೂಡಿಸಿದ ಜಾಗೃತಿ ಮತ್ತು ಮಾಡಿದ ಸಾಧನೆಯನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಎಲ್ಲ ಕಡೆಗಳಲ್ಲೂ ಈಗ ಗರ್ಭಕಂಠದ ಕ್ಯಾನ್ಸರ್​ ಬಗ್ಗೆ ಚರ್ಚೆ ಹೆಚ್ಚಾಗಿದೆ. ನಿಮ್ಮಂತೆಯೇ ನಿಮ್ಮ ಆತ್ಮ ಕೂಡ ಸುಂದರವಾಗಿದೆ. ನಿಮಗೆ ಖುಷಿಯ ಜೊತೆ ದೀರ್ಘ ಆಯಸ್ಸು ಸಿಗಲಿ’ ಎಂದು ರಾಮ್​ ಗೋಪಾಲ್​ ವರ್ಮಾ ಹಾರೈಸಿದ್ದಾರೆ.
 


ಏನಿದು ಘಟನೆ: ಗರ್ಭಕಂಠದ ಕ್ಯಾನ್ಸರ್​ನಿಂದ ಪೂನಂ ಪಾಂಡೆ ಅವರು ಫೆಬ್ರವರಿ 2ರಂದು ನಿಧನರಾದರು ಎಂದು ಫೇಕ್​ ನ್ಯೂಸ್​ ಹರಡಿತು. ಸ್ವತಃ ಪೂನಂ ಪಾಂಡೆ ಅವರ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಸುದ್ದಿ ಪ್ರಕಟ ಮಾಡಿದ್ದರಿಂದ ಎಲ್ಲರೂ ಇದನ್ನು ನಿಜವೆಂದು ನಂಬಿದ್ದರು. ಅದರ ನಡುವೆ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಮೂರು ದಿನಗಳ ಹಿಂದೆ ಆರಾಮಾಗಿ ಓಡಾಡಿಕೊಂಡಿದ್ದ ಪೂನಂ ಪಾಂಡೆ ಅಚಾನಕ್​ ಆಗಿ ಸತ್ತರು ಎಂದರೆ ಅದರಲ್ಲಿ ಏನೋ ಅನುಮಾನ ಇದೆ ಎಂದು ಹಲವು ಕಮೆಂಟ್​ ಮಾಡಿದರು. ಇನ್ನು ಸುಳ್ಳು ಸುದ್ದಿ ಹರಡಿಸಿ 24 ಗಂಟೆ ಕಳೆದ ಬಳಿಕ ಸ್ವತಃ ಪೂನಂ ಪಾಂಡೆ ಅವರು ವಿಡಿಯೋ ಮೂಲಕ ಪ್ರತ್ಯಕ್ಷ ಆದರು. 

ಬಿಕಿನಿ ಬ್ಯೂಟಿ ಸೋನು ಗೌಡ ಕಾರು ಡಿಕ್ಕಿ: ಡ್ರೈವಿಂಗ್ ಬರುತ್ತಾ ಅಂತಿದಾರೆ ಫ್ಯಾನ್ಸ್‌!

‘ನಾನು ಬದುಕಿದ್ದೇನೆ’ ಎಂದು ಅವರು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದರು. ಗರ್ಭಕಂಠದ ಕ್ಯಾನ್ಸರ್​ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ತಾವು ಫೇಕ್​ ನ್ಯೂಸ್​ ಹರಡಿದ್ದಾಗಿ ಅವರು ಹೇಳಿದ್ದಾರೆ. ಅಲ್ಲದೇ, ತಮ್ಮ ಕೆಲಸವನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ನಟಿಯ ಈ ನಡೆಗೆ ಅನೇಕರಿಂದ ಟೀಕೆ ವ್ಯಕ್ತವಾಗಿದೆ. ಕೆಲವು ಕಡೆಗಳಲ್ಲಿ ಕೇಸ್​ ಕೂಡ ದಾಖಲಾಗಿದೆ. ಗರ್ಭಕಂಠ ಕ್ಯಾನ್ಸರ್ ಕುರಿತಂತೆ ಜಾಗೃತಿ ಮೂಡಿಸುವುದಕ್ಕಾಗಿ ವಾಮಮಾರ್ಗ ಹಿಡಿದಿರುವ ಬಾಲಿವುಡ್ ನಟಿ, ಕಾಂಟ್ರವರ್ಸಿ ಕ್ವೀನ್‌ ಪೂನಂ ಪಾಂಡೆಯನ್ನು ಅರೆಸ್ಟ್ ಮಾಡಬೇಕು ಎಂದು ಅಭಿಮಾನಿಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ‘ಬಾಯ್ಕಾಟ್‌ ಪೂನಂ ಪಾಂಡೆ’ ಟ್ರೆಂಡ್ ಶುರು ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವಿರ್ ದಾಸ್‌ಗೆ ನಟಿ ಮಿಥಿಲಾ ಪಾಲ್ಕರ್ ಕಪಾಳಮೋಕ್ಷ.. ಅದಕ್ಕೂ ಮೊದಲು ಈ ಇಬ್ಬರ ಮಧ್ಯೆ ಆಗಿದ್ದೇನು?
ಅಲಿಬಾಗ್‌ನಲ್ಲಿ ಮತ್ತೊಂದು ದುಬಾರಿ ಆಸ್ತಿ ಖರೀದಿಸಿದ ವಿರುಷ್ಕಾ: ಸ್ಟಾಂಪ್ ಡ್ಯೂಟಿಯೇ 2.27 ಕೋಟಿ: ಆಸ್ತಿ ಮೊತ್ತವೆಷ್ಟು?